Krishna Janmashtami 2024: ಕೃಷ್ಣನ ನಾಡಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಡಗರ, ಉಡುಪಿ ಶ್ರೀಕೃಷ್ಣಮಠದಲ್ಲಿ ವಿವಿಧ ಸ್ಪರ್ಧೆಗಳು-udupi news udupi krishna mutt organizing many competitions on the eve of krishna janmashtami 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Krishna Janmashtami 2024: ಕೃಷ್ಣನ ನಾಡಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಡಗರ, ಉಡುಪಿ ಶ್ರೀಕೃಷ್ಣಮಠದಲ್ಲಿ ವಿವಿಧ ಸ್ಪರ್ಧೆಗಳು

Krishna Janmashtami 2024: ಕೃಷ್ಣನ ನಾಡಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಡಗರ, ಉಡುಪಿ ಶ್ರೀಕೃಷ್ಣಮಠದಲ್ಲಿ ವಿವಿಧ ಸ್ಪರ್ಧೆಗಳು

ಉಡುಪಿಯ ಕೃಷ್ಣಮಠವು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಇದರ ವಿವರ ಇಲ್ಲಿದೆ.(ವರದಿ: ಹರೀಶ ಮಾಂಬಾಡಿ, ಮಂಗಳೂರು)

ಉಡುಪಿ ಕೃಷ್ಣಮಠದಲ್ಲಿ ಕೃಷ್ಣಜನ್ಮಾಷ್ಠಮಿಗೆ ನಾನಾ ಸ್ಪರ್ಧೆಗಳು ಶುರುವಾಗಿವೆ.
ಉಡುಪಿ ಕೃಷ್ಣಮಠದಲ್ಲಿ ಕೃಷ್ಣಜನ್ಮಾಷ್ಠಮಿಗೆ ನಾನಾ ಸ್ಪರ್ಧೆಗಳು ಶುರುವಾಗಿವೆ.

ಉಡುಪಿ: ಪೊಡವಿಗೊಡೆಯನ ನಾಡು ಉಡುಪಿ ಶ್ರೀಕೃಷ್ಣನ ಬೀಡು. ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಎಂದರೆ ವಿಶೇಷ ಸಂಭ್ರಮ. ಉಡುಪಿ ಅಷ್ಟಮಠಗಳಲ್ಲಿ ಈ ಬಾರಿ ಪರ್ಯಾಯ ಪೀಠವನ್ನೇರಿರುವ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ಬಾರಿ ಅಷ್ಟಮಿಗೆ ವಿಶೇಷ ರಂಗು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವರಗಳು ಹೀಗಿವೆ. ಸ್ಪರ್ಧೆಗಳಲ್ಲಿ ಭಾಗವಹಿಸದೇ ಇದ್ದವರು ವೀಕ್ಷಿಸಿಯೂ ಆನಂದಪಡಬಹುದು.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಗಸ್ಟ್ 5ರಿಂದ ಕುಣಿತ ಭಜನೆ ಸ್ಪರ್ಧೆಗಳು ಆರಂಭಗೊಂಡಿದ್ದು, 9ರವರೆಗೆ ನಡೆಯಲಿವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1, ಮಧ್ಯಾಹ್ನ 2ರಿಂದ 4.30ವರೆಗೆ ಸ್ಪರ್ಧೆಗಳು ದಿನಕ್ಕೆ 4 ತಂಡದಂತೆ 5 ದಿನಗಳಲ್ಲಿ ಆಯ್ದ 20 ತಂಡಗಳ ಸ್ಪರ್ಧೆ ಆಯೋಜನೆಗೊಂಡಿದೆ.

ಗೀತಾಮಂದಿರದಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಆಯೋಜನೆಗೊಂಡಿದೆ. ಇದು ಆಗಸ್ಟ್ 10ರಂದು ನಡೆಯಲಿದೆ. ಮಧ್ಯಾಹ್ನ 2.30ರಿಂದ ಸಂಜೆ 5ವರೆಗೆ ನಡೆಯುವ ಸ್ಪರ್ಧೆಯಲ್ಲಿ ನಿರರ್ಗಳತೆ, ಶುದ್ಧತೆ, ಸಾಂಪ್ರದಾಯಿಕ ಶೈಲಿಗೆ ಪ್ರಾಶಸ್ತ್ಯ. 1ರಿಂದ 3ನೇ ತರಗತಿವರೆಗೆ 15ನೇ ಅಧ್ಯಾಯದ 5 ಶ್ಲೋಕ, 4ರಿಂದ 7ನೇ ತರಗತಿವರೆಗೆ 15ನೇ ಅಧ್ಯಾಯದ 15 ಶ್ಲೋಕ, 8ರಿಂದ 10ನೇ ತರಗತಿಯವರೆಗೆ 15ನೇ ಅಧ್ಯಾಯದ ಸಂಪೂರ್ಣ ಶ್ಲೋಕಗಳನ್ನು ಕಂಠಪಾಠ ಹೇಳಬೇಕು.

ಚಿತ್ರಕಲಾ ಸ್ಪರ್ಧೆಗಳು ಮಧ್ವಾಂಗಣದಲ್ಲಿ ಆಗಸ್ಟ್ 11ರಂದು ಬೆಳಗ್ಗೆ 10ರಿಂದ 12ರವರೆಗೆ ನಡೆಯಲಿದೆ. 3ರಿಂದ 5ನೇ ತರಗತಿ, 6ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಹಾಗೂ ಸಾರ್ವಜನಿಕರಿಗೆ ಸ್ಪರ್ಧೆ ಇದ್ದು, ಉಡುಪಿ ಶ್ರೀಕೃಷ್ಣ, ಗೀತೋಪದೇಶ, ಶ್ರೀಕೃಷ್ಣ ತುಲಾಭಾರ, ಗೋವರ್ಧನಧಾರಿ, ಕಾಳೀಯಮರ್ದನ, ಬಾಲಕೃಷ್ಣ ವಿಷಯಗಳು. ಡ್ರಯಿಂಗ್ ಪೇಪರ್ ನೀಡಲಾಗುವುದು. ಬಣ್ಣ, ಪರಿಕರಗಳನ್ನು ತಾವೇ ತರಬೇಕು. ಸಂಚಾಲಕರು. ಹರಿಪ್ರಸಾದ್ – 99805117075, ಅನಿತಾ ಕ್ರಮಧಾರಿ 9449449805.

ಗೀತಾ ಮಂದಿರದಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದವರಿಗೆ ಭಾನುವಾರ 11ರಂದು ಬೆಳಗ್ಗೆ 10ರಿಂದ 12ರವರೆಗೆ ಆಶುಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಸಂಚಾಲಕರು. ಷಣ್ಮುಖ ಹೆಬ್ಬಾರ ನಂಬರ್. 7892381775.

ಬತ್ತಿಮಾಡುವ ಸ್ಪರ್ಧೆ ಸಾರ್ವಜನಿಕರಿಗೆ ಇದ್ದು, ಆ.11ರಂದು ನಡೆಯಲಿದೆ. ಹತ್ತಿಯನ್ನು ನೀಡಲಾಗುವುದು. ಮಧ್ಯಾಹ್ನ 3ರಿಂದ 3.30ರವರೆಗೆ 30 ನಿಮಿಷಗಳ ಅವಧಿ. ಸುಮಿತ್ರಾ ಕೆರೆಮಠ 9035679905 ಸಂಪರ್ಕಿಸಬಹುದು.

