Karnataka News Live October 24, 2024 : ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 24, 2024 : ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು

ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು(ಸಾಂದರ್ಭಿಕ ಚಿತ್ರ)

Karnataka News Live October 24, 2024 : ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು

05:15 PM ISTOct 24, 2024 10:45 PM HT Kannada Desk
  • twitter
  • Share on Facebook
05:15 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 24 Oct 202405:15 PM IST

ಕರ್ನಾಟಕ News Live: ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು

  • Koppal Crime: ದಶಕದ ಹಿಂದೆ ಕೊಪ್ಪಳದ ಮರಕುಂಬಿಯಲ್ಲಿ ನಡೆದಿದ್ದ ದಲಿತರು ಮತ್ತು ಸವರ್ಣೀಯರ ನಡುವಿನ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟವಾಗಿದೆ. 98 ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
Read the full story here

Thu, 24 Oct 202402:49 PM IST

ಕರ್ನಾಟಕ News Live: ಪ್ರವಾಸಿಗರೇ ಗಮನಿಸಿ: ಮೈಸೂರು ಅರಮನೆ ವೀಕ್ಷಣೆ ನಾಳೆಯಿಂದ ದುಬಾರಿ, ದಸರಾ ಬೆನ್ನಲ್ಲೇ ಟಿಕೆಟ್ ಶುಲ್ಕ ಹೆಚ್ಚಳ

  • ದಸರಾ ಸಂಭ್ರಮ ಮುಗಿದ ಬೆನ್ನಲ್ಲೇ ಮೈಸೂರು ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಅರಮನೆ ಟಿಕೆಟ್‌ ದರ ಪರಿಷ್ಕರಿಸಲಾಗಿದ್ದು, ನಾಳೆಯಿಂದ ಶುಲ್ಕ ಹೆಚ್ಚಳವಾಗಲಿದೆ. ಹೆಚ್ಚುವರಿ ದರದ ವಿವರ ಇಲ್ಲಿದೆ.
Read the full story here

Thu, 24 Oct 202401:31 PM IST

ಕರ್ನಾಟಕ News Live: ಮನೆ ಮನೆಗೆ ಹೋಗಿ ಜನರ ಆರೋಗ್ಯ ತಪಾಸಣೆ ನಡೆಸುವ ಗೃಹ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

  • ಹಲವು ಜನರು ಆರೋಗ್ಯ ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡುವ ಮಹತ್ವದ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ. ಮನೆ ಬಾಗಿಲಿಗೆ ಆರೋಗ್ಯ ಸವಲತ್ತು ಒದಗಿಸುವ ಗುರಿ ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Read the full story here

Thu, 24 Oct 202412:05 PM IST

ಕರ್ನಾಟಕ News Live: ಬೆಂಗಳೂರು ಸಂಚಾರ ಸಲಹೆ: ಗಣ್ಯರ ಓಡಾಟ ಕಾರಣ ಅರಮನೆ ಮೈದಾನ ಸುತ್ತ ಶುಕ್ರವಾರ, ಶನಿವಾರ, ಎಲೆಕ್ಟ್ರಾನಿಕ್ ಸಿಟಿಯಲ್ಲೂ 3 ದಿನ ಸಂಚಾರ ವ್ಯತ್ಯಯ

  • Bengaluru traffic advisory: ಅರಮನೆ ಮೈದಾನದಲ್ಲಿ ಶುಕ್ರವಾರ ಮತ್ತು ಶನಿವಾರ ಕಾರ್ಯಕ್ರಮ ಇದ್ದು, ಗಣ್ಯರ ಓಡಾಟ ಇರಲಿದೆ. ಹೀಗಾಗಿ ಈ ಎರಡೂ ದಿನಗಳಲ್ಲಿ ಅರಮನೆ ಮೈದಾನ ಸುತ್ತ ಸಂಚಾರ ವ್ಯತ್ಯಯವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಜಲಮಂಡಳಿ ಕಾಮಗಾರಿ ಕಾರಣ ಸಂಚಾರ ವ್ಯತ್ಯಯವಿದೆ. ಪೂರ್ಣ ವಿವರ ಇಲ್ಲಿದೆ.

