Karnataka News Live November 25, 2024 : Karnataka Global Investor Meet 2025: ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ; ಚೆನ್ನೈನಲ್ಲಿ ರೋಡ್-ಶೋ, ಕಂಪನಿಗಳ ಭರವಸೆ ಏನು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 25 Nov 202403:32 PM IST
- Karnataka Global Investor Meet 2025: ಬೆಂಗಳೂರಿನಲ್ಲಿ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚೆನ್ನೈನಲ್ಲಿ ಪ್ರಮುಖ ಉದ್ಯಮಿಗಳನ್ನು ಆಹ್ವಾನಿಸಲಾಯಿತು.
Mon, 25 Nov 202402:32 PM IST
- Kodagu Illegal Kerala Lottery Sale: ಕೊಡಗಿನಲ್ಲಿ ಕೇರಳದ ಲಾಟರಿ ಮಾರಾಟ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಈ ಕಾರಣದಿಂದ ಕಟ್ಟೆಚ್ಚರದಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.
Mon, 25 Nov 202401:18 PM IST
ಕೊಪ್ಪಳ ಜಿಲ್ಲೆಯ ಗಂಗಾವತಿ, ಮುನಿರಾಬಾದ್, ಬಾಣಾಪುರ ರೈಲ್ವೆ ನಿಲ್ದಾಣಗಳಿಗೆ ಇನ್ನು ಹೊಸ ಹೆಸರು ಬರಲಿದೆ. ಈ ನಿಲ್ದಾಣಗಳ ಮರು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಮರು ನಾಮಕರಣದ ಹಿಂದಿರುವ ಐತಿಹಾಸಿಕ, ಪೌರಾಣಿಕ ಕಾರಣಗಳಿವು.
Mon, 25 Nov 202401:17 PM IST
- Indian Railways: ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ವಹಣಾ ಕಾರ್ಯ ಇರುವುದರಿಂದ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳಲ್ಲಿ ಎರಡು ದಿನ ವ್ಯತ್ಯಯವಾಗಲಿದೆ.
Mon, 25 Nov 202411:56 AM IST
- Forest Minister Boating: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಡ್ಯ ಜಿಲ್ಲೆ ರಂಗನತಿಟ್ಟಿನಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಒಂದು ಸುತ್ತು ಹಾಕಿದಾಗ ಭಾರೀ ಗಾತ್ರದ ಮೊಸಳೆ ವೀಕ್ಷಿಸಿದರು.
Mon, 25 Nov 202410:43 AM IST
- Hubli Crime News: ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಂಗಳೂರು ಮೂಲದ ಇಬ್ಬರು ಕುಖ್ಯಾತ ಕಳ್ಳರನ್ನು ಮಹಜರಿಗೆಂದು ಕರೆದುಕೊಂಡು ಬಂದಾಗ ತಪ್ಪಿಸಿಕೊಳ್ಳಲು ಈ ಯತ್ನಿಸಿದ್ದು. ಈ ವೇಳೆ ಗುಂಡು ಹಾರಿಸಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಹುಬ್ಬಳ್ಳಿ ಧಾರವಾಡ ಮೂವರು ಪೊಲೀಸರಿಗೆ ಗಾಯಗಳಾಗಿವೆ.
Mon, 25 Nov 202410:32 AM IST
ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ ಶುರುವಾಗಿದ್ದು, ಜಗಮಗಿಸುವ ದೀಪಾಲಂಕಾರ, ಜಾತ್ರೆಯ ವಾತಾವರಣ, ಸಂಭ್ರಮ ಸಡಗರ ನೋಡಬೇಕಾದರೆ ಇಂದೇ ಸಂಜೆ ಭೇಟಿ ಕೊಡಿ. ನಾಳೆ ಕೊನೇ ದಿನವಾಗಿದ್ದು, ಪರಿಷೆಯಲ್ಲಿ ಹಸಿ ಕಡಲೆಕಾಯಿ ಪರಿಷೆ, ಬೇಯಿಸಿದ ಶೇಂಗಾ ಖರೀದಿಸಿ ತಿನ್ನೋದನ್ನು ಮರೆಯಬೇಡಿ. ಪರಿಷೆಯಲ್ಲಿ ಏನುಂಟು, ಏನಿಲ್ಲ ಇಲ್ಲಿದೆ ವಿವರ. (ವರದಿ- ಎಚ್.ಮಾರುತಿ, ಬೆಂಗಳೂರು)
Mon, 25 Nov 202410:02 AM IST
- Hubli Crime News: ಆಸ್ತಿ ವಿಚಾರವಾಗಿ ಅಪ್ಪ ಮಗನ ನಡುವೆ ಜಗಳ ನಡೆದು ಅಪ್ಪನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
Mon, 25 Nov 202409:48 AM IST
- Koppal Agniveer Rally 2024: ಉತ್ತರ ಕರ್ನಾಟಕದ ಭಾಗದ ಜನರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನವೆಂಬರ್ 26ರಿಂದ ಹದಿಮೂರು ದಿನಗಳ ಕಾಲ ಅಗ್ನಿವೀರ್ ನೇಮಕಾತಿ ರ್‍ಯಾಲಿ ನಡೆಯಲಿದೆ.
