Karnataka News Live September 3, 2024 : ಅಮೆರಿಕ ಹೋಗಬೇಕಿದ್ದ ಟೆಕ್ಕಿ ಭೀಕರ ಅಪಘಾತಕ್ಕೆ ಬಲಿ; ಬೆಂಗಳೂರಿನಲ್ಲಿ ಮೇಲ್ಸೇತುವೆಯಿಂದ ಕೆಳಗೆ ಹಾರಿದ ಕಾರು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 03 Sep 202405:11 PM IST
- ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಟೆಕ್ಕಿ ಸಾವನ್ನಪ್ಪಿದ್ದಾನೆ. ಅಮೆರಿಕ ತೆರಳುವ ಖುಷಿಯಲ್ಲಿ ಶಾಪಿಂಗ್ ನಡೆಸುವ ಸಲುವಾಗಿ ನಗರಕ್ಕೆ ಬಂದಿದ್ದ ವ್ಯಕ್ತಿ, ಪ್ರಾಣ ಕಳೆದುಕೊಂಡಿದ್ದಾನೆ. (ವರದಿ: ಎಚ್.ಮಾರುತಿ)
Tue, 03 Sep 202404:30 PM IST
- Dinesh Gundu Rao: ಮಂಗಳೂರು ನಗರದ ಆಯುಷ್ ಆಸ್ಪತ್ರೆಗೆ ಸಿಎಸ್‌ಆರ್ ಅಡಿ ಉಪಕರಣ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತನಿಖೆಗೆ ಆದೇಶ ನೀಡಿದ್ದಾರೆ.
Tue, 03 Sep 202403:23 PM IST
- ಬೆಂಗಳೂರಿನಲ್ಲಿ ಮತ್ತೆ ರ‍್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿ ಮೇಲೆ ಸೀನಿಯರ್‌ಗಳು ರ‍್ಯಾಗಿಂಗ್ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಕೈ ಮುರಿದಿದೆ. (ವರದಿ: ಎಚ್.ಮಾರುತಿ)
Tue, 03 Sep 202402:23 PM IST
- ಸಿಲಿಕಾನ್ ಸಿಟಿ ಬೆಂಗಳೂರು ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡುತ್ತಿರುತ್ತದೆ. ಇದೀಗ ನಗರದ ಬ್ಯುಸಿನೆಸ್ ಕ್ಲಾಸ್ ಆಟೊ ರಿಕ್ಷಾವೊಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
Tue, 03 Sep 202412:34 PM IST
Being Human Clothing; ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಫ್ಯಾಷನ್ ಬ್ರ್ಯಾಂಡ್ ಬೀಯಿಂಗ್ ಹ್ಯೂಮನ್ ಕ್ಲೋಥಿಂಗ್‌ನ ಹೊಸ ಔಟ್‌ಲೆಟ್ ಬೆಳಗಾವಿಯಲ್ಲೂ ಆರಂಭವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಂಪನಿಯ ವಿಸ್ತರಣೆಗೆ ಇದು ಮೊದಲ ಹೆಜ್ಜೆಯಾಗಿದ್ದು, ಮುಂದೆ ಹೊಸ ಪಟ್ಟಣಗಳಿಗೆ ಪ್ರವೇಶಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. (ವರದಿ- ಪ್ರಸನ್ನ ಹಿರೇಮಠ, ಹುಬ್ಬಳ್ಳಿ)
Tue, 03 Sep 202411:32 AM IST
- ಕರ್ನಾಟಕದಲ್ಲಿ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಕಾಂಗ್ರೆಸ್ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಮಹಾಮಾರಿ ಎಂದು ಘೋಷಿಸಲಾಗಿದೆ.
Tue, 03 Sep 202411:26 AM IST
ಸೆಪ್ಟೆಂಬರ್ 8 ರಂದು ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿ ಚರ್ಚ್ (St. Mary's Church)ನಲ್ಲಿ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೊಳಿಸಲಾಗಿದೆ. (ವರದಿ: ಎಚ್. ಮಾರುತಿ)
Tue, 03 Sep 202411:16 AM IST
- G Parameshwara: ದರ್ಶನ್ ಅವರನ್ನು ಎ1 ಆರೋಪಿ ಮಾಡುತ್ತಾರೆ ಎಂಬ ಊಹಾಪೋಹಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ ಅವರು ಸಾಕ್ಷ್ಯಾಧಾರ ಆಧರಿಸಿ ಯಾರನ್ನು ಎ1, ಎ2 ಆರೋಪಿಗಳನ್ನಾಗಿಸಬೇಕು ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.
Tue, 03 Sep 202410:37 AM IST
- Mysore News ಮೈಸೂರಿನ ಚಾಮುಂಡಿಬೆಟ್ಟದ ವಿಚಾರವಾಗಿ ಮೈಸೂರು ರಾಜವಂಶಸ್ಥರು ಹಾಗೂ ಕರ್ನಾಟಕ ಸರ್ಕಾರದ ನಡುವೆ ಜಟಾಪಟಿ ಜೋರಾಗುತ್ತಲೇ ಇದೆ. ಈ ಕುರಿತ ವಿವರಣೆ ಇಲ್ಲಿದೆ
Tue, 03 Sep 202409:56 AM IST
- ಬೆಂಗಳೂರಿನ ನಿವಾಸಿಯಾಗಿದ್ದುಕೊಂಡು ನೀವೇನಾದರೂ ಇನ್ನೂ ಆಸ್ತಿ ತೆರಿಗೆ ಪಾವತಿಸಿಲ್ಲದಿದ್ದರೆ, ಬೇಗನೆ ಪಾವತಿಸಿ. ಇಲ್ಲವಾದಲ್ಲಿ ಬಿಬಿಎಂಪಿ ನಿಮ್ಮ ಮನೆ ಅಥವಾ ಅಂಗಡಿಯನ್ನು ಜಪ್ತಿ ಮಾಡಬಹುದು. ಇಲ್ಲವೇ ಬೀಗಮುದ್ರೆ ಹಾಕಬಹುದು. ಏಕೆಂದರೆ ಈಗಾಗಲೇ 46 ಸಾವಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. (ವರದಿ: ಎಚ್.ಮಾರುತಿ)
Tue, 03 Sep 202409:35 AM IST
- Arvind Bellad on Siddaramaiah: ಜಿಂದಾಲ್ ಕುರಿತ ವಿಚಾರವಾಗಿ ಅದೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದ ಅರವಿಂದ ಬೆಲ್ಲದ ಅವರು ಪತ್ರದ ಮೂಲಕ ಕ್ಷಮೆಯಾಚಿಸಿದ್ದಾರೆ.
Tue, 03 Sep 202408:53 AM IST
Hubli News ಮೊಬೈಲ್ ಬಳಸದಂತೆ ಬುದ್ದಿವಾದ ಹೇಳಿದ್ದರಿಂದ ಮನನೊಂದ ಹುಬ್ಬಳ್ಳಿಯ ಬಾಲಕ ಆತ್ಮಹತ್ಯೆಗೆ ಶರಣಾಗಿದ್ಧಾನೆ.
ವರದಿ: ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ
Tue, 03 Sep 202408:35 AM IST
Chief Minister Siddaramaiah: ಮೂಡಾ ಮಾಜಿ ಆಯುಕ್ತ ಅಮಾನತಿನ ಬಗ್ಗೆ ಗೊತ್ತಿಲ್ಲ ಎಂದಿದ್ದ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಅಲ್ಲದೆ, ಆತಂಕದಲ್ಲಿದ್ದರಂತೆ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ.
Tue, 03 Sep 202407:43 AM IST
- Mysore News ಮೈಸೂರು ಚಾಮುಂಡಿಬೆಟ್ಟ ಪ್ರಾಧಿಕಾರದ ಮೊದಲ ಸಭೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
Tue, 03 Sep 202405:05 AM IST
- ಬೆಂಗಳೂರು ಮೈಸೂರು ಹೆದ್ದಾರಿ ಟೋಲ್‌ಗಳು ಸಂಪೂರ್ಣ ಹೈ ಟೆಕ್ ಆಗಲಿವೆ. ಫಾಸ್ಟ್ ಟ್ಯಾಗ್ ಜತೆಗೆ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅಡಿ ಅಪ್ಡೇಟ್ ಆಗಲಿವೆ.
Tue, 03 Sep 202403:29 AM IST
- Karnataka Dam Level ಕರ್ನಾಟಕದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಜಲಾಶಯಗಳಿಗೆ ಬರುತ್ತರುವ ಒಳ ಹರಿವು ಚೆನ್ನಾಗಿದೆ. ಮಂಗಳವಾರದ ಜಲಾಶಯಗಳ ನೀರಿನ ಮಟ್ಟ ಹೀಗಿದೆ.
Tue, 03 Sep 202402:27 AM IST
- Ganesha Chaturthi ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ಗಳನ್ನು ಕೆಎಸ್‌ಆರ್‌ಟಿಸಿ ಓಡಿಸಲಿದೆ.
Tue, 03 Sep 202401:32 AM IST
- Channapatna News ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತ್ತೆ ಮೇಲೆ ಸೊಸೆ ಹಲ್ಲೆ ಮಾಡುತ್ತಿರುವ, ಅದನ್ನು ಮಗನೇ ಚಿತ್ರೀಕರಣ ಮಾಡಿರುವ ವಿಡಿಯೋ ವೈರಲ್ ಆಗಿದೆ.
Tue, 03 Sep 202401:11 AM IST
- karnataka Rain Updates ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಸೂಚನೆಯಿದೆ. ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ತೀವ್ರ ಕುಸಿತ ಕಂಡು ಚಳಿ ವಾತಾವರಣ ಕಂಡು ಬಂದಿದೆ.