Udupi News: ಉಡುಪಿ ಪಡುಬಿದ್ರಿ ಬೀಚ್‌ನಲ್ಲಿ ಯೂಟ್ಯೂಬ‌ರ್ ಬಿಂದಾಸ್‌ ಬಿಕಿನಿ ಫೋಟೋಶೂಟ್‌, ಪೊಲೀಸ್‌ ವಿರೋಧಕ್ಕೆ ಆಕ್ಷೇಪ-udupi news youtuber khyatishree photo shoot in padubidri beach of udupi police stop after loclets apposed hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Udupi News: ಉಡುಪಿ ಪಡುಬಿದ್ರಿ ಬೀಚ್‌ನಲ್ಲಿ ಯೂಟ್ಯೂಬ‌ರ್ ಬಿಂದಾಸ್‌ ಬಿಕಿನಿ ಫೋಟೋಶೂಟ್‌, ಪೊಲೀಸ್‌ ವಿರೋಧಕ್ಕೆ ಆಕ್ಷೇಪ

Udupi News: ಉಡುಪಿ ಪಡುಬಿದ್ರಿ ಬೀಚ್‌ನಲ್ಲಿ ಯೂಟ್ಯೂಬ‌ರ್ ಬಿಂದಾಸ್‌ ಬಿಕಿನಿ ಫೋಟೋಶೂಟ್‌, ಪೊಲೀಸ್‌ ವಿರೋಧಕ್ಕೆ ಆಕ್ಷೇಪ

Photo Shoot Issue ದೆಹಲಿ ಮೂಲದ ಖ್ಯಾತಿಶ್ರೀ ಎನ್ನುವ ಯುವತಿ ಬಿಕನಿಯಲ್ಲಿ ಉಡುಪಿ ಜಿಲ್ಲೆ ಪಡುಬಿದ್ರಿ ಬೀಚ್‌ ನಲ್ಲಿ ಶೂಟಿಂಗ್‌ ಮಾಡುತ್ತಿದ್ದುದು ವಿವಾದ ಹುಟ್ಟು ಹಾಕಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಖ್ಯಾತಿಶ್ರೀ ಎನ್ನುವವರು ಉಡುಪಿ ಪಡುಬಿದ್ರಿಯಲ್ಲಿ ನಡೆಸುತ್ತಿದ್ದ ಬಿಕನಿ ಶೂಟಿಂಗ್‌ಗೆ  ವಿರೋಧ ವ್ಯಕ್ತವಾಗಿದೆ.
ಖ್ಯಾತಿಶ್ರೀ ಎನ್ನುವವರು ಉಡುಪಿ ಪಡುಬಿದ್ರಿಯಲ್ಲಿ ನಡೆಸುತ್ತಿದ್ದ ಬಿಕನಿ ಶೂಟಿಂಗ್‌ಗೆ ವಿರೋಧ ವ್ಯಕ್ತವಾಗಿದೆ.

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂತಹ ಸುದ್ದಿಗಳೇ ಹೆಚ್ಚು. ಈ ಬಾರಿ ದೆಹಲಿ ಮೂಲದ ಯುವತಿಯೊಬ್ಬಳು ಬಿಕಿನಿ ಡ್ರೆಸ್‌ ಧರಿಸಿ ಬಿಂದಾಸ್‌ ಆಗಿ ಫೋಟೋ ಶೂಟ್‌ ಮಾಡಿಸಿಕೊಳ್ಳಲು ಮುಂದಾಗಿದ್ದು ವಿವಾದ ಸೃಷ್ಟಿಸಿದೆ. ಉಡುಪಿ ಸಮೀಪದ ಪಡುಬಿದ್ರಿ ಬೀಚ್ ನಲ್ಲಿ ದೆಹಲಿಯ ಯೂಟ್ಯೂಬರ್ ಖ್ಯಾತಿಶ್ರೀ ಎಂಬುವವರು( Khyatishree) ಬಿಕಿನಿ ಫೋಟೋ ಶೂಟ್ ನಡೆಸುತ್ತಿದ್ದುದಕ್ಕೆ ಸ್ಥಳೀಯರು ಆಕ್ಷೇಪಿಸಿದ ವಿಷಯ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಯುವತಿಯ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್ಪಿ ಹೇಳುವುದೇನು?

ಒಬ್ಬ ಯುವತಿ ಮತ್ತು ಯುವಕ ಪಡುಬಿದ್ರಿ ಬ್ಲೂಫಾಗ್ ಬೀಚ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದು, ಬೀಟ್ ಕರ್ತವ್ಯದಲ್ಲಿದ್ದ ಎಎಸ್‌ಐ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿರುವ ಯುವಕ ಮತ್ತು ಯುವತಿಯನ್ನು ಕರೆದು ಬ್ಲೂಫಾಗ್ ಬೀಚ್ ಮತ್ತು ವಸತಿ ಪ್ರದೇಶದ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಅಲ್ಲಿಂದ ಕಳುಹಿಸಲಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿದ್ದು, ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡಬಹುದಾಗಿ ಸೂಚಿಸಲಾಗಿದೆ. ಯುವತಿಯಿಂದ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಅರುಣ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ತನ್ನ ಪತಿಯೇ ಶೂಟ್ ಮಾಡ್ತಿದ್ರು- ಯೂಟ್ಯೂಬರ್

ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಲ್ಲಿ ಸಂಸ್ಕೃತಿಯ ಎಲ್ಲೆ ಮೀರದಿರಲಿ ಎಂದು ಸ್ಥಳೀಯ ಮೀನುಗಾರರು ಎಚ್ಚರಿಸಿದ್ದಾರೆ. ಯೂಟ್ಯೂಬರ್ ಖ್ಯಾತಿಶ್ರೀ ಎನ್ನುವಾಕೆ ಪೊಲೀಸರ ವಿರುದ್ಧವೇ ಆರೋಪ ಹೊರಿಸಿ ಚಾಲತಾಣದಲ್ಲಿ ಮಾಡಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ತನ್ನ ಪತಿಯ ಜತೆ ಬಂದು ಫೋಟೋ ಚಿತ್ರೀಕರಿಸುತ್ತಿದ್ದಾಗ ಪೊಲೀಸರೇ ಬಂದು ತಡೆದರು ಎಂದು ಆಕೆ ಆರೋಪಿಸಿದ್ದಾರೆ.

ಬಿಕಿನಿ ಫೋಟೋಶೂಟ್ ಪ್ರಕರಣಕ್ಕೆ ಸಂಬಂಧಿಸಿ ಯುವತಿ ತನ್ನ ಇನ್ನಾ ಗ್ರಾಂ ಖಾತೆಯಲ್ಲಿ(https://www.instagram.com/khyatishree2/?hl=en) ಸ್ಥಳೀಯರು ಹಾಗೂ ಪೊಲೀಸರ ವಿರುದ್ಧ ಆಸಮಾಧಾನ ಹೊರಹಾಕಿದ್ದಾಳೆ, ಕಡಲ ತೀರದಲ್ಲಿ ಪತಿಯೇ ನನ್ನ ಫೋಟೋ ತೆಗೆಯುತ್ತಿದ್ದಾಗ ಸ್ಥಳೀಯರು ಮತ್ತು ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾಳೆ, ಯುವತಿಯ ಪೋಸ್ಟ್‌ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು