ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಪತ್ನಿ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿದ ಪಾಪಿ ಪತಿ; ತುಮಕೂರಿನಲ್ಲಿ ಭೀಕರ ಹತ್ಯೆ

Tumkur News: ಪತ್ನಿ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿದ ಪಾಪಿ ಪತಿ; ತುಮಕೂರಿನಲ್ಲಿ ಭೀಕರ ಹತ್ಯೆ

ಕುಟುಂಬದ ಜಗಳದಲ್ಲಿ ಪಾಪಿ ಪತಿಯೊರ್ವ ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿರುವ ಭೀಕರ ಕೃತ್ಯ ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿ ನಡೆದಿದೆೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತಿಯಿಂದಲೇ ಪತ್ನಿ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿರುವ ಭೀಕರ ಕೃತ್ಯ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ನಡೆದಿದೆ.
ಪತಿಯಿಂದಲೇ ಪತ್ನಿ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿರುವ ಭೀಕರ ಕೃತ್ಯ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ನಡೆದಿದೆ.

ತುಮಕೂರು: ಜಿಲ್ಲೆಯ ಕುಣಿಗಲ್ (Kunigal News) ತಾಲೂಕಿನಲ್ಲಿ ಹಿಂದೆಂದೂ ಕಂಡಿರಿದಂತಹ ಭೀಕರ ಹತ್ಯೆಯಾಗಿದೆ. ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡವನ್ನು ಬೇರ್ಪಡಿಸಿರುವ ಘಟನೆ ಮಂಗಳವಾರ (ಮೇ 28) ನಡೆದಿದೆ. ಧಾರುಣವಾಗಿ ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೃತ ಮಹಿಳೆ ಈಕೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿಯ ಶಿವರಾಮ್ (45) ಎಂಬಾತನೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಇವರಿಗೆ ಎಂಟು ವರ್ಷದ ಮಗನಿದ್ದಾನೆ. ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದರೆ, ಪತಿ ಶಿವರಾಮ್ ಸ್ಥಳೀಯ ಸಾಮಿಲ್‌ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ.

ಒಂದಲ್ಲಾ ಒಂದು ವಿಚಾರಕ್ಕೆ ದಿನಾಲೂ ಪತಿ, ಪತ್ನಿ ನಡುವೆ ಜಗಳ ನಡೆಯುತ್ತಿತ್ತು, ಸೋಮವಾರ ರಾತ್ರಿ ಸಹ ಜಗಳ ನಡೆದಿತ್ತು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಪತಿಯೆ ಸಾಮಿಲ್ ಮಾಲೀಕರಿಗೆ ತಾನು ನಡೆಸಿದ ಕೃತ್ಯದ ಮಾಹಿತಿ ನೀಡಿದ್ದಾನೆ. ಈ ವಿಚಾರವನ್ನು ಮಾಲೀಕ ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದೃಶ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಪಾಪಿ ಪತಿ ಶಿವರಾಮ್ ತನ್ನ ಪತ್ನಿಯ ತಲೆ ಕತ್ತರಿಸಿ, ದೇಹವನ್ನು ತುಂಡು ತುಂಡು ಮಾಡಿ ಭೀಕರವಾಗಿ ಹತ್ಯೆ ಮಾಡಿರುವುದು ಕಂಡು ಬಂದಿದೆ.

ಸಿಪಿಐ ಎಂ.ನಾಯಕ್, ಡಿವೈಎಸ್‌ಪಿ ಓಂಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದಾಗ ಮಗ ನಿದ್ದೆಗೆ ಜಾರಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪುಷ್ಪಳ ಸಂಬಂಧಿ ಶಿವಶಂಕರ್ ನೀಡಿದ ದೂರಿನ ಮೇರೆಗೆ ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಭೀಕರ ಕೃತ್ಯ ಹುಲಿಯೂರು ದುರ್ಗ ಜನತೆಯನ್ನೆ ಬೆಚ್ಚಿ ಬೀಳಿಸಿದೆ, ಕೌಟುಂಬಿಕ ಕಲಹವೆ ಘಟನೆ ಕಾರಣ ಎಂದು ಹೇಳಲಾಗುತ್ತಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024