ಕನ್ನಡ ಸುದ್ದಿ  /  Karnataka  /  Trending News Evs To Be Parked In Baking Sunlight At Bengaluru Mall Ather Official Responds To X Post Bengaluru News Uks

Trending News: ಬೆಂಗಳೂರು ಮಾಲ್‌ಗಳ ಪಾರ್ಕಿಂಗ್‌ನಲ್ಲಿ ಇವಿಗಳಿಗೆ ಇಲ್ಲ ಜಾಗ; ಸುಡುಬಿಸಿಲಲ್ಲಿ ವಿಶೇಷ ವ್ಯವಸ್ಥೆ

Bengaluru News: ಬೆಂಗಳೂರು ಮಾಲ್‌ಗಳ ಪಾರ್ಕಿಂಗ್‌ನಲ್ಲಿ ಇವಿಗಳಿಗೆ ಜಾಗ ಇಲ್ಲ. ಇವಿಗಳು ಅವಘಡಕಾರಿಗಳು ಎಂಬ ನೆಪ ಮುಂದಿಟ್ಟುಕೊಂಡು ಸುಡುಬಿಸಿಲಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ ಎನ್ನುತ್ತಿದೆ ಎಕ್ಸ್‌ನಲ್ಲಿರುವ ಸರಣಿ ಟ್ವೀಟ್‌. ಏನಿದು ವಿದ್ಯಮಾನ ಇಲ್ಲಿದೆ ವಿವರ.

ಬೆಂಗಳೂರು ಮಾಲ್‌ಗಳ ಪಾರ್ಕಿಂಗ್‌ನಲ್ಲಿ ಇವಿಗಳಿಗೆ ಇಲ್ಲ ಜಾಗ. ಸುಡುಬಿಸಿಲಲ್ಲಿ ವಿಶೇಷ ವ್ಯವಸ್ಥೆಯ ಒಂದು ನೋಟ
ಬೆಂಗಳೂರು ಮಾಲ್‌ಗಳ ಪಾರ್ಕಿಂಗ್‌ನಲ್ಲಿ ಇವಿಗಳಿಗೆ ಇಲ್ಲ ಜಾಗ. ಸುಡುಬಿಸಿಲಲ್ಲಿ ವಿಶೇಷ ವ್ಯವಸ್ಥೆಯ ಒಂದು ನೋಟ (nishantr)

ಬೆಂಗಳೂರು: ಮಹಾನಗರದಲ್ಲಿ ವಾಹನ ಪಾರ್ಕಿಂಗ್‌ನದ್ದೇ ದೊಡ್ಡ ಸವಾಲು. ಸಾಮಾನ್ಯವಾಗಿ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ವಾಹನ ಪಾರ್ಕಿಂಗ್ ನಿರ್ವಹಣೆಗೆಂದೇ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇಷ್ಟಾಗ್ಯೂ, ಲೋಪಗಳು ಇದ್ದೇ ಇರುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ.

ಬೆಂಗಳೂರಿನ ಛಾಯಾಗ್ರಾಹಕರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಚಾರದ ಕಡೆಗೆ ಮಾಲ್‌ ಗಮನಸೆಳೆಯಲು ಪ್ರಯತ್ನಿಸಿದರು. ಅವರ ಪೋಸ್ಟ್‌ಗೆ ಏಥರ್ ಕಂಪನಿಯ ಪ್ರತಿನಿಧಿ ಸ್ಪಂದಿಸಿದ್ದಾರೆ. ಹೌದು, ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದ ಪೋಸ್ಟ್.

ದಕ್ಷಿಣ ಬೆಂಗಳೂರಿನ ಮಾಲ್‌ಗಳಲ್ಲಿ ಇವಿ ದ್ವಿಚಕ್ರ ವಾಹನಗಳಿಗೆ ಮಾಲ್‌ನ ಹೊರಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಅವರದ್ದು ಆಕ್ಷೇಪವಿದೆ. ಅದನ್ನು ಅವರು ಹಂಚಿಕೊಂಡವರು ಛಾಯಾಗ್ರಾಹಕ ನಿಶಾಂತ್ ರತ್ನಾಕರ್.

