Indian Railways: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಮತ್ತೆ 7564 ಕೋಟಿ ರೂ. ನಿಗದಿ; ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ರೂ. ಹಂಚಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಮತ್ತೆ 7564 ಕೋಟಿ ರೂ. ನಿಗದಿ; ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ರೂ. ಹಂಚಿಕೆ

Indian Railways: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಮತ್ತೆ 7564 ಕೋಟಿ ರೂ. ನಿಗದಿ; ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ರೂ. ಹಂಚಿಕೆ

Indian Railways: ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್‌ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹಿಂದಿನ ವರ್ಷದಂತೆಯೇ 7564 ಕೋಟಿ ರೂ.ಅನುದಾನ ಹಂಚಿಕೆಯಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೂ ಹಂಚಿಕೆಯಾಗಿದೆ.
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೂ ಹಂಚಿಕೆಯಾಗಿದೆ.

Indian Railways: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎನ್ನುವ ಚರ್ಚೆಗಳು ನಡೆದಿವೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ವರ್ಷದಂತೆಯೇ ಅನುದಾನ ದೊರೆತಿದೆ. ಹೆಚ್ಚುವರಿಯಾಗಿ ಅನುದಾನವೇನೂ ಕರ್ನಾಟಕಕ್ಕೆ ಲಭಿಸಿಲ್ಲ. ಈಗಾಗಲೇ ಜಾರಿಯಲ್ಲಿರುವ ಹಲವಾರು ರೈಲ್ವೆ ಯೋಜನೆಗಳಿಗೆ ಈ ಬಾರಿಯೂ ಅನುದಾನವನ್ನುಒದಗಿಸಲಾಗಿದೆ. ಇದರಿಂದ ಕರ್ನಾಟಕದ ರೈಲ್ವೆ ಸಂಪರ್ಕ ಜಾಲ ವಿಸ್ತರಣೆ ಮಾಡಬೇಕು ಎನ್ನುವ ಬೇಡಿಕೆಗೆ ಒತ್ತು ಸಿಕ್ಕಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೊಂಚ ಕಡಿಮೆಯೇ ಅನುದಾನ ಸಿಕ್ಕಿದೆ. ಈ ಬಾರಿ ಕರ್ನಾಟಕಕ್ಕೆ 7564 ಕೋಟಿ ನೀಡಲಾಗಿದೆ. ಎರಡು ವರ್ಷದಿಂದ ಪ್ರಗತಿಯಲ್ಲಿರುವ ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ ಕಳೆದ ಬಾರಿ 350 ಕೋಟಿ. ರೂ. ಒದಗಿಸಲಾಗಿದೆ.

ಕಳೆದ ಬಾರಿ ಕರ್ನಾಟಕಕ್ಕೆ ರೈಲ್ವೆ ಬಜೆಟ್ ರೂ.7559 ಕೋಟಿ ಇತ್ತು, ಈ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್ ರೂ.7564 ಕೋಟಿ ನೀಡಲಾಗಿದೆ. ಸಬ್ ಅರ್ಬನ್ ರೈಲ್ವೆಗೆ ಕಳೆದ ಬಾರಿ 350 ಕೋಟಿ ನೀಡಲಾಗಿದೆ. ಈ ಬಜೆಟ್ ನಲ್ಲಿಯೂ ಸಹ ರೂ. 350 ಕೋಟಿ ನೀಡಲಾಗಿದೆ ಎನ್ನುವುದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ವಿವರಣೆ.

ಯಾವ ಯೋಜನೆಗೆ ಎಷ್ಟು ಅನುದಾನ

  • ಶಿವಮೊಗ್ಗ ಶಿಕಾರಿಪುರ ರಾಣೆ ಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿ 64.05 ಕೋಟಿ ರೂ
  • ಕಡೂರು ಚಿಕ್ಕಮಗಳೂರು ಸಕಲೇಶಪುರ ಮಾರ್ಗ ಯೋಜನೆ 78.4 ಕೋಟಿ ರೂ
  • ದೌಂಡ್‌ ಕಲಬುರಗಿ ಡಬ್ಲಿಂಗ್‌ ಮಾರ್ಗ ಹಾಗೂ ಪುಣೆ ಗುಂತಕಲ್‌ ವಿದ್ಯುದೀಕರಣ ಯೋಜನೆ 84.39 ಕೋಟಿ ರೂ
  • ತೋರಣಗಲ್ಲು ರಂಜಿತಪುರ ರೈಲ್ವೆ ಕಾಮಗಾರಿ107.47 ಕೋಟಿ ರೂ
  • ಯಶವಂತಪುರ ಚನ್ನಸಂದ್ರ ರೈಲ್ವೆ ಕಾಮಗಾರಿ ಕೋಟಿ ರೂ
  • ಮುನಿರಾಬಾದ್‌ ಮೆಹಬೂಬ ನಗರ ರೈಲ್ವೆ ಕಾಮಗಾರಿ214.05 ಕೋಟಿ ರೂ
  • ಬೈಯ್ಯಪ್ಪನಹಳ್ಳಿ ಹೊಸೂರು ಮಾರ್ಗ 223.5 ಕೋಟಿ ರೂ
  • ಪುಣೆ ಮೀರಜ್‌ ಲೋಂಡಾ ಮಾರ್ಗ 312.9 ಕೋಟಿ ರೂ
  • ಬೆಂಗಳೂರು ವೈಟ್‌ಫೀಲ್ಡ್‌ ಬೆಂಗಳೂರು ನಗರ ಕೃಷ್ಣರಾಜಪುರಂ ಕ್ವಾಡ್ರಪ್ಲಿಂಗ್‌ 375.6 ಕೋಟಿ ರೂ
  • ಹೂಟಗಿ ಕೂಡಗಿ ಗದಗ ಮಾರ್ಗದ ಕಾಮಗಾರಿ 410.15 ಕೋಟಿ ರೂ
  • ಹೊಸಪೇಟೆ ಹುಬ್ಬಳ್ಳಿ ಲೋಂಡಾ ಟಿನೈಘಟ್‌ ವಾಸ್ಕೋಡಗಾಮ ಕಾಮಗಾರಿ 413.73 ಕೋಟಿ ರೂ
  • ಬಾಗಲಕೋಟೆ ಕುಡಚಿ ಮಾರ್ಗದ ಯೋಜನೆ 428.1 ಕೋಟಿ ರೂ
  • ರಾಯದುರ್ಗ ತುಮಕೂರು ವಯಾ ಕಲ್ಯಾಣ ದುರ್ಗ ರೈಲ್ವೆ ಮಾರ್ಗ434.85 ಕೋಟಿ ರೂ
  • ತುಮಕೂರು ಚಿತ್ರದುರ್ಗ ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿ 549.45ಕೋಟಿ ರೂ
  • ಗದಗ ವಾಡಿ ಮಾರ್ಗದ ಕಾಮಗಾರಿ 549.45 ಕೋಟಿ ರೂ.

Whats_app_banner