ಕನ್ನಡ ಸುದ್ದಿ  /  Karnataka  /  Ugc Net K-set Training: Ksou Coaching For Ugc-net And K-set Exam Last Date For Registration And Details Here

UGC NET K-SET Training: ನೆಟ್‌, ಕೆ-ಸೆಟ್‌ ಪರೀಕ್ಷೆಗೆ ಸಿದ್ಧತೆಯಲ್ಲಿದ್ದೀರಾ? ತರಬೇತಿ ಬೇಕು ಎನ್ನುವುದಾದರೆ ಈ ಸುದ್ದಿ ನಿಮಗಾಗಿ..

UGC NET K-SET Training: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಯುಜಿಸಿ ನೆಟ್‌ ಮತ್ತು ಕೆ-ಸೆಟ್‌ ಪರೀಕ್ಷೆಗೆ ತರಬೇತಿ ನೀಡಲಿದೆ. ಆಸಕ್ತರು ಫೆ.8ರ ಒಳಗೆ ನೋಂದಣಿ ಮಾಡಬೇಕು. ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (LH)

ಬೆಂಗಳೂರು: ಯುಜಿಸಿ ನೆಟ್‌ ಮತ್ತು ಕೆ -ಸೆಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಾ? ತರಬೇತಿ ಸಿಕ್ಕಿದರೆ ಚೆನ್ನಾಗಿತ್ತು ಅಂತ ಅನಿಸ್ತಿದ್ದಿಯಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದಲ್ಲಿ ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗೆ ತರಬೇತಿ ನೀಡಲು ಸಿದ್ಧತೆ ನಡೆದಿದೆ. ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ (ಯುಜಿಸಿ) ನಡೆಸುವ ನೆಟ್‌ (ನ್ಯಾಷನಲ್‌ ಎಲಿಜಿಬಿಲಿಟಿ ಟೆಸ್ಟ್‌) ಮತ್ತು ಕರ್ನಾಟಕ ಸರ್ಕಾರ ನಡೆಸುವ ಕೆ-ಸೆಟ್‌ (ಕರ್ನಾಟಕ ಸ್ಟೇಟ್‌ ಎಲಿಜಿಬಿಲಿಟಿ ಟೆಸ್ಟ್‌) ಪರೀಕ್ಷೆಗೆ ತರಬೇತಿ ನೀಡಲು ಈ ಕೇಂದ್ರ ಮುಂದಾಗಿದೆ. ಇದು ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾಗಿದೆ.

ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಇದಕ್ಕೆ 45 ದಿನಗಳ ತರಬೇತಿ ನೀಡಲಿದೆ. ಆಸಕ್ತರು ಫೆಬ್ರವರಿ 08 ರ ಒಳಗಾಗಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕೆ.ಎಲ್.ಎನ್.ಮೂರ್ತಿ ತಿಳಿಸಿದ್ದಾರೆ.

-------------------------------------------------------

ಗಮನಿಸಬಹುದಾದ ಸುದ್ದಿಗಳು

World Cancer Day: ಇಂದು ವಿಶ್ವ ಕ್ಯಾನ್ಸರ್‌ ದಿನ; ಕ್ಯಾನ್ಸರ್‌ ಕಾರಕಗಳ ವಿವರ, ಆರೋಗ್ಯಕರ ಜೀವನಕ್ಕೆ ಸೂತ್ರಗಳೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ 2022ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD) ವಾರ್ಷಿಕವಾಗಿ 41 ದಶಲಕ್ಷ ಸಾವುಗಳಿಗೆ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ಶೇಕಡ 74 ಸಾವುಗಳಿಗೆ ಸಮನಾಗಿದೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು? ಲೇಖನದ ಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್‌ ಮಾಡಿ

Swachh mandir abhiyan: ಮುಜರಾಯಿ ದೇಗುಲಗಳ ತ್ಯಾಜ್ಯ ನಿರ್ವಹಣೆಗೆ ʻಸ್ವಚ್ಛ ಮಂದಿರ ಅಭಿಯಾನʼ; ಫೆ.10ಕ್ಕೆ 12 ದೇಗುಲಗಳಲ್ಲಿ ಉದ್ಘಾಟನೆ

ಹಿಂದು ದೇವಾಲಯಗಳ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಮಹತ್ವಾಕಾಂಕ್ಷೆಯ "ಸ್ವಚ್ಛ ಮಂದಿರ ಅಭಿಯಾನ"ವನ್ನು ರೂಪಿಸಿದೆ. ಇದರ ಮೊದಲ ಹಂತಕ್ಕೆ ಫೆ.10ರಂದು ರಾಜ್ಯದ 12 ದೇಗುಲಗಳಲ್ಲಿ ಚಾಲನೆ ಸಿಗಲಿದೆ. ಪೂರ್ಣ ವರದಿ ಓದುವುದಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Karnataka assembly election: ವಿಧಾನಸಭಾ ಚುನಾವಣೆ 2023; ಧರ್ಮೇಂದ್ರ ಪ್ರಧಾನ್‌ ಬಿಜೆಪಿ ಉಸ್ತುವಾರಿ; ಕೆ.ಅಣ್ಣಾಮಲೈ ಬಿಜೆಪಿ ಸಹ-ಉಸ್ತುವಾರಿ

Karnataka assembly election: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಚುನಾವಣಾ ಸಹ-ಉಸ್ತುವಾರಿಯಾಗಿ ಕೆ.ಅಣ್ಣಾಮಲೈ ನೇಮಕ. ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

PM to visit Bengaluru: ಫೆ.6ರಂದು ಪ್ರಧಾನಿ ಮೋದಿ ಬೆಂಗಳೂರಿಗೆ; ಇಂಡಿಯಾ ಎನರ್ಜಿ ವೀಕ್‌ 2023 ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ

PM to visit Bengaluru: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.6ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್‌ 2023(India Energy Week 2023)ಕ್ಕೆ ಚಾಲನೆ ನೀಡಲಿದ್ದಾರೆ. ಅದಾಗಿ, E20 ಇಂಧನ ಲೋಕಾರ್ಪಣೆ, ಗ್ರೀನ್‌ ಮೊಬಿಲಿಟಿ ರಾಲಿಗೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