Karnataka News Live November 8, 2024 : Bangalore power Cut: ಬೆಂಗಳೂರಿನಲ್ಲಿ ನವೆಂಬರ್ 10ರಂದು ಹಲವೆಡೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಕರೆಂಟ್ ಇರೋಲ್ಲ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 08 Nov 202404:13 PM IST
- ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ನವೆಂಬರ್ 10ರ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು ಮಾಹಿತಿ ನೀಡಿದೆ.
Fri, 08 Nov 202402:21 PM IST
- ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಹಣ ಹೂಡಿಕೆಗೆ ಉತ್ತೇಜಿಸಿ ಮೋಸ ಮಾಡಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಗೋವಾ ಸೈಬರ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Fri, 08 Nov 202401:41 PM IST
- Mangaluru Crime News: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರಿಗೆ ಮಂಗಳೂರು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
Fri, 08 Nov 202412:54 PM IST
- ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿ ಬಾಲಕರಿಬ್ಬರು ಎತ್ತಿನ ಹೊಳೆ ಕಾಮಗಾರಿಯ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
- ವರದಿ: ಈಶ್ವರ್ ತುಮಕೂರು
Fri, 08 Nov 202411:57 AM IST
ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್ ವ್ಯವಸ್ಥೆ ಸದ್ಯ ಎಲ್ಲರ ಗಮನಸೆಳೆದಿರುವ ವಿಚಾರ. ಆರಂಭಿಕ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಸೈಕಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಇನ್ನೂ 10 ಸ್ಟೇಷನ್‌ಗಳಿಗೆ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
Fri, 08 Nov 202411:49 AM IST
- ದೂರದ ಅಮೆರಿಕಾಕ್ಕೆ ಶಿಕ್ಷಣ ಪಡೆಯಲು ಹೋಗಿ ಅಲ್ಲಿಯೇ ವಿಜ್ಞಾನಿಯಾಗಿ ನಂತರ ಅಧ್ಯಾಪಕರಾಗಿ ನಿವೃತ್ತರಾದ ಕರ್ನಾಟಕದ ಚಿಕ್ಕೋಡಿ ಮೂಲದ ಶ್ರೀನಿವಾಸ್ ಥಾಣೆದಾರ್( Srinivas Thanedar) ಅವರು ಸತತ ಎರಡನೇ ಬಾರಿಗೆ ಅಮೆರಿಕಾದ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ.
Fri, 08 Nov 202411:04 AM IST
- Mysore Sangeetha Sugandha Program: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ "ಮೈಸೂರು ಸಂಗೀತ ಸುಗಂಧ" ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು.
Fri, 08 Nov 202411:04 AM IST
ಬೆಂಗಳೂರು ಮೆಟ್ರೋ ಮಾರ್ಗ ವಿಸ್ತರಣೆಯಾಗಿದೆ, ಹೊಸ ನಿಲ್ದಾಣಗಳ ಸೇರ್ಪಡೆಯಾಗಿದೆ. ಅದರೆ ಹಳೆ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬುದರ ಕಡೆಗೆ ಸ್ಥಳೀಯರು ಗಮನಸೆಳಯುತ್ತಿದ್ದಾರೆ.
Fri, 08 Nov 202410:09 AM IST
ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗೆ ಅಸ್ತ್ರಂ ಎಂಬ ಹೊಸ ಸೂಪರ್ ಆಪ್ ಅಭಿವೃದ್ಧಿ ಪಡಿಸುತ್ತಿರುವ ಪೊಲೀಸರು, ಶೀಘ್ರವೇ ಅದನ್ನು ಸಾರ್ವಜನಿಕ ಬಳಕೆಗೂ ಬಿಡಲಿದ್ದಾರೆ. ಬೆಂಗಳೂರು ಟ್ರಾಫಿಕ್ ನಿರ್ವಹಣೆಯಲ್ಲಿ ಇದು ಹೊಸ ಕ್ರಾಂತಿ ರೂಪಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಪೊಲೀಸರು.
Fri, 08 Nov 202409:59 AM IST
- KRS Dam Updates: ಕಳೆದ ವರ್ಷ ಮಳೆ ಕೊರತಯಿಂದ ಸೊರಗಿ ಹೋಗಿದ್ದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಈ ಬಾರಿ ಜೀವ ಕಳೆ ಬಂದಿದೆ. ಸತತ ನೂರು ದಿನದಿಂದಲೂ ಜಲಾಶಯ ಭರ್ತಿಯಾಗಿದೆ.
Fri, 08 Nov 202409:28 AM IST
ಬೆಂಗಳೂರು ನಿತ್ಯವಸ್ತುಗಳ ಬೆಲೆ ಏರಿಕೆ ಸಹಜವಾಗಿಯೆ ಕಳವಳಕಾರಿ. ತರಕಾರಿ, ತೆಂಗಿನಕಾಯಿ ಬೆಲೆ ಏರುತ್ತಿರುವ ಕಾರಣ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ, ವ್ಯಾಪಾರಿಗಳ ಸಮಸ್ಯೆ ಬೇರೆಯೇ ರೀತಿಯದ್ದು. “ತೆಂಗಿನಕಾಯಿ ಬೆಲೆ ಝೆಪ್ಟೋ, ಬ್ಲಿಂಕಿಟ್‌ಗಿಂತ ನಮ್ಮಲ್ಲೇ ಕಡಿಮೆ” ಎಂಬ ಬೆಂಗಳೂರು ವ್ಯಾಪಾರಿಯ ಪೋಸ್ಟರ್ ವೈರಲ್ ಆಗಿದೆ.