ಷಣ್ಮುಖ ಹೆಬ್ಬಾರ್ (7892381775) ಸಂಚಾಲಕತ್ವದಲ್ಲಿ ರಸಪ್ರಶ್ನೆ ಸ್ಪರ್ಧೆ ಭಾನುವಾರ ಆ.11ರಂದು ಮಧ್ಯಾಹ್ನ 3.30ರಿಂದ 4.30ರವರೆಗೆ ಕನಕಮಂಟಪದಲ್ಲಿ ನಡೆಯಲಿದ್ದು, ಈ ಸಂದರ್ಭ ಲೇಖನ ಸ್ಪರ್ಧೆಯು ಇರಲಿದೆ. 50 ಪ್ರಶ್ನೆಗಳಿದ್ದು, 5ರಿಂದ 7, 8ರಿಂದ 10ನೇ ತರಗತಿವರೆಗೆ ಅವಕಾಶವಿರಲಿದೆ. ಹಾಗೆಯೇ ಪ್ರಬಂಧ ಸ್ಪರ್ಧೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಇರಲಿದ್ದು, ಸಂಜೆ 4ರಿಂದ 5ವರೆಗೆ ಗೀತಾ ಮಂದಿರದಲ್ಲಿ ನಡೆಯಲಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಉಡುಪಿ ಶ್ರೀಕೃಷ್ಣ ಚರಿತ್ರೆ ವಿಷಯವಾದರೆ, ಪ್ರೌಢಶಾಲಾ ಮಕ್ಕಳಿಗೆ ಗೋವರ್ಧನೋದ್ಧಾರಕ ಲೀಲೆ ವಿಷಯವಾಗಿದೆ. ಮುಖ್ಯೋಪಾಧ್ಯಾಯರಿಂದ ಗುರುತುಚೀಟಿ ತರಬೇಕಾಗುತ್ತದೆ.

ಸಾರ್ವಜನಿಕರಿಗೆ ಶಂಖ ಊದುವ ಸ್ಪರ್ಧೆ

ಮಧ್ವಮಂಟಪದಲ್ಲಿ ಆಗಸ್ಟ್ 17ರಂದು ಶನಿವಾರ, ಸಾರ್ವಜನಿಕರಿಗೆ ಶಂಖ ಊದುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 2ರಿಂದ 3ರವರೆಗೆ ಈ ಸ್ಪರ್ಧೆ ನಡೆಯಲಿದೆ.

ಭಕ್ತಿಸಂಗೀತ ಸ್ಪರ್ಧೆ ದಾಸಸಾಹಿತ್ಯದ ಕುರಿತು ಇರಲಿದ್ದು, ಆಗಸ್ಟ್ 18ರಂದು 1ರಿಂದ 4ನೇ ತರಗತಿ ಬೆಳಗ್ಗೆ 10ರಿಂದ 12 ಗೀತಾ ಮಂದಿರದಲ್ಲಿ, 5ರಿಂದ 7ನೇ ತರಗತಿ, ಬೆಳಗ್ಗೆ 10ರಿಂದ 12 ಗೀತಾ ಮಂದಿರದಲ್ಲಿ, 8ರಿಂದ 10ನೇ ತರಗತಿ ಮಧ್ಯಾಹ್ನ 2ರಿಂದ 5 ಮಧ್ವ ಮಂಟಪದಲ್ಲಿ ಹಾಗೂ ಡಿಗ್ರಿ ಮತ್ತು ವಯಸ್ಕರಿಗೆ ಮಧ್ಯಾಹ್ನ 2ರಿಂದ 5 ಮಧ್ವ ಮಂಟಪದಲ್ಲಿ ಸ್ಪರ್ಧೆ ನಡೆಯಲಿದೆ. ದಾಸರ ಪದಗಳನ್ನು ಮಾತ್ರ ಹಾಡಬೇಕಾಗಿದ್ದು ಶ್ರುತಿಪೆಟ್ಟಿಗೆ ಬಳಸಬಹುದು. ಉಷಾ ಹೆಬ್ಬಾರ್ (9886498069) ಮತ್ತು ಲಕ್ಷ್ಮೀನಾರಾಯಣ ಉಪಾಧ್ಯ (9845473461) ಸಂಪರ್ಕಿಸಬಹುದು.

ಶಾಲಾ ಭಜನಾ ಸ್ಪರ್ಧೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 18ರಂದು ಭಾನುವಾರ ಬೆಳಗ್ಗೆ 10ರಿಂದ 12.30ವರೆಗೆ ರಾಜಾಂಗಣದಲ್ಲಿ ನಡೆಯಲಿದೆ. 18ರ ಬೆಳಗ್ಗೆ 9.30ರಿಂದ ರಥಬೀದಿಯಲ್ಲಿ ಕ್ರೀಡೋತ್ಸವ ಸಾರ್ವಜನಿಕರಿಗೆ ನಡೆಯಲಿದೆ. ಮೊಸರು ಕಡೆಯುವ ಸ್ಪರ್ಧೆ ಸಾರ್ವಜನಿಕರಿಗೆ ಇದ್ದು, 24ರಂದು ಶನಿವಾರ ಬೆಳಗ್ಗೆ 10ರಿಂದ 10.30ರವರೆಗೆ ಗೀತಾ ಮಂದಿರದಲ್ಲಿ ನಡೆಯಲಿದೆ. ಶ್ರೀಕೃಷ್ಣ ಕಥಾ ಸ್ಪರ್ಧೆ ಪ್ರೌಢಶಾಲೆ ಮತ್ತು 20 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿದ್ದು, ಆಗಸ್ಟ್ 24ರಂದು ಮಧ್ಯಾಹ್ನ 2ರಿಂದ 4ರವರೆಗೆ ಗೀತಾ ಮಂದಿರದಲ್ಲಿ ನಡೆಯಲಿದೆ. ಹೂಕಟ್ಟುವ ಸ್ಪರ್ಧೆ ಅಂದು ಮಧ್ಯಾಹ್ನ 3.30ರಿಂದ 4.30ವರೆಗೆ ಕನಕಮಂಟಪದಲ್ಲಿದ್ದು, ಸಾರ್ವಜನಿಕರಿಗೆ ಅವಕಾಶವಿದೆ.

ರಂಗೋಲಿ ಹಾಕುವ ಸ್ಪರ್ಧೆ 25ರಂದು ಇದ್ದು ಬೆಳಗ್ಗೆ 10ರಿಂದ 12ರವರೆಗೆ ರಾಜಾಂಗಣದಲ್ಲಿ ಹಾಗೂ ಮಧ್ವಾಂಗಣದಲ್ಲಿ ನಡೆಯಲಿದೆ. 25ರಂದು ಬೆಳಗ್ಗೆ ರಾಜಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ಪರ್ಧೆ, ಮಧ್ಯಾಹ್ನ 2ರಿಂದ 4ವರೆಗೆ ಮಡಕೆಯಲ್ಲಿ ಬಣ್ಣದ ಚಿತ್ತಾರ ಬಿಡಿಸುವ ಸ್ಪರ್ಧೇ ಇರಲಿದೆ.

ಮುದ್ದುಕೃಷ್ಣ ಸ್ಪರ್ಧೆ, ಹುಲಿವೇಷ ಸ್ಪರ್ಧೆಗಳು

ಆಗಸ್ಟ್ 27ರ ಮಂಗಳವಾರ ಸಂಜೆ 4 ಗಂಟೆಯಿಂದ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ, ಜಾನಪದ ವೇಷ ಸ್ಪರ್ಧೆ ಹಾಗೂ ಪೌರಾಣಿಕ ಹಿನ್ನೆಲೆಯ ನೃತ್ಯ ಪ್ರದರ್ಶನ ಇರಲಿದೆ. ಆಗಸ್ಟ್ 26ರಂದು 0ರಿಂದ 1, 1ರಿಂದ 3, 3ರಿಂದ 5 ಹಾಗೂ 5ರಿಂದ 8 ವರ್ಷದ ಮಕ್ಕಳಿಗೆ ಗೀತಾ ಮಂದಿರ ಮತ್ತು ರಾಜಾಂಗಣದಲ್ಲಿ ಬೆಣ್ಣೆಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ ಮತ್ತು ಕಿಶೋರ ಕೃಷ್ಣ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗಳಗಿಎ ನೋಂದಾಯಿಸಲು ಹೆಚ್ಚಿನ ವಿವರಗಳಿಗಾಗಿ ರವೀಂದ್ರ ಆಚಾರ್ಯ (9449398418), ಸುಮಿತ್ರಾ ಕೆರೆಮಠ (9035679905), ರಾಜೇಶ್ ಭಟ್ (9844549824) ಮತ್ತು ಬಿ.ವಿ.ಆಚಾರ್ಯ (7829100081) ಸಂಪರ್ಕಿಸಬಹುದು.

(ವರದಿ: ಹರೀಶ ಮಾಂಬಾಡಿ, ಮಂಗಳೂರು)