ಕನ್ನಡ ಸುದ್ದಿ  /  Karnataka  /  Udupi Puc Student Commits Suicide After Being Scolded By Principal

Udupi News: 10 ಅಂಕ ಕಡಿಮೆ ಬಂತೆಂದು ಪ್ರಿನ್ಸಿಪಾಲ್​ ಬೈದಿದ್ದಕ್ಕೆ ಮನನೊಂದು ಉಡುಪಿಯ ವಿದ್ಯಾರ್ಥಿನಿ ಆತ್ಮಹತ್ಯೆ

ಸಣ್ಣಪುಟ್ಟ ವಿಷಯಗಳಿಗೆ ಮಕ್ಕಳು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ಉದಾಹರಣೆಯಾಗಿ ಉಡುಪಿಯಲ್ಲೊಂದು ಘಟನೆ ನಡೆದಿದೆ. 10 ಅಂಕ ಕಡಿಮೆ ಬಂತೆಂದು ಕಾಲೇಜು ಪ್ರಾಂಶುಪಾಲರು ಬೈದರೆಂದು ಮನನೊಂದು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಸಣ್ಣಪುಟ್ಟ ವಿಷಯಗಳಿಗೆ ಮಕ್ಕಳು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ಉದಾಹರಣೆಯಾಗಿ ಉಡುಪಿಯಲ್ಲೊಂದು ಘಟನೆ ನಡೆದಿದೆ. 10 ಅಂಕ ಕಡಿಮೆ ಬಂತೆಂದು ಕಾಲೇಜು ಪ್ರಾಂಶುಪಾಲರು ಬೈದರೆಂದು ಮನನೊಂದು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಳನ್ನು ಎಸ್ ಆರ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ದೀಪ್ತಿ (17) ಎಂದು ಗುರುತಿಸಲಾಗಿದೆ. ಪೆರ್ಡೂರಿನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉಚಿತ ಸೀಟ್ ಪಡೆದಿದ್ದ ದೀಪ್ತಿಗೆ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಬಂತು ಎಂದು ಪ್ರಾಂಶುಪಾಲರು ಬೈದಿದ್ದಾರೆ. ಅಲ್ಲದೇ ಫೈನ್​ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಎಲ್ಲಾ ವಿದ್ಯಾರ್ಥಿಗಳ ತನ್ನನ್ನು ಪ್ರಾಂಶುಪಾಲರು ನಿಂದಿಸಿದ್ದ ಬಗ್ಗೆ ದೀಪ್ತಿ ಮನೆಯಲ್ಲಿ ಹೇಳಿದ್ದಳಂತೆ. ಮಾನಸಿಕವಾಗಿ ನೊಂದು ನನ್ನ ಮಗಳು ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ದೀಪ್ತಿ ತಂದೆ ಸುರೇಶ್ ಮೆಂಡನ್ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆಯಷ್ಟೇ ಬೆಳಕಿಗೆ ಬಂದ ಪ್ರಕರಣವೊಂದರಲ್ಲಿ, ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಹೆತ್ತ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಔರಂಗಪುರ ಭಿಕ್ಕು ಗ್ರಾಮದಲ್ಲಿ ನಡೆದಿದೆ. ಅಂಕಿತ್ ಸಿಂಗ್ ಮತ್ತು ಶಿವಾನಿ ರಾಣಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಗಳು ಹುಟ್ಟಿದ ನಂತರ ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಮೊನ್ನೆ ಕೂಡ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಪತಿಯೊಂದಿಗೆ ತೀವ್ರ ವಾಗ್ವಾದದ ನಂತರ ಅಂಕಿತ್ ಮೇಲಿನ ಕೋಪಕ್ಕೆ ಶಿವಾನಿ ಮಗುವನ್ನು ಸಾಯಿಸಿದ್ದಾಳೆ.

ಮತ್ತೊಂದು ಪ್ರಕರಣದಲ್ಲಿ ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದು ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತನಿಖೆಯ ವೇಳೆ ನೆರೆಮನೆಯ ರಾಜೇಶ್ ರಜಾಕ್ (31) ಎಂಬಾತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಆತನ ಕೃತ್ಯಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ಕೊಲೆಯಾದ ಬಾಲಕಿಯ ತಂದೆ ಜೊತೆ ರಾಜೇಶ್​ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದರಂತೆ. ಇದನ್ನು ಎಷ್ಟೇ ತಡೆಯಲು ಪ್ರಯತ್ನಿಸಿದರೂ ರಾಜೇಶ್​ನಿಂದ ಸಾಧ್ಯವಾಗಲಿಲ್ಲ.ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ರಾಜೇಶ್, ಆತನ ಮಗಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಕೊಂದು ಶವವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ, ತನ್ನ ಮಾನಸಿಕ ಅಸ್ವಸ್ಥ ಮಗಳ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಕೇರಳದ ಪತ್ತನಂತಿಟ್ಟ ಪೋಕ್ಸೊ ನ್ಯಾಯಾಲಯವು 107 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 4 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಸ್ತರಣೆ ಆಗಲಿದೆ ಎಂದು ಕೋರ್ಟ್​ ಹೇಳಿದೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಸೂಚಿಸಿದೆ.

IPL_Entry_Point

ವಿಭಾಗ