Karnataka News Live October 21, 2024 : ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 21, 2024 : ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ

ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ

Karnataka News Live October 21, 2024 : ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ

04:02 PM ISTOct 21, 2024 09:32 PM HT Kannada Desk
  • twitter
  • Share on Facebook
04:02 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 21 Oct 202404:02 PM IST

ಕರ್ನಾಟಕ News Live: ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ

  • Bengaluru Power cut: ಜಾಲಹಳ್ಳಿ ವಿಭಾಗದ ಎನ್-9 ಉಪವಿಭಾಗದ ಹಲವು ಪ್ರದೇಶಗಳಲ್ಲಿ ಅಕ್ಟೋಬರ್‌ 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.
Read the full story here

Mon, 21 Oct 202401:51 PM IST

ಕರ್ನಾಟಕ News Live: ಡಿಕೆ ಶಿವಕುಮಾರ್‌ಗೆ ತಪ್ಪದ ಸಂಕಷ್ಟ; ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ

  • DK Sivakumar: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿವಾದ ಮಂಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರ ಮತ್ತು ರಾಜ್ಯ ಲೋಕಾಯುಕ್ತಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದೆ. (ವರದಿ: ಎಚ್. ಮಾರುತಿ)
Read the full story here

Mon, 21 Oct 202401:19 PM IST

ಕರ್ನಾಟಕ News Live: ಸಿದ್ದರಾಮಯ್ಯ ಸಂಪುಟದ ಸದಸ್ಯರಿಗೆ ತೀರದ ಸಂಕಷ್ಟ; ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

  • ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವ ಎನ್ಎಸ್ ಬೋಸರಾಜು ಅವರ ವಿರುದ್ಧ ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಬೋಸರಾಜು ಅವರು ತಮ್ಮ ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಕೋರಿದ್ದಾರೆ.
Read the full story here

Mon, 21 Oct 202412:10 PM IST

ಕರ್ನಾಟಕ News Live: Karnataka Rains:ಕುಂಭಕರ್ಣರಂತೆ ನಿದ್ದೆ ಮಾಡುವುದನ್ನು ಬಿಟ್ಟು ಪ್ರವಾಹ ಹಾನಿ ಸಭೆ ನಡೆಸಿ; 5000 ಕೋಟಿ ಪರಿಹಾರ ಬಿಡುಗಡೆ ಮಾಡಿ: ಆರ್‌.ಅಶೋಕ

  • ಬೆಂಗಳೂರಿನಲ್ಲಿ ಮಳೆಯಿಂದ ಭಾರೀ ಹಾನಿಯಾಗಿದ್ದು,ಕೂಡಲೇ ಒಂದು ಸಾವಿರ ಕೋಟಿ ರೂ. ಹಣವನ್ನು ಮಳೆ ಪರಿಹಾರ ರೂಪದಲ್ಲಿ ಬಿಡುಗಡೆ ಮಾಡುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ ಆಗ್ರಹಿಸಿದ್ದಾರೆ.
Read the full story here

Mon, 21 Oct 202411:52 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಮುಂದುವರಿಕೆ; ರಾಜ್ಯದಲ್ಲಿ 5 ದಿನ ಭಾರಿ ಮಳೆಯ ಮುನ್ಸೂಚನೆ

  • ಬೆಂಗಳೂರಿನ ಕೆಲವು ಭಾಗಗಳಲ್ಲಿ ಅಕ್ಟೋಬರ್‌ 21ರಂದು ಮಳೆಯಾಗಿದೆ. ನಗರದಲ್ಲಿ ಮುಂದಿನ ಎರಡು ದಿನ ವರುಣನ ಆಗಮನದ ನಿರೀಕ್ಷೆ ಇದೆ. ಇದೇ ವೇಳೆ ಕರ್ನಾಟಕದ ಹಲವೆಡೆ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read the full story here

Mon, 21 Oct 202411:49 AM IST

ಕರ್ನಾಟಕ News Live: ಬೆಂಗಳೂರಲ್ಲಿ ನಿಲ್ಲದ ಮಳೆ, ಸಿಲ್ಕ್‌ ಬೋರ್ಡ್‌ ವೃತ್ತದಲ್ಲಿ ನದಿಯಂತೆ ಹರಿಯುತ್ತಿವೆ ಮೋರಿ; ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವಿಡಿಯೋ

  • ಬೆಂಗಳೂರಿನಲ್ಲಿ ಸುರಿಯುತ್ತಿರುವ ಎಡಬಿಡದ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಹಲವು ಕಡೆ ರಸ್ತೆ, ಮೋರಿಗಳು ನದಿಗಳ ರೀತಿ ಉಕ್ಕಿ ಹರಿಯುತ್ತಿದ್ದು. ಸಂಚಾರವೂ ವ್ಯತ್ಯಯವಾಗಿದೆ. 
Read the full story here

Mon, 21 Oct 202411:08 AM IST

ಕರ್ನಾಟಕ News Live: ಚನ್ನಪಟ್ಟಣದಲ್ಲಿ ಐದು ಬಾರಿ ಶಾಸಕ; ಯಾವ ಪಕ್ಷದಿಂದ ಗೆದ್ದಿದ್ದಾರೆ ಸಿಪಿ ಯೋಗೇಶ್ವರ್‌, 4 ಬಾರಿ ಪಕ್ಷಾಂತರ ನಂತರ ಬಿಜೆಪಿ ಬಿಡುವರೇ?

  • ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳ ನಡುವೆ ಟಿಕೆಟ್‌ ಫೈಟ್‌ ಜೋರಾಗಿದ್ದು, ಸೈನಿಕ ಸಿ.ಪಿ.ಯೋಗೇಶ್ವರ್‌ ಯುದ್ದ ಎದುರಿಸುವುದಂತೂ ಖಚಿತ ಎನ್ನುವ ಸ್ಥಿತಿಯಿದ್ದು. ಯಾವ ಪಕ್ಷದಿಂದ ಎನ್ನುವ ಕುತೂಹಲ ಮಾತ್ರ ಉಳಿದಿದೆ.
Read the full story here

Mon, 21 Oct 202410:38 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ತಡೆ ನೀಡಲು ಹೈ ಕೋರ್ಟ್ ಮೊರೆ ಹೋದ ಪೇಟಾ; ನಾಳೆ ವಿಚಾರಣೆ

  • ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಕಂಬಳಕ್ಕೆ ತಡೆ ನೀಡಲು ಪೇಟಾ ಹೈಕೋರ್ಟ್ ಮೊರೆ ಹೋಗಿದೆ. ಈ ಸಂಬಂಧ ನಾಳೆ ವಿಚಾರಣೆ ನಡೆಯಲಿದೆ.  ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ನಿಗದಿಯಾಗಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಲಾಗಿದೆ. (ವರದಿ: ಎಚ್. ಮಾರುತಿ)
Read the full story here

Mon, 21 Oct 202410:26 AM IST

ಕರ್ನಾಟಕ News Live: Prajwal Revanna: ಅತ್ಯಾಚಾರ ಆರೋಪ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್‌

  • ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರ ಪುತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ. ಈ ಕುರಿತ ವಿವರ ಇಲ್ಲಿದೆ.

Read the full story here

Mon, 21 Oct 202410:13 AM IST

ಕರ್ನಾಟಕ News Live: ಮುಡಾದಲ್ಲಿ ಬಹುಕೋಟಿ ಹಗರಣ ಎಫೆಕ್ಟ್; ಸಿಎಂ ಸಿದ್ದರಾಮಯ್ಯ ವಿರುದ್ಧ ತವರು ಜಿಲ್ಲೆಯ ಜನರಿಂದಲೇ ವ್ಯಾಪಕ ಆಕ್ರೋಶ

  • ಸೋಮವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ಆರಂಭವಾಗಿವೆ. ಇಡಿ ದಾಳಿ ಬಳಿಕ ಇಂದು ಎಂದಿನಂತೆ ಮುಡಾ ಕಚೇರಿ ತೆರೆದಿದೆ. ಆದರೆ, ಮುಡಾದಲ್ಲಿ ಹಗರಣ ಬೆಳಕಿಗೆ ಬಂದ ನಂತರ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read the full story here

Mon, 21 Oct 202409:54 AM IST

ಕರ್ನಾಟಕ News Live: Karnataka Board Exam: 8, 9, 10ನೇ ತರಗತಿಯ ಅರ್ಧವಾರ್ಷಿಕ ಬೋರ್ಡ್‌ ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಆದೇಶ

  • ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ (ಅಕ್ಟೋಬರ್ 21) ತರಾಟೆಗೆ ತೆಗೆದುಕೊಂಡಿದೆ. ಮುಂದಿನ ಸೂಚನೆ ಬರುವವರೆಗೆ 8, 9 ಮತ್ತು 10 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸದಂತೆ ನ್ಯಾಯಾಲಯ ರಾಜ್ಯಕ್ಕೆ ತಡೆಯಾಜ್ಞೆ ನೀಡಿದೆ.
Read the full story here

Mon, 21 Oct 202409:51 AM IST

ಕರ್ನಾಟಕ News Live: ಅನ್ನಭಾಗ್ಯ ಪಡಿತರ ವಿತರಣೆಗೆ ಸರ್ವರ್‌ ಸಮಸ್ಯೆ ಕಾಟ, ಬಿಪಿಎಲ್‌ ಕಾರ್ಡುದಾರರಿಗೆ ನಗದು ಪ್ರಯೋಜನಕ್ಕೂ ಅಡ್ಡಿ, ಪಡಿತರ ವಿತರಣೆಯೂ ವಿಳಂಬ

  • ಅನ್ನಭಾಗ್ಯ ಪಡಿತರ ವಿತರಣೆಗೆ ಒಂದಿಲ್ಲೊಂದು ಅಡ್ಡಿ ಕಾಡುತ್ತಲೇ ಇದೆ. ಅನ್ನಭಾಗ್ಯದ ಫಲಾನುಭವಿಗಳಿಗೆ ನೇರನಗದು ಪ್ರಯೋಜನ ವಿಳಂಬವಾಗುತ್ತಿತ್ತು. ಈ ಬಾರಿ ಪಡಿತರ ವಿತರಣೆಯೇ ವಿಳಂಬವಾಗತೊಡಗಿದ್ದು, ಇದಕ್ಕೆ ಸರ್ವರ್‌ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದೆ. ಇದರ ವಿವರ ಇಲ್ಲಿದೆ.

Read the full story here

Mon, 21 Oct 202409:09 AM IST

ಕರ್ನಾಟಕ News Live: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಚ್ಚು ಒಂದೇ ದಿನ ದಾಖಲೆ ವಿಮಾನಗಳ ಸಂಚಾರ , ಹೊಸ ನಗರಗಳಿಗೆ ಸಂಪರ್ಕ ಜಾಲ ವಿಸ್ತರಣೆ

  • ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ದಿನ ಅತ್ಯಧಿಕ ವಿಮಾನ ಸಂಚಾರದ ದಾಖಲೆಯನ್ನು ನಿರ್ಮಿಸಿದ್ದು ಇನ್ನಷ್ಟು ವಿಸ್ತರಣೆಯ ನಿರೀಕ್ಷೆಯಲ್ಲಿದೆ.

Read the full story here

Mon, 21 Oct 202408:40 AM IST

ಕರ್ನಾಟಕ News Live: ಬೆಂಗಳೂರು ಮಳೆ; ಪ್ರತಿಷ್ಠಿತ ಎಂಜಿ ರಸ್ತೆಯನ್ನೂ ಬಿಡಲಿಲ್ಲ ಸಮಸ್ಯೆ, ರಸ್ತೆಯಲ್ಲಿ ನಿಂತ ನೀರು ಬಿಡಿಸಲು ಬೆವರು ಹರಿಸಿದ ಬಿಬಿಎಂಪಿ

  • ಬೆಂಗಳೂರಿನ ಪ್ರತಿಷ್ಠಿತ ವಾಣಿಜ್ಯ ಕೇಂದ್ರವಾಗಿರುವ ಎಂಜಿ ರಸ್ತೆಯನ್ನೂ ಮಳೆ ಸಮಸ್ಯೆ ಕಾಡದೇ ಬಿಡಲಿಲ್ಲ. ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಕಾರಣ, ರಸ್ತೆಯಲ್ಲಿ ನಿಂತ ನೀರು ಬಿಡಿಸಲು ಬಿಬಿಎಂಪಿ ಬೆವರು ಹರಿಸಿದ್ದು ಗಮನಸೆಳೆಯಿತು. 

