ಕನ್ನಡ ಸುದ್ದಿ  /  Karnataka  /  Tumkuru News Acid Burst In The Bus Many Are Injuried In Tumkuru Kunigal Route Ganesh Bus Women Arrested Esp

ಬಸ್‌ನಲ್ಲಿ ಆಸಿಡ್ ಸಿಡಿದು ಹಲವರಿಗೆ ಗಾಯ, ಆಸಿಡ್ ಸಾಗಿಸುತ್ತಿದ್ದ ಮಹಿಳೆ ಪೊಲೀಸರ ವಶಕ್ಕೆ; ತುಮಕೂರಿನ ಗೂಳೂರು ಬಳಿ ಘಟನೆ

ಬಸ್‌ನಲ್ಲಿ ಅಕ್ರಮವಾಗಿ ಆಸಿಡ್‌ ಸಾಗುತ್ತಿದ್ದಾಗ, ಆಸಿಡ್‌ ಸಿಡಿದು ಹಲವರಿಗೆ ಗಾಯವಾದ ಘಟನೆ ತುಮಕೂರಿನ ಗೂಳೂರು ಬಳಿ ನಡೆದಿದೆ. ತುಮಕೂರು-ಕುಣಿಗಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಗಣೇಶ್‌ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆಸಿಡ್‌ ಸಾಗಿಸುತ್ತಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಸ್‌ನಲ್ಲಿ ಆಸಿಡ್‌ ಸಿಡಿದು ಹಲವರಿಗೆ ಗಾಯ, ತುಮಕೂರಿನ ಗೂಳೂರು ಬಳಿ ಘಟನೆ
ಬಸ್‌ನಲ್ಲಿ ಆಸಿಡ್‌ ಸಿಡಿದು ಹಲವರಿಗೆ ಗಾಯ, ತುಮಕೂರಿನ ಗೂಳೂರು ಬಳಿ ಘಟನೆ

ತುಮಕೂರು: ತುಮಕೂರು-ಕುಣಿಗಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಗಣೇಶ್‌ ಬಸ್‌ನಲ್ಲಿ ಆಸಿಡ್‌ ಸಿಡಿದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಕುಣಿಗಲ್‌ನಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಅಕ್ರಮವಾಗಿ ಆಸಿಡ್ ಸಾಗಿಸಲಾಗುತ್ತಿತ್ತು. ಅದು ಸಿಡಿದು ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ತುಮಕೂರು ತಾಲ್ಲೂಕು ಗೂಳೂರು ಬಳಿ ಈ ಘಟನೆ ನಡೆದಿದೆ. ಟಾಯ್ಲೆಟ್‌ಗೆ ಉಪಯೋಗಿಸುವ ಆಸಿಡ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಏಕಾಏಕಿ ಸಿಡಿದಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಗೊಂಡ ಪ್ರಯಾಣಿಕರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರು ನಾಜಿಯಾ ಸುಲ್ತಾನ್ (30), ರಾಜಲಕ್ಷ್ಮಿ (45) ಎಂದು ತಿಳಿದು ಬಂದಿದೆ.

ಆಸಿಡ್ ಸಾಧಿಸುತ್ತಿದ್ದ ಶಕೀಲಾ ಬಾನು ಎಂಬ ಮಹಿಳೆಯ ಕೈಗೂ ಆಸಿಡ್ ಸಿಡಿದು ಸಣ್ಣ ಗಾಯ ಆಗಿದ್ದು ಇನ್ನು ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಡ್ ಕೊಂಡೊಯ್ಯುತ್ತಿದ್ದ ಮಹಿಳೆಯನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

IPL_Entry_Point