Kannada News  /  Karnataka  /  Tractor Movement Banned In Bengaluru: Outrage Against Police Action
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

Tractor movement banned: ಬೆಂಗಳೂರಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇಧ: ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ

06 February 2023, 20:45 ISTHT Kannada Desk
06 February 2023, 20:45 IST

ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಪೊಲೀಸ್‌ ಆಯುಕ್ತ ಡಾ.ಎಂ.ಎ.ಸಲೀಂ ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದರಿಂದ ಅದನ್ನೇ ನಂಬಿ ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬಡವರು ಇಂದು ಯಾವುದೇ ಕೆಲಸವಿಲ್ಲದೆ ಬೀದಿ ಪಾಲಾಗಿದ್ದಾರೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್‌ ಪಡುಕೋಟಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು: ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ಕೆಲಸ ಅರಸಿ ಬಂದ ಲಕ್ಷಾಂತರ ಮಂದಿ ಬಡವರು, ಕೂಲಿ ಕಾರ್ಮಿಕರು, ಟ್ಯಾಕ್ಟರ್ ಚಾಲಕರು, ಸಹಾಯಕರು ಇಂದು ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್‌ ಪಡುಕೋಟಿ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ನಗರದ ಪ್ರೆಸ್ ಕ್ಲಬ್​​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ್‌ ಪಡುಕೋಟಿ, ಬೆಂಗಳೂರು ನಗರ ಪೊಲೀಸರ ಅವೈಜ್ಞಾನಿಕ ಸುತ್ತೋಲೆಯಿಂದ ನಮ್ಮ ಕನ್ನಡ ಮಣ್ಣಿನ ಮಕ್ಕಳಾದ ಬಡ ಕಾರ್ಮಿಕರು ಇಂದು ಬೀದಿ ಪಾಲಾಗುವಂತೆ ಆಗಿದೆ. ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಪೊಲೀಸ್‌ ಆಯುಕ್ತ ಡಾ.ಎಂ.ಎ.ಸಲೀಂ ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದರಿಂದ ಅದನ್ನೇ ನಂಬಿ ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬಡವರು ಇಂದು ಯಾವುದೇ ಕೆಲಸವಿಲ್ಲದೆ ಬೀದಿ ಪಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಟ್ಯಾಕ್ಟರ್ ಗಳು ಕೃಷಿ ಉತ್ಪನ್ನ, ಕಟ್ಟಡ ತ್ಯಾಜ್ಯ ಹಾಗೂ ಸರಕು ಸಾಗಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಟ್ರ್ಯಾಕ್ಟರ್ ಗಳು ಪ್ರಮುಖ ಪಾತ್ರವಹಿಸಿವೆ. ಪ್ರತಿ ಟ್ರಾಕ್ಟರ್​ಗೆ ಒಬ್ಬ ಚಾಲಕ, ಸಹಾಯಕ ಹಾಗೂ ಇಬ್ಬರು ಕೂಲಿ ಆಳು ಸಹಿತ ನಾಲ್ವರಿಗೆ ಕೆಲಸ ಸಿಗುತ್ತಿದೆ. ಅಂದರೆ 40 ಸಾವಿರ ಟ್ರಾಕ್ಟರ್ ನಿಂದ 1 ಲಕ್ಷ 60 ಸಾವಿರಕ್ಕೂ ಅಧಿಕ ಮಂದಿಗೆ ಕೈತುಂಬಾ ಕೆಲಸ ಸಿಗುತ್ತಿದೆ ಎಂದು ಮಾಹಿತಿ ನೀಡಿದರು.

ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಮುಕ್ತ ಅವಕಾಶ ನೀಡಿ:

ಸಮಯ ನಿಗದಿ ಪಡಿಸಿ ಟ್ರಾಕ್ಟರ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವ ಟ್ಯಾಕ್ಟರ್ ಗಳಿಗೆ ಮುಕ್ತ ಅವಕಾಶ ನೀಡಬೇಕು. ಕಚೇರಿ ಸಮಯದಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವುದಕ್ಕೆ ಕಡಿವಾಣ ಹಾಕಬೇಕು. ಮೆಟ್ರೊ ರೈಲು, ಬಿಎಂಟಿಸಿ ಬಸ್‌ ಸಹಿತ ಸಾರ್ವಜನಿಕ ಸಂಚಾರಕ್ಕೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.

ಒಬ್ಬರೇ ಪ್ರಯಾಣಿಸುವ ಕಾರುಗಳಿಗೆ ಕಡಿವಾಣ ಹಾಕಿ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ನಿರ್ಗಮನದ ಸಮಯಕ್ಕೆ ತಕ್ಕಂತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳ ಸಮಯವನ್ನು ನಿಗದಿ ಮಾಡಬೇಕು. ಟ್ಯಾಕ್ಟರ್ ನಿಷೇಧದಿಂದ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಯಾಗಲು ಸಾಧ್ಯವಿಲ್ಲ. ನಿಲುಗಡೆ ಸೌಲಭ್ಯ ಇಲ್ಲದಿದ್ದರೂ ಮನೆಯಲ್ಲಿ ಮೂರು ನಾಲ್ಕು ಕಾರುಗಳು ಖರೀದಿಸಿ ಅದನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲುಗಡೆ ಮಾಡಿ ಇಂದು ಕಾರಿನಲ್ಲಿ ಒಬ್ಬೊಬ್ಬರೇ ಸಂಚರಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರ್ಯಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಕಿಡಿಕಾರಿದರು.

ಸಾವಿರಾರು ಕುಟುಂಬಗಳು ಬೀದಿ ಪಾಲು:

ಸಾವಿರಾರು ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೆ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ದಾರಿಯಾಗಿದ್ದವು. ಏಕಾಏಕಿ ಈ ಟ್ಯಾಕ್ಟರ್ ನಿಷೇಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿರುವುದರಿಂದ ಅಷ್ಟೂ ಕುಟುಂಬಗಳು ಬೀದಿ ಪಾಲಾಗುವಂತೆ ಆಗಿದೆ ಎಂದು ಬಸವರಾಜ್ ಪಡುಕೋಟೆ ಹೇಳಿದರು.

ವಿಭಾಗ