Karnataka News Live November 27, 2024 : Dakshina Kannada News: ಬೆಳ್ತಂಗಡಿ ತಾಲ್ಲೂಕು ಬರ್ಕಜೆ ಜಲಾಶಯದ ಸಮೀಪದಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 27 Nov 202404:31 PM IST
Dakshina Kannada News: ಬೆಳ್ತಂಗಡಿ ತಾಲ್ಲೂಕಿನ ಬರ್ಕಜೆ ಎಂಬಲ್ಲಿ ತುಂಬಿ ಹರಿಯುತ್ತಿದ್ದ ಜಲಾಶಯದ ನೀರಿನಲ್ಲಿ ಈಜಲು ಹೋದ ಮೂಡಬಿದ್ರೆಯ ಮೂವರು ಯುವಕರು ಮೃತಪಟ್ಟಿದ್ದಾರೆ.
ವರದಿ: ಹರೀಶ ಮಾಂಬಾಡಿ. ಮಂಗಳೂರು
Wed, 27 Nov 202401:20 PM IST
- Karnataka Bank recruitment: ಕರ್ನಾಟಕ ಬ್ಯಾಂಕ್‌ನಲ್ಲಿ ಗ್ರಾಹಕ ಸೇವಾ ಸಹಾಯಕ ಹುದ್ದೆ / ಕ್ಲರ್ಕ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಕೆಲವು ದಿನಗಳ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಇದೇ ನವೆಂಬರ್ 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
Wed, 27 Nov 202412:37 PM IST
- Tumkur Lok Adalat: ತುಮಕೂರಿನಲ್ಲಿ ನ್ಯಾಯಾಲಯವು ರಾಷ್ಟ್ರೀಯ ಲೋಕ್ ಆದಾಲತ್ ಕಾರ್ಯಕ್ರಮವನ್ನು ಡಿಸೆಂಬರ್ 14ರಂದು ಹಮ್ಮಿಕೊಂಡಿದ್ದು, ಪ್ರಕರಣ ಬಾಕಿ ಇರುವವರು ಭಾಗಿಯಾಗಲು ಅವಕಾಶ ಮಾಡಿಕೊಡಲಾಗಿದೆ.
Wed, 27 Nov 202411:49 AM IST
- Ksrtc Volvo Bus to Sabarimala: ಶಬರಿಮಲೆಗೆ ಹೋಗ ಬಯಸುವ ಭಕ್ತರಿಗಾಗಿ ವೋಲ್ವೋ ಬಸ್ ಅನ್ನು ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ಆರಂಭಿಸಲಿದೆ. ಅದರ ವಿವರ ಇಲ್ಲಿದೆ.
Wed, 27 Nov 202410:55 AM IST
- ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವದ ನಿಮಿತ್ತ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು. ದೇವಾಲಯದ ಹೊರಾಂಗಣದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ದೇವರನ್ನು ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು. ನೆರೆದಿದ್ದ ಭಕ್ತರು ರಥ ಎಳೆದು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. (ಹರೀಶ ಮಾಂಬಾಡಿ, ಮಂಗಳೂರು)
Wed, 27 Nov 202410:48 AM IST
ಮೈಸೂರು: ಮಂಗಳವಾರ ರಾತ್ರಿ ನಗರದ ವಿಜಯನಗರ 2ನೇ ಹಂತದ ಬಳಿ ಕಾಣಿಸಿಕೊಂಡ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಹಾವು ಸಂರಕ್ಷಕ ಸ್ನೇಕ್ ಶ್ಯಾಮ್ ಕಾಪಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಶ್ಯಾಮ್ ಹಾವು ಹಿಡಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Wed, 27 Nov 202409:51 AM IST
Kalaburgi: ಜಿಮ್ಸ್ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ಮಗುವನ್ನು ಪೊಲೀಸರು ಪತ್ತೆ ಹಚ್ಚಿ ತಾಯಿಯ ಮಡಿಲು ಸೇರಿಸಿದ್ದಾರೆ. ಸೋಮವಾರ ದಾದಿಯರ ವೇಷದಲ್ಲಿದ್ದ ಇಬ್ಬರು ಮಹಿಳೆಯರು ಗಂಡು ಮಗುವನ್ನು ಕಿಡ್ನಾಪ್ ಮಾಡಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ಕಳ್ಳಿಯರನ್ನು ಹುಡುಕಿ ಮಗುವನ್ನು ರಕ್ಷಿಸಿ ತಾಯಿಗೆ ವಾಪಸ್ ಒಪ್ಪಿಸಿದ್ದಾರೆ.