Read the full story here

Thu, 24 Oct 202411:55 AM IST

ಕರ್ನಾಟಕ News Live: Channapatna Elections: ಎನ್ ಡಿಎ ಅಭ್ಯರ್ಥಿ ಘೋಷಣೆ: ಯೋಗೇಶ್ವರ್‌ ಡಿಕೆಶಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ನಿಖಿಲ್ ಗೆ ಗೆಲುವು ಸುಲಭವೇ

  •  ಈಗಾಗಲೇ ಎರಡು ಚುನಾವಣೆಯಲ್ಲಿ ಸೋತಿರುವ ನಿಖಿಲ್‌ ಕುಮಾರಸ್ವಾಮಿ ಮೂರನೇ ಬಾರಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿ ಡಿಕೆ ಶಿವಕುಮಾರ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಎಂಬ ಅನುಭವಿಗಳ ಚಕ್ರವ್ಯೂಹದಿಂದ ಹೇಗೆ ಪಾರಾಗಬಹುದು ಎನ್ನುವ ಕುತೂಹಲವಿದೆ

    ಸುದ್ದಿ ವಿಶ್ಲೇಷಣೆ: ಎಚ್‌.ಮಾರುತಿ. ಬೆಂಗಳೂರು

Read the full story here

Thu, 24 Oct 202411:38 AM IST

ಕರ್ನಾಟಕ News Live: Crime News: ಮೈಸೂರಿನಲ್ಲಿ ಅಧಿಕಾರ ದಾಹಕ್ಕೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ; ಹುಬ್ಬಳ್ಳಿಯಲ್ಲಿ ಮನೆಗಳ್ಳ ಅರೆಸ್ಟ್

  • Karnataka Crime: ಅಧಿಕಾರ ದಾಹದಿಂದ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳನ್ನು ಮೈಸೂರಿನ ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಅತ್ತ ಹುಬ್ಬಳ್ಳಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದು, ಬಂಧಿಸಿರುವ ಪೊಲೀಸರು ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Read the full story here

Thu, 24 Oct 202410:58 AM IST

ಕರ್ನಾಟಕ News Live: Channapatna Elections: ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ ಘೋಷಿಸಿದ ಜೆಡಿಎಸ್‌

  • ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಕೊನೆಗೂ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಟಿಕೆಟ್‌ ಬಯಸಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಸೇರಿದ್ದ ಸಿ.ಪಿ. ಯೋಗೇಶ್ವರ್‌ ಅವರಿಗೆ ಟಕ್ಕರ್‌ ನೀಡಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಒತ್ತಾಯದ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಕಟಿಸಲಾಯಿತು.
Read the full story here

Thu, 24 Oct 202410:41 AM IST

ಕರ್ನಾಟಕ News Live: ಅಬ್ಬಬ್ಬಾ, ವಿಶ್ವದ ಅತೀ ಸಂಚಾರ ದಟ್ಟಣೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಆರನೇ ಸ್ಥಾನ, ಇಡೀ ಭಾರತದಲ್ಲಿ ಉದ್ಯಾನಗರಿಯೇ ನಂಬರ್‌ 1

  • ಬೆಂಗಳೂರು ನಗರ ಹಲವು ವಿಷಯದಲ್ಲಿ ಖ್ಯಾತಿ ಪಡೆದಿದ್ದರೂ ಸಂಚಾರದ ವಿಚಾರದಲ್ಲಿ ಕುಖ್ಯಾತಿ ಪಡೆದಿದೆ. ಏಕೆಂದರೆ ಸಂಚಾರ ದಟ್ಟಣೆಯಲ್ಲಿ ವಿಶ್ವದಲ್ಲೇ ಬೆಂಗಳೂರಿನಿಗೆ ಆರನೇ ಸ್ಥಾನದಲ್ಲಿ. ಭಾರತದಲ್ಲಿ ಮೊದಲನೇ ಸ್ಥಾನ.
Read the full story here

