ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು

ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು

Kendriya Vidyalaya: ಕರ್ನಾಟಕದಲ್ಲಿ 3 ಕೇಂದ್ರೀಯ ವಿದ್ಯಾಲಯ, 1 ನವೋದಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ (ಡಿಸೆಂಬರ್ 6) ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳ ವಿವರ ಇಲ್ಲಿದೆ.

ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು
ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳಿವು

Kendriya Vidyalaya: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಗುಡ್‌ ನ್ಯೂಸ್‌ ನೀಡಿದೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ದೇಶದಾದ್ಯಂತ 85 ಹೊಸ ಕೇಂದ್ರೀಯ ವಿದ್ಯಾಲಯ ಮತ್ತು 28 ನವೋದಯ ವಿದ್ಯಾಲಯಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ. ಇದು 8,232 ಕೋಟಿ ರೂಪಾಯಿ ಪ್ರಸ್ತಾವನೆಯಾಗಿದ್ದು, ಕರ್ನಾಟಕದಲ್ಲಿ ಮೂರು ಕೇಂದ್ರೀಯ ವಿದ್ಯಾಲಯ ಮತ್ತು 1 ನವೋದಯ ವಿದ್ಯಾಲಯ ಸ್ಥಾಪನೆಯನ್ನು ಒಳಗೊಂಡಿದೆ. ಇದರಲ್ಲಿ ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ ಅನುಮೋದನೆ ಸಿಕ್ಕಿದೆ. ಕರ್ನಾಟಕದಲ್ಲಿ ಯಾದಗಿರಿ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ಹೊಸ ಕೇಂದ್ರೀಯ ವಿದ್ಯಾಲಯಗಳು ಸ್ಥಾಪನೆಯಾಗಲಿವೆ. ಬಳ್ಳಾರಿಯಲ್ಲಿ ನವೋದಯ ವಿದ್ಯಾಲಯ ನಿರ್ಮಾಣವಾಗಲಿದೆ. ಯಾದಗಿರಿ ಜಿಲ್ಲೆಯ ಮುದ್ನಾಳ್‌, ಚಿತ್ರದುರ್ಗದ ಕುಂಚಿಗನಾಳ್‌, ರಾಯಚೂರಿನ ಸಿಂಧನೂರು ತಾಲೂಕು ಎಳರಗಿ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಲಿವೆ. ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಒಂದು ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ 5,872.08 ಕೋಟಿ ರೂಪಾಯಿ ಮೀಸಲಿಟ್ಟರೆ, 28 ನವೋದಯ ವಿದ್ಯಾಲಯಗಳ ಸ್ಥಾಪನೆಗೆ 2359 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಕೇಂದ್ರೀಯ ವಿದ್ಯಾಲಯ ಎಂದರೇನು

ಕೇಂದ್ರೀಯ ವಿದ್ಯಾಲಯ ಅಥವಾ ಸೆಂಟ್ರಲ್ ಸ್ಕೂಲ್‌ ಯೋಜನೆಯನ್ನು ಭಾರತ ಸರ್ಕಾರ 1962ರಲ್ಲಿ ಅಂಗೀಕರಿಸಿ ಜಾರಿಗೊಳಿಸಿತು. ವರ್ಗಾವಣೆಯಾಗುವ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಕೇಂದ್ರದ ಎರಡನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಸೊಸೈಟಿ ಕಾಯ್ದೆಗೆ ಅನುಗುಣವಾಗಿ 1965ರ ಡಿಸೆಂಬರ್ 15 ರಂದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್‌) ಸ್ಥಾಪಿಸಲಾಯಿತು. ಆರಂಭದಲ್ಲಿ 20 ರೆಜಿಮೆಂಟಲ್‌ ಶಾಲೆಗಳು ಶುರುವಾದವು. ಇವು ರಕ್ಷಣಾ ಸಿಬ್ಬಂದಿ ಮಕ್ಕಳಿಗಾಗಿ ಶುರುವಾಗಿದ್ದವು. ಮುಂದೆ 1963- 64ರಲ್ಲಿ ಸೆಂಟ್ರಲ್ ಸ್ಕೂಲ್‌ಗಳು ಸ್ಥಾಪನೆಯಾದವು. ಕೇಂದ್ರ ಸರ್ಕಾರ ನಿನ್ನೆ (ಡಿಸೆಂಬರ್ 6) ನೀಡಿದ ಮಾಹಿತಿ ಪ್ರಕಾರ, ಮಾಸ್ಕೋ, ಕಠ್ಮಂಡು, ಟೆಹ್ರಾನ್‌ನಲ್ಲಿ ತಲಾ 1 ಸೇರಿ ಒಟ್ಟು ಮೂರು ಕೇಂದ್ರೀಯ ವಿದ್ಯಾಲಯಗಳು ವಿದೇಶದಲ್ಲಿವೆ. ಇವುಗಳು ಸೇರಿದಂತೆ 1256 ಕೇಂದ್ರೀಯ ವಿದ್ಯಾಲಯಗಳು ಸಕ್ರಿಯವಾಗಿದ್ದು, 13.56 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೆವಿಎಸ್‌ ತನ್ನ ವಿದ್ಯಾರ್ಥಿಗಳಿಗೆ ಜ್ಞಾನ/ಮೌಲ್ಯಗಳನ್ನು ನೀಡುವುದರಲ್ಲಿ ಮತ್ತು ಉತ್ತಮ ಗುಣಮಟ್ಟದ ಶೈಕ್ಷಣಿಕ ಪ್ರಯತ್ನಗಳ ಮೂಲಕ ಉತ್ಕೃಷ್ಟತೆಯನ್ನು ಸಾಧಿಸಲು ಅವರ ಪ್ರತಿಭೆ, ಉತ್ಸಾಹ ಮತ್ತು ಸೃಜನಶೀಲತೆಯನ್ನು ಪೋಷಿಸುವುದರ ಮೇಲೆ ವಿಶ್ವಾಸವಿರಿಸಿಕೊಂಡಿದೆ.

