Tumkur News: ಸಿದ್ದಗಂಗಾ ಮಠದಲ್ಲಿ 13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಸಿದ್ದಗಂಗಾ ಮಠದಲ್ಲಿ 13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ

Tumkur News: ಸಿದ್ದಗಂಗಾ ಮಠದಲ್ಲಿ 13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಕಾರ್ಯಕ್ರಮದಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.

ತುಮಕೂರು ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಪೈ ಫೌಂಡೇಶನ್ ವತಿಯಿಂದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ತುಮಕೂರು ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಪೈ ಫೌಂಡೇಶನ್ ವತಿಯಿಂದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ತುಮಕೂರು: ತ್ರಿವಿಧ ದಾಸೋಹ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಪೈ ಫೌಂಡೇಷನ್ ವತಿಯಿಂದ 18ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು. ಶ್ರೀಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮತ್ತು ಫೈ ಫೌಂಡೇಷನ್ ಫೌಂಡರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ರಾಜಕುಮಾರ ಪೈ ಅವರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು.

ನೋಟ್ ಬುಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪೈ ಫೌಂಡೇಷನ್ ಮಾಡಿರುವ ದಾನವನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಮಕ್ಕಳು ಸಾಧಕರಾಗಿ ಹೊರಹೊಮ್ಮಿದಾಗ ಆ ದಾನ ಸಾರ್ಥಕತೆ ಪಡೆದುಕೊಳ್ಳುತ್ತದೆ, ಹಾಗಾಗಿ ನೋಟ್ ಬುಕ್‌ಗಳನ್ನು ಪಡೆದ ಮಕ್ಕಳು ತಮ್ಮ ಭವಿಷ್ಯ ಉತ್ತಮವಾಗಿಸಿ ಕೊಳ್ಳಬೇಕು, ಸಾಧಕರಾಗಿ ಹೊರ ಹೊಮ್ಮಬೇಕು ಎಂದು ಕರೆ ನೀಡಿದರು.

ಮಹಾಭಾರತದಲ್ಲಿ ಕೃಷ್ಣ ಮಾರುವೇಷದಲ್ಲಿ ಬಂದು ಕರ್ಣನಿಗೆ ತೈಲದ ತಂಬಿಗೆ ಕೊಡುವಂತೆ ದಾನ ಕೇಳುತ್ತಾನೆ. ಕರ್ಣ ಎಡಗೈನಲ್ಲೇ ದಾನ ಕೊಡುತ್ತಾನೆ. ಅದಕ್ಕೆ ಕೃಷ್ಣ ಎಡಗೈಯಲ್ಲಿ ದಾನ ಕೊಟ್ಟೆ, ನಿನ್ನ ದಾನ ಶ್ರೇಷ್ಠ ಆಗಲಿಲ್ಲ ಎನ್ನುತ್ತಾನೆ. ಅದಕ್ಕೆ ಕರ್ಣ ಹೇಳುತ್ತಾನೆ ಇಲ್ಲ ಸ್ವಾಮಿ ನಾನು ಕೊಡುವ ದಾನವನ್ನು ಎಡಗೈಯಿಂದ ಬಲಗೈಗೆ ತೆಗೆದು ಕೊಳ್ಳುವಷ್ಟರಲ್ಲಿ ಮನಸ್ಸು ಬದಲಾದರೆ ದಾನ ಕೊಡುವುದನ್ನ ಮರೆತು ಬಿಟ್ಟೇನು ಎನ್ನುವ ಕಾರಣಕ್ಕೆ ಎಡಗೈನಲ್ಲೇ ದಾನ ಕೊಟ್ಟೆ. ಎಡಗೈನಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಅಂತ ಹೇಳುತ್ತಾನೆ ಕರ್ಣ. ಇದು ದಾನದ ಮಹತ್ವ ಎಂದು ವಿವರಿಸಿದರು.

ನಾವು ದಾನ ಕೊಟ್ಟರೆ ಅದು ಎಷ್ಟು ಸದುಪಯೋಗ ಆಗಬೇಕು ಅಂತಾ ದರಾ ಬೇಂದ್ರೆ ಅವರು ಸಹ ದಾನದ ಮಹತ್ವವನ್ನು ಹೇಳುತ್ತಾರೆ, ಹಾಗಾಗಿ ದಾನ ಪಡೆದವರೂ ಸಹ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೈ ಫೌಂಡೇಷನ್ ಕೊಟ್ಟ ನೋಟ್ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಸಾಧಕರಾಗಬೇಕು. ಆಗ ದಾನ ಕೊಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಫೈ ಫೌಂಡೇಷನ್ ಸ್ಥಾಪಕ ಎಸ್.ರಾಜಕುಮಾರ ಪೈ ಮಾತನಾಡಿ, ನಾವು ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ 124 ವರ್ಷದಿಂದ ಕರ್ನಾಟಕ, ತೆಲಾಂಗಣ, ಆಂಧ್ರಪ್ರದೇಶದಲ್ಲಿ ಸೇವೆ ನೀಡುತ್ತಿದ್ದೇವೆ. ಫೌಂಡೇಷನ್‌ನಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ನೋಟ್‌ಬುಕ್ ವಿತರಣೆ ಮಾಡುತ್ತಾ ಬಂದಿದ್ದೇವೆ. ಈ ವರ್ಷವೂ ಸಹ 36 ಸಾವಿರ ಮಕ್ಕಳಿಗೆ ಪುಸ್ತಕ ಕೊಡುತ್ತಿದ್ದೇವೆ. ಸುಮಾರು 2 ಲಕ್ಷ ನೋಟ್ ಬುಕ್ ವಿತರಿಸುತ್ತಿದ್ದೇವೆ. ಸಿದ್ಧಗಂಗಾ ಮಠದಲ್ಲಿ 18 ವರ್ಷಗಳಿಂದಲೂ ಪುಸ್ತಕ ವಿತರಣೆ ನಡೆಯುತ್ತಿದೆ. ಜೊತೆಗೆ ಇನ್‌ಸ್ಟಿಟ್ಯೂಟ್‌ನ ಸುಮಾರು 200 ಮಕ್ಕಳಿಗೆ ಶುಲ್ಕ ಕೊಡುತ್ತಿದ್ದೇವೆ ಎಂದರು.

Whats_app_banner