ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 4, 2024 : ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಬಹುತೇಕ ಪೂರ್ಣ; ದಾಖಲೆ ನಿರ್ಮಿಸಿದ ತುಂಗಾ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 04 Sep 202404:57 PM IST
ಕರ್ನಾಟಕ News Live: ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಬಹುತೇಕ ಪೂರ್ಣ; ದಾಖಲೆ ನಿರ್ಮಿಸಿದ ತುಂಗಾ
- ಬಂಗಳೂರು ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ಕೆಲಸ ಮಾಡುತ್ತಿರುವ ತುಂಗಾ ಸುರಂಗ ಕೊರೆಯುವ ಯಂತ್ರವು, ಕೆಜಿ ಹಳ್ಳಿ ಮತ್ತು ನಾಗವಾರ ನಡುವೆ 308 ಮೀಟರ್ ಸುರಂಗ ಕೊರೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
Wed, 04 Sep 202402:38 PM IST
ಕರ್ನಾಟಕ News Live: ಹೊಯ್ಸಳ-ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ರಾಜ್ಯ ಮಟ್ಟದ ಪ್ರಶಸ್ತಿಗೆ ಬಾಲಕ-ಬಾಲಕಿಯರಿಂದ ಅರ್ಜಿ ಆಹ್ವಾನ
- ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Wed, 04 Sep 202402:05 PM IST
ಕರ್ನಾಟಕ News Live: Ganesh Festival: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿಕ್ತು ಸಮ್ಮತಿ; ಬಿಗಿ ಪೊಲೀಸ್ ಬಂದೋಬಸ್ತ್
- ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Eidgah Maidan Hubballi) ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕೃತ ಅನುಮತಿ ನೀಡಿದ್ದು, ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈದ್ಗಾ ಮೈದಾನದಲ್ಲಿ ನಡೆಯಲಿರುವ ಗಣೇಶೋತ್ಸಕ್ಕೆ ಹಲವು ಷರತ್ತುಗಳ ಸಹಿತ ಅನುಮತಿ ನೀಡಲಾಗಿದೆ.
Wed, 04 Sep 202411:17 AM IST
ಕರ್ನಾಟಕ News Live: ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ: ಸಾಧಕರು ಅಥವಾ ಸಂಘ-ಸಂಸ್ಥೆಗಳ ಆಯ್ಕೆಗೆ ನಾಮನಿರ್ದೇಶನ ಆಹ್ವಾನ
- ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಅಥವಾ ನಾಮನಿರ್ದೇಶನಕ್ಕೆ ಸೆಪ್ಟೆಂಬರ್ 19ರವರೆಗೆ ಅವಕಾಶವಿದೆ. ಅರ್ಹ ಸಾಧಕರು ಅಥವಾ ಸಂಘ ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಬಹುದು.
Wed, 04 Sep 202410:25 AM IST
ಕರ್ನಾಟಕ News Live: ಬೆಂಗಳೂರಿನ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಈ ವರ್ಷದ ದುಬಾರಿ ಡೀಲ್; ಆ ಒಂದು ಮನೆಗೆ ಕೊಟ್ಟಿದ್ದು ಅಷ್ಟೊಂದಾ, ಯಾವ ಏರಿಯಾ?
- Bengalurus Top Real Estate Deal: ಬೆಂಗಳೂರಿನ ಕೋರಮಂಗಲದ ಡಿಫೆನ್ಸ್ ಕಾಲೋನಿಯಲ್ಲಿರುವ 8,800 ಚದರ ಅಡಿ ಆಸ್ತಿಯನ್ನು 47 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇದು ರಾಜ್ಯ ರಾಜಧಾನಿಯಲ್ಲಿ ಇದುವರೆಗಿನ ಅತ್ಯಂತ ದುಬಾರಿ ಆಸ್ತಿ ವ್ಯವಹಾರಗಳಲ್ಲಿ ಒಂದಾಗಿದೆ.
Wed, 04 Sep 202410:22 AM IST
ಕರ್ನಾಟಕ News Live: ಕರ್ನಾಟಕದ ನರ್ಸಿಂಗ್ ಕಾಲೇಜುಗಳ ಶುಲ್ಕ ಮೇಲ್ವಿಚಾರಣೆ-ನಿಯಂತ್ರಣಕ್ಕೆ ಸಮಿತಿ ರಚನೆ; ಹೆಚ್ಚು ಫೀಸ್ ವಿಧಿಸಿದರೆ ಶಿಸ್ತು ಕ್ರಮ
- ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಹೊಸದಾಗಿ ಶುಲ್ಕ ಮೇಲ್ವಿಚಾರಣೆ ಹಾಗೂ ನಿಯಂತ್ರಣಕ್ಕೆ ಸಮಿತಿ ರಚಿಸಲಾಗಿದೆ. ಐದು ಸದಸ್ಯರ ಸಮಿತಿಗೆ, ಕರ್ನಾಟಕದ ನರ್ಸಿಂಗ್ ಕಾಲೇಜುಗಳ ಶುಲ್ಕ ರಚನೆಯನ್ನು ಪರಿಶೀಲಿಸುವ ಕೆಲಸವನ್ನು ವಹಿಸಲಾಗಿದೆ.