ಸುಡುಬಿಸಿಲಲ್ಲಿ ಯಾಕೆ ಇವಿ ದ್ವಿಚಕ್ರ ವಾಹನ ಪಾರ್ಕಿಂಗ್

ನಿಶಾಂತ್ ರತ್ನಾಕರ್ ಅವರು ಎಕ್ಸ್‌ನಲ್ಲಿ ಮಾಲ್ ಹೊರಭಾಗದ ಇವಿ ಪಾರ್ಕಿಂಗ್‌ ಸ್ಥಳದ ಫೋಟೋ ಶೇರ್ ಮಾಡಿದ್ದು, ಸುಡುಬಿಸಿಲಲ್ಲಿ ಯಾಕೆ ಇವಿ ದ್ವಿಚಕ್ರ ವಾಹನ ಪಾರ್ಕಿಂಗ್ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಮಾಲ್‌ಗಳ ಆಡಳಿತದ ಜೊತೆಗೆ ಇವಿ ಉತ್ಪಾದಕರು ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರತ್ನಾಕರ್ ಬರೆದುಕೊಂಡಿರುವುದು ಇಷ್ಟು -"ಬೆಂಗಳೂರಿನ ಕೋರಮಂಗಲದಲ್ಲಿರುವ ನೆಕ್ಸಸ್ ಮಾಲ್‌ನಲ್ಲಿ ವಿದ್ಯುತ್ ವಾಹನಗಳ ಕುರಿತಾಗಿ ಅನಗತ್ಯ ಭಯದ ಮನೋಭಾವ ಕಂಡುಬಂದಿದೆ. ಬಹುಮಹಡಿಯ ಪಾರ್ಕಿಂಗ್ ವ್ಯವಸ್ಥೆ ಇರುವಾಗ ಇವಿಗಳನ್ನು ಯಾಕೆ ಸುಡುಬಿಸಿಲಿನಲ್ಲಿ ಪಾರ್ಕ್‌ ಮಾಡುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇವಿ ಉತ್ಪಾದಕರು ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಬೇಕು"

ಇದಕ್ಕೆ ಸಂಬಂಧಿಸಿದ ಸರಣಿ ಟ್ವೀಟ್‌ನಲ್ಲಿ ರತ್ನಾಕರ್ ಅವರು ಇನ್ನೂ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳು ಸಕಾಲಿಕವಾಗಿದ್ದು, ಇವಿಗಳ ಎದುರು ಇರುವ ಸವಾಲುಗಳ ಕಡೆಗೂ ಬೆಳಕು ಚೆಲ್ಲಿದೆ.

ಇವಿಗಳನ್ನು ಸಾಗಿಸುವ ಟ್ರಕ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅನಾಹುತ ಸಂಭವಿಸಿದ ಘಟನೆಯನ್ನು ನೆಕ್ಸಸ್ ಮಾಲ್‌ನ ಭದ್ರತಾ ಸಿಬ್ಬಂದಿ ಉಲ್ಲೇಖಿಸುತ್ತಾರೆ. ಹೀಗಾಗಿ ಇವಿಗಳ ಪಾರ್ಕಿಂಗ್ ಹೊರಗೆ ಸುಡುಬಿಸಿಲಲ್ಲಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಈ ಪೋಸ್ಟ್‌ನಲ್ಲಿ ಅವರು ಏಥರ್ ಎನರ್ಜಿ, ಓಲಾ ಎಲೆಕ್ಟ್ರಿಕ್ ಕಂಪನಿಗಳನ್ನು, ಸಂಸ್ಥಾಪಕರಾದ ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಮಾಲ್‌ನ ಆಡಳಿತದೊಂದಿಗೆ ಮಾತನಾಡುವಂತೆ ಒತ್ತಾಯಿಸಿದರು.

"ಇವಿ ಉದ್ಯಮದ ಪ್ರಮುಖರು ಬೆಂಗಳೂರಿನ ಈ ಮಾಲ್‌ಗಳ ಆಡಳಿತ ಮಂಡಳಿಗೆ ಇವಿಗಳ ಬಗ್ಗೆ ಸ್ವಲ್ಪ ತಿಳಿವಳಿಕೆಯನ್ನು ನೀಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಬರೆದು ಓಲಾದ ಭವಿಷ್ ಅಗರ್‌ವಾಲ್ ಅವರನ್ನೂ ಟ್ಯಾಗ್ ಮಾಡಿದ್ದಾರೆ.

ಮಾಲ್‌ಗಳಿರುವಂತಹ ನಗರಗಳಲ್ಲಿ ಇವಿಗಳ ಕುರಿತಾದ ಗ್ರಹಿಕೆ

ರತ್ನಾಕರ್ ಅವರ ಪೋಸ್ಟ್‌ಗೆ ಪೂರಕವಾಗಿ, ಜನಪ್ರಿಯ ಎಕ್ಸ್‌ ನಲ್ಲಿರು ಪೀಕ್ ಬೆಂಗಳೂರು ಖಾತೆಯು ಅಥೆರ್ ಎನರ್ಜಿಯ ಚಾರ್ಜ್ ಮೂಲಸೌಕರ್ಯ ಮುಖ್ಯಸ್ಥ ಅರವಿಂದ್ ಪ್ರಸಾದ್ ಅವರನ್ನು ಟ್ಯಾಗ್‌ ಮಾಡಿ ಕಂಪನಿಯ ಮಧ್ಯಸ್ಥಿಕೆಯನ್ನು ಕೋರಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಪ್ರಸಾದ್ ಭರವಸೆ ನೀಡಿರುವುದು ಕಂಡುಬಂದಿದೆ.

ರತ್ನಾಕರ್ ಅವರ ಪೋಸ್ಟ್‌ನಿಂದ ಪ್ರೇರೇಪಿಸಲ್ಪಟ್ಟ ಚರ್ಚೆಯು ಇವಿಗಳ ಸುತ್ತಲಿನ ಸವಾಲುಗಳು ಮತ್ತು ವಿಶೇಷವಾಗಿ ಮಾಲ್‌ಗಳಿರುವಂತಹ ನಗರ ಸ್ಥಳಗಳಲ್ಲಿ ಗ್ರಹಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ.

IPL_Entry_Point