ಕನ್ನಡ ಸುದ್ದಿ  /  ಕರ್ನಾಟಕ  /  ಶಿರಸಿ: ಜೂನ್ 29, 30ಕ್ಕೆ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣ

ಶಿರಸಿ: ಜೂನ್ 29, 30ಕ್ಕೆ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣ

ಹಲಸಿನ ಸಾಂಪ್ರದಾಯಿಕ ವಿವಿಧ ಖಾದ್ಯಗಳ ಕ್ಯಾಂಟೀನ್ ಇರಲಿದ್ದು ರುಚಿಕರ ತಿಂಡಿ ತಿನಿಸುಗಳು ಮಾರಾಟಕ್ಕೆ ಲಭ್ಯವಿರಲಿದೆ. ವಿವಿಧ ತಳಿಯ ಹಲಸಿನ ಸಸಿಗಳ ಪ್ರದರ್ಶನ ಮತ್ತು ಮಾರಾಟವನ್ನೂ ಆಯೋಜಿಸಲಾಗಿದೆ.

ಶಿರಸಿಯಲ್ಲಿ ಹಲಸು ಮೇಳ ನಡೆಯಲಿದೆ.
ಶಿರಸಿಯಲ್ಲಿ ಹಲಸು ಮೇಳ ನಡೆಯಲಿದೆ.

ಕಾರವಾರ: ಉತ್ತರಕನ್ನಡ ಸಾವಯವ ಒಕ್ಕೂಟ, ತೋಟಗಾರಿಕಾ ಇಲಾಖೆ, ಜೀವ ವೈವಿಧ್ಯ ಮಂಡಳಿ, ತಾಲ್ಲೂಕು ಪಂಚಾಯಿತಿ, ಹಾಗೂ ವನಸ್ತ್ರೀ ಸಂಸ್ಥೆ ಸಹಯೋಗದಲ್ಲಿ ಜೂನ್ 29 ಹಾಗೂ 30 ರಂದು ಹಲಸು ಮತ್ತು ಮಲೆನಾಡು ಮೇಳವನ್ನು ಆಯೋಜಿಸಲಾಗಿದೆ. ಶಿರಸಿ ಎಪಿಎಂಸಿ ಯಾರ್ಡ್‌ನಲ್ಲಿ, ಟಿಆರ್‌ಸಿ ಬ್ಯಾಂಕ್ ಪಕ್ಕದಲ್ಲಿರುವ ಉತ್ತರಕನ್ನಡ ಸಾವಯವ ಒಕ್ಕೂಟದ ಕಛೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಜೂನ್ 29 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.

ಈ ಮೇಳದಲ್ಲಿ ಹಲಸಿನ ಮತ್ತು ಹಲಸಿನ ಬೀಜದ ವಿಶೇಷ ಖಾದ್ಯ ಸ್ಪರ್ಧೆ ನಡೆಯಲಿದ್ದು, ಆಸಕ್ತ ಮಹಿಳೆಯರು ಭಾಗವಹಿಸಬಹುದಾಗಿದೆ. ಹಲಸಿನ ಸಾಂಪ್ರದಾಯಿಕ ವಿವಿಧ ಖಾದ್ಯಗಳ ಕ್ಯಾಂಟೀನ್ ಇರಲಿದ್ದು ರುಚಿಕರ ತಿಂಡಿ ತಿನಿಸುಗಳು ಮಾರಾಟಕ್ಕೆ ಲಭ್ಯವಿರಲಿದೆ. ವಿವಿಧ ತಳಿಯ ಹಲಸಿನ ಸಸಿಗಳ ಪ್ರದರ್ಶನ ಮತ್ತು ಮಾರಾಟವನ್ನೂ ಆಯೋಜಿಸಲಾಗಿದ್ದು ವನಸ್ತ್ರೀ ಸಂಸ್ಥೆಯ ಮೂಲಕ ಕೈ ತೋಟದಲ್ಲಿ ಬೆಳೆಸಿದ ನಾಟಿ ತರಕಾರಿ ಬೀಜಗಳ ಪ್ರದರ್ಶನ ಹಾಗೂ ಮಾರಾಟವೂ ಪ್ರಮುಖ ಆಕರ್ಷಣೆಯಾಗಿರಲಿದೆ.

ಸೆಲ್ಕೊ ಫೌಂಡೇಶನ್ ಹಾಗೂ ಸೆಲ್ಕೊ ಸೋಲಾರ್ ವತಿಯಿಂದ ಸೋಲಾರ್ ಆಧಾರಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ನಡೆಯಲಿದ್ದು ಉದ್ದಿಮೆದಾರರಿಗೆ ಅಗತ್ಯವಿರುವ ಸರ್ಕಾರದ ವಿವಿಧ ಯೋಜನೆಗಳು ಸಹಾಯಧನ ವಿವರವನ್ನೂ ಹಂಚಿಕೊಳ್ಳಲು ಉದ್ದೇಶಿಲಾಗಿದೆ. ಹಲಸಿನ ಮೌಲ್ಯವರ್ಧಿತ ಆಹಾರ ಉತ್ಪನ್ನ ತಯಾರಿಸುತ್ತಿರುವ ಜಿಲ್ಲೆಯ ಸ್ವಸಹಾಯ ಸಂಘ ಹಾಗೂ ಉದ್ದಿಮೆದಾರರು, ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ವಿಚಾರ ಸಂಕಿರಣ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಮೇಳದಲ್ಲಿ ಮಲೆನಾಡಿನ ಮೌಲ್ಯವರ್ಧಿತ ಆಹಾರ ಉತ್ಪನ್ನಗಳಿಗೆ ಮಾತ್ರ ಮಾರಾಟ ಮಾಡಲು ಅವಕಾಶವಿದೆ.

ಹಲಸಿನ ಹಾಗೂ ಹಲಸಿನ ಬೀಜದ ಖಾದ್ಯ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಳ್ಳಲು ಆಸಕ್ತರು ಸಂಸ್ಥೆಗೆ ಭೇಟಿ ನೀಡಬಹುದು ಅಥವಾ 86605 53054 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಲಸಿನ ಮೇಳದ ವೈಶಿಷ್ಟ್ಯಗಳು

1) ಹಲಸಿನ ವಿಶೇಷ ತಳಿಗಳ ರಿಯಾಯತಿ ದರದ ಮಾರಾಟ
2) ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಯ ಮಾಹಿತಿ.
3) ಹಲಸಿನ ಬೀಜದ ಖಾದ್ಯ ಸ್ಪರ್ಧೆ ಹಾಗೂ ಬೆಂಗಳೂರಿನ ಉದ್ದಿಮೆದಾರರಿಂದ ಅನುಭವ ಹಂಚಿಕೆ.
4) 30ಕ್ಕೂ ಹೆಚ್ಚು ವಿವಿಧ ಖಾದ್ಯಗಳ ಪ್ರದರ್ಶನ.