Thu, 24 Oct 202410:40 AM IST

ಕರ್ನಾಟಕ News Live: ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆಯೇ ಉಬರ್ ಷಟಲ್‌ ಬಸ್‌; ವಿಡಿಯೋ ನೋಡಿ

  • ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಬೇಕಿತ್ತು ಉಬರ್ ಷಟಲ್‌ ಬಸ್‌ ಈಗಾಗಲೇ ಸಂಚರಿಸಬೇಕಾಗಿತ್ತು. ಉಬರ್ ಕಂಪನಿ ಇದಕ್ಕಾಗಿ ಬಹಳ ಪ್ರಯತ್ನ ನಡೆಸಿತ್ತು.  ದೆಹಲಿ, ಕೋಲ್ಕತಗಳಲ್ಲಿ ಈಗಾಗಲೇ ಬಸ್ ಸಂಚರಿಸುತ್ತಿವೆ. ಉಬರ್ ಷಟಲ್ ಬಸ್ ಹೀಗಿದೆ ಈ ವಿಡಿಯೋ ನೋಡಿ.

Read the full story here

Thu, 24 Oct 202409:42 AM IST

ಕರ್ನಾಟಕ News Live: ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು

  • ಸದ್ಯ ಬೆಂಗಳೂರು ಅಂದಾಕ್ಷಣ ನೆನಪಾಗೋದು ಮಳೆ ಮತ್ತು ಜಲಾವೃತ್ತ ರಸ್ತೆಗಳು. ಸೋಷಿಯಲ್ ಮೀಡಿಯಾಗಳಲ್ಲಿ ಅಷ್ಟೊಂದು ವಿಡಿಯೋ, ಫೋಟೋಗಳು ತುಂಬಿಕೊಂಡಿವೆ. ಹೀಗೆ, ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು. ಇದು ಯಾವ ಪ್ರದೇಶ ಅನ್ನೋ ಕುತೂಹಲವೆ? ಈ ವಿವರ ಗಮನಿಸಿ.

Read the full story here

Thu, 24 Oct 202409:29 AM IST

ಕರ್ನಾಟಕ News Live: ಅಕ್ಟೋಬರ್‌ 26ರಂದು ವರಕವಿ ದ ರಾ ಬೇಂದ್ರೆ ಪುಣ್ಯಸ್ಮರಣೆ; ಮುಗದದಲ್ಲಿ ಭೃಂಗದ ಬೆನ್ನೇರಿ ಕಾರ್ಯಕ್ರಮ

  • Da Ra Bendre: ಅಕ್ಟೋಬರ್‌ 26ರಂದು ಸಂಜೆ 5 ಗಂಟೆಗೆ ಮುಗದದ ಕೆರೆ ಮತ್ತು ದುರ್ಗಾದೇವಿ ದೇವಸ್ಥಾನದ ಬಯಲಿನಲ್ಲಿ ‘ಭೃಂಗದ ಬೆನ್ನೇರಿ’ ಎಂಬ ಹೆಸರಿನಲ್ಲಿ ವರಕವಿ ದ ರಾ ಬೇಂದ್ರೆ ಸಂಸ್ಮರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ.
Read the full story here

Thu, 24 Oct 202409:07 AM IST

ಕರ್ನಾಟಕ News Live: ಬೆಂಗಳೂರು ಐಟಿ, ಬಿಟಿ ಪಾರ್ಕ್‌ಗಳ ಸಮಸ್ಯೆ ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಸಮಾಲೋಚನಾ ಸಮಿತಿ ರಚನೆ; ಜನ ಸ್ಪಂದನೆ ಹೀಗಿತ್ತು

  • ಬೆಂಗಳೂರು ಐಟಿ, ಬಿಟಿ ಪಾರ್ಕ್‌ಗಳ ಸಮಸ್ಯೆಗಳನ್ನು ಆಲಿಸುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾಲೋಚನಾ ಸಮಿತಿ ರಚಿಸಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಅವರ ಈ ಹೇಳಿಕೆಯು ಭಾರಿ ಮಳೆ ಮತ್ತು ಸಂಕಷ್ಟದ ನಡುವೆ ಬಂದ ಕಾರಣ, ವ್ಯಾಪಕ ಟೀಕೆಗೆ, ಜನರ ಅಸಮಾಧಾನಕ್ಕೆ ಗುರಿಯಾಯಿತು. 

