Union Budget 2025: ಕೇಂದ್ರ ಬಜೆಟ್‌ಗೆ ವಿಭಿನ್ನ ಪ್ರತಿಕ್ರಿಯೆ: ತೆರಿಗೆ ವಿನಾಯಿತಿಗೆ ಸ್ವಾಗತ, ಶಿಕ್ಷಣ, ಕೃಷಿ ವಲಯ ಅನುದಾನ ಖೋತಾಕ್ಕೆ ಬೇಸರ
ಕನ್ನಡ ಸುದ್ದಿ  /  ಕರ್ನಾಟಕ  /  Union Budget 2025: ಕೇಂದ್ರ ಬಜೆಟ್‌ಗೆ ವಿಭಿನ್ನ ಪ್ರತಿಕ್ರಿಯೆ: ತೆರಿಗೆ ವಿನಾಯಿತಿಗೆ ಸ್ವಾಗತ, ಶಿಕ್ಷಣ, ಕೃಷಿ ವಲಯ ಅನುದಾನ ಖೋತಾಕ್ಕೆ ಬೇಸರ

Union Budget 2025: ಕೇಂದ್ರ ಬಜೆಟ್‌ಗೆ ವಿಭಿನ್ನ ಪ್ರತಿಕ್ರಿಯೆ: ತೆರಿಗೆ ವಿನಾಯಿತಿಗೆ ಸ್ವಾಗತ, ಶಿಕ್ಷಣ, ಕೃಷಿ ವಲಯ ಅನುದಾನ ಖೋತಾಕ್ಕೆ ಬೇಸರ

Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಹೇಗಿದೆ ಎನ್ನುವ ಕುರಿತು ಕರ್ನಾಟಕದ ವಿವಿಧ ಕ್ಷೇತ್ರದವರ ನೋಟ ಇಲ್ಲಿದೆ.

ಕೇಂದ್ರ ಬಜೆಟ್‌ ಕುರಿತು ಕರ್ನಾಟಕದಿಂದ ಭಿನ್ನ ಪ್ರತಿಕ್ರಿಯೆ ಬಂದಿವೆ. ವಿಜಯಪುರದ ಡಾ.ಮಲ್ಲಮ್ಮ ಯಾಳವಾರ, ಮೈಸೂರಿನ ಕುರಬೂರು ಶಾಂತಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಬಜೆಟ್‌ ಕುರಿತು ಕರ್ನಾಟಕದಿಂದ ಭಿನ್ನ ಪ್ರತಿಕ್ರಿಯೆ ಬಂದಿವೆ. ವಿಜಯಪುರದ ಡಾ.ಮಲ್ಲಮ್ಮ ಯಾಳವಾರ, ಮೈಸೂರಿನ ಕುರಬೂರು ಶಾಂತಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಕೇಂದ್ರ ಸರ್ಕಾರದ ಆಯವ್ಯಯದ ಕುರಿತು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದಾಯ ತೆರಿಗೆ ವಿನಾಯಿತಿ ಪ್ರಮಾಣವನ್ನು ಏರಿಸುವುದು ಸ್ವಾಗತಾರ್ಹವಾದರೂ ಶಿಕ್ಷಣ, ಮಹಿಳೆಯರ ಸಹಿತ ಹಲವಾರು ವಲಯಗಳಿಗೆ ನಿರ್ದಿಷ್ಟ ಕಾರ್ಯಕ್ರಮಗಳೇ ಕಾಣುತ್ತಿಲ್ಲ. ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ಸಾಲ ನೀಡುವ ಪ್ರಮಾಣ ಏರಿಕೆಯಾಗಿದೆ. ಆದರೆ ಕಿಸಾನ್‌ ಕಾರ್ಡ್‌ ಹೊಂದಿದವರಿಗೆ ಸಾಲದ ಪ್ರಮಾಣ ಏರಿಸಿದ್ದರೂ ರೈತರು ಬೆಳೆಯುವ ಉತ್ಪಾದನೆಗೆ ನಿರ್ದಿಷ್ಟ ಯೋಜನೆಗಳು ಕಾಣುತ್ತಿಲ್ಲ ಎನ್ನುವ ಅಭಿಪ್ರಾಯವನ್ನು ವಿಭಿನ್ನ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಗಳ ನೋಟ ಇಲ್ಲಿದೆ.

ಶಿಕ್ಷಣ, ಮಹಿಳೆಯರಿಗೆ ಒತ್ತು ಕೊಡಬೇಕಿತ್ತು: ಮಲ್ಲಮ್ಮ ಯಾಳವಾರ

12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯತಿಯನ್ನು ಘೋಷಣೆ ಮಾಡಿದ್ದು ಸ್ವಾಗತ ಸ್ಟಾರ್ಟ್ ಅಪ್ ಕಂಪನಿಗಳಿಗೆ 10 ರಿಂದ 20 ಕೋಟಿ ವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವುದು ಸಿಗುವಂತೆ ಘೋಷಿಸಲಾಗಿದೆ ಇದರಂದೇ ಸಣ್ಣ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡಲಾಗಿದೆ ಎನ್ನುವುದು ವಿಜಯಪುರ ಸಬಲ ಸಂಸ್ಥೆಯ ಮುಖ್ಯಸ್ಥರಾದ ಡಾ.ಮಲ್ಲಮ್ಮ ಯಾಳವಾರ ಅವರ ಅಭಿಪ್ರಾಯ.

