ಕನ್ನಡ ಸುದ್ದಿ  /  Karnataka  /  Uas Bangalore Recruitment 2023 University Of Agricultural Sciences Job Vacancies Uasbangalore.edu.in

UAS Bangalore Recruitment: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ, 7ನೇ ತರಗತಿಯಿಂದ ಪದವಿ ಓದಿರೋರಿಗೆ ಅವಕಾಶ, ಇಲ್ಲಿದೆ ವಿವರ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಎಸ್‌) ಇರುವ ವಿವಿಧ ಹುದ್ದೆಗಳನ್ನು ನೇರ ನೇಮಕದ ಮೂಲಕ ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

UAS Bangalore Recruitment: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ, 7ನೇ ತರಗತಿಯಿಂದ ಪದವಿ ಓದಿರೋರಿಗೆ ಅವಕಾಶ, ಇಲ್ಲಿದೆ ವಿವರ
UAS Bangalore Recruitment: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ, 7ನೇ ತರಗತಿಯಿಂದ ಪದವಿ ಓದಿರೋರಿಗೆ ಅವಕಾಶ, ಇಲ್ಲಿದೆ ವಿವರ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಎಸ್‌) ಇರುವ ವಿವಿಧ ಹುದ್ದೆಗಳನ್ನು ನೇರ ನೇಮಕದ ಮೂಲಕ ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ಲಭ್ಯವಿರುವ ಹುದ್ದೆಗಳು, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ವಿವರ ನೀಡಲಾಗಿದೆ. ಒಟ್ಟು 28 ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಪ್ರೋಗ್ರಾಂ ಅಸಿಸ್ಟೆಂಟ್‌ (ಕಂಪ್ಯೂಟರ್‌): ಒಟ್ಟು ಎರಡು ಹುದ್ದೆಗಳಿವೆ. ಇವುಗಳಲ್ಲಿ ಒಂದು ಹುದ್ದೆಯನ್ನು ಸಾಮಾನ್ಯ ಅಭ್ಯರ್ಥಿಗಳಿಗೆ, ಇನ್ನೊಂದು ಹುದ್ದೆಯನ್ನು ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಇನ್ನುಳಿದಂತೆಎ ಸ್ಟೆನೊಗ್ರಾಫರ್‌-7, ಅಸಿಸ್ಟೆಂಟ್‌-4, ಟ್ರಾಕ್ಟರ್‌ ಡ್ರೈವರ್‌-1, ಡ್ರೈವರ್‌ (ಹಗುರ ವಾಹನ)-5, ಅಸಿಸ್ಟೆಂಟ್‌ ಕುಕ್‌ ಕಂ ಕೇರ್‌ ಟೇಕರ್‌-3, ಮೆಸೆಂಜರ್‌- 6 ಸೇರಿದಂತೆ ಒಟ್ಟು 26 ಹುದ್ದೆಗಳಿವೆ.

ಏನು ಓದಿರಬೇಕು?

  • ಪ್ರೋಗ್ರಾಂ ಅಸಿಸ್ಟೆಂಟ್‌ ಹುದ್ದೆಗೆ ಬಿಎಸ್ಸಿ (ಕಂಪ್ಯೂಟರ್‌ ಸೈನ್ಸ್‌)/ ಬ್ಯಾಚುಲರ್‌ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ಅಥವಾ ಒಂದು ವರ್ಷದ ಕಂಪ್ಯೂಟರ್‌ ಅಪ್ಲಿಕೇಷನ್‌ ಡಿಪ್ಲೊಮಾ ಕೋರ್ಸ್‌ನೊಂದಿಗೆ ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಸೇವಾ ಸಿಬ್ಬಂದಿ ಹುದ್ದೆಗಳಲ್ಲಿ ಸ್ಟೆನೊಗ್ರಾಫರ್‌ ಹುದ್ದೆಗೆ ಪದವಿ ವಿದ್ಯಾರ್ಹತೆ ಬಯಸಲಾಗಿದೆ. ಸೀನಿಯರ್‌ ಟೈಪ್‌ ರೈಟಿಂಗ್‌ (ಇಂಗ್ಲಿಷ್‌ ಮತ್ತು ಕನ್ನಡ) ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ನಲ್ಲಿ ಶಾರ್ಟ್‌ ಹ್ಯಾಂಡ್‌ ಎಗ್ಸಾಂ ಪಾಸ್‌ ಆಗಿರಬೇಕು. ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಮಾತನಾಡಲು ತಿಳಿದಿರಬೇಕು.
  • ಅಸಿಸ್ಟೆಂಟ್‌ ಹುದ್ದೆಗೆ ಪದವಿ ವಿದ್ಯಾರ್ಹತೆ ಬಯಸಲಾಗಿದೆ. ಇತ್ತೀಚಿನ ಎರಡು ವರ್ಷಗಳಲ್ಲಿ ಅಕೌಂಟ್ಸ್‌ ಹೈಯರ್‌ ಎಗ್ಸಾಮಿನೇಷನ್‌ ಉತ್ತೀರ್ಣರಾಗಿರಬೇಕು.
  • ಟ್ರ್ಯಾಕ್ಟರ್‌ ಚಾಲಕ ವೃತ್ತಿಗೆ ಏಳನೇ ತರಗತಿ ಉತ್ತೀರ್ಣರಾಗಿರಬೇಕು. ಟ್ರ್ಯಾಕ್ಟರ್‌ ಡ್ರೈವಿಂಗ್‌ ಲೈಸನ್ಸ್‌ ಹೊಂದಿರಬೇಕು. ಕನಿಷ್ಠ ಎರಡು ವರ್ಷ ಚಾಲನಾ ಅನುಭವ ಹೊಂದಿರಬೇಕು.
  • ಡ್ರೈವರ್‌ (ಎಲ್‌ವಿ) ಹುದ್ದೆಗೆ ಏಳನೇ ತರಗತಿ ಓದಿರಬೇಕು. ಹಗುರ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು. ಕನಿಷ್ಠ ಎರಡು ವರ್ಷ ಕೆಲಸದ ಅನುಭವ ಹೊಂದಿರಬೇಕು.
  • ಅಸಿಸ್ಟೆಂಟ್‌ ಕುಕ್‌ ಕಂ ಕೇರ್‌ ಟೇಕರ್‌ ಹುದ್ದೆಗೆ ಅಕ್ಷರಸ್ಥರಾಗಿರಬೇಕು, ಹಾಸ್ಟೆಲ್‌ ಅಥವಾ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಐದು ವರ್ಷ ಅಡುಗೆ ಮಾಡಿದ ಅನುಭ್ವ ಇರಬೇಕು.
  • ಮೆಸೆಂಜರ್‌ ಹುದ್ದೆಗೆ ಏಳನೇ ತರಗತಿ ಓದಿರಬೇಕು. ಸೈಕ್ಲಿಂಗ್‌ ತಿಳಿದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅಂಚೆ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 24,2023 ಕೊನೆಯ ದಿನಾಂಕವಾಗಿದೆ. ಅರ್ಜಿ ಕವರ್‌ ಮೇಲೆ ಯಾವ ಹುದ್ದೆಗೆ ಅರ್ಜಿ (application for the post of ..... ) ಎಂದು ಬರೆದಿರಬೇಕು. ವಿಳಾಸ: The Administrative Officer, University of Agricultural Sciences, GKVK Bengaluru- 560065. ಇದರೊಂದಿಗೆ ನಿಗದಿತ ಅರ್ಜಿ ಶುಲ್ಕವನ್ನು favour of the comptroller, UAS Bengaluruಗೆ ಡಿಡಿ ಮಾಡಬೇಕು.

ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದೆ.

IPL_Entry_Point