Traffic violations in Bengaluru-Mysuru E-way: ಉದ್ಘಾಟನೆಯಾದ ಮರು ದಿನವೇ ಬೆಂ-ಮೈ ಹೆದ್ದಾರಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಮರು ದಿನವೇ ಸಂಚಾರ ನಿಯಮಗಳನ್ನ ಗಾಳಿಗೆ ತೂರಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಉದ್ಘಾಟನೆಯ ಮರು ದಿನವೇ ಸಂಚಾರ ನಿಮಯಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗಿವೆ.
ಎಕ್ಸ್‌ಪ್ರೆಸ್‌ವೇನಲ್ಲಿ ಸಾಮಾನ್ಯವಾಗಿ ವಾಹನಗಳು ಅತಿವೇಗವಾಗಿ ಸಂಚಾರ ಮಾಡುತ್ತವೆ. ಆದರೆ ಈ ಹೆದ್ದಾರಿಯಲ್ಲಿ ಲಾರಿಯೊಂದಿಗೆ ರಿವರ್ಸ್ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದ್ದು, ಪ್ರಯಾಣಿಕರ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವಂತಿದೆ ಎಂಬ ಪ್ರಶ್ನೆಗಳು ಎದುರಾಗಿವೆ.
ಡ್ರೋನ್‌ಮ್ಯಾನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಟ್ರಕ್ ಹಿಮ್ಮುಖವಾಗಿ (ರಿವರ್ಸ್) ತೆಗೆದುಕೊಳ್ಳುವ ವೀಡಿಯೊವನ್ನು ಹಂಚಿಕೊಂಡಿದೆ. #humnahisudhrenge (ನಾವು ಎಂದಿಗೂ ಬದಲಾಗುವುದಿಲ್ಲ) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ “ಏನು ಹೇಳಬೇಕೆಂದು ತಿಳಿಯುತ್ತಿಲ್ಲ” ಎಂದು ಬರೆದಿದೆ. ಸರ್ವಿಸ್ ರಸ್ತೆಗೆ ಪ್ರವೇಶಿಸಲು ಮತ್ತೊಂದು ಕಾರು ಅದೇ ಬದಿಯಲ್ಲಿ ರಿವರ್ಸ್ ತೆಗೆದುಕೊಳ್ಳುತ್ತಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಭಾಗವೆಂದು ಹೇಳಲಾದ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಕೆಲವರು ಪ್ರಶ್ನಿಸಿದ್ದಾರೆ.
ದಿ ಇಡ್ಲಿ ಮ್ಯಾನ್ ಹೆಸರಿನ ಟ್ವಿಟರ್ ನಲ್ಲಿ ಹೆದ್ದಾರಿಗೆ ಪ್ರವೇಶ ನಿಯಂತ್ರಣ ವ್ಯವಸ್ಥೆ ಇರಬೇಕಾಗಿತ್ತು ಎಂದು ನಾವು @mepratap ಮತ್ತು @nitin_gadkari ಅವರಿಗೆ ನಿರಂತರವಾಗಿ ವಿನಂತಿಸುತ್ತಿದ್ದೇವೆ.
ಸರ್ವೀಸ್ ಲೇನ್‌ಗಳನ್ನು ಪ್ರತ್ಯೇಕಿಸಲು ಬಳಸುವ ಸ್ಟೀಲ್ ಗ್ರಿಲ್‌ಗಳು ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಪ್ರವೇಶ ನಿರ್ಗಮನಗಳನ್ನು ಮುಖ್ಯ ಕ್ಯಾರೇಜ್‌ವೇಯಿಂದ ದೂರದಲ್ಲಿ ನೀಡಬೇಕು. ದುರದೃಷ್ಟವಶಾತ್ ಇವುಗಳಲ್ಲಿ ಯಾವುದನ್ನೂ ಅನುಸರಿಸಲಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಆಕಾಶ್ ಗುಪ್ತಾ ಎಂಬ ಹೆಸರಿನ ವ್ಯಕ್ತಿ, “ಜನರು ಇಲ್ಲಿ ವಿಶೇಷವಾಗಿ ಏಕೆ ಹಿಂತಿರುಗುತ್ತಿದ್ದಾರೆ? ಅದೇ ಜಾಗದಿಂದ ಮತ್ತೊಂದು ಅಂತಹ ವಿಡಿಯೋ ನೋಡಿದೆ. ಸಿಗ್ನಲ್ ಗಳನ್ನು ಸರಿಯಾಗಿ ತಿಳಿಯದೆ ಹೀಗೆ ಮಾಡುತ್ತಿರಬಹುದು ಅಂತ ನಿಸುತ್ತಿದೆ ಎಂದಿದ್ದಾರೆ.
ನಿನ್ನೆಯಷ್ಟೇ (ಮಾರ್ಚ್ 12, ಭಾನುವಾರ) ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ್ದರು.
ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 1 ಗಂಟೆ 30 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ಎರಡೂ ನಗರಗಳ ನಡುವೆ ಪ್ರಯಾಣಿಸಲು ಇದು ಸರಿಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಈ ಯೋಜನೆಯು 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳನ್ನು ಒಳಗೊಂಡಿದೆ. ಸಂಪೂರ್ಣ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಇನ್ನ ಹೆದ್ದಾರಿ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ‘ಮೋದಿಯ ಸಮಾಧಿ ತೋಡುವ’ ಕನಸು ಕಾಣುತ್ತಿದೆ . ಮೋದಿಯ ಸಮಾಧಿ ತೋಡುವಲ್ಲಿ ಕಾಂಗ್ರೆಸ್ ನಿರತವಾಗಿದ್ದರೆ, ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮತ್ತು ಬಡವರ ಬದುಕನ್ನು ಸುಗಮಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದಿದ್ದರು.
ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಗಳನ್ನು ತೆರೆಯುತ್ತದೆ.
ಬೆಂಗಳೂರು ಮತ್ತು ಮೈಸೂರು ಕರ್ನಾಟಕದ ಪ್ರಮುಖ ನಗರಗಳು. ಒಂದು ತಂತ್ರಜ್ಞಾನಕ್ಕೆ ಹೆಸರಾದರೆ ಇನ್ನೊಂದು ಸಂಪ್ರದಾಯಕ್ಕೆ ಹೆಸರುವಾಸಿ. ತಂತ್ರಜ್ಞಾನದ ಮೂಲಕ ಎರಡೂ ನಗರಗಳನ್ನು ಸಂಪರ್ಕಿಸುವುದು ಸಾಕಷ್ಟು ಮಹತ್ವದ್ದಾಗಿದೆ. ದಶಪಥ ಹೆದ್ದಾರಿಯಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬೆಳೆಯಲಿದೆ ಎಂದು ಹೇಳಿದ್ದಾರೆ.
ಇದೀಗ ಉದ್ಘಾಟನೆಯಾದ ಮರು ದಿನವೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಸಂಚಾರ ನಿಮಯಗಳನ್ನು ಉಲ್ಲಂಘಿಸುತ್ತಿರುವುದರಿಂದ ಈ ಬಗ್ಗೆ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ವಿಭಾಗ