ಕೇಂದ್ರೀಯ ವಿದ್ಯಾಲಯ ಪ್ರವೇಶ ಪಡೆಯುವುದು ಹೇಗೆ

1) ಸ್ಥಳೀಯವಾಗಿ ಜಾಹೀರಾತು: ಕೇಂದ್ರೀ ವಿದ್ಯಾಲಯದ ಸಂಘಟನೆಯ ವೆಬ್‌ಸೈಟ್‌ನಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ, ಫೆಬ್ರವರಿ 1 ನೇ ವಾರ / 2 ನೇ ವಾರದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಾದೇಶಿಕ ಕಚೇರಿಯಿಂದ ಸಾಮಾನ್ಯವಾಗಿ ಕೇಂದ್ರೀಯ ವಿದ್ಯಾಲಯದ ಪ್ರವೇಶ ವೇಳಾಪಟ್ಟಿಯನ್ನು ಮತ್ತು ಪ್ರವೇಶಕ್ಕೆ ಅರ್ಜಿ ಸಲ್ಲಿಸುವಂತೆ ಜಾಹೀರಾತು ನೀಡಲಾಗುತ್ತದೆ.

2) ಆರ್‌ಟಿಇ ಸೀಟುಗಳಿವೆ; ಪ್ರತಿ ವಿಭಾಗಕ್ಕೆ ವರ್ಗ I ರಲ್ಲಿ 10 ಸೀಟುಗಳನ್ನು (40 ಸೀಟುಗಳಲ್ಲಿ 25 ಪ್ರತಿಶತ ಸೀಟುಗಳು) ಆರ್‌ಟಿಇ ನಿಬಂಧನೆಗಳ ಪ್ರಕಾರ ಆರ್‌ಟಿಇ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ. ಈ ಸೀಟುಗಳನ್ನು ಎಸ್‌ಸಿ/ಎಸ್‌ಟಿ/ಇಡಬ್ಲ್ಯುಎಸ್‌/ಬಿಪಿಎಲ್‌, ಒಬಿಸಿ ಮೀಸಲು ವ್ಯಾಪ್ತಿಯಲ್ಲಿಟ್ಟು, ಡ್ರಾ ಮೂಲಕ ಭರ್ತಿ ಮಾಡಲಾಗುತ್ತದೆ. ನೆರೆಹೊರೆಯ ನಿವಾಸಿಗಳು ಮತ್ತು ವಿಭಿನ್ನ ಸಾಮರ್ಥ್ಯ ಹೊಂದಿದವರಿಗೂ ಇದೇ ಸೀಟುಗಳನ್ನು ಹಂಚಲಾಗುತ್ತದೆ.

3) ವಯೋಮಿತಿ: ಕೇಂದ್ರೀಯ ವಿದ್ಯಾಲಯದ 1ನೇ ತರಗತಿಗೆ ಪ್ರವೇಶ ಪಡೆಯುವ ಮಗುವಿಗೆ ಆಯಾ ಶೈಕ್ಷಣಿಕ ವರ್ಷದಲ್ಲಿ ಮಾರ್ಚ್‌ 31ಕ್ಕೆ 6 ವರ್ಷ ವಯಸ್ಸಾಗಿರಬೇಕು. (ಏಪ್ರಿಲ್ 1 ರಂದು ಜನಿಸಿದ ಮಗುವನ್ನು ಸಹ ಪರಿಗಣಿಸಬೇಕು)

4) ಒಂಟಿ ಹೆಣ್ಣು ಮಗು: ತಂದೆ ತಾಯಿಗೆ ಒಬ್ಬಳೇ ಹೆಣ್ಣು ಮಗು ಇದ್ದರೆ ಅಂಥ ಮಗುವಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಸಿಗುತ್ತದೆ. ಅವಳಿ ಹೆಣ್ಣು ಮಕ್ಕಳು ಇದ್ದರೆ ಅವರಿಗೂ ಈ ಶಾಲೆಯಲ್ಲಿ ಕಲಿಯುವ ಅವಕಾಶ ಸಿಗುತ್ತದೆ.

5) ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಆದ್ಯತೆ; ಕೇಂದ್ರೀಯ ವಿದ್ಯಾಲಯ ಸಂಘಟನೆ ಸ್ಥಾಪನೆಯಾಗಿರುವುದೇ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಕಲಿಕೆಗಾಗಿ. ಹೀಗಿರುವಾಗ, ಆ ಮಕ್ಕಳಿಗೆ ಹೆಚ್ಚಿನ ಆದ್ಯತೆ. ತರಗತಿಯಲ್ಲಿ 40 ಮಕ್ಕಳಿಗೆ ಪ್ರವೇಶ ಇದ್ದು, 30 ಸೀಟುಗಳು ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಮೀಸಲಾಗಿದೆ.

6) ಕೇಂದ್ರೀಯ ವಿದ್ಯಾಲಯಗಳ ಪಠ್ಯಕ್ರಮ: ಕೇಂದ್ರೀಯ ವಿದ್ಯಾಲಯ ಸಂಘಟನೆ ಶಾಲೆಗಳಲ್ಲಿ ಎನ್‌ಸಿಇಆರ್‌ಟಿ ಅಥವಾ ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸಲಾಗುತ್ತದೆ. ಎಲ್ಲ ಕೆವಿಗಳಲ್ಲಿ ಒಂದೇ ರೀತಿಯ ಪಠ್ಯಪುಸ್ತಕಗಳಿರುತ್ತವೆ. ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಇರುತ್ತದೆ. ನಾಲ್ಕನೇ ತರಗತಿಯಿಂದ ಏಳನೇ ತರಗತಿ ತನಕ ಸಂಸ್ಕೃತ ಕಲಿಸಲಾಗುತ್ತದೆ.

7) ಕೆವಿಗಳು ಇತರೆ ಶಾಲೆಗಳಿಗಿಂತ ಭಿನ್ನ: ಶಿಕ್ಷಕ-ವಿದ್ಯಾರ್ಥಿ ಅನುಪಾತ ಖಚಿತವಾಗಿರುತ್ತದೆ. ಬೋಧನೆಯ ಗುಣಮಟ್ಟ ಕಾಪಾಡಲಾಗುತ್ತದೆ. 8 ನೇ ತರಗತಿಯವರೆಗಿನ ಹುಡುಗರು, 12ನೇ ತರಗತಿಯವರೆಗಿನ ಹುಡುಗಿಯರು ಮತ್ತು ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳು ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉದ್ಯೋಗಿಗಳ ಮಕ್ಕಳಿಗೆ ಬೋಧನಾ ಶುಲ್ಕವಿಲ್ಲ.

8) ಕೆವಿಎಸ್ ಶಿಕ್ಷಕರ ನೇಮಕ: ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರ ನೇರ ನೇಮಕಾತಿ ನಡೆಯುತ್ತಿದ್ದು, ಪ್ರಸ್ತುತ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆಯುತ್ತದೆ. ಕೆವಿಎಸ್‌ನಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ರಾಷ್ಟ್ರಮಟ್ಟದಲ್ಲಿ ಜಾಹೀರಾತು ನೀಡಲಾಗುತ್ತದೆ. ವಿಶೇಷವಾಗಿ ಎಂಪ್ಲಾಯ್ಮೆಂಟ್‌ ನ್ಯೂಸ್‌ನಲ್ಲಿ ಪ್ರಕಟವಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಲಿಖಿತ/ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಅಂಕಗಳ ಆಧಾರದ ಮೇಲೆ ಸಂದರ್ಶನ, ಕೌಶಲ ಪರೀಕ್ಷೆ ನಡೆಯುತ್ತದೆ. ನಂತರ ಆಯ್ಕೆ ಸಮಿತಿ ಪರಿಶೀಲಿಸಿ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.

9) ಕರ್ನಾಟಕದ ಕೇಂದ್ರೀಯ ವಿದ್ಯಾಲಯಗಳು: ಕರ್ನಾಟಕದಲ್ಲಿ 6 ಕ್ಲಸ್ಟರ್‌ಗಳಲ್ಲಿ ಒಟ್ಟು 53 ಕೇಂದ್ರೀಯ ವಿದ್ಯಾಲಯಗಳಿವೆ. ಜಾಲಹಳ್ಳಿ (9 ಕೆವಿ), ಯಲಹಂಕ (9 ಕೆವಿ), ಬೆಳಗಾವಿ (8 ಕೆವಿ), ಹುಬ್ಬಳ್ಳಿ(9 ಕೆವಿ), ಬಳ್ಳಾರಿ (9 ಕೆವಿ) ಮತ್ತು ಮೈಸೂರು (9 ಕೆವಿ) ಸೆಕ್ಟರ್‌ಗಳಲ್ಲಿ ಕೇಂದ್ರೀಯ ವಿದ್ಯಾಲಯಗಳಿವೆ.

Whats_app_banner