Read the full story here

Mon, 21 Oct 202408:27 AM IST

ಕರ್ನಾಟಕ News Live: Breaking News: ಶಾಸಕ ಸ್ಥಾನಕ್ಕೆ ಸಿಪಿ ಯೋಗಿಶ್ವರ್ ಇಂದು ಸಂಜೆ ರಾಜೀನಾಮೆ

  • CP Yogeshwara: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗಿಶ್ವರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಇಂದು (ಅಕ್ಟೋಬರ್​ 21) ರಾಜೀನಾಮೆ ಸಲ್ಲಿಸಲಿದ್ದಾರೆ.
Read the full story here

Mon, 21 Oct 202407:36 AM IST

ಕರ್ನಾಟಕ News Live: ಎಸ್​ಸಿ ಒಳಮೀಸಲಾತಿ: ದಲಿತ ಸಚಿವ-ಶಾಸಕರೊಂದಿಗೆ ಪರಮೇಶ್ವರ ಮಹತ್ವ ಸಭೆ, ಅಂತಿಮ ನಿರ್ಧಾರಗಳ ಕುರಿತು ಸಿಎಂಗೆ ವರದಿ ಸಲ್ಲಿಸಲು ಸಿದ್ಧತೆ

  • ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಗೃಹ ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಅಕ್ಟೋಬರ್ 21ರಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

Read the full story here

Mon, 21 Oct 202407:11 AM IST

ಕರ್ನಾಟಕ News Live: ಬೆಂಗಳೂರು ಮಳೆ; ಹರಿಯುತ್ತಿರುವ ಮಳೆ ನೀರ ಹಳ್ಳದ ನಡುವೆ ರಸ್ತೆ ಎಲ್ಲಿ ಎಂದು ಹುಡುಕುವ ಸ್ಥಿತಿ ನಿರ್ಮಾಣ, ತಲ್ಲಣದ ಚಿತ್ರಣದ ವೈರಲ್‌ ವಿಡಿಯೋ

  • ಬೆಂಗಳೂರು ಮಳೆ; ಸತತ ಮಳೆಗೆ ಬೆಂಗಳೂರು ತಲ್ಲಣಗೊಂಡಿದ್ದು, ವಾಹನ ಸವಾರರು ರಸ್ತೆ ಹುಡುಕಾಡತೊಡಗಿದ್ದಾರೆ. ಒಂದೆಡೆ ರಸ್ತೆ ಗುಂಡಿ ಕಾಟವಾದರೆ, ಇನ್ನೊಂದೆ ಜಲಾವೃತಗೊಂಡ ರಸ್ತೆ. ಇದರಲ್ಲಿ ಸಂಚಾರ ಮಾಡುವುದು ಸವಾಲಿನ ಕೆಲಸ. ಈ ಚಿತ್ರಣ ನೀಡುವ ವೈರಲ್ ವಿಡಿಯೋ, ಬೆಂಗಳೂರು ಸಂಚಾರ ಪೊಲೀಸರು ಹಂಚಿಕೊಂಡ ವಿಡಿಯೋ ವಿವರ ಇಲ್ಲಿದೆ.

Read the full story here

Mon, 21 Oct 202405:14 AM IST

ಕರ್ನಾಟಕ News Live: ನಿಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿಲ್ಲವೇ, ಇಂದಿನಿಂದ ಕರ್ನಾಟಕದಲ್ಲಿ ಅಭಿಯಾನ ಶುರು, ನೀವೇನು ಮಾಡಬೇಕು

  • ರಾಸುಗಳಿಗೆ ಸಾಂಕ್ರಾಮಿಕ ಜಗುಲಿ ಜೀವ ಹಾನಿಯಾಗುವುದನ್ನು ತಪ್ಪಿಸಲು ಕರ್ನಾಟಕದಲ್ಲಿ ಇಂದಿನಿಂದಲೇ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಒಂದು ತಿಂಗಳ ಕಾಲ ಉಚಿತವಾಗಿಯೇ ರಾಸುಗಳಿಗೆ ಲಸಿಕೆಯನ್ನು ಪಶುಪಾಲನಾ ಇಲಾಖೆ ನೀಡಲಿದೆ.
Read the full story here

Mon, 21 Oct 202404:55 AM IST

ಕರ್ನಾಟಕ News Live: ಉದ್ಯೋಗದ ಭರವಸೆ ನೀಡಿ 1 ಕೋಟಿ ವಂಚಿಸಿದ್ದ ಮುಖ್ಯಪೇದೆ ಅಮಾನತು; ಗೆಳೆಯನ ಮಗಳ ಮೇಲೆ ಅತ್ಯಾಚಾರ ಎಸಗಿದ್ದವ ಬಂಧನ

  • Karnataka Crime: ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿರುವ ಮುಖ್ಯ ಪೇದೆಯೊಬ್ಬರು ಅಮಾನತು ಆಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸ್ನೇಹಿತನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಬಂಧನವಾಗಿದೆ. (ಎಚ್​​ ಮಾರುತಿ)
Read the full story here

Mon, 21 Oct 202404:45 AM IST

ಕರ್ನಾಟಕ News Live: Bangalore News: ಬೆಂಗಳೂರಿನಲ್ಲಿ 2500 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವು; ಪ್ರಭಾವಿ ಒತ್ತುವರಿದಾರರ ಮೇಲೆ ಕಣ್ಣು

  • ಬೆಂಗಳೂರಿನ ನಾನಾ ಭಾಗಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು 2500 ರೂ. ಬೆಲೆ ಬಾಳುವ ಭೂಮಿಯನ್ನು ಕರ್ನಾಟಕ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.
Read the full story here

Mon, 21 Oct 202404:45 AM IST

ಕರ್ನಾಟಕ News Live: ಪೊಲೀಸ್ ಸಂಸ್ಮರಣಾ ದಿನ; ಪೊಲೀಸರ ಮಕ್ಕಳಿಗಾಗಿ 7 ಪಬ್ಲಿಕ್ ಸ್ಕೂಲ್ ಸ್ಥಾಪನೆ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

  • ಪೊಲೀಸ್ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪೊಲೀಸರ ಮಕ್ಕಳಿಗಾಗಿ 7 ಪಬ್ಲಿಕ್ ಸ್ಕೂಲ್ ಸ್ಥಾಪನೆ ಮಾಡುವುದಾಗಿ ಘೋಷಿಸಿದರು. ಇದಲ್ಲದೆ, ಇತರೆ ಪೊಲೀಸ್ ಕಲ್ಯಾಣ ಯೋಜನೆಗಳ ಕಡೆಗೂ ಗಮನಸೆಳೆದರು.

Read the full story here

Mon, 21 Oct 202404:28 AM IST

ಕರ್ನಾಟಕ News Live: ಇಂಜಿನಿಯರಿಂಗ್‌ ಪದವಿಗೆ ಕನ್ನಡ ಮಾಧ್ಯಮಕ್ಕೆ ಓರ್ವ ವಿದ್ಯಾರ್ಥಿ ದಾಖಲು; ಹಾಗಾದರೆ, ಕನ್ನಡ ಮಾಧ್ಯಮಕ್ಕೆ ನಿರಾಸಕ್ತಿ ಏಕೆ?

  • Kannada Medium Engineering: ಇಂಜಿನಿಯರಿಂಗ್‌ ಪದವಿಗೆ ಕನ್ನಡ ಮಾಧ್ಯಮಕ್ಕೆ ಓರ್ವ ವಿದ್ಯಾರ್ಥಿ ದಾಖಲಾಗಿದ್ದು, ಕಳೆದ 4 ವರ್ಷಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಕನ್ನಡ ಮಾಧ್ಯಮಕ್ಕೆ ನಿರಾಸಕ್ತಿ ಏಕೆ? ಉತ್ತರ ಇಲ್ಲಿದೆ. (ವರದಿ-ಎಚ್.ಮಾರುತಿ)
Read the full story here

Mon, 21 Oct 202404:13 AM IST

ಕರ್ನಾಟಕ News Live: KPTCL Recruitment: ಕೆಪಿಟಿಸಿಎಲ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ; ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ ನೇಮಕ ವಿವರ

  • KPTCL Recruitment 2024: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌), ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ), ಮಂಗಳೂರು ಮೆಸ್ಕಾಂ, ಕಲಬುರಗಿ ಚೆಸ್ಕಾಂ ನೇಮಕಾತಿ ವಿವರ ಇಲ್ಲಿದೆ.
Read the full story here

Mon, 21 Oct 202404:03 AM IST

ಕರ್ನಾಟಕ News Live: ಕುಂದಗೋಳದಲ್ಲಿ ನಗ ನಗದು ಇರುವ ಬ್ಯಾಗ್‌ ಮಹಿಳೆಗೆ ಮರಳಿಸಿದ ರಾಜ್ಯ ರಸ್ತೆ ಸಾರಿಗೆ ಬಸ್ ಸಿಬ್ಬಂದಿ; ಪ್ರಾಮಾಣಿಕತೆಗೆ ಪ್ರಶಂಸೆ