Wed, 04 Sep 202410:08 AM IST
ಕರ್ನಾಟಕ News Live: Teachers day: ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; ಇಲ್ಲಿದೆ ಸಂಪೂರ್ಣ ಪಟ್ಟಿ
- ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರಿಗೆ ಪ್ರಶಸ್ತಿ ಒಲಿದಿದೆ. ಶಿಕ್ಷಕರ ದಿನಾಚರಣೆ ಸಮಾರಂಭದಂದು ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.
Wed, 04 Sep 202408:13 AM IST
ಕರ್ನಾಟಕ News Live: ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಡಿ ಗ್ಯಾಂಗ್ ವಿರುದ್ದ 3991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ, 231 ಸಾಕ್ಷಿಗಳು
- Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿ ನ್ಯಾಯಾಲಯಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು 3,991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Wed, 04 Sep 202407:24 AM IST
ಕರ್ನಾಟಕ News Live: ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ; ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ
- Ganesh Chaturthi: ಗಣೇಶೋತ್ಸವಕ್ಕ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಮತ್ತು ಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಪಾಲಿಸಬೇಕಾದ ಸುರಕ್ಷತಾ ಗೈಡ್‌ಲೈನ್ಸ್ ಅನ್ನು ಬೆಸ್ಕಾಂ ಬಿಡುಗಡೆ ಮಾಡಿದೆ. (ವರದಿ-ಎಚ್. ಮಾರುತಿ)
Wed, 04 Sep 202406:48 AM IST
ಕರ್ನಾಟಕ News Live: Real Estate: ಭೂಮಿ ಮೇಲೆ ಹೂಡಿಕೆ ಮಾಡಿದ್ರೆ ಭರ್ಜರಿ ಲಾಭ, ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಮಾಡುವವರು ಈ 5 ಅಂಶ ಗಮನಿಸಿ
- Real Estate Bangalore: ಚಿನ್ನ ಅಥವಾ ಷೇರು ಮಾರುಕಟ್ಟೆಗಿಂತಲೂ ನಿಶ್ಚಿತ ಲಾಭ ತಂದು ಕೊಡುವ ಕ್ಷೇತ್ರ ಎಂದರೆ ಅದು ರಿಯಲ್ ಎಸ್ಟೇಟ್. ನಿವೇಶನ ಅಥವಾ ಅಪಾರ್ಟ್ಮೆಂಟ್ ಮೇಲೆ ಬಂಡವಾಳ ಹೂಡಿದರೆ ಲಾಭ ಪಕ್ಕಾ. ಆದರೆ ಈ ಐದು ಅಂಶಗಳನ್ನು ಪಾಲಿಸಬೇಕು ಅಷ್ಟೇ. (ವರದಿ-ಎಚ್.ಮಾರುತಿ)
Wed, 04 Sep 202405:46 AM IST
ಕರ್ನಾಟಕ News Live: Mangaluru News: ಸಾಮಾಜಿಕ ಜಾಲತಾಣದಲ್ಲಿ ಮೆಕ್ಕಾ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ಯುವಕನ ಬಂಧನ
- Mangaluru News: ಮೆಕ್ಕಾ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
Wed, 04 Sep 202404:05 AM IST
ಕರ್ನಾಟಕ News Live: Bus Ticket Price Hike: ದುಪ್ಪಟ್ಟಾಯ್ತು ಬಸ್ ದರ, ಹಬ್ಬಕ್ಕೆಂದು ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳಿಂದ ಬಿಗ್ ಶಾಕ್
ಹಬ್ಬಕ್ಕೆಂದು ಊರಿಗೆ ಹೊರಟ ಪ್ರಯಾಣಿಕರಿಗೆ ಪ್ರತಿಬಾರಿಯಂತೆ ಈ ಬಾರಿಯೂ ನಿರಾಸೆಯಾಗಿದೆ. ಈಗ ಪ್ರಯಾಣಿಕರು ಖಾಸಗಿ ಬಸ್ ಅಥವಾ ಸರ್ಕಾರಿ ಬಸ್ ಯಾವುದನ್ನು ಬುಕ್ ಮಾಡಿದರೂ ದರ ಏರಿಕೆಯ ಬಿಸಿ ಮಾತ್ರ ಕೈ ಸುಡುತ್ತಿದ್ದೆ.
Wed, 04 Sep 202402:59 AM IST
ಕರ್ನಾಟಕ News Live: ಉತ್ತರ ಕರ್ನಾಟಕ, ಮಲೆನಾಡಿನಲ್ಲಿಲ್ಲ ಮಳೆ, ಕರಾವಳಿಯ ಈ ಜಿಲ್ಲೆಯಲ್ಲಿ ಮಾತ್ರ ವರುಣನ ಆರ್ಭಟ - ಕರ್ನಾಟಕದ ಹವಾಮಾನ ವರದಿ
- Karnataka Rain Updates: ಹಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯ ಪ್ರಮಾಣ ಇದೀಗ ಕಡಿಮೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜೋರು ಮಳೆಯ ಸಾಧ್ಯತೆ ಇದೆ.
Wed, 04 Sep 202402:05 AM IST
ಕರ್ನಾಟಕ News Live: ಶಾಸಕ ಸುರೇಶ್ ಕುಮಾರ್ಗೆ ಆರೋಗ್ಯದಲ್ಲಿ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ; ಆವರಿಸಿತೇ ಈ ಮಹಾಮಾರಿ ಸೋಂಕು?
- MLA Suresh Kumar: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.