Karnataka News Live September 9, 2024 : ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್; ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿವರ್ಮ ಕುಮಾರ್‌ ನೇಮಕ-today karnataka news latest bengaluru city traffic crime news updates september 9 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 9, 2024 : ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್; ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿವರ್ಮ ಕುಮಾರ್‌ ನೇಮಕ

ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್; ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿವರ್ಮ ಕುಮಾರ್‌ ನೇಮಕ

Karnataka News Live September 9, 2024 : ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್; ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿವರ್ಮ ಕುಮಾರ್‌ ನೇಮಕ

04:47 PM ISTSep 09, 2024 10:17 PM HT Kannada Desk
  • twitter
  • Share on Facebook
04:47 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 09 Sep 202404:47 PM IST

ಕರ್ನಾಟಕ News Live: ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್; ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿವರ್ಮ ಕುಮಾರ್‌ ನೇಮಕ

  • BS Yediyurappa: ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಅಲ್ಲದೆ, ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪ್ರೊ. ರವಿವರ್ಮ ಕುಮಾರ್‌ ಅವರನ್ನು ನೇಮಿಸಲಾಗಿದೆ. (ವರದಿ - ಎಚ್. ಮಾರುತಿ)
Read the full story here

Mon, 09 Sep 202404:12 PM IST

ಕರ್ನಾಟಕ News Live: ಪ್ರಜ್ವಲ್ ರೇವಣ್ಣ ವಿರುದ್ಧ 1652 ಪುಟಗಳ 2ನೇ ಚಾರ್ಜ್​​ಶೀಟ್ ಸಲ್ಲಿಕೆ; ಹೊಸ ಜಾಮೀನು ಅರ್ಜಿ ವಿಚಾರಣೆ ಸೆ 12ಕ್ಕೆ ಮುಂದೂಡಿಕೆ

  • Prajwal Revanna: ಪ್ರಜ್ವಲ್ ರೇವಣ್ಣ ವಿರುದ್ಧ 1652 ಪುಟಗಳ ಎರಡನೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಇದೇ ವೇಳೆ ಪ್ರಜ್ವಲ್​ ಹೊಸ ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೆಪ್ಟೆಂಬರ್‌ 12ರಂದು ನಡೆಯಲಿದೆ. (ವರದಿ- ಎಚ್​ ಮಾರುತಿ)
Read the full story here

Mon, 09 Sep 202403:58 PM IST

ಕರ್ನಾಟಕ News Live: ಬೆಂಗಳೂರು ಕನ್ನಡಿಗರ ಸ್ವತ್ತು: ಆ ಒಂದು ಪೋಸ್ಟ್​ನಿಂದ ಕನ್ನಡಿಗರು-ಹೊರಗಿನವರು ಎಂದು ಬಿಸಿಬಿಸಿ ಚರ್ಚೆ ಆರಂಭ

  • Bengaluru belongs to Kannadigas:  ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಹಾಕಿದ 'ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂಬ ಪೋಸ್ಟ್​ವೊಂದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಸಂಚಲನ ಸೃಷ್ಟಿಸಿದೆ.
Read the full story here

Mon, 09 Sep 202403:05 PM IST

ಕರ್ನಾಟಕ News Live: ನಿಂದನೆ-ಕಪಾಳಮೋಕ್ಷದ ತಪ್ಪಿಗೆ 30 ಸಾವಿರ, 4 ದಿನ ಜೈಲು ಭಾಗ್ಯ; ಯುವತಿಗೆ ಹಲ್ಲೆ ಮಾಡಿದ್ದ ಆಟೋ ಚಾಲಕ ಜಾಮೀನಿಗೆ ಪರದಾಟ

  • Bengaluru Auto Driver: ಆಟೋ ಬುಕ್ಕಿಂಗ್ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಅಂತಾರಾಜ್ಯ ಮಹಿಳೆಯೊಬ್ಬರನ್ನು ನಿಂದಿಸಿ ಹಲ್ಲೆ ನಡೆಸಿದ್ದ ಆಟೋ ಚಾಲಕ ಬಂಧನಕ್ಕೆ ಒಳಗಾಗಿದ್ದು, ಇದೀಗ ಜಾಮೀನಿಗೆ 30 ಸಾವಿರ ಖರ್ಚು ಮಾಡಲು ಪರದಾಡುತ್ತಿದ್ದಾರೆ.
Read the full story here