Read the full story here

Thu, 24 Oct 202408:35 AM IST

ಕರ್ನಾಟಕ News Live: ನಮ್ಮ ಬೆಂಗಳೂರನ್ನು ತೆಗಳಿದ ಇನ್‌ಫ್ಲೂಯೆನ್ಸರ್‌ ಅಪೂರ್ವ; ಬೆಂಗಳೂರಿಗೆ ಆತ್ಮವಿಲ್ಲ, ಕನ್ನಡ ಗೊತ್ತಿಲ್ಲ ಎಂದು ಆಟೋ ಚಾಲಕರು ಮಾತನಾಡಿಲ್ಲ!

  • ನನಗೆ ಕನ್ನಡ ಗೊತ್ತಿಲ್ಲ ಎನ್ನುವ ಕಾರಣಕಕೆ ಆಟೋ ಚಾಲಕರು ಬೆಂಗಳೂರಿನಲ್ಲಿ ನನ್ನಲ್ಲಿ ಮಾತನಾಡಿಲ್ಲ, ಬೆಂಗಳೂರು ಆತ್ಮ ಕಳೆದುಕೊಂಡಿದೆ ಎಂದು ಇನ್‌ಸ್ಟಾಗ್ರಾಮರ್‌ ಅಪೂರ್ವ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆಯಲು ಬೆಂಗಳೂರನ್ನು ದೂರುವುದು ಸಾಮಾನ್ಯವಾಗಿದೆ ಎಂದು ಕೆಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Read the full story here

Thu, 24 Oct 202408:06 AM IST

ಕರ್ನಾಟಕ News Live: Indian Railways ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಚೆನ್ನೈ, ಮಂಗಳೂರು, ಹುಬ್ಬಳ್ಳಿ, ಕಲಬುರಗಿಗೆ ವಿಶೇಷ ರೈಲು

  • ದೀಪಾವಳಿಗೆ ಪ್ರಯಾಣಿಕರ ಭಾರೀ ಬೇಡಿಕೆ ಇರುವುದರಿಂದ ಬೆಂಗಳೂರಿನಿಂದ ಚೆನ್ನೈ, ಹುಬ್ಬಳ್ಳಿ, ಮಂಗಳೂರು ಹಾಗೂ ಕಲಬುರರಿಗೆ ವಿಶೇಷ ರೈಲು ಸೇವೆ ಇರಲಿದೆ. 
Read the full story here

Thu, 24 Oct 202407:17 AM IST

ಕರ್ನಾಟಕ News Live: ಬೆಂಗಳೂರಲ್ಲೇ ಒಂದು ದುಬೈ ಇದೆ, ತುಂಬ ದೂರ ಏನೂ ಇಲ್ಲ ಎನ್ನುತ್ತ ವೈರಲ್ ವಿಡಿಯೋ ಶೇರ್ ಮಾಡಿದೆ ಸಿಟಿಜೆನ್ಸ್ ಮೂವ್‌ಮೆಂಟ್‌, ನೀವೂ ನೋಡಿ...

  • ಬೆಂಗಳೂರು ಮಳೆ, ಪ್ರವಾಹಕ್ಕೆ ಈಗಿರುವ ಪರಿಸ್ಥಿತಿಯನ್ನು ದುಬೈ ಪ್ರವಾಹದೊಂದಿಗೆ ಹೋಲಿಸಿದ್ದು ಬೆಂಗಳೂರಿಗರನ್ನು ಇನ್ನಷ್ಟು ಅಸಮಾಧಾನಗೊಳಿಸಿದೆ. ಹೀಗಾಗಿ, ಬೆಂಗಳೂರಲ್ಲೇ ಒಂದು ದುಬೈ ಇದೆ, ತುಂಬ ದೂರ ಏನೂ ಇಲ್ಲ ಎನ್ನುತ್ತ ಸಿಟಿಜೆನ್ಸ್ ಮೂವ್‌ಮೆಂಟ್‌ ವೈರಲ್ ವಿಡಿಯೋವನ್ನು ಶೇರ್ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

Read the full story here

Thu, 24 Oct 202407:10 AM IST

ಕರ್ನಾಟಕ News Live: ದಕ್ಷಿಣ ಕನ್ನಡ- ಉಡುಪಿ ಎಂಎಲ್ಸಿ ಚುನಾವಣೆ: ಬಿಜೆಪಿಗೆ ಭಾರೀ ಗೆಲುವು, ಸ್ಥಾನ ಉಳಿಸಿಕೊಂಡ ಕಮಲಪಡೆ, ಕಾಂಗ್ರೆಸ್‌ಗೆ ಮುಖಭಂಗ

  • ಕೋಟ ಶ್ರೀನಿವಾಸಪೂಜಾರಿ ಅವರು ಸಂಸದರಾಗಿದ್ದರಿಂದ ತೆರವಾಗಿದ್ದ ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.
  • ವರದಿ: ಹರೀಶ ಮಾಂಬಾಡಿ, ಮಂಗಳೂರು
Read the full story here

Thu, 24 Oct 202406:31 AM IST

ಕರ್ನಾಟಕ News Live: Bangalore News: ಬೆಂಗಳೂರು ಕಟ್ಟಡ ಕುಸಿತ ದುರಂತ; ಬಿಬಿಪಿಎಂ ಎಂಜಿನಿಯರ್‌ ವಿರುದ್ದವೂ ಕ್ರಮದ ತೂಗುಗತ್ತಿ

  • ಬೆಂಗಳೂರಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದರೆ ಬಿಬಿಎಂಪಿ ನೊಟೀಸ್‌ ನೀಡಿ ಕೂಡಲೇ ನಿಲ್ಲಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. 
Read the full story here

Thu, 24 Oct 202405:34 AM IST

ಕರ್ನಾಟಕ News Live: Hasanamba Darshan: ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ಹಾಸನ ಹಾಸನಾಂಬೆ ದೇಗುಲ ಬಾಗಿಲು ತೆಗೆಯಲು ಕ್ಷಣಗಣನೆ

  • ಹಾಸನದ ಪ್ರಸಿದ್ದ ಹಾಸನಾಂಬ ದೇಗುಲದ ವರ್ಷದ ವಿಧಿ ವಿಧಾನಗಳು ಗುರುವಾರದಿಂದ ಆರಂಭವಾಗಲಿವೆ. ಮಧ್ಯಾಹ್ನ 12ಕ್ಕೆ ದೇಗುಲ ತೆರಲಿದ್ದು, ಇದಕ್ಕಾಗಿ ಕ್ಷಣಗಣನೆ ಶುರುವಾಗಿದೆ.
Read the full story here

Thu, 24 Oct 202403:34 AM IST

ಕರ್ನಾಟಕ News Live: Karnataka Rains: ತಗ್ಗಿದ ಮಳೆ ಪ್ರಭಾವ; ಕರಾವಳಿ ಪ್ರದೇಶ,ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಉಂಟು

  • ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅಕ್ಟೋಬರ್‌ನಲ್ಲಿ ಅಬ್ಬರಿಸಿದ್ದ ಮಳೆ ಈಗ ಕಡಿಮೆಯಾಗಲಿದೆ. ಗುರುವಾರದಿಂದ ಮಳೆಯ ತೀವ್ರತೆ ತಗ್ಗಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.ಗುರುವಾರ ಯಾವ ಜಿಲ್ಲೆಗಳಲ್ಲಿ ಮಳೆ ಇದೆ ಎನ್ನುವ ವಿವರ ಇಲ್ಲಿದೆ.
Read the full story here

Thu, 24 Oct 202402:59 AM IST

ಕರ್ನಾಟಕ News Live: ಅಯ್ಯೋ ದೇವರೇ, ಮಳೆಯ ಬೆನ್ನಿಗೆ ಬೆಂಗಳೂರು ಟ್ರಾಫಿಕ್‌; ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೇಯೇ ಇಡೀ ರಾತ್ರಿ ಜಾಗರಣೆ, ವೈರಲ್ ವಿಡಿಯೋ

  • ಬೆಂಗಳೂರು ಮತ್ತು ಬೆಂಗಳೂರಿಗರ ಸಂಕಷ್ಟ, ಸಂಕಟಗಳು ಒಂದೆರಡಲ್ಲ. ಭಾರಿ ಮಳೆಯ ಬೆನ್ನಿಗೆ ಈಗ ಮತ್ತೆ ಬೆಂಗಳೂರು ಟ್ರಾಫಿಕ್ ಎದುರಾಗಿದೆ. ಸಾವಿರಾರು ಸವಾರರು ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೇಯೇ ಇಡೀ ರಾತ್ರಿ ಜಾಗರಣೆ ಮಾಡಿದ ಘಟನೆ ಗಮನಸೆಳೆದಿದೆ. ಇದರ ವೈರಲ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿವೆ.

Read the full story here

Thu, 24 Oct 202402:04 AM IST

ಕರ್ನಾಟಕ News Live: ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಸುರಿಯಲಿದೆ, ಇಲ್ಲಿದೆ ಹವಾಮಾನ ಮುನ್ಸೂಚನೆ ವಿವರ

  • ಬೆಂಗಳೂರು ಮಳೆ ತೀವ್ರತೆ ಕಳೆದುಕೊಂಡಿದೆ. ಹೌದು ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಎಂಬಂತೆ ಸುರಿಯಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಬೆಂಗಳೂರು ಹವಾಮಾನದ ಪೂರ್ತಿ ವಿವರ ಇಲ್ಲಿದೆ. 

Read the full story here

Thu, 24 Oct 202412:30 AM IST

ಕರ್ನಾಟಕ News Live: ಅತಿ ವೇಗದ ಟಿ20ಐ ಶತಕ ಸಿಡಿಸಿದ ಪಂಜಾಬ್ ಕಿಂಗ್ಸ್ ಸ್ಟಾರ್​; ಗರಿಷ್ಠ ಸ್ಕೋರ್, ಸಿಕ್ಸರ್​, ಬೌಂಡರಿ, ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆ

  • Sikandar Raza: ಜಿಂಬಾಬ್ವೆ ತಂಡದ ಸಿಕಂದರ್​ ರಾಜಾ ಅವರು ವಿಶ್ವ ಟಿ20ಐ ಕ್ರಿಕೆಟ್​​ನಲ್ಲಿ ಅತಿ ವೇಗದ ಶತಕವನ್ನು ಸಿಡಿಸುವ ಮೂಲಕ ರೋಹಿತ್​ ಶರ್ಮಾ, ಡೇವಿಡ್ ಮಿಲ್ಲರ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಜಿಂಬಾಬ್ವೆ ಮತ್ತು ಗ್ಯಾಂಬಿಯಾ ನಡುವಿನ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳು ದಾಖಲಾಗಿವೆ.
Read the full story here

Thu, 24 Oct 202412:00 AM IST

ಕರ್ನಾಟಕ News Live: ಚನ್ನಪಟ್ಟಣ ಉಪ ಚುನಾವಣೆ; ಗೊಂದಲದಲ್ಲಿ ಕುಮಾರಸ್ವಾಮಿ, ನಿಖಿಲ್‌ ಅಥವಾ ಜಯಮುತ್ತು ಯಾರು ಹಿತವರು ಈ ಇಬ್ಬರೊಳಗೆ?

  •  Karnataka ByElection: ಸಿಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ತೊರೆದು ಟಿಕೆಟ್ ಗಿಟ್ಟಿಸಿಕೊಂಡಿದ್ದು, ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಗೊಂದಲಕ್ಕೆ ಒಳಗಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಒತ್ತಡ ಹೆಚ್ಚಾಗಿದೆ. (ವರದಿ-ಎಚ್.ಮಾರುತಿ)
Read the full story here

ಹಂಚಿಕೊಳ್ಳಲು ಲೇಖನಗಳು

  • twitter