Karnataka News Live September 1, 2024 : ವಿಮಾನದಲ್ಲಿ ಸಿಗರೇಟ್ ಸೇದಿದ ಯುವಕ; ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಇಂಡಿಗೋ ಅಧಿಕಾರಿಗಳು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 01 Sep 202404:33 PM IST
- Mangaluru News: ವಿಮಾನದಲ್ಲಿ ಸಿಗರೇಟ್ ಸೇದಿ ವಿಮಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದ ಯುವಕನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Sun, 01 Sep 202404:09 PM IST
- Vande Bharat Train: ಮಂಗಳೂರು ಮತ್ತು ಮಡಗಾಂವ್ ಮಾರ್ಗದಲ್ಲಿ ಸಂಚಾರ ಮಾಡಬೇಕಿದ್ದ ವಂದೇ ಭಾರತ್ ರೈಲು ಮಡಂಗಾವ್ನಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಆದರೆ ಮುಂದೆ ನಡೆದಿದ್ದೇ ಅಚ್ಚರಿ.
Sun, 01 Sep 202402:49 PM IST
- Mysuru News: ಸಾಂಸ್ಕೃತಿಕ ನಗರಿ ಹಾಗೂ ಅರಮನೆ ನಗರಿಯಲ್ಲಿ ಬಾಡಿಗೆ ದರ ದುಪ್ಪಟ್ಟಾಗಿದೆ. ಚಿನ್ನವನ್ನಾದರೂ ಖರೀದಿಸಬಹುದು, ಆದರೆ ಅರಮನೆ ನಗರಿಯಲ್ಲಿ ಬಾಡಿಗೆ ಪಡೆಯುವುದೇ ಕಷ್ಟವಾಗಿದೆ.
Sun, 01 Sep 202412:31 PM IST
Bengaluru Governance Bill; ಬೆಂಗಳೂರು ಆಡಳಿತ ಮಸೂದೆಯ ಕರಡು ಪ್ರತಿಯಲ್ಲಿದ್ದ ಒಂಬುಡ್ಸ್‌ಮನ್ ನೇಮಕ ವಿಚಾರ ತೆರೆಮರೆಗೆ ಹೋಗಿದೆ. ಅರ್ಥಾತ್ ಸರ್ಕಾರ ಈ ವಿಚಾರವನ್ನೇ ಮಸೂದೆಯಿಂದ ಕೈಬಿಟ್ಟಿದೆ. ಇದು ಕಾನೂನು ಪರಿಣತರ ಮತ್ತು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
Sun, 01 Sep 202412:19 PM IST
- hubballi News: ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡುತ್ತಿದ್ದ ಮೀಟರ್ ಬಡ್ಡಿ ದಂಧೆಕೋರರನ್ನು ಹುಬ್ಬಳಿಯ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 23 ಮಂದಿಯನ್ನು ಬಂಧಿಸಲಾಗಿದೆ.
Sun, 01 Sep 202410:36 AM IST
Indian Railways ಭಾರತೀಯ ರೈಲ್ವೆಯ ವಂದೇ ಭಾರತ್(Vandebharat Sleeper express) ಮೊದಲ ಸ್ಲೀಪರ್ ರೈಲು ಸಿದ್ದಗೊಂಡಿದ್ದು ಬೆಂಗಳೂರಿನ ಬೆಮೆಲ್‌ನಲ್ಲಿ( Bangalore BEML) ಉದ್ಘಾಟಿಸಲಾಯಿತು. ಡಿಸೆಂಬರ್‌ನಲ್ಲಿ ಇದು ಸೇವೆಗೆ ಅಣಿಯಾಗಲಿದೆ.
