Udupi Crime: ಉಡುಪಿ ನಾಲ್ವರ ಹತ್ಯೆ ಮಾಡಿದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ, ಬೆಳಗಾವಿ ಕುಡುಚಿಯಲ್ಲಿ ಸೆರೆ ಸಿಕ್ಕ ಹಂತಕ
ಕನ್ನಡ ಸುದ್ದಿ  /  ಕರ್ನಾಟಕ  /  Udupi Crime: ಉಡುಪಿ ನಾಲ್ವರ ಹತ್ಯೆ ಮಾಡಿದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ, ಬೆಳಗಾವಿ ಕುಡುಚಿಯಲ್ಲಿ ಸೆರೆ ಸಿಕ್ಕ ಹಂತಕ

Udupi Crime: ಉಡುಪಿ ನಾಲ್ವರ ಹತ್ಯೆ ಮಾಡಿದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ, ಬೆಳಗಾವಿ ಕುಡುಚಿಯಲ್ಲಿ ಸೆರೆ ಸಿಕ್ಕ ಹಂತಕ

ಉಡುಪಿಯ ನೇಜಾರುವಿನ ತೃಪ್ತಿ ನಗರದಲ್ಲಿ ಭಾನುವಾರ (ನ.12) ನಡೆದ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ್ದಾರೆ.

ಉಡುಪಿಯ ನೇಜಾರಿನಲ್ಲಿ ಕೊಲೆಯಾದ ಒಂದೇ ಕುಟುಂಬ ನಾಲ್ವರು ಮತ್ತು ಕೊಲೆ ಆರೋಪಿ ಪ್ರವೀಣ್‌ ಅರುಣ್ ಚೌಗಲೆ (ಕೆಂಪು ವೃತ್ತದೊಳಗಿನ ಚಿತ್ರದಲ್ಲಿರುವಾತ)
ಉಡುಪಿಯ ನೇಜಾರಿನಲ್ಲಿ ಕೊಲೆಯಾದ ಒಂದೇ ಕುಟುಂಬ ನಾಲ್ವರು ಮತ್ತು ಕೊಲೆ ಆರೋಪಿ ಪ್ರವೀಣ್‌ ಅರುಣ್ ಚೌಗಲೆ (ಕೆಂಪು ವೃತ್ತದೊಳಗಿನ ಚಿತ್ರದಲ್ಲಿರುವಾತ)

ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಕುಡುಚಿಯಲ್ಲಿ ಉಡುಪಿ ಪೊಲೀಸರು ಪ್ರವೀಣ್​​​​ ಅರುಣ್​​​ ಚೌಗಲೆ ಎಂಬಾತನನ್ನು ಬಂಧಿಸಿದ್ದಾರೆ. ಈತ ಮಂಗಳೂರು ಏರ್‌​ಪೋರ್ಟ್​ ಸೆಕ್ಯೂರಿಟಿಯಲ್ಲಿಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್‌ ಪಿಎಫ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎನ್ನಲಾಗಿದೆ.

ಕುಡಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ನವೆಂಬರ್​ 12ರಂದು ನೇಜಾರಿನ ತೃಪ್ತಿ ಲೇಔಟ್‌ ನಲ್ಲಿರುವ ಮನೆಗೆ ಬಂದು ತಾಯಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ.

ಯುವತಿ ಅಯ್ನಾಜ್‌ ಕೆಲಸ ಮಾಡುತ್ತಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲೂ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಅವರಿಗೆ ದೊರೆತ ಮಾಹಿತಿಯಂತೆ. ಪ್ರವೀಣ್‌ ಚೌಗಲೆ ನಾಪತ್ತೆಯಾಗಿರುವುದು ಕಂಡುಬಂದಿತ್ತು.

ಪೊಲೀಸರಿಗೆ ತಲೆನೋವಾಗಿದ್ದ ಆರೋಪಿ ಹಂತಕ

ಉಡುಪಿಯ ನೇಜಾರಿನಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಹಂತಕ ಪೊಲೀಸರಿಗೆ ಭಾರಿ ತಲೆನೋವಾಗಿದ್ದ. ಭಾನುವಾರ ಈ ಹತ್ಯೆ ನಡೆದಿದ್ದು, ಅದಾದ ಬಳಿಕ ಆತ ತಲೆಮರೆಸಿಕೊಂಡಿದ್ದ. ಪೊಲೀಸರು ಬೆನ್ನು ಬಿದ್ದಿರುವುದನ್ನು ಅರಿತ ಆರೋಪಿ ವಾಹನ ಬದಲಾಯಿಸಿಕೊಂಡು ಪ್ರಯಾಣ ಬೆಳೆಸಿದ್ದ.

ಪೊಲೀಸರು ಆರೋಪಿ ಹಂತಕನ ಚಾಣಕ್ಷತೆ ಕಂಡು, ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಆತನ ಪತ್ತೆಗೆ ಬಲೆ ಬೀಸಿದ್ದರು. ಉಡುಪಿ ಜಿಲ್ಲಾ ಪೊಲೀಸ್ ಐದು ತಂಡಗಳನ್ನು ರಚನೆ ಮಾಡಿ ಶೋಧ ನಡೆಸಿತ್ತು. ಈ ದಾಳಿಯಲ್ಲಿ ಚಾಕು ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಾಜಿರಾ ಎನ್ನುವ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ.

Whats_app_banner