  • ಪ್ರಾಮಾಣಿಕವಾಗಿ ನಡೆದುಕೊಂಡಾಗ ಪ್ರಶಂಸೆ ವ್ಯಕ್ತವಾಗುವುದು, ವ್ಯಕ್ತಪಡಿಸಬೇಕಾದ್ದು ಕೂಡ ಅವಶ್ಯ. ಅಂತಹ ಒಂದು ಘಟನೆ ಕುಂದಗೋಳದಲ್ಲಿ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಸಿಬ್ಬಂದಿ, ತಮ್ಮ ಬಸ್‌ನಲ್ಲಿ ಪ್ರಯಾಣಿಸಿದ್ದ ಮಹಿಳೆ ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ವಾಪಸ್ ಒಪ್ಪಿಸಿ ಗಮನಸೆಳೆದಿದ್ದಾರೆ. ನಗ-ನಗದು ಇದ್ದ ಬ್ಯಾಗ್ ಆದ ಕಾರಣ ಅವರ ನಡೆ ಪ್ರಶಂಸೆಗೆ ಒಳಗಾಗಿದೆ.

Read the full story here

Mon, 21 Oct 202403:13 AM IST

ಕರ್ನಾಟಕ News Live: ಏನ್ ಗುರೂ! ಬೆಂಗ್ಳೂರಲ್ಲಿ ಈ ರಸ್ತೆ ಗುಂಡಿ ಕಾಟ ನಮಗ್‌ ಮಾತ್ರಾನಾ.. ಬಿಬಿಎಂಪಿಯೋರಿಗೆ ಏನ್‌ ಅನ್ಸೋದೇ ಇಲ್ವ

  • “ಏನ್ ಗುರೂ! ಮಳೆ ಸುರೀತಾನೇ ಇದೆ. ಬಹುತೇಕ ರಸ್ತೆಗಳು ಹಳ್ಳಗಳಾಗಿ ಬಿಟ್ಟಿವೆ. ಬೆಂಗ್ಳೂರಲ್ಲಿ ಈ ರಸ್ತೆ ಗುಂಡಿ ಕಾಟ ಮುಗಿಯೋದೇ ಇಲ್ವ. ಇದು ನಮಗ್‌ ಮಾತ್ರಾನಾ.. ಬಿಬಿಎಂಪಿಯೋರಿಗೆ ಏನ್‌ ಅನ್ಸೋದೇ ಇಲ್ವ..” - ಬೆಂಗಳೂರಲ್ಲಿ ವಾಹನ ಸವಾರರ ಸಂಚಾರ ಸಂಕಷ್ಟದ ಹತಾಶೆ, ಅಸಮಾಧಾನ, ಆಕ್ರೋಶದ ನುಡಿಗಳಿವು. ರಸ್ತೆಗುಂಡಿ ಸಮಸ್ಯೆಯೇ ದೊಡ್ಡ ಸವಾಲಾಗಿರುವುದರ ಸಂಕೇತ ಇದು.

Read the full story here

Mon, 21 Oct 202403:11 AM IST

ಕರ್ನಾಟಕ News Live: ಯಕ್ಷಗಾನದ ಹಾಸ್ಯರಾಜ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ; ಬೆಂಗಳೂರಿನಲ್ಲಿ ನಿಧನರಾದ ಹಿರಿಯ ಕಲಾವಿದ

  • ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.
  • ವರದಿ: ಹರೀಶ ಮಾಂಬಾಡಿ. ಮಂಗಳೂರು
Read the full story here

Mon, 21 Oct 202402:39 AM IST

ಕರ್ನಾಟಕ News Live: Bangalore Rains: ಬೆಂಗಳೂರಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ, ಆರೆಂಜ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ

  • ಬೆಂಗಳೂರಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ . ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.ಮುಂದಿನ ಮೂರು ಗಂಟೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗಲಿದೆ.
Read the full story here

Mon, 21 Oct 202401:37 AM IST

ಕರ್ನಾಟಕ News Live: Karnataka Rains: ತುಮಕೂರು, ಉತ್ತರ ಕನ್ನಡ, ಬೆಳಗಾವಿ, ಕೋಲಾರ, ಧಾರವಾಡ ಸಹಿತ 12 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ನಿರೀಕ್ಷೆ

  • ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ಸೋಮವಾರವೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter