Karnataka News Live November 9, 2024 : ನ 13ಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆ ಸಿದ್ದತೆ; 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಅಂತ್ಯ, ಮದ್ಯ ಮಾರಾಟಕ್ಕೆ ನಿಷೇಧ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 09 Nov 202404:55 PM IST
- ನವೆಂಬರ್ 13ಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತಗಳಿಂದ ಸಕಲ ಸಿದ್ದತೆ ನಡೆದಿದೆ. 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮತದಾರರಲ್ಲದವರು ಕ್ಷೇತ್ರ ಬಿಟ್ಟು ಹೋಗಲು ಸೂಚನೆ ನೀಡಲಾಗಿದೆ. ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. (ವರದಿ-ಎಚ್.ಮಾರುತಿ)
Sat, 09 Nov 202401:39 PM IST
- Bangude fish: ಕರಾವಳಿ ಭಾಗದ ಪ್ರಸಿದ್ಧವಾದ ಬಂಗುಡೆ ಮೀನು ದರ ಇಳಿಕೆಯಾಗಿದೆ. ಒಂದೇ ಒಂದು ತಿಂಗಳಲ್ಲಿ 200-250 ರಿಂದ 80-150ಕ್ಕೆ ಇಳಿಕೆಯಾಗುವ ಮೂಲಕ ಅಚ್ಚರಿ ಮೂಡಿಸಿದೆ. (ವರದಿ-ಹರೀಶ ಮಾಂಬಾಡಿ)
Sat, 09 Nov 202410:20 AM IST
Karnataka Covid-19 Equipment Scandal: ಕರ್ನಾಟಕ ಕೋವಿಡ್ ಕಿಟ್ ಹಗರಣಕ್ಕೆ ಸಂಬಂಧಿಸಿದ ತನಿಖಾ ಆಯೋಗ ನೀಡಿದ ವರದಿ ಪ್ರಕಾರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ಧಾರೆ. ಇದರ ವಿವರ ಇಲ್ಲಿದೆ.
Sat, 09 Nov 202409:57 AM IST
- ಕರ್ನಾಟಕದ ಸೇವಾ ಸಿಂಧು ಪೋರ್ಟಲ್‌ನಲ್ಲಿ (Karnataka Seva Sindhu Portal) ಅತ್ಯಂತ ಸುಲಭವಾಗಿ ಜನ್ಮ ದೃಢೀಕರಣ ಪ್ರಮಾಣ ಪತ್ರಕ್ಕೆ (birth certificate online) ಅರ್ಜಿ ಸಲ್ಲಿಸಬಹುದು. ಇಲ್ಲಿ ಈ ಕುರಿತು ಹಂತಹಂತದ ಮಾರ್ಗದರ್ಶಿ ನೀಡಲಾಗಿದೆ.
Sat, 09 Nov 202409:35 AM IST
ಬೆಂಗಳೂರು ಮೆಟ್ರೋ ಮಾದವಾರಕ್ಕೆ ಬಂತು. ಇಲ್ಲೀಗ ಬಾಡಿಗೆ ಶೇ 16-25 ಹೆಚ್ಚಳ, ಆಸ್ತಿ ಮೌಲ್ಯ ಎಷ್ಟಾಯಿತು? ರಿಯಾಲ್ಟಿ ಮೌಲ್ಯ ಹೆಚ್ಚಳವಾಗಿದ್ದು, 2017ರಿಂದೀಚೆಗೆ ಆಗಿರುವ ಆಸ್ತಿ ಮೌಲ್ಯ ಬದಲಾವಣೆ, ಬಾಡಿಗೆ ಹೆಚ್ಚಳದವಿವರ ಇಲ್ಲಿದೆ ನೋಡಿ.
