Karnataka News Live October 27, 2024 : ಕನ್ನಡ ರಾಜ್ಯೋತ್ಸವ 2024: ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕದ 10 ಮುಖ್ಯಮಂತ್ರಿಗಳು; ಅರಸರ ಭೂ ಕ್ರಾಂತಿ, ಸಿದ್ದರಾಮಯ್ಯರ ತೆರಿಗೆ ನೀತಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 27 Oct 202412:26 PM IST
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿ ಕ್ರಾಂತಿಕಾರಕ ಹಾಗೂ ಮಹತ್ವದ ನಿರ್ಣಯ ಕೈಗೊಂಡ 10 ಸಿಎಂ ಗಳು ಹಾಗೂ ಅವರ ಕಾಲದಲ್ಲಿ ಆದ ಪ್ರಮುಖ ಬೆಳವಣಿಗೆಗಳ ವಿವರವನ್ನು ನೀಡಿದೆ.
Sun, 27 Oct 202412:04 PM IST
ನವೆಂಬರ್ ತಿಂಗಳು ಯಕ್ಷರಂಗದ ಮಟ್ಟಿಗೆ ಬಹುವಿಶೇಷ. ಇದೇ ತಿಂಗಳಲ್ಲಿ ಯಕ್ಷಗಾನ ತಿರುಗಾಟಕ್ಕೆ ಚಾಲನೆ ಸಿಗುವುದು. ದಿನವೂ ಚೆಂಡೆ, ಮದ್ದಳೆ ಸದ್ದು ಕೇಳುವುದು. ಇರಲಿ, ಈಗ
ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಕಡಲತೀರದ ಹೆಮ್ಮೆ ಎಂಬಂತೆ ಇರುವ ಅದ್ಭುತ ಸ್ವರಮಾಧುರ್ಯ ಹೊಂದಿರುವ ಹತ್ತು ಯಕ್ಷಗಾನದ ಭಾಗವತರ ಪರಿಚಯ ಮಾಡಿಕೊಟ್ಟಿದ್ದಾರೆ ಮಂಗಳೂರಿನ ಪತ್ರಕರ್ತ ಹರೀಶ್ ಮಾಂಬಾಡಿ.
Sun, 27 Oct 202411:25 AM IST
ಬೆಂಗಳೂರಲ್ಲಿ ಖಾಸಗಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಅರ್ಜಿ ಫಾರಂ ವಿತರಣೆ ಶುರುವಾಗಿದೆ. ಖಾಸಗಿ ಶಾಲಾ ಅರ್ಜಿ ಶುಲ್ಕವೇ 3000 ರೂಪಾಯಿ! ಇದ್ದು, ಹೀಗೆ ಏರುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕುವುದೇ ಸರ್ಕಾರ ಎಂಬುದು ಸದ್ಯ ಪಾಲಕರ ನಿರೀಕ್ಷೆ. ಈ ಸಮಸ್ಯೆ ಕಡೆಗೊಂದು ನೋಟ ಬೀರುವ ವರದಿ ಇಲ್ಲಿದೆ.
Sun, 27 Oct 202409:54 AM IST
- ಮೇಘನಾ ಎಚ್ ಶೆಟ್ಟಿಗಾರ್ ಎಂಬ ಬಾಲಕಿ 1 ಗಂಟೆ 17 ಸೆಕೆಂಡುಗಳ ಕಾಲ ಸುದೀರ್ಘ ಕೂರ್ಮಾಸನ ಯೋಗ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾಳೆ.
Sun, 27 Oct 202409:26 AM IST
- Christmas Holidays: ಬೆಂಗಳೂರಿನಲ್ಲಿ ಮಳೆಯಿಂದಾಗಿ ಕಳೆದುಹೋದ ತರಗತಿಗಳನ್ನು ಸರಿದೂಗಿಸಲು ಹಲವು ಖಾಸಗಿ ಶಾಲೆಗಳು ಕ್ರಿಸ್‌ಮಸ್ ರಜೆಯನ್ನು ಮೊಟಕುಗೊಳಿಸಲು ನಿರ್ಧರಿಸಿವೆ.
Sun, 27 Oct 202409:23 AM IST
ನೇರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲು ಹೆಚ್ಚು ಎಂಬುದನ್ನು ಬಿಂಬಿಸಲು ಸಚಿವ ದಿನೇಶ್ ಗುಂಡೂರಾವ್ ಮಾಡಿದ ಟ್ವೀಟ್‌ಗೆ ಉದ್ಯಮಿ ಮೋಹನದಾಸ್ ಪೈ ಪ್ರತಿಕ್ರಿಯಿಸಿದ್ದು, “ಭಾರತದ ಶ್ರೀಮಂತ ರಾಜ್ಯ ಕರ್ನಾಟಕ, ಬೆಂಗಳೂರಿಗೆ ನೀವೇನು ಮಾಡಿದಿರಿ, ಅದನ್ನ ಹೇಳಿ” ಎಂದು ಮಾತಿನೇಟು ಕೊಟ್ಟಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.
Sun, 27 Oct 202408:30 AM IST
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕಿತ್ತೂರು ಕರ್ನಾಟಕದ ಹತ್ತು ವೈಶಿಷ್ಟಗಳ ಮಾಹಿತಿಯನ್ನು ಇಲ್ಲಿ ನೀಡಿದೆ. ಇದರಲ್ಲಿ ಈ ಭಾಗದ ಮಹತ್ವ, ಈಗಿನ ಬೆಳವಣಿಗೆಗಳ ವಿವರಗಳಿವೆ.
Sun, 27 Oct 202408:22 AM IST
- Hubli Crime News: ಕುಖ್ಯಾತ ಅಂತರಜಿಲ್ಲಾ ಮನೆಕಳ್ಳರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ನಗರದಲ್ಲಿ ಕಳೆದ ಹಲವಾರು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗಟ್ಟಲು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ನಗರದಲ್ಲಿ ರಾತ್ರಿ ಬೈಕ್ ಮೇಲೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
Sun, 27 Oct 202407:43 AM IST
ಬೆಂಗಳೂರು ರಸ್ತೆ ನಿರ್ವಹಣೆ ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನೊಂದೆಡೆ, ಎಲೆಕ್ಟ್ರಾನಿಕ್ ಸಿಟಿ ಟೌನ್‌ಶಿಪ್ ಸಲೀಸಾಗಿ ರಸ್ತೆ ನಿರ್ವಹಣೆಗೆ ಗಮನಸೆಳೆದಿದೆ. ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಎಲೆಕ್ಟ್ರಾನಿಕ್ ಸಿಟಿ ಟೌನ್‌ಶಿಪ್ ಅಥಾರಿಟಿಗೆ ಕೊಡಿ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ಆಗ್ರಹಿಸಿದರು
Sun, 27 Oct 202406:46 AM IST
ಬೆಂಗಳೂರಿನಲ್ಲಿ ನೀವು ನಮ್ಮಮೆಟ್ರೋ ಪ್ರಯಾಣಿಕರಾ, ಝೀರೋ ಕೆವೈಸಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ತಗೊಂಡಿಲ್ವ, ಏನಿದು, ಯಾಕೆ ತಗೊಳ್ಳಬೇಕು, ಅದರ ಉಪಯೋಗ ಏನು ಅಂತೀರಾ, ಇಲ್ಲಿದೆ ಆ ಎಲ್ಲ ವಿವರ.
Sun, 27 Oct 202404:53 AM IST
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಕರಾವಳಿ ಪ್ರದೇಶದ ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಹಲವು ಕಾರಣಗಳಿಂದ ಗಮನ ಸೆಳೆದಿವೆ. ಅದರ ವಿವರ ಇಲ್ಲಿದೆ
Sun, 27 Oct 202401:10 AM IST
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರಿಂದ ಹಣ ಸುಲಿಗೆಗೆ ಯತ್ನ ಮಾಡಿದ ಪ್ರಕರಣದಲ್ಲಿ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಅಧ್ಯಕ್ಷೆ ಮಂಜುಳಾ ಮತ್ತು ಆಕೆಯ ಪತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಇನ್ನಿಬ್ಬರು ರೌಡಿಶೀಟರ್‌ಗಳ ಬಂಧನವಾಗಿದೆ.(ವರದಿ- ಎಚ್ ಮಾರುತಿ, ಬೆಂಗಳೂರು)
Sun, 27 Oct 202412:30 AM IST
- ಆರ್ಡಿ ಹೆಗಡೆ ಆಲ್ಮನೆ ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 3 ಮತ್ತು 4ರಂದು ಶಿರಸಿಯಲ್ಲಿ ಸಮ್ಮೇಳನ ನಡೆಯಲಿದೆ.