Karnataka News Live October 30, 2024 : ಶಿಗ್ಗಾಂವಿ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಟಿಕೆಟ್ ಸಿಗದ ಪಂಚಮಸಾಲಿ ಸಮುದಾಯ ಯಾರ ಬೆಂಬಲಕ್ಕೆ ನಿಲ್ಲಲಿದೆ?
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 30 Oct 202404:09 PM IST
- Shiggaon By-Election: ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ನಿಂದ ಯಾಸೀರ್ ಅಹಮದ್ ಪಠಾಣ್ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಎರಡು ಪಕ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಸಿಗದ ಹಿನ್ನಲೆ ಈ ಸಮಾಜ ಯಾರ ಬೆಂಬಲಕ್ಕೆ ನಿಲ್ಲಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. (ವರದಿ-ಎಚ್. ಮಾರುತಿ)
Wed, 30 Oct 202402:30 PM IST
- MUDA Site Scam: ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿ ಬಿಲ್ಡರ್ ಜಯರಾಮ್ ಅವರ ನಿವಾಸ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಬಳಿಕ ಜಯರಾಮ್ ವಿಚಾರಣೆಗೆ ಒಳಪಟ್ಟಿದ್ದರು. ಇದೀಗ ವಿಚಾರಣೆ ಪೂರ್ಣಗೊಂಡಿದೆ.
Wed, 30 Oct 202401:15 PM IST
- ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
Wed, 30 Oct 202401:12 PM IST
- Actor Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ತೂಗುದೀಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ದರ್ಶನ್ ಕುಂಟುತ್ತಲೇ ಜೈಲಿನಿಂದ ಹೊರ ಬಂದರು. (ವರದಿ-ಎಚ್.ಮಾರುತಿ)
Wed, 30 Oct 202412:48 PM IST
- ಭಾರತೀಯ ರೈಲ್ವೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯವು ಈ ಬಾರಿ ದೀಪಾವಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದ್ದು, ಹಲವಾರು ರೈಲುಗಳಲ್ಲಿ ಪ್ರಯಾಣಕ್ಕೆ ಬುಕ್ಕಿಂಗ್ ವ್ಯವಸ್ಥೆ ಇದೆ. ಇದರ ವಿವರ ಇಲ್ಲಿದೆ.
Wed, 30 Oct 202412:22 PM IST
- ಭಾರತೀಯ ರೈಲ್ವೆಯು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಲಗ್ಗೇಜ್ ಸಾಗಣೆಗೂ ಕೆಲವು ಮಾನದಂಡ ರೂಪಿಸಿದೆ. ತಮ್ಮ ಪಾರ್ಸೆಲ್‌ಗಳನ್ನು ಬೇರೆ ಕಡೆಗೆ ಕಳುಹಿಸಬಹುದು. ಅದರ 10 ನಿಯಮಗಳು ಹೀಗಿವೆ.
Wed, 30 Oct 202412:17 PM IST
ಬೆಂಗಳೂರು ಕರ್ನಾಟಕದ ರಾಜಧಾನಿಯಾದರೂ ನಾನಾ ಭಾಷಿಕರು ಇರುವ ಊರು. ಇಲ್ಲಿ ಕನ್ನಡ ಕಲಿಯೋ ಅನಿವಾರ್ಯತೆ ಇಲ್ಲ ಎಂಬ ಕಟು ವಾಸ್ತವವನ್ನು ಕನ್ನಡ ರಾಜ್ಯೋತ್ಸವದ ವೇಳೆ ತೆರೆದಿಟ್ಟ ಹೊರ ರಾಜ್ಯದ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಕಾಮೆಂಟ್ ಸೆಕ್ಷನ್‌ಗಳಿಗೆ ಹೋದರೆ ಇಡೀ ಕರ್ನಾಟಕವನ್ನು, ಕನ್ನಡಿಗರನ್ನು ಅಪಮಾನಿಸುವ ಅಂಶಗಳೇ ಗಮನಸೆಳೆಯುತ್ತವೆ.