Sat, 09 Nov 202406:54 AM IST
ಆಸ್ಟಿಯೋ ಆರ್ಥರೈಟಿಸ್ (ಅಸ್ಥಿ ಸಂಧಿವಾತ) ಸಮಸ್ಯೆ ಬಹಳ ನೋವು ಕೊಡುವಂಥದ್ದು. ಈ ರೀತಿ ನೋವು ಅನುಭವಿಸಿದ್ದ ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ ಮಾಡಿ ಪರಿಹಾರ ಒದಗಿಸುವಲ್ಲಿ ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡ ಯಶಸ್ವಿಯಾಗಿದೆ. ಸಂಕೀರ್ಣ ಶಸ್ತ್ರ ಚಿಕಿತ್ಸೆಯ ವಿವರ ಇಲ್ಲಿದೆ.
Sat, 09 Nov 202405:47 AM IST
ವೈದ್ಯ ಲೋಕ ವಿಸ್ಮಯ: ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು ಸುರಕ್ಷಿತ. ನಾಲ್ಕು ತಿಂಗಳು ಅತೀವ ವೈದ್ಯಕೀಯ ರಕ್ಷಣೆಯಲ್ಲಿದ್ದ ಮಕ್ಕಳ ಪ್ರಾಣ ಉಳಿದಿದೆ. 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡ ಎಂದು ವರದಿ ಹೇಳಿದೆ. ಈ ವಿರಳ ಘಟನೆಯ ವಿವರ ಇಲ್ಲಿದೆ.
Sat, 09 Nov 202404:37 AM IST
ಬೆಂಗಳೂರು ಈರುಳ್ಳಿ ದರ: ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು ಇಟ್ಟಿದೆ. ಕರ್ನಾಟಕದ ಮಾರುಕಟ್ಟೆ ಗಮನಿಸಿದರೆ, ಈರುಳ್ಳಿ ದರ ಭಾರಿ ಏರಳಿತ ದಾಖಲಾಗಿದೆ. ಇದರ ವಿವರ ಇಲ್ಲಿದೆ.
Sat, 09 Nov 202403:52 AM IST
ಕಲಬುರಗಿ ಸಮೀಪದ ಮರಗುತ್ತಿ ಕ್ರಾಸ್ ಬಳಿ ಶನಿವಾರ ನಸುಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಗಾಣಗಾಪುರ ಕ್ಷೇತ್ರಕ್ಕೆ ತೆರಳುತ್ತಿದ್ದ ಹೈದರಾಬಾದ್ ಮೂಲದ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
Sat, 09 Nov 202402:56 AM IST
ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾಜಿ ಸರ್ಕಲ್, ಜ್ಯೋತಿ ಕೆಫೆ ಬಳಿ ಇನ್ನೊಂದು ತಿಂಗಳು ಸಂಚಾರ ವ್ಯತ್ಯಯವಾಗಲಿದೆ. ಆದ್ದರಿಂದ ಶಿವಾಜಿನಗರ ಬಸ್‌ನಿಲ್ದಾಣಕ್ಕೆ ಹೋಗಲು ಇನ್ನೊಂದು ತಿಂಗಳು ಈ ಮಾರ್ಗ ಬಳಸಿ ಅಂತಿದ್ದಾರೆ ಬೆಂಗಳೂರು ಸಂಚಾರ ಪೊಲೀಸರು. ಪರ್ಯಾಯ ಮಾರ್ಗ ಮತ್ತು ಸಂಬಂಧ ಪಟ್ಟ ಮಾಹಿತಿ ಇಲ್ಲಿದೆ.
Sat, 09 Nov 202401:53 AM IST
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್‌ವೇ ಟ್ರಾಫಿಕ್ ಜಾಮ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ವಿರಳ ವಿಮಾನ ಸಂಚಾರ ದಟ್ಟಣೆ ಸನ್ನಿವೇಶ ಸೃಷ್ಟಿಯಾಗಿತ್ತು ಎಂಬುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಆ ವಿವರ ಇಲ್ಲಿದೆ.