Wed, 27 Nov 202409:33 AM IST
- 2024 River Indie: ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ರೈಡ್ ರಿವರ್ ಇದೀಗ ತನ್ನ ರಿವರ್ ಇಂಡೀ ಸ್ಕೂಟರ್‌ನ ಪರಿಷ್ಕೃತ ಮಾದರಿ ಪರಿಚಯಿಸಿದೆ. ಈ ಸ್ಕೂಟರ್‌ಗೆ ಬೆಲ್ಟ್ ಬದಲು ಚೈನ್ ಜೋಡಿಸಲಾಗಿದೆ. ಇದರೊಂದಿಗೆ ಸಿಂಗಲ್ ಸ್ಪೀಡ್ ಗಿಯರ್ ಬಾಕ್ಸ್ ನೀಡಿದೆ.
Wed, 27 Nov 202409:11 AM IST
- ಕರ್ನಾಟಕ ಸಹಕಾರ ಇಲಾಖೆಯು ಸಹಕಾರ ವಲಯದಲ್ಲಿ ಆಸಕ್ತಿ ಇರುವವರು ಹಾಗೂ ಉದ್ಯೋಗ ಬಯಸುವವರಿಗೆ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್ ಆಯೋಜಿಸುತ್ತಿದೆ. ಇದರ ವಿವರ ಇಲ್ಲಿದೆ.
Wed, 27 Nov 202408:43 AM IST
ಮಂಗಳೂರು: ಪರಿವಾಹನ್ ಹೆಸರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದೀರಿ ಎಂದು, ನಕಲಿ ಇ ಚಲನ್ ಕಳಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1 ಲಕ್ಷಕ್ಕೂ ಹೆಚ್ಚು ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Wed, 27 Nov 202406:38 AM IST
Dharmasthala Laksha Deepotsava 2024: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 26 ರಿಂದ 30 ವರೆಗೆ ಲಕ್ಷದೀಪೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಮಂಜುನಾಥನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ನೋಡಲು ಬಹಳ ಸ್ಥಳಗಳಿದ್ದು ಮಾಹಿತಿ ಇಲ್ಲಿದೆ.
Wed, 27 Nov 202405:58 AM IST
Muda Scam: ಮೈಸೂರು ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ. 10ಕ್ಕೆ ಮುಂದೂಡಿದೆ.
Wed, 27 Nov 202403:08 AM IST
ರೈತರ ಭೂಮಿಯನ್ನು ಅವರಿಗೆ ಉಳಿಸಿಕೊಡಬೇಕು. ಭಾರತಕ್ಕೆ ಒಳ್ಳೆಯದಾಗಬೇಕು ಎಂದರೆ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು, ವಕ್ಫ್ ಮಂಡಳಿ ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Wed, 27 Nov 202401:51 AM IST
Karnataka Weather: ಕಳೆದ 2 ದಿನಗಳಿಗಿಂತ ರಾಜ್ಯಾದ್ಯಂತ ಚಳಿ ಇನ್ನಷ್ಟು ಹೆಚ್ಚಾಗಿದೆ. ಮಂಗಳವಾರ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ (36.4 ಡಿ.ಸೆ) ಹಾಗೂ ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ (12.2) ದಾಖಲಾಗಿದೆ. ಡಿಸೆಂಬರ್ 1 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.