Karnataka News Live September 6, 2024 : ಗಣೇಶ ಹಬ್ಬ-ಈದ್ ಮಿಲಾದ್ ಹಬ್ಬಕ್ಕೆ ಸಿದ್ಧತೆ ಜೋರು: ಈ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ-today karnataka news latest bengaluru city traffic crime news updates september 6 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 6, 2024 : ಗಣೇಶ ಹಬ್ಬ-ಈದ್ ಮಿಲಾದ್ ಹಬ್ಬಕ್ಕೆ ಸಿದ್ಧತೆ ಜೋರು: ಈ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಗಣೇಶ ಹಬ್ಬ-ಈದ್ ಮಿಲಾದ್ ಹಬ್ಬಕ್ಕೆ ಸಿದ್ಧತೆ ಜೋರು: ಈ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

Karnataka News Live September 6, 2024 : ಗಣೇಶ ಹಬ್ಬ-ಈದ್ ಮಿಲಾದ್ ಹಬ್ಬಕ್ಕೆ ಸಿದ್ಧತೆ ಜೋರು: ಈ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

04:33 PM ISTSep 06, 2024 10:03 PM HT Kannada Desk
  • twitter
  • Share on Facebook
04:33 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 06 Sep 202404:33 PM IST

ಕರ್ನಾಟಕ News Live: ಗಣೇಶ ಹಬ್ಬ-ಈದ್ ಮಿಲಾದ್ ಹಬ್ಬಕ್ಕೆ ಸಿದ್ಧತೆ ಜೋರು: ಈ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

  • ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ. 
Read the full story here

Fri, 06 Sep 202404:07 PM IST

ಕರ್ನಾಟಕ News Live: Mangaluru News: ಫ್ಯಾಷನ್ ಲೋಕದಲ್ಲಿ ಅಮ್ಮ-ಮಗಳ ಮೋಡಿ: ಮಿಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಇವರೇ

  • ಡಿಸಲ್ ತೌರೋ ಮೊದಲ ಬಾರಿಗೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಈವರೆಗೆ ಎಲ್ಲಿಯೂ ಫ್ಯಾಷನ್ ಲೋಕದತ್ತ ಬಾರದ ಅವರು ಬೆಂಗಳೂರಿ‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಭಾಗಿಯಾದ ಮೊದಲ ಸ್ಪರ್ಧೆಯಲ್ಲಿಯೇ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

Read the full story here

Fri, 06 Sep 202403:30 PM IST

ಕರ್ನಾಟಕ News Live: ಸಾಲು ಸಾಲು ರಜೆ; ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆ, ಬೆಂಗಳೂರಿನ ಹಲವು ರಸ್ತೆಗಳಲ್ಲಿ ಆಮೆವೇಗದಲ್ಲಿ ವಾಹನ ಸಂಚಾರ

  • ಹಬ್ಬಗಳು ಬಂದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿರುತ್ತದೆ. ಅದರಲ್ಲೂ ವಾರಾಂತ್ಯದಲ್ಲಿ ಹಬ್ಬಗಳು ಬಂದರೆ ನಗರದಿಂದ ಹೊರ ಹೋಗುವುದೇ ಒಂದು ಸಾಹಸ. ಸಂಜೆ ಮೆಜೆಸ್ಟಿಕ್‌ ಸುತ್ತ ಮುತ್ತ ಒಂದು ಸುತ್ತು ಹಾಕಿದರೆ ವಾಹನಗಳು ಇರುವೆ ಸಾಲಿನಂತೆ ಸಾಗುತ್ತಿರುವುದು ಗೋಚರಿಸುತ್ತದೆ. ಗಣೇಶ ಹಬ್ಬದ ನಿಮಿತ್ತ ಬೆಂಗಳೂರಿನಲ್ಲಿ ಮತ್ತೆ ಟ್ರಾಫಿಕ್‌ ಸಮಸ್ಯೆ ಕಾಣಿಸಿಕೊಂಡಿದೆ.
Read the full story here