Wed, 30 Oct 202412:06 PM IST
Kannada Rajyotsava Award 2024 Winners List: ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನದಂದು ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
Wed, 30 Oct 202410:44 AM IST
ಬೆಂಗಳೂರಲ್ಲಿ ಸದ್ಯ ಸುರಿದ ಮಳೆಗೆ ಸುಮನಹಳ್ಳಿ ಜಂಕ್ಷನ್ ಹೊಳೆಯಂತೆ ಕಂಡಿತು. ಬಾಗಲೂರು ಕ್ರಾಸ್‌ನಲ್ಲಿ ವಾಹನ ಸವಾರರು ಸಂಕಷ್ಟಕ್ಕೆ ಒಳಗಾದರು. ನಿಧಾನಗತಿಯ ಟ್ರಾಫಿಕ್ ಅನುಭವಕ್ಕೆ ಬಂದ ಕಾರಣ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ. ಇಲ್ಲಿದೆ ವೈರಲ್ ವಿಡಿಯೋ ಮತ್ತು ಮಾಹಿತಿ.
Wed, 30 Oct 202409:52 AM IST
- ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿರುವ ಸೂಚನೆಯಂತೆ ಆದೇಶ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ.
Wed, 30 Oct 202408:07 AM IST
- ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ದೊರೆತಿದೆ. ಇದಕ್ಕಾಗಿ ಕಾದಿದ್ದ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು.
Wed, 30 Oct 202406:28 AM IST
ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ದಂಪತಿ ಬೆಂಗಳೂರಿಗೆ ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ವೈಟ್‌ಫೀಲ್ಡ್‌ನಲ್ಲಿದ್ದಾರೆ. ಅವರ ಈ ರಹಸ್ಯ ಭೇಟಿ ಈಗ ಗಮನಸೆಳೆದಿದ್ದು, ಅದರ ಕಾರಣ ಮತ್ತುಇತರೆ ವಿವರ ಇಲ್ಲಿದೆ.
Wed, 30 Oct 202405:35 AM IST
- ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ಕರ್ನಾಟಕ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Wed, 30 Oct 202405:29 AM IST
ವರದಕ್ಷಿಣೆ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ವೈದ್ಯ ವೃತ್ತಿಯವರ ವಿವಾಹ ವಿಚಾರ ಚರ್ಚೆಗೀಡಾಗಿದೆ. ಏಮ್ಸ್ ಟಾಪರ್ 50 ಕೋಟಿ ರೂ ಡೌರಿ ಕೇಳಿದ್ರು ಅಂತ ಗೆಳತಿ ಅಳುತ್ತಿದ್ದಾಳೆ ಎಂದ ಬೆಂಗಳೂರು ಮಹಿಳೆ ಟ್ವೀಟ್ ಮಾಡಿದ್ದು, ಅದು ವೈರಲ್ ಆಗಿದೆ.
Wed, 30 Oct 202404:40 AM IST
ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಸೇರ್ಪಡೆಯ ಅಭಿಯಾನದ ವಿವರ ಪ್ರಕಟಿಸಿದೆ. ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಇಲ್ಲಿದೆ ಮಾರ್ಗೋಪಾಯಗಳು.
Wed, 30 Oct 202404:10 AM IST
- ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ. ತುಳು ವಿಕ್ಷನರಿ, ವಿಕಿಮೀಡಿಯಾ ಫೌಂಡೇಶನ್ ನಿರ್ವಹಿಸುವ ಅಂತರಜಾಲ ನಿಘಂಟಾಗಿದೆ. ಬಳಕೆದಾರರು ತುಳು ವಿಕ್ಷನರಿಯಲ್ಲಿ ಮಾಹಿತಿ ಹುಡುಕಬಹುದು, ಸಂಪಾದಿಸಬಹುದು ಮತ್ತು ಕೊಡುಗೆ ನೀಡಬಹುದು.