Fri, 08 Nov 202407:56 AM IST
Crime Against Women: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದ ಕೆಟ್ಟ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. 10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ? ಎಂದು ಬೆಂಗಳೂರು ಯುವತಿ ಕಣ್ಣೀರು ಸುರಿಸಿ ಕೇಳಿದ್ದಾರೆ. ವೈರಲ್ ವಿಡಿಯೋ ಮತ್ತು ವಿವರ ವರದಿ ಇಲ್ಲಿದೆ.
Fri, 08 Nov 202407:36 AM IST
- Chikkaballapur: ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯೋಗ ಶಿಕ್ಷಕಿ ಕಿಡ್ನಾಪ್‍ಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಫಾರಿ ಪಡೆದಿದ್ದ ದುರುಳರು ಯೋಗ ಶಿಕ್ಷಕಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದರು.
Fri, 08 Nov 202406:48 AM IST
ಹಾವೇರಿ ಜಿಲ್ಲೆಯ ರೈತನ ಆತ್ಮಹತ್ಯೆಗೂ ವಕ್ಫ್‌ಗೂ ಸಂಬಂಧ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ಇದಾಗಿ, ವಕ್ಫ್ ಕುರಿತ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಕೆಲವು ಕನ್ನಡ ಸುದ್ದಿ ತಾಣಗಳ ವಿರುದ್ಧ ಕೇಸ್ ದಾಖಲಾಗಿದೆ.
Fri, 08 Nov 202406:07 AM IST
ಬೆಂಗಳೂರಿನ ಯೋಗ ಶಿಕ್ಷಕಿಯ ಅಪಹರಣ, ಕೊಲೆ ಯತ್ನದ ಕೇಸ್ ದಾಖಲಿಸಿಕೊಂಡ ಪೊಲೀಸರು 5 ಶಂಕಿತರನ್ನು ಬಂಧಿಸಿದ್ದಾರೆ. ಸಾವಿನ ದವಡೆಯಿಂದ ಪಾರಾಗಲು ಶಿಕ್ಷಕಿಗೆ ನೆರವಾಗಿದ್ದು ಯೋಗಾಭ್ಯಾಸ ಎಂಬ ಅಂಶ ಗಮನಸೆಳೆದಿದೆ.
Fri, 08 Nov 202404:35 AM IST
ಬೆಂಗಳೂರಲ್ಲಿ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆ ವೈದ್ಯ, ಪುರುಷ ನರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಚಿಕಿತ್ಸೆಗೆ ಹೋಗಿದ್ದ ವೇಳೆ ಪಾನಮತ್ತರಾಗಿದ್ದ ಆರೋಪಿಗಳು ಕೈಗೆ ನಾಲ್ಕೈದು ಕಡೆ ಸೂಜಿ ಚುಚ್ಚಿದ್ದರು ಎಂದು ಮಹಿಳೆ ಆರೋಪಿಸಿದ್ದು, ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
Fri, 08 Nov 202404:08 AM IST
ಬೆಂಗಳೂರು ಟ್ರಾಫಿಕ್ ಮತ್ತು 10 ನಿಮಿಷದಲ್ಲಿ ಆಹಾರ ಪೂರೈಸುವ ಚಾಕಚಕ್ಯತೆ ಸದ್ಯ ಎಕ್ಸ್ ಖಾತೆಯಲ್ಲಿ ಚರ್ಚೆಯ ವಿಚಾರ. ಇದಕ್ಕೆ ಕಾರಣವಾಗಿದ್ದು, ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಆಹಾರ ಪೂರೈಕೆಯಾದ ಘಟನೆ. ಯಾರು ಏನು ಹೇಳಿದ್ರು ಅಂತ ನೋಡೋಣ.
Fri, 08 Nov 202402:30 AM IST
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಅತಿದೊಡ್ಡ “ವರ್ಟಿಕಲ್ ಗಾರ್ಡನ್" ಅನಾವರಣವಾಗಿದೆ. ಹೊಸ ಗೋಡೆ ಉದ್ಯಾನ ಟೈಗರ್ ವಿಂಗ್ಸ್ ಹಲವು ವಿಶೇಷ ಅಂಶಗಳನ್ನು ಹೊಂದಿದೆ. ಈ ಲಂಬ ಉದ್ಯಾನ ಜನಮನ ಸೆಳೆಯುತ್ತಿದ್ದು, ಮುಖ್ಯ ವಿವರಗಳು ಇಲ್ಲಿವೆ.
Fri, 08 Nov 202401:28 AM IST
Karnataka Weather: ಕರ್ನಾಟಕದಲ್ಲಿ ಹಿಂಗಾರು ಮಳೆಯ ಪ್ರಭಾವ ಕಡಿಮೆಯಾಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಕೆಲವು ಕಡೆ ಮಾತ್ರ ಮಳೆಯಾಗಬಹುದು. ಮುಂಜಾನೆ ಮಂಜು ಇರಲಿದ್ದು, ಸ್ವಲ್ಪ ಚಳಿ ಇರಬಹುದು. ಕರ್ನಾಟಕ ಹವಾಮಾನ ಇಂದು ಹೀಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಅದರ ವಿವರ ಇಲ್ಲಿದೆ.