Mon, 25 Nov 202409:22 AM IST
ವಿಜಯಪುರದಲ್ಲಿ ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕನ ವಿರುದ್ಧ ಮಗುವಿನ ಅಪಹರಣದ ಕೇಸ್ ದಾಖಲಾಗಿದೆ. ನಶೆ ಇಳಿದ ಬಳಿಕ ಮಗುವನ್ನು ವಾಪಸ್ ಕರೆದೊಯ್ದ ಜಾಗಕ್ಕೆ ಕರೆತಂದು ಪೊಲೀಸರ ಅತಿಥಿಯಾದ ಕುತೂಹಲಕಾರಿ ಹಾಗೂ ಕಳವಳಕಾರಿ ಘಟನೆ ವರದಿಯಾಗಿದೆ.
Mon, 25 Nov 202406:59 AM IST
ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ಸಮರ್ಪಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಾಮುಂಡೇಶ್ವರಿ ದೇವಿಯ ರಥದ ಇತಿಹಾಸ ಮತ್ತು ಇತರೆ ವಿವರ ಇಲ್ಲಿದೆ.
Mon, 25 Nov 202405:56 AM IST
ಬೆಂಗಳೂರಲ್ಲಿ ಡಿಸೆಂಬರ್ ಚಳಿ ವಾಡಿಕೆ. ಅಂದರೆ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಚಳಿ ಶುರುವಾಗುವುದು ಡಿಸೆಂಬರ್‌ಗೆ. ಆದರೆ ಈ ಬಾರಿ ನವೆಂಬರ್ ಮಧ್ಯದಲ್ಲೇ ಚಳಿ ಶುರುವಾಗಿದೆ. ಇನ್ನೂ ಗಮನಿಸಬೇಕಾದ ಅಂಶ ಎಂದರೆ ಉತ್ತರ ಕರ್ನಾಟಕದಲ್ಲೂ ವಿಪರೀತ ಚಳಿ ಶುರುವಾಗಿದೆ. ಉಷ್ಣಾಂಶ, ತೇವಾಂಶ ಇಳಿಕೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.
Mon, 25 Nov 202403:01 AM IST
- Dharmasthala Laksha Deepotsava 2024: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನಾಳೆಯಿಂದ (ನ. 26) ಐದು ದಿನಗಳ ಕಾಲ ಆರಂಭಗೊಳ್ಳಲಿದೆ. ಈ ದೀಪೋತ್ಸವದಲ್ಲಿ ಹತ್ತು ಹಲವು ಕಾರ್ಯಕ್ರಮಗಳೂ ನಡೆಯಲಿವೆ. ಹೀಗಿದೆ ಈ ಸಲದ ದೀಪೋತ್ಸವದ ಕಾರ್ಯಕ್ರಮ ಪಟ್ಟಿ.
Mon, 25 Nov 202402:58 AM IST
SSLC Question paper: ಈ ಸಲ 10ನೇ ತರಗತಿ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದೀರಾ, ಹಾಗಾದರೆ ಗಮನಿಸಿ, ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಹೊಸ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ.
Mon, 25 Nov 202401:47 AM IST
Karantaka Weather Today: ಕರ್ನಾಟಕದಲ್ಲಿ ಚಳಿಗಾಲದ ಚಳಿಯ ಅನುಭವ ಬಹುತೇಕ ಸ್ಥಳಗಳಲ್ಲಿ ತೀವ್ರಗೊಂಡಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕುಸಿದಿದೆ. ಅನೇಕ ಕಡೆಗಳಲ್ಲಿ ತೇವಾಂಶ ಕುಸಿತವಾಗಿ ಒಣಹವೆ ತೀವ್ರಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಹವಾಮಾನ ಮುನ್ಸೂಚನೆ ವಿವರ ಇಲ್ಲಿದೆ.