Bangalore Crime: ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ; ಬೈಕ್‌ನಲ್ಲಿ ಬಂದ ಅಪರಿಚಿತ ಗ್ಯಾಂಗ್‌ನಿಂದ ಕೃತ್ಯ
ಮೃತ ಕಾಂಗ್ರೆಸ್ ಕಾರ್ಯಕರ್ತನನ್ನು ರವಿ ಅಲಿಯಾಸ್ ಮತ್ತಿ ರವಿ ಎಂದು (42) ಗುರುತಿಸಲಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ (Congress worker Murder) ಮಾಡಿರುವ ಘಟನೆ ನಡೆದಿದೆ.
ಲಗ್ಗೆರೆಯ ಚೌಡೇಶ್ವರಿನಗರದಲ್ಲಿರುವ ಹಳ್ಳಿ ರುಚಿ ಹೋಟೆಲ್ ಮುಂಭಾಗದಲ್ಲಿ ಬುಧವಾರ ( ಮೇ 24) ತಡರಾಗಿ ಈ ಘಟನೆ ನಡೆದಿದ್ದು, ಬೆಂಗಳೂರು ಮಂದಿಯನ್ನು ಬೆಚ್ಚಿಬೀಳಿಸಿದೆ. ರವಿ ಅಲಿಯಾಸ್ ಮತ್ತಿ ರವಿ (42) ಮೃತ ದುರ್ದೈವಿಯಾಗಿದ್ದು, ಈತ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಡಿದ್ದ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ರವಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಸಮೀಪದ ಬಾರ್‌ಗೆ ತೆರಳಿ ಮದ್ಯ ಸೇವಿಸಿದ್ದಾನೆ. ಇದನ್ನೂ ಮುನ್ನ ಅಂದರೆ ಸಂಜೆ ತಮ್ಮ ಕಾಂಗ್ರೆಸ್‌ನ ಮತ್ತೊಬ್ಬ ಕಾರ್ಯಕರ್ತ ಕೃಷ್ಣಮೂರ್ತಿ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಾನೆ.
ರವಿಯ ಚಲನವಲನಗಳನ್ನು ಗಮನಿ ಹಿಂಬಾಲಿಸುತ್ತಿದ್ದ ಅಪರಿಚಿತರ ಗ್ಯಾಂಗ್ ತಡರಾತ್ರಿ ದಿಢೀರ್‌ನೆ ದಾಳಿ ನಡೆಸಿದ್ದಾರೆ. ಈತ ಅವರಿಂದ ತಪ್ಪಿಸಿಕೊಳ್ಳು ಯತ್ನಿಸಿದ್ದಾನೆ. ಆದರೆ ಪಟ್ಟುಬಿಡದೆ ಅಟ್ಟಾಡಿಸಿಕೊಂಡ ಬಂದ ದುಷ್ಕರ್ಮಿಗಳು ಹಳ್ಳಿ ರುಚಿ ಹೋಟೆಲ್ ಬಳಿ ಚಾಕುವಿನಿಂದ ಅಮಾನುಷವಾಗಿ ಹಲ್ಲೆ ಮಾಡಿ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ಇವತ್ತು ನನ್ನ ಬರ್ತಡೇ ಪಾರ್ಟಿ ಇತ್ತು. ಕೆಲಸಗಾರರನ್ನು ಊಟಕ್ಕೆ ಬರುವಂತೆ ಹೇಳಿದ್ದೆ. ರಾತ್ರಿ 10 ಗಂಟೆಗೆ ಈ ಕಾರ್ಯಕ್ರಮ ಮುಗಿಯಿತು. ರಾತ್ರಿ 11 ಗಂಟೆಗೆ ಕಿರುಚಾಟದ ಶಬ್ದ ಕೇಳಿಸಿತು. ಹೊರಗಡೆ ಬಂದು ನೋಡಿದಾಗ ಸುಮಾರು 8 ಜನರು ಹೋಟೆಲ್ ಮುಂಭಾಗ ರವಿ ಮೇಲೆ ಹಲ್ಲೆ ನಡೆಸುತ್ತಿದ್ದರು. ಬಳಿಕ ಅವರು ಓಡಿಹೋದರು ಎಂದು ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶವು ಅಸ್ಪಷ್ಟವಾಗಿ ಉಳಿದಿದ್ದು, ತನಿಖಾಧಿಕಾರಿಗಳು ನಿಖರವಾದ ಕಾರಣ ತಿಳಿಯಲು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೇಯ ಕೃತ್ಯದ ಹಿಂದೆ ವೈಯಕ್ತಿಕ ಉದ್ದೇಶವಿದೆ ಎಂದು ನಾವು ಶಂಕೆ ಇದ್ದು, ನಂದಿನಿ ಲೇಔಟ್ ಪೊಲೀಸರು ನಿನ್ನೆ ರಾತ್ರಿ ಅಪರಾಧ ಘಟನಾ ಸ್ಥಳಕ್ಕೆ ಆಗಮಿಸಿ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಬೆಂಗಳೂರು ಉತ್ತರ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ರವಿ ಅವರ ಪತ್ನಿ ಪುಷ್ಪಾ ಅವರ ದೂರಿನ ಮೇರೆಗೆ ಸೆಕ್ಷನ್ 302 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೃಷ್ಣ ಮೂರ್ತಿಯೊಬ್ಬರ ಹುಟ್ಟುಹಬ್ಬದ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಐದು ಮಂದಿ ಮತ್ತಿರವಿ ಮೇಲೆ ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಡಿಸಿಪಿ ತಿಳಿಸಿದ್ದಾರೆ.

ವಿಭಾಗ