Tumakuru News: ಮಧುಗಿರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; ಐವರು ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ-tumakuru crime news five died in a horrific accident between two cars in madhugiri taluk of tumkur prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Tumakuru News: ಮಧುಗಿರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; ಐವರು ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ

Tumakuru News: ಮಧುಗಿರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; ಐವರು ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ

Road Accident: ಎರಡು ಕಾರುಗಳ ನಡುವೆ ಡಿಕ್ಕಿ ಸಂಬಂಧಿಸಿ ಒಟ್ಟು ಐವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯ ಕಾಟಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಎರಡೂ ಕಾರುಗಳು ನುಜ್ಜುಗುಜ್ಜಾಗಿರುವುದು
ಅಪಘಾತದಲ್ಲಿ ಎರಡೂ ಕಾರುಗಳು ನುಜ್ಜುಗುಜ್ಜಾಗಿರುವುದು

ಮಧುಗಿರಿ (ತುಮಕೂರು): ಎರಡು ಕಾರುಗಳ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಸೇರಿ ಒಟ್ಟು 5 ಮಂದಿ ಮೃತಪಟ್ಟಿರುವ ಘಟನೆ ತುಮಕೂರಿನ ಮಧುಗಿರಿ ತಾಲೂಕಿನ ಕಾಟಗೊಂಡನಹಳ್ಳಿ ಸಮೀಪ ನಡೆದಿದೆ.

ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ (62), ಅವರ ಮಗಳು ಸಿಂಧೂಜ (30), ಮೊಮ್ಮಗ ವೇದಾಸ್ ರೆಡ್ಡಿ (8) ಮೃತ ಪಟ್ಟಿದ್ದಾರೆ. ಇವರು ಮೂವರು ಒಂದೇ ಕುಟುಂಬದರು. ಮಧುಗಿರಿಯ ಮಿಡಿಗೇಶಿ ಹೋಬಳಿಯ ಖರೇನಹಳ್ಳಿ ಗ್ರಾಮದ ನಾಗರಾಜು (34), ಸಿದ್ದಗಂಗಪ್ಪ (35) ಮೃತಪಟ್ಟವರೆಂದು ಗುರುತಿಸಲಾಗಿದೆ.

ಎತ್ತಿನಹಳ್ಳಿ ಗ್ರಾಮದ ಗೀತಾ (29), ಪುತ್ರ ಯೋಧಾ ಕಿರಣ್ (14) ಹಾಗೂ ಚಾಲಕ ಆನಂದ್ (30), ದೇವ್ ರೆಡ್ಡಿ (14 ತಿಂಗಳು) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಎತ್ತಿನಹಳ್ಳಿ ಗ್ರಾಮದಿಂದ ಗಣೇಶ ಹಬ್ಬ ಹಬ್ಬ ಮುಗಿಸಿಕೊಂಡು ಜನಾರ್ಧನ ರೆಡ್ಡಿ ಮತ್ತು ಕುಟುಂಬದ 7 ಮಂದಿ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಸಿದ್ದಗಂಗಪ್ಪ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಬೆಂಗಳೂರಿನಿಂದ ಮಧುಗರಿ ಮೂಲಕ ಕಾರೇನಹಳ್ಳಿಗೆ ಹೋಗುತ್ತಿದ್ದರು.

ಸ್ಥಳಕ್ಕೆ ಎಸ್ಪಿ ಅಶೋಕ್, ಸಿಪಿಐ ಹನುಮಂತ ರಾಯಪ್ಪ, ಬಿಐ ವಿಜಯ್ ಕುಮಾರ್ ಭೇಟಿ ನೀಡಿ ಮೃತಪಟ್ಟವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಸವಗಾರ ಮೃತ ದೇಹಗಳನ್ನು ರವಾನಿಸಿದ್ದಾರೆ.

mysore-dasara_Entry_Point