Karnataka News Live November 4, 2024 : ಲವ್ ಜಿಹಾದ್ ಮುಗಿದು ಲ್ಯಾಂಡ್ ಜಿಹಾದ್ ಬಂದಿದೆ, ವಕ್ಫ್ ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಆರ್ ಅಶೋಕ್
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 04 Nov 202403:53 PM IST
- ರಾಜ್ಯದಲ್ಲಿ ಲವ್ ಜಿಹಾದ್ ಮುಗಿದು ಲ್ಯಾಂಡ್ ಜಿಹಾದ್ ಬಂದಿದೆ. ಕರ್ನಾಟಕವೀಗ ಮತಾಂಧರಿಗೆ ಸ್ಲೀಪರ್ ಸೆಲ್ ಆಗಿದೆ. ವಕ್ಫ್ ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಒದ್ದು ಜೈಲಿಗೆ ಹಾಕಲಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
Mon, 04 Nov 202403:03 PM IST
- ಬಸವಣ್ಣನ ಪುರುಷ ಅಹಂಕಾರ ವಿವಾದವು ಚರ್ಚೆಗೆ ಗ್ರಾಸವಾಗಿದೆ. ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ ಮೊದಲಿನಿಂದಲೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಕವಿ ಮತ್ತು ಬೆಳಗಾವಿ ಜಿಲ್ಲೆಯ ಶಿಕ್ಷಕ ವೀರಣ್ಣ ಮಡಿವಾಳರ ಫೇಸ್‌ಬುಕ್‌ನಲ್ಲಿ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ. ಅವರ ಬರಹವನ್ನು ಯಥಾವತ್ತಾಗಿ ಇಲ್ಲಿ ಮರುಪ್ರಕಟಿಸಲಾಗಿದೆ.
Mon, 04 Nov 202402:54 PM IST
- Guluru Ganapathi: ಐತಿಹಾಸಿಕ ಹಿನ್ನೆಲೆ ಹೊಂದಿರುವ ಗೂಳೂರು ಮಹಾಗಣಪತಿಯನ್ನು ಬಲಿಪಾಡ್ಯಮಿ ದಿನ ಪ್ರತಿಷ್ಠಾಪಿಸಿ, ವಿಶೇಷ ಪೂಜಾ ಕೈಂಕರ್ಯದೊಂದಿಗೆ ಭಕ್ತರ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಈ ಬೃಹತ್ ಮಹಾಗಣಪತಿಗೆ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
Mon, 04 Nov 202401:08 PM IST
- CM Siddaramaiah: ಮುಡಾ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವೆಂಬರ್ 6ರ ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
Mon, 04 Nov 202412:19 PM IST
- Waqf board row in Karnataka: ರಾಜ್ಯಾದ್ಯಂತ ವಕ್ಫ್ ಆಸ್ತಿ ತಿದ್ದುಪಡಿ ಆಗುತ್ತಿರುವ ಸುದ್ದಿಯ ಹಿನ್ನಲೆಯಲ್ಲಿ ಯಾರಾದರೂ ಕಾನೂನು ತಜ್ಞರು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತಿದ್ದಿದ ಕ್ರಮದ ಬಗ್ಗೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕ ಕಾನೂನಿನ ಸಲಹೆಗಳನ್ನು ಕೊಡಬಹುದಾ?
Mon, 04 Nov 202412:03 PM IST
ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಪಾಲಿಸಲು ಆಗ್ರಹಿಸಿ ಬೆಂಗಳೂರಲ್ಲಿ ಅಭಿಯಾನ ಶುರುವಾಗಿದೆ. ಶಾಲಾ ಕಲಿಕೆಗೆ ಹಿಂದಿ ಪರೀಕ್ಷೆ ಬೇಡ ಎಂಬ ಒತ್ತಾಯವೂ ಇದ್ದು, ಅನುಷ್ಠಾನದ ತನಕ ಅಭಿಯಾನ ಮುಂದುವರಿಯಲಿದೆ ಎಂದು ನಮ್ಮ ನಾಡು, ನಮ್ಮ ಆಳ್ವಿಕೆ ವೇದಿಕೆಯವರು ಹೇಳಿದ್ದಾರೆ.
Mon, 04 Nov 202411:10 AM IST
ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ತಾಣವು ರಾಜ್ಯದ ಇತಿಹಾಸ, ವರ್ತಮಾನ ಮತ್ತು ನಾಳೆಗಳ ಕುರಿತ ಸರಣಿ ಬರಹ ಪ್ರಕಟಿಸುತ್ತ ಬಂದಿದೆ. ಅದರ ಭಾಗವಾಗಿ ವಿಜ್ಞಾನಿ, ವಿಜ್ಞಾನ ಲೇಖಕ ಡಾ. ಉದಯ ಶಂಕರ ಪುರಾಣಿಕ ಅವರು ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲು ಮತ್ತು ಸಾಧ್ಯತೆಗಳ ಕುರಿತು ಬೆಳಕು ಚೆಲ್ಲಿದ ಲೇಖನ ಇಲ್ಲಿದೆ.
Mon, 04 Nov 202410:46 AM IST
ಜಿಪಿಎಸ್ ಬಳಸಿಕೊಂಡು ಚಿತ್ರ ಬಿಡಿಸುವ ಪರಿಕಲ್ಪನೆ ಹೊಸದು. ಬೆಂಗಳೂರಿನ ಟೆಕ್ಕಿಯೊಬ್ಬರು ಈ ದೀಪಾವಳಿ ಸಂದರ್ಭದಲ್ಲಿ ಅದನ್ನು ಮಾಡಿದರು. ಗೂಗಲ್ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದರು. ಅದನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ ದೀಪಾವಳಿಗೆ ಶುಭ ಕೋರಿದರು ಕೂಡ. ಆದರೆ, ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಲ್ಲ ಟಾಯ್ಲೆಟ್ ಕಮೋಡ್ ಮತ್ತು ಇನ್ನೇನೇನೋ.
Mon, 04 Nov 202409:46 AM IST
- POCSO case: 9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ ತೋರಿದ ಹೆಡ್ ಕಾನ್ಸ್ಟೇಬಲ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Mon, 04 Nov 202409:35 AM IST
ಬೆಂಗಳೂರು ಕಸ ಸಮಸ್ಯೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ನವರಾತ್ರಿ, ದೀಪಾವಳಿಯೇ ಇರಲಿ ಹಬ್ಬ ಮುಗಿದ ಕೂಡಲೇ ದೊಡ್ಡ ಪ್ರಮಾಣದ ಕಸ ವಿಲೇವಾರಿ ಸವಾಲು ಪಾಲಿಕೆ ಮುಂದಿರುತ್ತದೆ. ಈ ಸಲವೂ ಹಾಗೆಯೇ ಆಗಿದೆ. ವಿವಿಧ ಪ್ರದೇಶಗಳಲ್ಲಿ ಪಟಾಕಿ ಕಸ ವಿಲೇವಾರಿ ಮಾಡುವುದು ಹೇಗೆ ಎಂಬ ಚಿಂತೆ ಆವರಿಸಿದೆ. ಈ ಕುರಿತ ವರದಿ ಇಲ್ಲಿದೆ.
Mon, 04 Nov 202404:53 AM IST
ಭಾರತದಲ್ಲಿ ಕೋಟ್ಯಂತರ ರೂಪಾಯಿ ವಂಚನೆಗೆ ಸಂಬಂಧಿಸಿದ ಅಮೆಜಾನ್ ವಂಚನೆ ಕೇಸ್‌ನಲ್ಲಿ ಮಂಗಳೂರಿನ ಉರ್ವಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 11.45 ಲಕ್ಷ ರೂಪಾಯಿ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Mon, 04 Nov 202404:15 AM IST
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕದ ಅತಿ ಶ್ರೀಮಂತ ದೇಗುಲ. ಇಲ್ಲಿ ಸರ್ಕಾರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಆದಾಯ ಇದೆ. ಆದರೂ, ಸರ್ಕಾರ ಮಾತ್ರ ಇಲ್ಲಿನ ಭಕ್ತರನ್ನು ಕುರಿಗಳನ್ನು ಕಾಣುತ್ತಿದೆ ಎಂದು ಪತ್ರಕರ್ತ ರಾಜೀವ ಹೆಗಡೆ ಟೀಕಿಸಿದ್ದಾರೆ. ಆಗಬೇಕಾದ್ದು ಏನು ಎಂಬುದರ ಕಡೆಗೂ ಅವರು ಬೆಳಕು ಚೆಲ್ಲಿದ್ದು, ಆ ಬರಹ ಇಲ್ಲಿದೆ.
Mon, 04 Nov 202402:43 AM IST
ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಷಾದಕರ ಘಟನೆ ನಡೆದಿದೆ. ಪ್ರತ್ಯೇಕ ಪ್ರಕರಣದಲ್ಲಿ ತುಂಬೆ ಕಡೆಗೋಳಿ ಸಮೀಪ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Mon, 04 Nov 202402:09 AM IST
ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸಿಡಿತದಿಂದ ದೃಷ್ಟಿ ದೋಷಕ್ಕೆ ಒಳಗಾದವರ ಸಂಖ್ಯೆ 150 ದಾಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಲೆಕ್ಕಕ್ಕೆ ಸಿಕ್ಕಿಲ್ಲ. ಸಂತ್ರಸ್ತರು ಬಹುತೇಕ ಮಕ್ಕಳು. ಈ ಪ್ರಕರಣಗಳಲ್ಲಿ ಪೋಷಕರ ಬೇಜವಾಬ್ದಾರಿಯೂ ಕಾರಣ ಎನ್ನುತ್ತಾರೆ ನೇತ್ರತಜ್ಞರು. (ವರದಿ- ಎಚ್.ಮಾರುತಿ, ಬೆಂಗಳೂರು)
Mon, 04 Nov 202401:21 AM IST
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿ 13 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿದ ಹವಾಮಾನ ಮುನ್ಸೂಚನೆಯಲ್ಲಿ ಬೆಂಗಳೂರಲ್ಲಿ ಮಳೆ ಯಾವಾಗ ಬರುತ್ತೆ, ಕರ್ನಾಟಕದ ಹವಾಮಾನ ಹೇಗಿದೆ ಎಂಬಿತ್ಯಾದಿ ಅಂಶಗಳಿದ್ದು, ಆ ವಿವರ ಇಲ್ಲಿದೆ.