ತುಮಕೂರು: ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರು: ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ

ತುಮಕೂರು: ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ

ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ. (ವರದಿ: ಈಶ್ವರ್‌‌, ತುಮಕೂರು)

ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ (File photo)
ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ (File photo)

ತುಮಕೂರು: ಎಮ್ಮೆಗೆ ನೀರು ಕುಡಿಸಲು ಕೆರೆಗೆ ಹೋಗಿದ್ದ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ. ಎಮ್ಮೆ ಮತ್ತು ಕರುಗಳು ಯುವತಿಯನ್ನು ನೀರಿಗೆ ಎಳೆದುಕೊಂಡು ಹೋದ ಸಂದರ್ಭದಲ್ಲಿ ಆಕೆಯ ಜೀವ ಉಳಿಸಲು ತಾಯಿ ಕೂಡಾ ನೀರಿಗೆ ಇಳಿದಿದ್ದಾರೆ. ಹೀಗಾಗಿ ಇಬ್ಬರೂ ನೀರು ಪಾಲಾಗಿದ್ದಾರೆ. ಪ್ರೇಮಕುಮಾರಿ (50) ಮಗಳು ಪೂರ್ಣಿಮಾ (30) ಮೃತ ದುರ್ದೈವಿಗಳಾಗಿದ್ದಾರೆ.

ವಿರುಪಾಕ್ಷಿಪುರ ಗ್ರಾಮದಲ್ಲಿ ವಾಸವಾಗಿದ್ದ ತಾಯಿ ಹಾಗೂ ಮಗಳು ವೃತ್ತಿಯಲ್ಲಿ ಕೃಷಿಕರು. ಮಗಳು ಪೂರ್ಣಿಮಾ ಬುದ್ಧಿಮಾಂದ್ಯ ಯುವತಿಯಾಗಿದ್ದು, ಈಕೆಯು ದಿನನಿತ್ಯ ತಾಯಿಯ ಜೊತೆ ತೋಟಕ್ಕೆ ತೆರಳುತ್ತಿದ್ದಳು. ಗುರುವಾರ (ಜನವರಿ 9) ಎಂದಿನಂತೆ ಎಮ್ಮೆ ಮೇಯಿಸಲು ತಮ್ಮ ತೋಟಕ್ಕೆ ತೆರಳಿದಾಗ ಸಮೀಪದಲ್ಲಿ ಇರುವ ಅದಲಗೆರೆ ಕೆರೆಗೆ ಎಮ್ಮೆಗೆ ನೀರು ಕುಡಿಸಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಎಮ್ಮೆ ಮತ್ತು ಕರುಗಳು ಆಳಕ್ಕೆ ಇಳಿದಿವೆ. ಅವುಗಳನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರುಪಾಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶುಕ್ರವಾರ (ಜನವರಿ 10) ಬೆಳಗ್ಗೆ ತಮ್ಮ ತೋಟಕ್ಕೆ ತೆರಳಿದ ಗ್ರಾಮಸ್ಥರು, ಕೆರೆಯಲ್ಲಿ ಮೃತದೇಹಗಳು ನೀರಿನಲ್ಲಿ ತೇರುತ್ತಿರುವ ದೃಶ್ಯ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು

ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದಾಗಿ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ಅಪರ ಜಿಲ್ಲಾ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚೇಳೊರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಳನೇ ತರಗತಿಯ ಬಾಲಕನ ಮೃತದೇಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತುಮಕೂರು ನಗರದ ವಿಜಯನಗರದ 2 ಮುಖ್ಯ ರಸ್ತೆಯಲ್ಲಿ ನಡೆದಿದೆ. 13 ವರ್ಷ ವಯಸ್ಸಿನ ತ್ರಿಶಾಲ್ ಮೃತ ಬಾಲಕ. ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಪುತ್ರ ತ್ರಿಶಾಲ್, ಸರ್ವೋದಯ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಲ್ಲಿ ತಾಯಿ ಇಲ್ಲದ ಸಮಯದಲ್ಲಿ ಡೇತ್ ನೋಟ್ ಬರೆದಿಟ್ಟು ಈ ಕೃತ್ಯವೆಸಗಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಈಶ್ವರ್‌‌, ತುಮಕೂರು.

Whats_app_banner