ಕರ್ನಾಟಕಕ್ಕೆ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಯನ್ನು ಅಳವಡಿಸಿಕೊಂಡಿಲ್ಲ ಇದರಿಂದ ಕರ್ನಾಟಕ ಜನರಿಗೆ ನಿರಾಶೆಯಾಗಿದೆ . ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಮೂರು ಲಕ್ಷ ಐವತ್ತು ಸಾವಿರದವರೆಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಆದರೆ ರೈತರ ಉತ್ಪಾದನೆಗೆ ಯಾವುದೇ ನಿರ್ದಿಷ್ಟವಾದ ಯೋಜನೆಯನ್ನು ರೂಪಿಸದೇ ಇರುವುದರಿಂದ ರೈತರು ಸಾಲದ ಸುಳಿಯಲ್ಲಿ ಇರಬೇಕಾಗುತ್ತದೆ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದು ಇನ್ನೂ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ.

ದೇಶದ ಬೆನ್ನೆಲುಬಾಗಿರುವ ಒಕ್ಕಲುತನ ಆರ್ಥಿಕ ಸಂಕಷ್ಟದಿಂದ ಬಳಲುವಂತಾಗುತ್ತದೆ. ನಷ್ಟದಲ್ಲಿರುವ ಭದ್ರಾವತಿ ಉಕ್ಕಿನ ಕಾರ್ಖಾನೆಯಂತ ಅನೇಕ ಉದ್ದಿಮೆಗಳು ಪುನಶ್ಚೇತನಕ್ಕೆ ಯಾವುದೇ ಯೋಜನೆಯನ್ನು ಘೋಷಿಸದೆ ಇರುವದು ನಿರಾಶದಾಯಕವಾಗಿದೆ.

ಮೂಲ ಶಿಕ್ಷಣಕ್ಕೆ ಒತ್ತು ಕೊಡದೆ ಮೆಡಿಕಲ್ ಶೀಟ್ ಗಳನ್ನು ಹೆಚ್ಚು ಮಾಡಿದ್ದು ನಗರದ ಮಕ್ಕಳಿಗೆನೇ ಹೆಚ್ಚು ಉಪಯುಕ್ತವಾಗಿದೆ. ಗ್ರಾಮೀಣ ಮಕ್ಕಳು ಇದರಿಂದ ವಂಚಿತರಾಗುತ್ತಾರೆ

ಮಹಿಳಾ ಶಿಕ್ಷಣಕ್ಕೆ ಯಾವುದೇ ಹೊಸ ಯೋಜನೆಯನ್ನು ರೂಪಿಸಿಲ್ಲ. ಇದರಿಂದ ಮಹಿಳಾ ಸಬಲೀಕರಣಕ್ಕೆ ಪ್ರಾಧ್ಯಾನತೆ ನೀಡಿದಂತ ಆಗಿಲ್ಲ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆದಾಯ ಮೂಲ ಹೆಚ್ಚಿಸಲು ಸರಿಯಾದ ಯೋಜನೆಯನ್ನು ರೂಪಿಸಿದಂತೆಯೂ ಕಾಣುತ್ತಿಲ್ಲ ಇದರಿಂದ ಬಡವರು ಬಡವರಾಗಿ ಉಳಿಯುತ್ತಾರೆ.

ದೇಶದ ಸಾಲ ಎರಡು ನೂರು ಲಕ್ಷ ಕೋಟಿಗಿಂತಲೂ ಹೆಚ್ಚಾಗಿರುವುದು ದೇಶದ ಪ್ರತಿ ಪ್ರಜೆಗೂ ಆತಂಕವನ್ನು ಹುಟ್ಟಿಸಿದೆ. ಒಟ್ಟಾರೆ ಕರ್ನಾಟಕ ರಾಜ್ಯಕ್ಕೆ ನೀರಸ ಬಜೆಟ್ ಎನ್ನುವುದು ಮಲ್ಲಮ್ಮ ಅವರ ಬಜೆಟ್‌ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ಬಜೆಟ್ ರೈತರಿಗೆ ಕನ್ನಡಿ ಒಳಗಿನ ಗಂಟು ಇದ್ದಂತಿದೆ: ಕುರಬೂರು

ಬಜೆಟ್ ಮಂಡನೆ ಆರಂಭದಲ್ಲಿ ಅನ್ನದಾತನ ಗುಣಗಾನ ಮಾಡಿ ಕೃಷಿ ಕ್ಷೇತ್ರದ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಮಾಡುವ ಬಗ್ಗೆ. ಕೃಷಿ ಸಾಲ ನೀತಿ ತಿದ್ದುಪಡಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ. ಒಂದು ಪರ್ಸೆಂಟ್ ನಷ್ಟು ಉಪಯೋಗವಿಲ್ಲದ ರೈತರಿಗೆ

ಕಿಸಾನ್ ಕಾರ್ಡ್ ಕೊಡುತ್ತೇವೆ. ಎನ್ನುವುದು ಕೃಷಿ ಉತ್ಪನ್ನಗಳ ಹೆಚ್ಚು ಉತ್ಪಾದನೆಗೆ ಒತ್ತು ನೀಡುತ್ತೇವೆ ಎನ್ನುವುದು. ಕೇಂದ್ರ ಸರ್ಕಾರದ ಡೋಂಗಿ ನೀತಿಯಾಗಿದೆ. ರೈತನ ನೈಜ ಸಂಕಷ್ಟ ಅರಿಯದೆ ರೈತರ ಬಗ್ಗೆ ಮಾತನಾಡುವುದು ಶೂಭೆ ತರುವಂತದ್ದಲ್ಲ. ಕೃಷಿ ಕ್ಷೇತ್ರಕ್ಕೆ ರೈತರಿಗೆ ಸಂಪೂರ್ಣ ಬಜೆಟ್ ನಿರಾಸೆ ತಂದಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner