ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಕನ್ನಡ: ಪತಿಯ ಮೇಲಿನ ಕೋಪಕ್ಕೆ 6 ವರ್ಷದ ಮಗನನ್ನು ಮೊಸಳೆಗಳಿರುವ ನಾಲೆಗೆಸೆದ ತಾಯಿ, ಮಾರನೇ ದಿನ ಮೃತದೇಹ ಪತ್ತೆ

ಉತ್ತರ ಕನ್ನಡ: ಪತಿಯ ಮೇಲಿನ ಕೋಪಕ್ಕೆ 6 ವರ್ಷದ ಮಗನನ್ನು ಮೊಸಳೆಗಳಿರುವ ನಾಲೆಗೆಸೆದ ತಾಯಿ, ಮಾರನೇ ದಿನ ಮೃತದೇಹ ಪತ್ತೆ

ಉತ್ತರ ಕನ್ನಡ: ಪತಿಯ ಮೇಲಿನ ಕೋಪಕ್ಕೆ ತಾಯಿಯೊಬ್ಬಳು ತನ್ನ 6 ವರ್ಷದ ಮಗನನ್ನು ಮೊಸಳೆಗಳಿದ್ದ ನಾಲೆಗೆಸೆದು ಕೊಂದ ಘಟನೆ ದಾಂಡೇಲಿಯಿಂದ ವರದಿಯಾಗಿದೆ. ಮಾರನೇ ದಿನ ಮೃತದೇಹ ಪತ್ತೆಯಾಗಿದ್ದು, ಮಗುವಿನ ಅಪ್ಪ-ಅಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪತಿಯ ಕೋಪಕ್ಕೆ 6 ವರ್ಷದ ಮಗನನ್ನು ಮೊಸಳೆಗಳಿದ್ದ ನಾಲೆಗೆಸೆದ ತಾಯಿ, ಮಾರನೇ ದಿನ ಮೃತದೇಹ ಪತ್ತೆ (ಸಾಂಕೇತಿಕ ಚಿತ್ರ)
ಉತ್ತರ ಕನ್ನಡ ಜಿಲ್ಲೆಯಲ್ಲಿ ಪತಿಯ ಕೋಪಕ್ಕೆ 6 ವರ್ಷದ ಮಗನನ್ನು ಮೊಸಳೆಗಳಿದ್ದ ನಾಲೆಗೆಸೆದ ತಾಯಿ, ಮಾರನೇ ದಿನ ಮೃತದೇಹ ಪತ್ತೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಪತಿಯ ಮೇಲೆ ಕೋಪಗೊಂಡ ಮಹಿಳೆಯೊಬ್ಬರು ಮಾತು ಬಾರದ ತನ್ನ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದು ಕೊಂದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ನತದೃಷ್ಟ ಬಾಲಕನನ್ನು ದಾಂಡೇಲಿ ತಾಲೂಕಿನ ಹಾಲಮಡ್ಡಿಯ ವಿನೋದ ಸಿಳೀನಿ (6) ಎಂದು ಗುರುತಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಗುವಿನ ಮೃತದೇಹ ನಾಲೆಯಲ್ಲಿ ಮಾರನೇ ದಿನ (ಭಾನುವಾರ) ಪತ್ತೆಯಾಗಿದ್ದು, ಮೊಸಳೆ ದಾಳಿಗೆ ತುತ್ತಾದಂತೆ ಇತ್ತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭಾನುವಾರ ಬೆಳಗ್ಗೆ ಮಗುವಿನ ಶೋಧ ಕಾರ್ಯ ನಡೆಸಿದಾಗ ಮಗುವಿನ ಶವ ಪತ್ತೆಯಾಯಿತು. ಶವದ ಕೈ ಹಾಗೂ ಹೊಟ್ಟೆ ಭಾಗದಲ್ಲಿ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಗುವಿನ ಅಮ್ಮ ಮತ್ತು ಅಪ್ಪನನ್ನು ಆರೋಪಿಗಳನ್ನಾಗಿ ಮಾಡಿ ಹತ್ಯೆ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

ಹೆತ್ತ ಕುಡಿಯನ್ನೇ ನಾಲೆಗೆಸೆದ ಪ್ರಕರಣ ಏನಿದು?