Sun, 01 Sep 202410:33 AM IST
- G. Parameshwara: ರಾಜ್ಯಪಾಲರು ತಮ್ಮ ಬಳಿ ಒಂದು ಕಡತ ಮಾತ್ರ ಇದೆ ಎಂದಿದ್ದಾರೆ. ಅದು ಹೆಚ್ಡಿ ಕುಮಾರಸ್ವಾಮಿ ಅವರದ್ದು ಎಂಬುದು ಗೊತ್ತಾಗಿದೆ. ಅದಕ್ಕಾದರೂ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಎಂದು ಡಾ.ಜಿ ಪರಮೇಶ್ವರ ತಿಳಿಸಿದ್ದಾರೆ.
Sun, 01 Sep 202408:56 AM IST
- Mysore Dasara 2024 ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಮುಂದುವರಿದಿದೆ. ಅಭೀಮನ್ಯುಗೆ ಮೊದಲ ದಿನ ಭಾರ ಹೊರಿಸಲಾಯತು.
- ವರದಿ: ಪಿ.ರಂಗಸ್ವಾಮಿ. ಮೈಸೂರು
Sun, 01 Sep 202407:57 AM IST
- Mandya News ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ಡಿಜಿಟಲ್ ಸ್ವರೂಪವನ್ನೂ ಪಡೆದುಕೊಳ್ಳಲಿದೆ.
Sun, 01 Sep 202407:36 AM IST
- ಕರ್ನಾಟಕದ ಹತ್ತಕ್ಕೂ ಹೆಚ್ಚು ನಿಗಮಗಳಿಂದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.
Sun, 01 Sep 202406:53 AM IST
- Ganesha Chaturthi ಈ ಬಾರಿಯ ಗಣೇಶನ ಹಬ್ಬಕ್ಕೆ ಊರಿಗೆ ಹೋಗಬೇಕೆಂದರೆ ಬಸ್ ಪ್ರಯಾಣಕ್ಕೆ ಕೊಂಚ ಹೆಚ್ಚೇ ಹಣ ತೆಗೆದಿಡಬೇಕು. ಏಕೆಂದರೆ ಈಗಾಗಲೇ ಮೂರು ಪಟ್ಟು ದರ ಏರಿಕೆಯಾಗಿರುವುದು ಕಂಡು ಬಂದಿದೆ.
Sun, 01 Sep 202403:44 AM IST
Karnataka Dam Level ಕರ್ನಾಟಕದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳ ಒಳ ಹರಿವು ಚೆನ್ನಾಗಿದೆ. ತುಂಗಭದ್ರಾ ಜಲಾಶಯ ಎರಡನೇ ಬಾರಿಗೆ ಭರ್ತಿಯಾಗಿದೆ.
Sun, 01 Sep 202403:10 AM IST
- Darshan News ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ, ಸಹೋದರಿ ದಿವ್ಯ ಆಗಮಿಸಿದ್ದರು.
- ವರದಿ: ಎಚ್.ಮಾರುತಿ.ಬೆಂಗಳೂರು
Sun, 01 Sep 202401:54 AM IST
- ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇರುವುದಿಲ್ಲ ಎಂಬ ಟೀಕೆಗಳ ಹಿನ್ನೆಲೆ ಡಿಜಿಟಲ್ ಪಾಸ್ ಕಡ್ಡಾಯದ ನಿರ್ಧಾರದಿಂದ ಹಿಂದೆ ಸರಿದ ಬಿಎಂಟಿಸಿ( BMTC Digital Pass). ಡಿಜಿಟಲ್, ಮುದ್ರಿತ ಎರಡೂ ರೀತಿಯ ಬಸ್ ಪಾಸ್ ಪ್ರಯಾಣಿಕರಿಗೆ ಒದಗಿಸುವುದಾಗಿ ಹೇಳಿದೆ.
ವರದಿ: ಎಚ್.ಮಾರುತಿ, ಬೆಂಗಳೂರು
Sun, 01 Sep 202401:10 AM IST
Karnataka Rain ಕರ್ನಾಟಕದಲ್ಲಿ ಮಳೆಯ ಪ್ರಭಾವ ಬಹುತೇಕ ಜಿಲ್ಲೆಗಳಲ್ಲಿ ಕಂಡು ಬಂದಿದೆ. ಹದಿನೇಳು ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.