Karnataka News Live November 22, 2024 : Textiles loan: ಜವಳಿ ಸಿದ್ದ ಉಡುಪು ಘಟಕ ಸ್ಥಾಪಿಸುವ ಉದ್ದೇಶವಿದೆಯೇ, ಸಣ್ಣ, ಅತಿ ಸಣ್ಣ ಘಟಕ ಸ್ಥಾಪನೆಗೆ ಸಿಗಲಿದೆ ಸಾಲ ಸೌಲಭ್ಯ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 22 Nov 202402:36 PM IST
- ಕರ್ನಾಟಕದಲ್ಲಿ ಜವಳಿ ಸಿದ್ದ ಉಡುಪು ಘಟಕಗಳನ್ನು ಸ್ಥಾಪಿಸಬೇಕು ಎನ್ನುವ ಯೋಚನೆ ನಿಮ್ಮಲ್ಲಿದ್ದರೆ ಇದಕ್ಕೆ ಕರ್ನಾಟಕ ಜವಳಿ ಇಲಾಖೆಯು ಸಾಲ ಸೌಲಭ್ಯ ನೀಡಲಿದೆ.
Fri, 22 Nov 202402:09 PM IST
- Karnataka Nature School Trip: ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೇಚರ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಅರಣ್ಯ, ವನ್ಯಜೀವಿಗಳು, ಪ್ರಕೃತಿ ಸೊಬಗಿನ ತಾಣಗಳಿವೆ. ಅವುಗಳ ಪಟ್ಟಿ ಇಲ್ಲಿ ನೀಡಲಾಗಿದೆ.
Fri, 22 Nov 202412:34 PM IST
- Bangalore Power Cut: ಬೆಂಗಳೂರಿನಲ್ಲಿ ಪ್ರಮುಖ ಬಡಾವಣೆಯಲ್ಲಿ2024ರ ನವೆಂಬರ್ 24 ರ ಭಾನುವಾರ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ತಿಳಿಸಿವೆ
- ವರದಿ: ಎಚ್.ಮಾರುತಿ.ಬೆಂಗಳೂರು
Fri, 22 Nov 202411:06 AM IST
- ಕರ್ನಾಟಕದಲ್ಲಿ 2025ನೇ ಸಾಲಿನಲ್ಲಿ ಪಡೆಯಬಹುದಾದ ಸರ್ಕಾರಿ ರಜೆಗಳ ಕುರಿತಾದ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಯಾವ ದಿನ ಯಾವ ಹಬ್ಬ, ರಜೆ ಎನ್ನುವ ವಿವರ ಇಲ್ಲಿದೆ.
Fri, 22 Nov 202410:06 AM IST
- KAS Exam Free Training: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ( ಕರಾಮುವಿ) ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಒಂದು ತಿಂಗಳ ಕಾಲ ಕೆಪಿಎಸ್ಸಿ ಕೆಎಎಸ್ ಪರೀಕ್ಷೆಗೆ ಉಚಿತ ತರಬೇತಿ ನೀಡಲಿದೆ.
Fri, 22 Nov 202408:49 AM IST
- ಕೊಡಗು ಜಿಲ್ಲೆಯ ನಾನಾ ಭಾಗಗಳಲ್ಲಿ ನವೆಂಬರ್ 23ರ ಶನಿವಾರ ಮದ್ಯ ಮಾರಾಟ ಇರುವುದಿಲ್ಲ. ಜಾತ್ರೆ ಹಾಗೂ ಸಂತೆಗಳನ್ನು ನಿಷೇಧಿಸಿ ಕೊಡಗು ಡಿಸಿ ವೆಂಕಟರಾಜಾ ಆದೇಶಿಸಿದ್ದಾರೆ.
Fri, 22 Nov 202407:25 AM IST
ಬೆಂಗಳೂರಿನಲ್ಲಿ ನೀವು ಇನ್ನೂ ಆಸ್ತಿ ತೆರಿಗೆ ಪಾವತಿಸಿಲ್ಲವೇ? ನ.30ಕ್ಕೆ ಕೊನೆಗೊಳ್ಳುವ ಒಟಿಎಸ್ ಯೋಜನೆಯ ಲಾಭ ಪಡೆದುಕೊಳ್ಳಿ. ದಂಡ, ತೆರಿಗೆ ಮೇಲಿನ ಬಡ್ಡಿ ಪಾವತಿಸುವುದರಿಂದ ವಿನಾಯಿತಿ ಪಡೆದುಕೊಳ್ಳಿ. ಅದಿಲ್ಲದೇ ಹೋದರೆ ನಿಮ್ಮ ಆಸ್ತಿ ಜಪ್ತಿಯಾದೀತು ಎಂದು ಬಿಬಿಎಂಪಿ ಎಚ್ಚರಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Fri, 22 Nov 202406:37 AM IST
ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೊಸದಲ್ಲ. ಪ್ರತಿಯೊಬ್ಬರಿಗೂ ಇದರ ಅನುಭವ ಇದ್ದೇ ಇದೆ. ಆದರೆ ಪಾದಚಾರಿಯಾಗಿ ನಡ್ಕೊಂಡು ಹೋಗುವಾಗ ನೀವು ಎಂದಾದರೂ ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ನೋಡಿ ವೈರಲ್ ವಿಡಿಯೋ. ಪಾದಚಾರಿ ಸುರಕ್ಷೆ ಎತ್ತಿ ತೋರಿಸುವ ಪೋಸ್ಟ್‌ನ ವಿವರ ಇಲ್ಲಿದೆ.
Fri, 22 Nov 202405:48 AM IST
ಬೆಳ್ತಂಗಡಿ ಮಾರುಕಟ್ಟೆಯಲ್ಲಿ ಪುಂಡರ ಪುಂಡಾಟಿಕೆ ಹೆಚ್ಚಳವಾಗಿದ್ದು, ಯುವಕನ ಹಿಡಿದಿಟ್ಟು ಪ್ಯಾಂಟ್ ಹೊಲಿದ ಪುಂಡರು ಆ ವಿಡಿಯೋ ವೈರಲ್ ಮಾಡಿದ್ದರು. ಇದರಿಂದ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ ಕಳವಳಕಾರಿ ಘಟನೆ ವರದಿಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Fri, 22 Nov 202405:38 AM IST
- ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ: ಕಳೆದ ಕೆಲವು ದಿನಗಳ ಹಿಂದೆ ಇಳಿಮುಖವಾಗಿದ್ದ ಚಿನ್ನದ ದರ ಇದೀಗ ನಿಧಾನವಾಗಿ ಏರಿಕೆ ಕಾಣುತ್ತಿದೆ. ದಾವಣಗೆರೆ ಗೋಲ್ಡ್ ರೇಟ್, ಹುಬ್ಬಳ್ಳಿ ಗೋಲ್ಡ್ ರೇಟ್, ಇಂದಿನ ಚಿನ್ನದ ಬೆಲೆ ಕಲಬುರಗಿ ಎಷ್ಟು ಎಂದು ಸಾಕಷ್ಟು ಜನ ಹುಡುಕಾಟ ನಡೆಸುತ್ತಿರಬಹುದು. ಅವರಿಗಾಗಿ ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಂಬ ವಿವರ ಇಲ್ಲಿ ನೀಡಲಾಗಿದೆ.
Fri, 22 Nov 202405:15 AM IST
ನವದೆಹಲಿಯ ಮಾರುಕಟ್ಟೆಗೆ ಕರ್ನಾಟಕದ ಕೆಎಂಎಫ್‌ನ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರವೇಶವಾಗಿದೆ. ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಸಿಗಲಿದೆ. ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅಮುಲ್ ಮತ್ತು ಮದರ್ ಡೇರಿ ಹಾಲುಗಳಿಗಿಂತ ಕಡಿಮೆ ದರ ಇದೆ.
Fri, 22 Nov 202405:07 AM IST
- ಕರ್ನಾಟಕದ ಹೆಮ್ಮೆಯ ಬ್ರಾಂಡ್ ನಂದಿನಿ ಹಾಲು ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಲಭ್ಯವಾಗುತ್ತಿದೆ. ದೇಶದ ಪ್ರಮುಖ ಬ್ರಾಂಡ್‌ಗಳಾದ ಮದರ್ ಡೈರಿ, ಅಮೂಲ್ ಜತೆ ರಾಜ್ಯದ ನಂದಿನಿ ಸ್ಪರ್ಧೆಗಿಳಿದಿದೆ. ಹಾಗಿದ್ದರೆ ಮಂಡ್ಯದಿಂದ ದೆಹಲಿಗೆ ಹಾಲು ಹೇಗೆ ಸರಬರಾಜು ಹೇಗಾಗುತ್ತದೆ? ಅಲ್ಲಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇಲ್ಲಿದೆ. (ವರದಿ: ಎಚ್.ಮಾರುತಿ)
Fri, 22 Nov 202404:26 AM IST
ಬೆಂಗಳೂರು ವಿಧಾನಸೌಧದಲ್ಲಿ ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ “ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ” ಎಂದು ಕೂಗಿದ್ದು ಗಮನಸೆಳೆದಿತ್ತು. ಇದು ಟೀಕೆಗೆ ಒಳಗಾಗಿದ್ದು, ಪತ್ರಕರ್ತ ರಾಜೀವ್ ಹೆಗಡೆ ಕೂಡ ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ಟೀಕಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ವಿವರ ಇಲ್ಲಿದೆ.
Fri, 22 Nov 202402:29 AM IST
ಕರ್ನಾಟಕದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, 26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ. ಈ ಅಧಿಕಾರಿಗಳ ಅಕ್ರಮ ಆಸ್ತಿ ಲೋಕಾಯುಕ್ತ ಅಧಿಕಾರಿಗಳು ಕಂಡು ಬೆಚ್ಚಿಬಿದಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)
Fri, 22 Nov 202402:07 AM IST
ಬೆಂಗಳೂರು ವಿದ್ಯಾರಣ್ಯಪುರದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಬಳಿಕ ಬಂಧನ ಭೀತಿ ಶುರುವಾಗಿ 12000 ಕಿಮೀ ಕಾರಿನಲ್ಲೇ ಸುತ್ತಾಡಿದ ಕಳ್ಳರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Fri, 22 Nov 202401:27 AM IST
Karnataka Weather: ಕರ್ನಾಟಕದಲ್ಲಿ ವಿವಿಧೆಡೆ ಚಳಿ ಜೋರಾಗಿದ್ದು, ನಿನ್ನೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ವಿಜಯಪುರ ಸೇರಿ ಒಳನಾಡು ಪ್ರದೇಶಗಳಲ್ಲಿ ಮೈ ನಡುಕದ ಚಳಿ ಕಂಡುಬಂದಿದ್ದು, ಕನಿಷ್ಠ ಉಷ್ಣಾಂಶ 12.2 ದಾಖಲಾಗಿದೆ. ಕರ್ನಾಟಕ ಹವಾಮಾನ ಇಂದು (ನವೆಂಬರ್ 22) ಹೀಗಿದೆ.