ಹಾಲಮಡ್ಡಿಯ ಸಾವಿತ್ರಿ ಮತ್ತು ರವಿಕುಮಾರ ಸಿಳೀನಿ ದಂಪತಿಯ ಪುತ್ರ ಮೃತನಾಗಿರುವ ವಿನೋದ ಸಿಳೀನಿ. ಈತ ಹಿರಿಯವನಾಗಿದ್ದ. ಈತನಿಗೆ ಮಾತುಬರಲ್ಲ. ಮೂರ್ಛ ರೋಗ ಕೂಡ ಇತ್ತು. ಅಲ್ಲದೆ, ಆಗಾಗ ಹಸಿವು ಎನ್ನುತ್ತ ಅತಿಯಾಗಿ ಆಹಾರ ಸೇವಿಸುತ್ತಿದ್ದ. ಇದು ಬಹಳ ಸಮಸ್ಯೆಯನ್ನು ಉಂಟುಮಾಡಿತ್ತು.

ಈ ಮಧ್ಯೆ, ಕುಡಿತದ ಚಟಕ್ಕೆ ಬಿದ್ದಿದ್ದ ರವಿಕುಮಾರ ಎಂದಿನಂತೆ ಶನಿವಾರ ರಾತ್ರಿ ಮನೆಗೆ ಕುಡಿದು ಬಂದಿದ್ದ. ಆಗ ಪುತ್ರ ವಿನೋದ ಅನ್ನಕ್ಕಾಗಿ ರಚ್ಚೆ ಹಿಡಿದ. ಕೂಡಲೇ ರವಿಕುಮಾರ ಜಗಳಕ್ಕೆ ನಿಂತ. ಇದರಿಂದ ರೋಸಿಹೋದ ಸಾವಿತ್ರಿ, ಅನ್ನಕ್ಕಾಗಿ ಅಂಗಲಾಚುತ್ತಿದ್ದ ಮೂಗ ಮಗ ವಿನೋದನನ್ನು ಎತ್ತಿಕೊಂಡು ಹೋಗಿ ಮನೆಯ ಮುಂದೆ ಹರಿಯುತ್ತಿದ್ದ ನಾಲೆಗೆ ಎಸೆದು ವಾಪಸ್ ಬಂದಿದ್ದರು. ಕಾಳಿ ನದಿಗೆ ಹೋಗುವ ನಾಲೆ ಅದಾಗಿರುವ ಕಾರಣ ಅಲ್ಲಿ ಮೊಸಳೆಗಳಿವೆ. ಹಾಗೆ, ಪತಿಯ ಮೇಲಿನ ಕೋಪಕ್ಕೆ ಹತಾಶಳಾಗಿ ಮೂಗ ಮಗನನ್ನು ನಾಲೆಗೆ ಎಸೆದು ಕೊಲೆ ಮಾಡಿದ್ದಾರೆ ಎಂಬ ಆರೋಪವನ್ನು ಸಾವಿತ್ರಿ ಎದುರಿಸುತ್ತಿದ್ದಾರೆ.

ಇನ್ನಷ್ಟು ಸ್ಟೋರಿಗಳು

1) ಕರ್ನಾಟಕ ಹವಾಮಾನ ಮೇ 7; ಬೆಂಗಳೂರು, ಮೈಸೂರು ಸೇರಿ 18 ಜಿಲ್ಲೆಗಳಲ್ಲಿ ಮಳೆ, ಬೀದರ್, ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಶಾಖದ ಅಲೆ

2) ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

3) ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

4) ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ - ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

5) ಮಂಗಳೂರು: ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಆಯ್ಕೆ

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

IPL_Entry_Point