Mon, 09 Sep 202401:56 PM IST

ಕರ್ನಾಟಕ News Live: ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಿಜೆಪಿ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರರು, ಚಾರ್ಜ್​ಶೀಟ್​ನಲ್ಲಿ ಬಹಿರಂಗ

  • Rameshwaram Cafe Blast: ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಉಗ್ರರು ಬಿಜೆಪಿ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದರಂತೆ. (ವರದಿ-ಎಚ್.ಮಾರುತಿ)
Read the full story here

Mon, 09 Sep 202412:34 PM IST

ಕರ್ನಾಟಕ News Live: ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

  • Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನವನ್ನು ಮತ್ತೆ ಮೂರು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
Read the full story here

Mon, 09 Sep 202412:34 PM IST

ಕರ್ನಾಟಕ News Live: ಜೊಮಾಟೊ, ಸ್ವಿಗ್ಗಿಗಿಂತಲೂ ಶೇ 15-20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ; ಈ ಸಂಸ್ಥೆ ಕುರಿತು ನಿಮಗೆ ತಿಳಿದಿದೆಯೇ?

  • Food Delivery: ಸ್ವಿಗ್ಗಿ, ಜೊಮಾಟೋಗಿಂತಲೂ ಶೇ 15-20 ರಷ್ಟು ಕಡಿಮೆ ದರದಲ್ಲಿ ಆಹಾರ ಸರಬರಾಜು ಮಾಡುವ ಸಂಸ್ಥೆಯ ಕುರಿತು ನಿಮಗೆ ತಿಳಿದಿದೆಯೇ? ಗೊತ್ತಿಲ್ಲವೆಂದರೆ ಇಂದೇ ಪ್ರಯತ್ನಿಸಿ ನೋಡಿ, ಪಡೆಯಿರಿ ಅದರ ಲಾಭ. (ವರದಿ-ಎಚ್.ಮಾರುತಿ)
Read the full story here

Mon, 09 Sep 202411:17 AM IST

ಕರ್ನಾಟಕ News Live: ತೆಲುಗಿನ ಇಂಧ್ರ ಹಾಸ್ಯ ದೃಶ್ಯ ನೆನಪಿಸಿದ ವಿಜಯನಗರ ದರೋಡೆ; ಥೇಟ್ ಸಿನಿಮಾದಂತೆ ಕೋಟಿ ಕೋಟಿ ಮಹಾಮೋಸ, ಕಥೆ ಓದಿ

  • Vijayanagara Crime news: ಒಂದು ಲಕ್ಷಕ್ಕೆ 10 ಲಕ್ಷ ಮಾಡುವುದಾಗಿ ನಂಬಿಸಿ ಪೂಜೆ ನೆಪದಲ್ಲಿ ವಿಜಯನಗರದ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದ ಜನರಿಗೆ 2 ಕೋಟಿ ಮೋಸ ಮಾಡಲಾಗಿದೆ.
Read the full story here

Mon, 09 Sep 202409:49 AM IST

ಕರ್ನಾಟಕ News Live: Mysore Dasara2024: ಮೈಸೂರು ದಸರಾ ಉದ್ಘಾಟನೆ; ಕನ್ನಡದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯರಿಗೆ ಮಣೆ, ಉತ್ತರ ಭಾರತ ಕಲಾವಿದರ ಹೆಸರೂ ಪರಿಶೀಲನೆ

  • Mysore Dasara Inauguration ಮೈಸೂರು ದಸರಾ ಉದ್ಘಾಟಿಸುವ ಸಂಪ್ರದಾಯವೂ ಮೂರೂವರೆ ದಶಕದಿಂದ ನಡೆದುಕೊಂಡು ಬಂದಿದೆ. ಈ ಬಾರಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ( Hampa Nagarajaiah) ಅವರ ಹೆಸರು ಪರಿಶೀಲನೆಯಲ್ಲಿದೆ. ಉತ್ತರ ಭಾರತದ ಕಲಾವಿದರನ್ನು ಆಹ್ವಾನಿಸುವ ಚರ್ಚೆಗಳೂ ನಡೆದಿವೆ. 
Read the full story here

Mon, 09 Sep 202409:37 AM IST

ಕರ್ನಾಟಕ News Live: ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಮತ್ತೆ ಮಾರ್ಮಿಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ: ಯಾರಾಗ್ತಾರೆ ಕರ್ಣ ಅನ್ನೋದು ಈ ಕ್ಷಣದ ಪ್ರಶ್ನೆ

  • Kodi Mutt Swamiji prediction: ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ಮತ್ತು ಮಳೆಯಿಂದ ಜಗತ್ತಿನಲ್ಲಿ ಆಗುವ ಅನಾಹುತಗಳ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ
Read the full story here

Mon, 09 Sep 202408:27 AM IST

ಕರ್ನಾಟಕ News Live: Hassan Crime: ಹಾಸನ ಸಮೀಪ ಪಾಲೀಶ್ ನೆಪದಲ್ಲಿ ಬಂದು ಚಿನ್ನ ಎಗರಿಸಲು ಪ್ರಯತ್ನ: ಕಳ್ಳನನ್ನು ಹಿಡಿದುಕೊಟ್ಟ ಸಾಕು ನಾಯಿ !

  •  Dog Catched Theif ಹಾಸನ ತಾಲ್ಲೂಕಿನಲ್ಲಿ ಚಿನ್ನಾಭರಣವನ್ನು ಪಾಲೀಶ್‌ ಮಾಡಲು ಮುಂದಾಗಿ ಮೋಸದೊಂದಿಗೆ ಚಿನ್ನ ಹೊತ್ತುಕೊಂಡು ಹೋಗಲು ಯತ್ನಿಸಿದವರನ್ನು ಸಾಕು ನಾಯಿಯೇ ಹಿಡಿದುಕೊಟ್ಟಿದೆ. ಈ ಕುರಿತು ಹಾಸನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read the full story here

Mon, 09 Sep 202407:58 AM IST

ಕರ್ನಾಟಕ News Live: ನೀರಿನ ಲಭ್ಯತೆ ಖಾತ್ರಿಯಿಲ್ಲದ ಎತ್ತಿನಹೊಳೆ ಯೋಜನೆಗೆ ಚಾಲನೆ, ಕರೆಯುವ ದನದ ಕೆಚ್ಚಲು ಕತ್ತರಿಸುವ ಕಥೆಗೆ ಹೋಲಿಸಿದ ದಿನೇಶ ಹೊಳ್ಳ

  • Ettinahole scheme: ಎತ್ತಿನಹೊಳೆ ಯೋಜನೆಯಿಂದ ಎಷ್ಟು ನೀರು ಲಭ್ಯವಾಗುತ್ತದೆ ಎನ್ನುವ ವಿವರವೇ ಸಮರ್ಪಕವಾಗಿಲ್ಲ. ಯೋಜನೆಯ ಕಾಮಗಾರಿ ಆರಂಭವಾದ ನಂತರ ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಹೆಚ್ಚಾಗುತ್ತಿದೆ. ಅತ್ತ ಕರಾವಳಿ, ಇತ್ತ ಬಯಲುಸೀಮೆ; ಎರಡೂ ಪ್ರದೇಶಗಳಿಗೆ ನಷ್ಟ ಉಂಟು ಮಾಡುವ ಯೋಜನೆಯಿದು (ಬರಹ: ದಿನೇಶ ಹೊಳ್ಳ)
Read the full story here

Mon, 09 Sep 202405:24 AM IST

ಕರ್ನಾಟಕ News Live: ತುಳು ಭಾಷಿಕರಿಗೆ ಇಲ್ಲಿದೆ ಸಂತಸದ ಸುದ್ದಿ: ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಗೊಂಡ ತುಳು ಲಿಪಿ

  • ತುಳು ಲಿಪಿ ಯುನಿಕೋಡ್‍ಗೆ ಸೇರ್ಪಡೆಗೊಂಡಿರುವುದು ಮಹತ್ವದ ಹೆಜ್ಜೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಎಲ್ಲಾ ತುಳುವರ ಹಲವು ವರ್ಷಗಳ ಕನಸು ಈಡೇರಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

Read the full story here

Mon, 09 Sep 202404:45 AM IST

ಕರ್ನಾಟಕ News Live: Bangalore Traffic: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ; ಬೆಂಗಳೂರಿನಲ್ಲಿ ಇಂದಿನಿಂದ 2 ಸಂಚಾರ ಮಾರ್ಗಗಳಲ್ಲಿ ಬದಲಾವಣೆ

  • Bangalore News ಬೆಂಗಳೂರು ನಗರದಲ್ಲಿ ಗಣೇಶ ವಿಸರ್ಜನೆ ಇರುವುದರಿಂದ ಕೆಲವು ಭಾಗದಲ್ಲಿ ಸೋಮವಾರ ಹಾಗೂ ಮಂಗಳವಾರ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
  • ವರದಿ: ಎಚ್‌.ಮಾರುತಿ, ಬೆಂಗಳೂರು
Read the full story here

Mon, 09 Sep 202404:31 AM IST

ಕರ್ನಾಟಕ News Live: Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ

  • Karnatka Dam Levels ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕೆಲವು ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಸಾಮಾನ್ಯವಾಗಿದೆ. ಆಲಮಟ್ಟಿಗೆ ಮಾತ್ರ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
Read the full story here

Mon, 09 Sep 202403:22 AM IST

ಕರ್ನಾಟಕ News Live: Viral Video: ಮಂಗಳೂರಿನಲ್ಲಿ ರಿಕ್ಷಾದಡಿ ಸಿಲುಕಿದ ಮಹಿಳೆ, ಓಡೋಡಿ ಬಂದು ರಕ್ಷಣೆ ಮಾಡಿದ ಪುತ್ರಿಯ ಸಾಹಸ ವೈರಲ್

  • Mangalore News ಮಂಗಳೂರಿನಲ್ಲಿ ವೇಗವಾಗಿ ಬಂದ ಆಟೋರಿಕ್ಷಾ ಉರುಳಿ ಬಿದ್ಧಾಗ ಬಾಲಕಿಯೊಬ್ಬಳು ಓಡಿ ಬಂದು ರಕ್ಷಿಸಿದ ವಿಡಿಯೋ ವೈರಲ್‌ ಆಗಿದೆ.
Read the full story here

Mon, 09 Sep 202403:00 AM IST

ಕರ್ನಾಟಕ News Live: Bangalore Road Potholes: ಬೆಂಗಳೂರು ರಸ್ತೆಗಳ ಗುಂಡಿ ಬೇಗನೇ ಮುಚ್ಚಿ ಇಲ್ಲವೇ ಅಮಾನತು ಶಿಕ್ಷೆ ಎದುರಿಸಿ; ಅಧಿಕಾರಿಗಳಿಗೆ ಡಿಕೆಶಿ ಎಚ್ಚರಿಕೆ

  • Bangalore News ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸದೇ ಇದ್ದರೆ ಬಿಬಿಎಂಪಿ ಅಧಿಕಾರಿಗಳಿಗೆ ಶಿಕ್ಷೆ ಕಾದಿದೆ ಎಂದು ಡಿಸಿಎಂ ಡಿಕೆಶಿ( DCM DK Shivakumar) ಖಡಕ್‌ ವಾರ್ನಿಂಗ್‌ ಅನ್ನು ನೀಡಿದ್ದಾರೆ.
Read the full story here

Mon, 09 Sep 202401:23 AM IST

ಕರ್ನಾಟಕ News Live: Senior Journalist Passes Away: ಕರ್ನಾಟಕದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಇನ್ನಿಲ್ಲ, ಬೆಂಗಳೂರಿನಲ್ಲಿ ವಿಧಿವಶ

  • Bangalore News ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ ನಿಧನರಾದರು.
Read the full story here

Mon, 09 Sep 202401:14 AM IST

ಕರ್ನಾಟಕ News Live: Karnataka Rains: ಕರಾವಳಿ ಭಾಗದಲ್ಲಿ ಭಾರೀ ಮಳೆ, ಮಲೆನಾಡಲ್ಲೂ ವರುಣನ ಅಬ್ಬರ; 5 ಜಿಲ್ಲೆಗಳಲ್ಲಿ ಇಂದು ಅಲರ್ಟ್‌, ಬೆಂಗಳೂರಲ್ಲಿ ಮಳೆ ಹೇಗಿದೆ

  • Karnataka Weather Updates ಕರ್ನಾಟಕದ ಕರಾವಳಿ,ಮಲೆನಾಡು ಭಾಗದಲ್ಲಿ ಸೋಮವಾರವೂ ಭಾರೀ ಮಳೆಯಾಗುವ ಮುನ್ಸೂಚನೆಗಳನ್ನು ನೀಡಲಾಗಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter