ವಾಹನ ಸವಾರರೇ ಗಮನಿಸಿ: ಸೆಪ್ಟೆಂಬರ್ 8ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಿ ರಸ್ತೆ ನೋಡ್ಕೊಳಿ-traffic restrictions on these roads in bangalore on september 8 alternative road details traffic advisory jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ವಾಹನ ಸವಾರರೇ ಗಮನಿಸಿ: ಸೆಪ್ಟೆಂಬರ್ 8ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಿ ರಸ್ತೆ ನೋಡ್ಕೊಳಿ

ವಾಹನ ಸವಾರರೇ ಗಮನಿಸಿ: ಸೆಪ್ಟೆಂಬರ್ 8ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಿ ರಸ್ತೆ ನೋಡ್ಕೊಳಿ

ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮದ ನಿಮಿತ್ತ ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್‌ 8ರಂದು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್‌ ಪೊಲೀಸರು ಬದಲಿ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಸೆಪ್ಟೆಂಬರ್ 8ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಿ ರಸ್ತೆ ನೋಡ್ಕೊಳಿ
ಸೆಪ್ಟೆಂಬರ್ 8ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಿ ರಸ್ತೆ ನೋಡ್ಕೊಳಿ

ಸಾಲು ಸಾಲು ಹಬ್ಬಗಳ ಕಾರಣದಿಂದಾಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru Traffic) ಟ್ರಾಫಿಕ್‌ ಸಮಸ್ಯೆ ಹೆಚ್ಚಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಿಲಿಕಾನ್‌ ಸಿಟಿ ಟ್‌ರಾಫಿಕ್‌ ಪೊಲೀಸರು ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಂಡಿದ್ದಾರೆ. ಶಿವಾಜಿನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮದ ನಿಮಿತ್ತ ಸೆಪ್ಟೆಂಬರ್‌ 8ರಂದು ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಕುರಿತು ಬೆಂಗಳೂರು ಟ್ರಾಫಿಕ್‌ ಪೊಲೀಸರು (ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ) ಪ್ರಕಟಣೆ ಹೊರಡಿಸಿದ್ದಾರೆ.

ನಗರದ ಜ್ಯೋತಿಕೆಫೆ ವೃತ್ತದಿಂದ ರೆಸಲ್ ಮಾರ್ಕೆಟ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬ್ರಾಡ್‌ ವೇ ರಸ್ತೆಯಲ್ಲಿ ರಸಲ್ ಮಾರ್ಕೆಟ್ ಕಡೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಧರ್ಮರಾಜ ಕೋಯಿಲ್ ಸ್ಟ್ರೀಟ್‌ನಿಂದ ಓಪಿ ಎಚ್ ರಸ್ತೆಯವರೆಗೆ ರಸಲ್ ಮಾರ್ಕೆಟ್ ಕಡೆಗೆ ಬರುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿರ್ಬಂಧಿಸಲಾಗುತ್ತದೆ.

ಬಿಆರ್‌ವಿ ಜಂಕ್ಷನ್‌ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದೇ ವೇಳೆ ಬಾಳೇ ಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ಮಾದರಿಯ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗಗಳು ಹೀಗಿವೆ

  • ಅನಿಲ್ ಕುಂಬ್ಳೆ ಜಂಕ್ಷನ್ ಕಡೆಯಿಂದ ಬರುವ ಬಿಎಂಟಿಸಿ ಬಸ್‌ಗಳು ಬಿಆರ್‌ವಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಸಿಟಿಒ ಮಾರ್ಗವಾಗಿ ಕ್ವೀನ್ಸ್ ಸರ್ಕಲ್ ಆಗಿ ಎಂಜಿ ರಸ್ತೆ ಮೂಲಕ ಸಂಚರಿಸಬಹುದು.
  • ದ್ವಿಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿಆರ್‌ವಿ ಸೆಂಟ್ರಲ್ ಸ್ಟ್ರೀಟ್ ಬಳಿ ಬಲ ತಿರುವು ಪಡೆದು ಸಫೀನಾ ಪ್ಲಾಜಾ, ಕಮರ್ಷಿಯಲ್ ಸ್ಟ್ರೀಟ್ ಮಾರ್ಹವಾಗಿ ಕಾಮರಾಜ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ಇದನ್ನೂ ಓದಿ | Bangalore Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವಾಹನ ವೇಗಕ್ಕೆ ಮಿತಿ, ಎಐ ತಂತ್ರಜ್ಞಾನ ಬಳಕೆ ನಂತರ ಅಪಘಾತ ಪ್ರಕರಣ ಇಳಿಕೆ

  • ದ್ವಿಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿಆರ್‌ವಿ ಮೂಲಕ ಸೆಂಟ್ರಲ್ ಸ್ಟ್ರೀಟ್ ಮಾರ್ಗವಾಗಿ ಸೆಲೆಕ್ಟ್ ಜಂಕ್ಷನ್ ಬಳಿ ಎಡ ತಿರುವು ಪಡೆದು ರಮಡಾ ಹೋಟೆಲ್, ವಿಎಸ್ಎನ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ವಾಹನಗಳ ನಿಲುಗಡೆ ನಿರ್ಬಂಧ ಇರುವ ಸ್ಥಳಗಳು

ಬೆಂಗಳೂರಿನ ರಸಲ್ ಮಾರ್ಕೆಟ್ ಸುತ್ತ ಮುತ್ತ, ಬ್ರಾಡ್ ವೇರಸ್ತೆ, ಮೀನಾಕ್ಷಿಕೋಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್, ಶಿವಾಜಿ ರಸ್ತೆ, ಬಾಳೇ ಕುಂದ್ರಿ ವೃತ್ತದಿಂದ ಚಂದ್ರಿಕಾ ಹೋಟೆಲ್‌ವರೆಗೂ (ಕನ್ನಿಂಗ್ ಹ್ಯಾಮ್ ರಸ್ತೆ), ಯೂನಿಯನ್‌ ಸ್ಟ್ರೀಲ್‌, ಇನ್‌ಫೆಂಟ್ರಿ ರಸ್ತೆ, ಕಬ್ಬನ್‌ ರಸ್ತೆ, ಲೇಡಿಕರ್ಜನ್‌ ರಸ್ತೆ, ವಿಎಸ್‌ಎನ್‌ ರಸ್ತೆ, ಪ್ಲೇನ್‌ ಸ್ಟ್ರೀಟ್‌, ಎಂಜಿ ರಸ್ತೆ.

ವಾಹನ ನಿಲುಗಡೆ ಸ್ಥಳಗಳು ಇವು

ಕಾಮರಾಜ ರಸ್ತೆ ಪಾರ್ಕಿಂಗ್‌ ಸ್ಥಳ, ಸಫೀನಾ ಪ್ಲಾಜಾ ಮುಂಭಾಗ, ಜೆಸ್ಮಾ ಭವನ ರಸ್ತೆ, ಆರ್‌ಬಿಎಎನ್‌ಎಮ್‌ಎಸ್‌ ಮೈದಾನ, ಮುಸ್ಲಿಂ ಆರ್ಫನೇಜ್‌ ಡಿಕನ್‌ಸನ್‌ ಸ್ತೆ, ರಮಡಾ ಹೋಟೆಲ್‌ ಪ್ಲೇನ್‌ ಸ್ಟ್ರೀಟ್.

mysore-dasara_Entry_Point