Wed, 30 Oct 202403:28 AM IST
- Bangalore HMT Forest Land ಬೆಂಗಳೂರಿನ ಎಚ್‌ಎಂಟಿ ಒಂದು ಕಾಲಕ್ಕೆ ಜನರಿಗೆ ಸರಿಯಾದ ಸಮಯ ತೋರಿದ ಪ್ರೀಮಿಯರ್ ಸಂಸ್ಥೆ. ಭೂವಿವಾದಲ್ಲಿ ಸಿಲುಕಿದ ಎಚ್‌ಎಂಟಿ ಕೇಂದ್ರ, ಕರ್ನಾಟಕ ಸರ್ಕಾರದ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ. ಏನಿದು ಭೂವಿವಾದ, ಅರಣ್ಯ ಹಾಗೂ ಅಧಿನಿಯಮ, ಅಧಿಕಾರಿಗಳ ಪಾತ್ರ, ಸಂಘರ್ಷದ ಒಳನೋಟ ಇಲ್ಲಿದೆ.
Wed, 30 Oct 202403:25 AM IST
ಗೋಬಿ ಮಂಚೂರಿ ಬಳಿಕ ಗೋಲ್‌ಗಪ್ಪಾ ಸುದ್ದಿಯ ಕೇಂದ್ರ ಬಿಂದು. ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ ಎದುರಾಗಿದ್ದು, ಕರ್ನಾಟಕದ ಆಹಾರ ಇಲಾಖೆ 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದೆ.
Wed, 30 Oct 202403:19 AM IST
Bengaluru: ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ಪೊಲೀಸರು ಸುಮಾರು 2 ಕೋಟಿ ರೂ ಮೌಲ್ಯದ 1,577 ಕೆಜಿ ಎಂಡಿಎಂಎ ಕ್ರಿಸ್ಟಲನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. (ವರದಿ: ಎಚ್ ಮಾರುತಿ)
Wed, 30 Oct 202402:34 AM IST
ದೀಪಾವಳಿ 2024: ಪಟಾಕಿ ಹಚ್ಚುವಾಗ ಅವಘಡಗಳು ಸಂಭವಿಸುವುದುಂಟು. ಅದಕ್ಕಾಗಿ ಮುನ್ನೆಚರಿಕೆ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಮಿಂಟೋ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ 35 ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ತುರ್ತು ಸಹಾಯವಾಣಿಯನ್ನು ತೆರೆಯಲಾಗಿದೆ. (ವರದಿ: ಎಚ್ ಮಾರುತಿ)
Wed, 30 Oct 202401:58 AM IST
ಬೆಂಗಳೂರು ವಿದ್ಯುತ್ ಪೂರೈಕೆ ವ್ಯತ್ಯಯ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ನೀಡಿರುವ ಬೆಂಗಳೂರು ಪವರ್‌ಕಟ್ ಮಾಹಿತಿ ಪ್ರಕಾರ, ಇಂದು (ಅಕ್ಟೋಬರ್ 30) ವಿದ್ಯಾನಗರ, ರಾಯಪುರ, ಬಿನ್ನಿಪೇಟೆ ಸುತ್ತಮುತ್ತ ಇಂದು ಕರೆಂಟ್ ಇರಲ್ಲ. ವಿದ್ಯುತ್ ಪೂರೈಕೆ ಕಡಿತವಾಗುವ ಪ್ರದೇಶಗಳ ಪೂರ್ಣ ವಿವರ ಹೀಗಿದೆ.
Wed, 30 Oct 202401:30 AM IST
Karnataka Rains: ಕರ್ನಾಟಕದಲ್ಲಿ ಹಿಂಗಾರು ಮಳೆ ಮುಂದುವರಿದಿದೆ. ಬೆಂಗಳೂರು ಸುತ್ತಮುತ್ತ ಕೆಲವೆಡೆ ಹನಿ ಮಳೆಯ ಸಿಂಚನ, ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆ ಇರಲಿದೆ. ಮುಂಜಾನೆ ಮಂಜು, ಸ್ವಲ್ಪ ಚಳಿಯ ವಾತಾವರಣ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರ್ನಾಟಕದ ಹವಾಮಾನ ಇಂದು (ಅಕ್ಟೋಬರ್ 30) ಹೀಗಿರಲಿದೆ.