Karnataka News Live September 2, 2024 : ಮಾಸ್ಕ್ ಬೇಡ ಎನ್ನುತ್ತಿವೆ ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳು; ಮಾಸ್ಕ್ ಧರಿಸಿ ಬರುವವರಿಂದ ಲಕ್ಷ ಲಕ್ಷ ನಷ್ಟ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 02 Sep 202404:10 PM IST
- ಬೆಂಗಳೂರು ನಗರದ ಸೂಪರ್ ಮಾರ್ಕೆಟ್‌ಗಳಲ್ಲಿ ಕಳ್ಳತನ ಪ್ರಕರಣಗಳ ಹೆಚ್ಚಳದಿಂದಾಗಿ, ಮಾಸ್ಕ್ ಧರಿಸಿ ಬರುವವರನ್ನು ನಿಷೇಧಿಸಲಾಗುತ್ತಿದೆ. ಅಪರಾಧಿಗಳು ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್ ದುರುಪಯೋಗಪಡಿಸಿಕೊಳ್ಳುತ್ತಿರುವುದು ತಿಳಿದುಬಂದಿದೆ.
Mon, 02 Sep 202404:09 PM IST
- Yettinahole Project Inauguration: ಸೆಪ್ಟೆಂಬರ್ 6ರ ಗೌರಿ ಹಬ್ಬದಂದು ಚಾಲನೆ ಪಡೆಯಲಿರುವ ಎತ್ತಿನ ಹೊಳೆ ಯೋಜನೆಯ ಉದ್ದೇಶವೇನು, ಯಾರಿಗೆಲ್ಲಾ ಉಪಯೋಗವಾಗಲಿದೆ, ಅನುದಾನವೆಷ್ಟು, ಖರ್ಚಾಗಿದ್ದೆಷ್ಟು, ಪೂರ್ಣಗೊಳ್ಳುವುದು ಯಾವಾಗ? ಇಲ್ಲಿದೆ ಎಲ್ಲಾ ವಿವರ.
Mon, 02 Sep 202412:16 PM IST
- ತುಮಕೂರು ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಮಂಡಿಪೇಟೆಯಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ನೇತಾಜಿ ಟ್ರೇಡರ್ಸ್‌ನಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಗೋಡೌನ್‌ಗೆ ಬೆಂಕಿ ಹಬ್ಬಿ ಭಾರಿ ನಷ್ಟವಾಗಿದೆ. (ವರದಿ: ಈಶ್ವರ್, ತುಮಕೂರು)
Mon, 02 Sep 202411:37 AM IST
- Laxmi Hebbalkar: ಕರ್ನಾಟಕದ ಗೃಹಲಕ್ಮೀಯರಿಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲುವ ಅವಕಾಶ ಸಿಕ್ಕಿದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ.
Mon, 02 Sep 202410:22 AM IST
- ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹೊಸ ಹೊಸ ವ್ಯವಸ್ಥೆಗಳನ್ನು ತರಲಾಗುತ್ತಿದೆ. ಸದಾ ಜನಜಂಗುಳಿಯಿದ್ದ ತುಂಬಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇದೀಗ ಹೊಸ ಪ್ರವೇಶ ದ್ವಾರವನ್ನು ತೆರೆಯಲಾಗಿದೆ.
Mon, 02 Sep 202410:20 AM IST
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ್ದು ವಿಶೇಷವಾಗಿತ್ತು. ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂಬುದು ಅತಿ ಮುಖ್ಯ ಎಂದು ಅವರು ತಿಳಿಸಿದರು. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Mon, 02 Sep 202409:53 AM IST
ಬನಶಂಕರಿಯಿಂದ ಕೋಣನಕುಂಟೆ ಕ್ರಾಸ್‌ವರೆಗಿನ ಕನಕಪುರ ರಸ್ತೆಯ ಅವ್ಯವಸ್ಥೆ ನಿತ್ಯವೂ ಈ ಭಾಗದ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದಿರುವ ಪತ್ರಕರ್ತ ರಾಜೀವ ಹೆಗಡೆ, ತೆರಿಗೆ ಹಣದ ಲೂಟಿ ನಡೆಯುತ್ತಿರುವುದರ ಕಡೆಗೆ ಗಮನಸೆಳೆದಿದ್ದಾರೆ.
Mon, 02 Sep 202409:25 AM IST
- ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಸಕ್ರಿಯವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ನಡುವೆ ಪ್ರಮುಖ ನಗರಗಳಿಂದ ಹಾದುಹೋಗುವ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ.
Mon, 02 Sep 202408:17 AM IST
- ಹಿಂದೂ ಮುಖಂಡ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Mon, 02 Sep 202407:49 AM IST
- Karnataka Public Service Commission: ಇನ್ನೆರೆಡು ತಿಂಗಳೊಳಗೆ ಕೆಎಎಸ್ ಪ್ರಿಲಿಮ್ಸ್ ಮರು ಪರೀಕ್ಷೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ತಿಳಿಸಿದ್ದಾರೆ.
Mon, 02 Sep 202406:59 AM IST
- BS Yediyurappa: ಬಿಎಸ್ವೈ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ ಬಾಲಕಿ ತಾಯಿಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
Mon, 02 Sep 202406:48 AM IST
Visa to Heaven Controversy; ಸ್ವರ್ಗಕ್ಕೆ ಹೋಗಬಯಸುವವರು ಸಂಸ್ಕೃತ ಭಾಷೆ ಕಲಿಯಬೇಕು ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧಿಪತಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
Mon, 02 Sep 202405:16 AM IST
- Leopard: ಬೆಂಗಳೂರು ಹೊರವಲಯದ ಜಿಗಣಿಯ ಕ್ಯಾಲಸನಹಳ್ಳಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ. ಮನೆಯಿಂದ ಹೊರಬರಲು ಪರದಾಡುತ್ತಿದ್ದಾರೆ.
Mon, 02 Sep 202403:42 AM IST
- Chief Minister Siddaramaiah: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ನಿರ್ವಹಣೆಗೆ ಪ್ರತಿ ತಿಂಗಳಿಗೆ ಸುಮಾರು 54 ಲಕ್ಷ ಖರ್ಚು ಮಾಡುತ್ತಿದ್ದಾರೆ.
Mon, 02 Sep 202402:51 AM IST
- Karnataka Weather Update: ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದರೆ, ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
Mon, 02 Sep 202401:38 AM IST
- Bengaluru Crime News: ಬೆಂಗಳೂರಿನಲ್ಲಿ ಒಂದು ವಾರದಲ್ಲಿ 1,707 ಕುಡಿದು ವಾಹನ ಚಲಾಯಿಸುವ ಪ್ರಕರಣ ದಾಖಲಾಗಿದ್ದು, ಎರಡು ದಿನಗಳಲ್ಲಿ 100 ವಾಹನಗಳ ಟೋಯಿಂಗ್ ಮಾಡಲಾಗಿದೆ. (ವರದಿ - ಎಚ್. ಮಾರುತಿ)