Fri, 06 Sep 202402:02 PM IST

ಕರ್ನಾಟಕ News Live: ವಾಹನ ಸವಾರರೇ ಗಮನಿಸಿ: ಸೆಪ್ಟೆಂಬರ್ 8ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಿ ರಸ್ತೆ ನೋಡ್ಕೊಳಿ

  • ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮದ ನಿಮಿತ್ತ ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್‌ 8ರಂದು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್‌ ಪೊಲೀಸರು ಬದಲಿ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Read the full story here

Fri, 06 Sep 202401:20 PM IST

ಕರ್ನಾಟಕ News Live: ಬೆಂಗಳೂರು ಅಪರಾಧ ಸುದ್ದಿ: ಶಂಕಿತ ನಕ್ಸಲೈಟ್‌ ಬಂಧನ, ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೈಲು ಶಿಕ್ಷೆ

  • ಶಂಕಿತ ನಕ್ಸಲೈಟ್‌ ಒಬ್ಬನನ್ನು ಬೆಂಗಳೂರು ಮೆಜೆಸ್ಟಿಕ್‌ ಸಮೀಪದ ಉಪ್ಪಾರಪೇಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅತ್ತ, ವಿಮಾನದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಕೋರ್ಟ್‌ ಶಿಕ್ಷೆ ಪ್ರಕಟಿಸಿದೆ. ಬೆಂಗಳೂರು ಅಪರಾಧ ಸುದ್ದಿಗಳ ವಿವಿರ ಇಲ್ಲಿದೆ. (ಎಚ್.ಮಾರುತಿ)
Read the full story here

Fri, 06 Sep 202412:16 PM IST

ಕರ್ನಾಟಕ News Live: ಕಾಡಿನ ಕಥೆಗಳು: ಗಜಾನನ ಮತ್ತು ತಂತ್ರಜ್ಞಾನ: ರೈಲು ಹಳಿ ದಾಟುವಾಗ ಎದುರಾಗುವ ಸಾವಿನ ದವಡೆಯಿಂದ ಆನೆ ಪಾರು ಮಾಡಲು ಬಂದಿವೆ AI ಅಂಕುಶ !

  • ಆನೆಯನ್ನು ಉಳಿಸಿಕೊ್ಳ್ಳಲು( Elephant Protection) ಈಗ ಅತ್ಯಾಧುನಿಕ ಅಂಕುಶ ಬಂದಿದೆ.ನಿಜ ಗಜಾನನನ ಸಂಕಟ ತಂತ್ರಜ್ಞಾನವನ್ನೂ ತಲುಪಿದೆ.  ಈ ವಾರದ ಕಾಡಿನ ಕಥೆಗಳು( Forest Tales) ಗಜಾನನ ಮತ್ತು ತಂತ್ರಜ್ಞಾನ.
Read the full story here

Fri, 06 Sep 202408:36 AM IST

ಕರ್ನಾಟಕ News Live: Bangalore Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವಾಹನ ವೇಗಕ್ಕೆ ಮಿತಿ, ಎಐ ತಂತ್ರಜ್ಞಾನ ಬಳಕೆ ನಂತರ ಅಪಘಾತ ಪ್ರಕರಣ ಇಳಿಕೆ

  •  Highway News ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಈ ವರ್ಷ ಅಪಘಾತ ಸಾವಿನ ಸಂಖ್ಯೆ ಬಹುತೇಕ ತಗ್ಗಿದೆ.

Read the full story here

Fri, 06 Sep 202407:10 AM IST

ಕರ್ನಾಟಕ News Live: Breaking News: ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಮುನ್ನವೇ ಕುಸಿದು ಬಿದ್ದ ಮಂಟಪ, ತಪ್ಪಿದ ಭಾರೀ ಅನಾಹುತ

  •  Hassan News ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆಯಲ್ಲಿಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಂಟಪವೇ ಕುಸಿದು ಬಿದ್ದಿದೆ.

Read the full story here

Fri, 06 Sep 202406:03 AM IST

ಕರ್ನಾಟಕ News Live: Udupi Cyber Crime: ಉಡುಪಿ ಮಹಿಳೆ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರ ಕನ್ನ, ಅನಾಮಧೇಯ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ ಮಾಯ

  • Cyber crime alert ಉಡುಪಿ ಭಾಗದಲ್ಲಿ ಸೈಬರ್‌ ಪ್ರಕರಣಗಳು ನಡೆದಿದ್ದು. ಮಹಿಳೆ ಸೇರಿ ಇತರರೂ ಹಣ ಕಳೆದುಕೊಂಡು ದೂರು ದಾಖಲಿಸಿದ್ದಾರೆ.
  • ವರದಿ: ಹರೀಶ ಮಾಂಬಾಡಿ.ಮಂಗಳೂರು
Read the full story here

Fri, 06 Sep 202405:46 AM IST

ಕರ್ನಾಟಕ News Live: Mysore Dasara2024: ಮೈಸೂರು ದಸರಾ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ, ಸುಗ್ರೀವನೇ ಬಲಶಾಲಿ; ಪ್ರಶಾಂತಗೆ ಶುರುವಾಯ್ತು ಭೇದಿ

  • Dasara Elephants ಮೈಸೂರು ದಸರಾಕ್ಕೆಂದು ಬಂದಿರುವ ಎರಡನೇ ತಂಡದ ಆನೆಗಳ ತೂಕದ ಪ್ರಕ್ರಿಯೆ ಶುಕ್ರವಾರ ನಡೆಯಿತು.
  • ವರದಿ: ಪಿ.ರಂಗಸ್ವಾಮಿ, ಮೈಸೂರು
Read the full story here

Fri, 06 Sep 202404:14 AM IST

ಕರ್ನಾಟಕ News Live: Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಆಟೋ ಚಾಲಕರ ವಿರುದ್ಧ ದೂರುಗಳು; ಈ 2 ಕಾರಣಗಳಿಗೆ ಆಟೋ ಚಾಲಕರ ವಿರುದ್ಧ ದೂರುಗಳ ಸುರಿಮಳೆ

  • Banglore Auto Riksha ಬೆಂಗಳೂರಿನಲ್ಲಿ ಆಟೋರಿಕ್ಷಾಗಳ ಚಾಲಕರ ವಿರುದ್ದ ದುರ್ನಡತೆ ಸಹಿತ ಹಲವು ಆರೋಪಗಳ ಮೇಲೆ ದೂರು ದಾಖಲಾಗುತ್ತಲೇ ಇರುತ್ತವೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Fri, 06 Sep 202403:49 AM IST

ಕರ್ನಾಟಕ News Live: Karnataka Reservoirs: ಆಲಮಟ್ಟಿ, ಕೆಆರ್‌ಎಸ್‌ ಒಳಹರಿವಿನ ಪ್ರಮಾಣ ಏರಿಕೆ, ನೀರಿನ ಮಟ್ಟ ಯಾವ ಜಲಾಶಯದಲ್ಲಿ ಎಷ್ಟಿದೆ

  • Karnataka Dam levels  ಕರ್ನಾಟಕದಲ್ಲಿ  ಅಲ್ಲಲ್ಲಿ ಮಳೆಯಾಗುತ್ತಿರುವ ನಡುವೆಯೇ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆ ಕಂಡು ಬಂದಿದೆ. ಅದರ ವಿವರ ಇಲ್ಲಿದೆ. 
Read the full story here

Fri, 06 Sep 202403:24 AM IST

ಕರ್ನಾಟಕ News Live: Explainer: ಎತ್ತಿನ ಹೊಳೆ ಯೋಜನೆ ಕೊನೆಗೂ ಜಾರಿ, ಬೆಂಗಳೂರು ಭಾಗ ಸೇರಿ 7 ಜಿಲ್ಲೆಗಳಿಗೆ ಸಿಗಲಿದೆ ನೀರು; ಮನೆಗೆ ನೀರು ಬರಲು ಕಾಯಬೇಕು 3 ವರ್ಷ

  • ಪಶ್ವಿಮಾಭಿಮುಖವಾಗಿ ಹರಿಯುವ ನದಿಗಳ ವಾರ್ಷಿಕ 24.01 ಟಿ.ಎಂ.ಸಿ ಪ್ರವಾಹದ ನೀರನ್ನು ಸಕಲೇಶಪುರದಿಂದ ಕರ್ನಾಟಕದ ಪೂರ್ವಭಾಗಕ್ಕೆ ತಿರುಗಿಸಿ, ಕುಡಿಯುವ ನೀರಿನ ತೀವ್ರ ಆಭಾವ ಎದುರಿಸುತ್ತಿರುವ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರು ಒದಗಿಸುವ ಯೋಜನೆಯೇ ಎತ್ತಿನಹೊಳೆ( Ettinahole project)
Read the full story here

Fri, 06 Sep 202402:23 AM IST

ಕರ್ನಾಟಕ News Live: Gaganachukki Falls: ಮುಂದಿನ ವಾರಾಂತ್ಯಕ್ಕೆ ಮಂಡ್ಯ ಗಗನಚುಕ್ಕಿ ಜಲಪಾತೋತ್ಸವಕ್ಕೆ ಅಣಿಯಾಗಿ, ಬೆಳಕಿನಲ್ಲಿ ಆಕರ್ಷಿಸಲಿದೆ ಕಾವೇರಿ ತೀರದ ಜಲಪಾತ

  • Mandya Tourism ಮಂಡ್ಯ ಜಿಲ್ಲೆ ಶಿವನಸಮುದ್ರದಲ್ಲಿ ಗಗನಚುಕ್ಕಿ ಜಲಪಾತೋತ್ಸವ ಮುಂದಿನ ವಾರ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ.
Read the full story here

Fri, 06 Sep 202401:28 AM IST

ಕರ್ನಾಟಕ News Live: Onion Price Down: ಈಗ ಈರುಳ್ಳಿ ದರ ಇಳಿಸಿದ ಕೇಂದ್ರ ಸರ್ಕಾರ, 35 ಕೆಜಿ ದರದಲ್ಲಿ ಚಿಲ್ಲರೆ ಮಾರಾಟ, ಬೆಂಗಳೂರಿನಲ್ಲಿ ಮುಂದಿನ ಲಭ್ಯ

  • Onion News ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸಿಹಿ ಸುದ್ದಿ.ಕೇಂದ್ರ ಸರ್ಕಾರ ಈಗ ಈರುಳ್ಳಿ( Onion Rates)ಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ.
  • ವರದಿ: ಪ್ರಸನ್ನಕುಮಾರ್‌ ಹಿರೇಮಠ ಹುಬ್ಬಳ್ಳಿ
Read the full story here

Fri, 06 Sep 202412:58 AM IST

ಕರ್ನಾಟಕ News Live: Karnataka Rains: ಬೆಂಗಳೂರು ಸಹಿತ ಕರ್ನಾಟಕದಲ್ಲಿ ಗೌರಿ ಹಬ್ಬಕ್ಕೆ ಮಳೆ ಬಿಡುವು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭಾರೀ ಮಳೆ ಮುನ್ಸೂಚನೆ

  • Bangalore Rains ಬೆಂಗಳೂರು ನಗರ ಸಹಿತ ಬಹುತೇಕ ಕಡೆಗಳಲ್ಲಿ ಶುಕ್ರವಾರ ಮಳೆ ಸಾಧ್ಯತೆ ಕಡಿಮೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭಾರೀ ಮಳೆ ಮುನ್ಸೂಚನೆ ಇದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter