Karnataka News Live November 5, 2024 : ಈ ಸಲ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸೋಣವೇ? ನಿಮ್ಮ ಮನೆ ಮಕ್ಕಳ ಹತ್ರ ಪ್ರಬಂಧ, ಚಿತ್ರ ಬರೆಯಿಸಿ ನವೆಂಬರ್ 20ರ ಒಳಗೆ ನಮಗೆ ಕಳುಹಿಸಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 05 Nov 202403:47 PM IST
Children's Day 2024: ಪಾಲಕರೇ, ಮಕ್ಕಳ ದಿನಾಚರಣೆ ಇನ್ನೇನು ಬಂದೇ ಬಿಡ್ತು. ಈ ಸಲ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸೋಣವೇ? ನಿಮ್ಮ ಜೊತೆಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಬಳಗವಿದೆ. ನಿಮ್ಮ ಮನೆ ಮಕ್ಕಳ ಹತ್ರ ಪ್ರಬಂಧ, ಚಿತ್ರ ಬರೆಸಿ ನ 20ರ ಒಳಗೆ ನಮಗೆ ಕಳುಹಿಸಿ. ಆಯ್ದ ಚಿತ್ರಗಳನ್ನು, ಪ್ರಬಂಧವನ್ನು ಪ್ರಕಟಿಸಿ ಮಕ್ಕಳ ಖುಷಿ, ಸಂಭ್ರಮವನ್ನು ಕಣ್ತುಂಬಿಕೊಳ್ಳೋಣ.
Tue, 05 Nov 202403:42 PM IST
- ಬುಧವಾರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿರುವ ಸಿದ್ದರಾಮಯ್ಯ ಅವರು ಬೆಳಗ್ಗೆ 9:30ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿ ಮುಡಾ ಪ್ರಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿ ಬಳಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Tue, 05 Nov 202402:56 PM IST
- ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ನವೆಂಬರ್ 5ರಂದು ಮೆಟ್ರೋ ನಿಲ್ದಾಣದ ಹೊರಗಡೆ 1 ಕಿಮೀ ಸರತಿ ಸಾಲು ಕಂಡುಬಂದಿದೆ. ನಿತ್ಯ ಓಡಾಡುವ ಅಂದಾಜು ಪ್ರಯಾಣಿಕರಿಗಿಂತ ಹೆಚ್ಚುವರಿ 6 ಸಾವಿರ ಪ್ರಯಾಣಿಕರು ಕ್ಯೂನಲ್ಲಿ ನಿಂತಿದ್ದರು. ಅತ್ತ ನಾಗಸಂದ್ರ - ಮಾದಾವರ ಮಾರ್ಗ ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
Tue, 05 Nov 202401:22 PM IST
- ವಿದ್ಯುತ್ ಕೇಬಲ್‌ನಲ್ಲಿ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋದ ಬಾಲಕನಿಗೆ ಕರೆಂಟ್ ಶಾಕ್ ಹೊಡದಿದೆ. ಇದರಿಂದ ಬಾಲಕನ ಸಂಪೂರ್ಣ ದೇಹ ಸುಟ್ಟ ಸ್ಥಿತಿಯಲ್ಲಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ.
Tue, 05 Nov 202412:40 PM IST
US election 2024: ಬೆಂಗಳೂರಿನಲ್ಲಿರುವ ಅಮೆರಿಕನ್ ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ ಎಂದು ಸವಾಲೊಡ್ಡಿದ್ದಾರೆ.
Tue, 05 Nov 202412:26 PM IST
- Nanjangudu Crime: ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ವಿವಾಹಿತೆಯೊಬ್ಬಳು ತನ್ನ ಗಂಡನನ್ನೇ ಕೊಂದಿರುವ ಘಟನೆ ನಂಜನಗೂಡು ಬಳಿ ನಡೆದಿದೆ. ಇಬ್ಬರೊಂದಿಗೆ ಸೇರಿಕೊಂಡು ಕತ್ತು ಕೊಯ್ದು ಕೊಲೆ ಮಾಡಿ ವಾಮಾಚಾರವೆಂಬಂತೆ ಬಿಂಬಿಸಿದರೂ, ಕೊಲೆ ಮಾಡಿದ ಪತ್ನಿ ಸಿಕ್ಕಿಬಿದ್ದಿದ್ದಾಳೆ.
Tue, 05 Nov 202410:58 AM IST
- ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೋಜು ಮಸ್ತಿಯೊಡನೆ ಬೆಂಜ್ ಕಾರಿನಲ್ಲಿ ಹೊರಟವರ ಅವಾಂತರದಿಂದ ದುರ್ಘಟನೆ ನಡೆದಿದ್ದು ಕಾರು ಚಲಾಯಿಸುತ್ತಿದ್ದ ಧನುಷ್ ಎಂಬಾತನನ್ನು ಬಂಧಿಸಲಾಗಿದೆ.
Tue, 05 Nov 202410:45 AM IST
- ಎಫ್ಐಆರ್ ದಾಖಲಾಗಿರುವುದು ಹಾಸ್ಯಾಸ್ಪದ ಹಾಗೂ ದುರುದ್ದೇಶಪೂರಿತ ಎಂದು ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದು ಗುಡುಗಿದ್ದಾರೆ.
Tue, 05 Nov 202409:07 AM IST
- ಮುಡಾ ಆಯುಕ್ತರ ಕಚೇರಿಯಲ್ಲಿ ಸಿಸಿಟಿವಿ ಹಾಗೂ ಡಿವಿಆರ್ ನಾಪತ್ತೆ ವಿಚಾರವಾಗಿ ಮಾತನಾಡಿದ ಸ್ನೇಹಮಯಿ ಕೃಷ್ಣ; ಸಿಸಿಟಿವಿ ಹಾಗೂ ಡಿವಿಆರ್‌ಗಳು ಮುಡಾ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಲಿವೆ. ಇದು ನಾಪತ್ತೆಯಾಗಿರುವುದರ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದಿದ್ದಾರೆ.
Tue, 05 Nov 202408:37 AM IST
- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸಲ್ಲಿಸುವ ಅರ್ಜಿಯ ಆಧರಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರಿಗೆ ನೋಟಿಸ್ ನೀಡಲು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
- ವರದಿ: ಎಚ್.ಮಾರುತಿ.ಬೆಂಗಳೂರು
Tue, 05 Nov 202407:40 AM IST
ಬೆಂಗಳೂರು- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂದಿಕೊಂಡಂತೆ ಇರುವ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿದ್ದು. ಭಾರೀ ಪ್ರಮಾಣದಲ್ಲಿ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ವರದಿ: ಹರೀಶ ಮಾಂಬಾಡಿ. ಮಂಗಳೂರು
Tue, 05 Nov 202406:53 AM IST
ಶುದ್ದ ಗಾಳಿ( Quality air) ಹೊಂದಿರುವ ಭಾರತದ ಟಾಪ್ 10 ನಗರಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂರನೇ ಸ್ಥಾನ, ಹಾಸನ ಒಂಬತ್ತು ಹಾಗೂ ಬೇಲೂರು ನಗರ ಹತ್ತನೇ ಸ್ಥಾನ ಪಡೆದಿವೆ.
Tue, 05 Nov 202402:17 AM IST
- ಹೊಸ ಮನೆ ಕಟ್ಟಿಸುವಾಗ ತಲೆಗೆ ವಿಚಾರ ಪ್ರಮುಖ ವಿಚಾರಗಳಲ್ಲಿ ಕಿಟಕಿ–ಬಾಗಿಲು ಕೂಡ ಒಂದು. ಗುಣಮಟ್ಟದ ಮರ ಎಲ್ಲಿ ಸಿಗುತ್ತದೆ ಎಂದು ಹಲವರಲ್ಲಿ ವಿಚಾರಿಸಿದರೂ ನಿಮಗೆ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದರೆ ಬೆಂಗಳೂರಿನ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿರುವ ಕರ್ನಾಟಕ ಅರಣ್ಯ ಇಲಾಖೆಯ ಟಿಂಬರ್‌ಗೆ ಭೇಟಿ ನೀಡಬಹುದು. ಏನಿದೆ ಅಲ್ಲಿ ಅಂತಹ ವಿಶೇಷ ಎಂಬುದು ನೋಡಿ.
Tue, 05 Nov 202402:01 AM IST
- HSRP Deadline: ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ನಾಲ್ಕನೇ ಗಡುವು ಸಮಯವೂ ಸಮೀಪಿಸುತ್ತಿದೆ. ಈ ತಿಂಗಳಾಂತ್ಯದ ಒಳಗೆ ನಂಬರ್ ಪ್ಲೇಟ್ ಬದಲಿಸಿಕೊಳ್ಳಲು ಸಾರಿಗೆ ಇಲಾಖೆ ಅವಕಾಶ ನೀಡಿದೆ.
Tue, 05 Nov 202401:40 AM IST
Karnataka Weather Today: ಬೆಂಗಳೂರು ನಗರ, ಗ್ರಾಮಾಂತರ ಸೇರಿ 14 ಜಿಲ್ಲೆಗಳಲ್ಲಿ ಇಂದು (ನವೆಂಬರ್ 5) ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಕೆಲವು ಕಡೆ ಮುಂಜಾನೆ ಮಂಜು, ಸ್ವಲ್ಪ ಚಳಿ ಇರಲಿದೆ. ಇನ್ನುಳಿದಂತೆ, ರಾಜ್ಯದ ಉಳಿದೆಡೆ ಇಂದಿನ ಹವಾಮಾನ ಹೇಗಿದೆ- ಕರ್ನಾಟಕ ಹವಾಮಾನ ವಿವರ ಇಲ್ಲಿದೆ.
Tue, 05 Nov 202401:38 AM IST
- Karnataka Assembly Election Effect: ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಉಪ ಚುನಾವಣೆ ಮೇಲೆ ಇತ್ತೀಚಿನ ಹಗರಣ, ವಿವಾದಗಳ ಪರಿಣಾಮ ಬೀರಬಹುದು, ಸಿದ್ದರಾಮಯ್ಯ ಅವರ ನಾಯಕತ್ವ ಪರೀಕ್ಷೆಗೂ ವೇದಿಕೆ ಆಗಬಹುದೇ. ಇಲ್ಲಿದೆ ವಿಶ್ಲೇಷಣೆ.
- ವರದಿ: ಎಚ್.ಮಾರುತಿ.ಬೆಂಗಳೂರು