Karnataka News Live September 21, 2024 : ಕನ್ನಡ ಕಲಿಯಬೇಕೇ, ಭಾಷಾ ಕೌಶಲ ಇನ್ನಷ್ಟು ಸುಧಾರಿಸಬೇಕೇ; ಅನ್ಯ ಭಾಷಿಕರು ಸುಲಭವಾಗಿ ಕನ್ನಡ ಕಲಿಯಲು ಇಲ್ಲಿವೆ 5 ವೇದಿಕೆಗಳು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 21 Sep 202404:36 PM IST
- Learn Kannada Basics: ನೀವು ಬೆಂಗಳೂರಿಗೆ ಹೊಸಬರಾಗಿರಲಿ ಅಥವಾ ನಿಮ್ಮ ಕನ್ನಡ ಕೌಶಲ್ಯ ಸುಧಾರಿಸಿಕೊಳ್ಳಲು ಬಯಸುತ್ತಿರುವವರಿಗೆ ಕೆಲವೊಂದು ವೇದಿಕೆಗಳಿದ್ದು, ಅನ್ಯ ಭಾಷಿಕರು ಬೇಸಿಕ್ ಕನ್ನಡವನ್ನು ಕಲಿಯಲು ಇವು ತುಂಬಾ ನೆರವಾಗಬಹುದು.
Sat, 21 Sep 202403:52 PM IST
- ಟಿಎಸ್ಆರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಎರಡೂ ಪ್ರಶಸ್ತಿಗಳು ತಲಾ 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿವೆ. ಹಿರಿಯ ಪತ್ರಕರ್ತರು ಪ್ರಶಸ್ತಿ ಪಡೆಯಲಿದ್ದಾರೆ.
Sat, 21 Sep 202402:10 PM IST
- BJP MLA Munirathna: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿ ಆದೇಶ ಹೊರಡಿಸಿದೆ.
Sat, 21 Sep 202401:08 PM IST
- Murder in Bengaluru: ಪತ್ನಿಯನ್ನು ಕೊಂದು ಮೃತದೇಹವನ್ನು 30 ಪೀಸ್ ಮಾಡಿ ಫ್ರಿಜ್ಡ್ನಲ್ಲಿಟ್ಟು ಗಂಡ ಪರಾರಿಯಾಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ವಾಸನೆ ಬರದಂತೆ ರಾಸಾಯನಿಕ ಸಿಂಪಡಿಸಿದ್ದ.
Sat, 21 Sep 202411:39 AM IST
ವ್ಯಕ್ತಿ ಪರಿಚಯ: ತೆಂಕು ತಿಟ್ಟು ಯಕ್ಷಗಾನ ರಂಗದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಈ ವರ್ಷದ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಘೋಷಣೆಯಾಗಿದೆ. ತನ್ನಿಮಿತ್ತವಾಗಿ ಅವರ ವ್ಯಕ್ತಿಪರಿಚಯ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Sat, 21 Sep 202411:17 AM IST
ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 13ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ, 4ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
Sat, 21 Sep 202410:31 AM IST
- Nitin Gadkari: ಬೆಂಗಳೂರು, ಪುಣೆ ಮತ್ತು ಸಂಭಾಜಿನಗರ ನಡುವೆ 14 ಪಥದ ಎಕ್ಸ್ಪ್ರೆಸ್ ಹೈವೆ ನಿರ್ಮಿಸುವ ಮಹತ್ವದ ಯೋಜನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
Sat, 21 Sep 202407:19 AM IST
- Horanadu Sri Annapoorneshwari Temple: ರಾಜ್ಯದ ಪವಿತ್ರ ಯಾತ್ರಾ ಸ್ಥಳವಾದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ.
Sat, 21 Sep 202405:54 AM IST
- ದಸರಾ ಪ್ರಯುಕ್ತ 34 ರೈಲುಗಳಿಗೆ ಹೆಚ್ಚು ಬೋಗಿಗಳನ್ನು ಅಳವಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ಅಲ್ಲದೆ, ಸೆಪ್ಟೆಂಬರ್ 27ರಿಂದ ಯಶವಂತಪುರ ಮತ್ತು ತುಮಕೂರು ನಡುವೆ ಹೊಸದಾಗಿ ಮೆಮು ರೈಲು ಸಂಚಾರ ಆರಂಭವಾಗಲಿದೆ.
Sat, 21 Sep 202404:50 AM IST
- Mysore news: ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಖ್ಯ ದ್ವಾರದ ಬಳಿ ಶುಕ್ರವಾರ ಸಂಜೆ ಎರಡು ದಸರಾ ಆನೆಗಳು ರಾತ್ರಿ ಊಟದ ವೇಳೆ ಜಗಳವಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
Sat, 21 Sep 202404:04 AM IST
- IPS Raman Gupta: ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ರಮಣ್ ಗುಪ್ತಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.