Valentines Day 2025: ಬೆಂಗಳೂರಿನಲ್ಲಿ ಮತ್ತೆ ಬಾಯ್‌ಫ್ರೆಂಡ್‌ ಬಾಡಿಗೆ ಸೇವೆ ಪೋಸ್ಟರ್‌: ಕೇವಲ 389 ರೂ.ಗೆ ಬಾಡಿಗೆಗೆ ಪಡೆಯಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  Valentines Day 2025: ಬೆಂಗಳೂರಿನಲ್ಲಿ ಮತ್ತೆ ಬಾಯ್‌ಫ್ರೆಂಡ್‌ ಬಾಡಿಗೆ ಸೇವೆ ಪೋಸ್ಟರ್‌: ಕೇವಲ 389 ರೂ.ಗೆ ಬಾಡಿಗೆಗೆ ಪಡೆಯಬಹುದು

Valentines Day 2025: ಬೆಂಗಳೂರಿನಲ್ಲಿ ಮತ್ತೆ ಬಾಯ್‌ಫ್ರೆಂಡ್‌ ಬಾಡಿಗೆ ಸೇವೆ ಪೋಸ್ಟರ್‌: ಕೇವಲ 389 ರೂ.ಗೆ ಬಾಡಿಗೆಗೆ ಪಡೆಯಬಹುದು

Valentines Day 2025: ಪ್ರೇಮಿಗಳ ದಿನದಂದು ಬೆಂಗಳೂರು ಕೆಲವು ಕಡೆಗಳಲ್ಲಿ ಬಾಯ್‌ಫ್ರೆಂಡ್‌ ಬಾಡಿಗೆಗೆ ಪಡೆದುಕೊಳ್ಳಿ ಎನ್ನುವ ಪೋಸ್ಟರ್‌ಗಳು ಸದ್ದು ಮಾಡುತ್ತಿವೆ.

ಬೆಂಗಳೂರಿನಲ್ಲಿ ಪ್ರೇಮಿಗಳ ದಿನದಂದು ಕಂಡು ಬಂದ ಪೋಸ್ಟರ್‌
ಬೆಂಗಳೂರಿನಲ್ಲಿ ಪ್ರೇಮಿಗಳ ದಿನದಂದು ಕಂಡು ಬಂದ ಪೋಸ್ಟರ್‌

ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರ ಪ್ರೇಮಿಗಳ ದಿನದ ಚಟುವಟಿಕೆ ನಡೆಯುತ್ತಿವೆ. ಹೊಟೇಲ್‌, ಕೆರೆ, ಪ್ರವಾಸಿ ತಾಣಗಳಲ್ಲಿ ಪ್ರೇಮಿಗಳು ಕೈ ಹಿಡಿದು ಕುಳಿತಿರುವ ಚಿತ್ರಣ ಕಾಣಸಿಗುತ್ತಿದೆ. ಇದೇ ದಿನ ಬೆಂಗಳೂರು ನಗರದ ಕೆಲವೆಡೆ ಅಂಟಿಸಿರುವ ಪೋಸ್ಟರ್‌ಗಳೂ ಗಮನ ಸೆಳೆಯುತ್ತಿವೆ. ಒಂದಷ್ಟು ಕಡೆ ವಿವಾದವನ್ನೂ ಸೃಷ್ಟಿಸಿವೆ. ಅದು ಬಾಯ್‌ಫ್ರೆಂಡ್‌ ಬಾಡಿಗೆ ಸೇವೆ. ನಿಮಗೆ ಬಾಯ್‌ಫ್ರೆಂಡ್‌ ಬೇಕೇ. ಹಾಗಾದರೆ ಬರೀ 389 ರೂ.ಪಾವತಿಸಿ ಬಾಯ್‌ಫ್ರೆಂಡ್‌ ಸೇವೆ ಪಡೆಯಿರಿ ಎನ್ನುವ ಸಾಲುಗಳುಳ್ಳ ಪೋಸ್ಟರ್‌ಗಳು ಅವು. ಬೆಂಗಳೂರಿನ ಪ್ರಮುಖ ಭಾಗದ ಗೋಡೆಗಳ ಮೇಲೆ ಕೇವಲ 389 ರೂ.ಗೆ 'ರೆಂಟ್ ಎ ಬಾಯ್‌ಫ್ರೆಂಡ್' ಸೇವೆಯ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಈ ಪೋಸ್ಟರ್‌ಗಳು ಸ್ಕ್ಯಾನ್ ಮಾಡಬಹುದಾದ ಕೋಡ್ ಮತ್ತು 'ದಿಸ್ ವ್ಯಾಲೆಂಟೈನ್ಸ್ ಡೇ, ರೆಂಟ್ ಎ ಬಾಯ್‌ಫ್ರೆಂಡ್, ಸ್ಕ್ಯಾನ್ ಮಿ' ಎಂಬ ಅಡಿಬರಹವನ್ನು ಒಳಗೊಂಡಿವೆ.

ಇದು ವಿವಾದ ಸ್ವರೂಪ ಪಡೆದಿದ್ದು, ಹೀಗೆ ಪೋಸ್ಟರ್‌ ಅಂಟಿಸುವುದು ಸರಿಯಲ್ಲ. ಇದು ನಮ್ಮ ಸಂಸ್ಕೃತಿಗೆ ವಿರುದ್ದವಾದದ್ದು. ಹೀಗೆ ಪೋಸ್ಟರ್‌ ಅಂಟಿಸಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಕೆಲ ನಿವಾಸಿಗಳು ಪೊಲೀಸರನ್ನು ಟ್ಯಾಗ್‌ ಮಾಡಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ.

ಗೆಳತಿಯರು ಮತ್ತು ಗೆಳೆಯರು ಸೇರಿದಂತೆ ಕುಟುಂಬದ ಸದಸ್ಯರನ್ನು ಬಾಡಿಗೆಗೆ ಪಡೆಯುವ ಪ್ರವೃತ್ತಿಯು ಹಲವಾರು ದೇಶಗಳಲ್ಲಿ ಜನಜನಿತವಾಗಿದೆ. ವಿಶೇಷವಾಗಿ ಚೀನಾ, ಜಪಾನ್ ಮತ್ತು ಥೈಲ್ಯಾಂಡ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಲುದಾರರ ಬಾಡಿಗೆಗೆ ಅನುಕೂಲವಾಗುವ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ರೂಪಿಗೊಳ್ಳುವುದರೊಂದಿಗೆ ಭಾರತಕ್ಕೂ ಇಂತಹ ಚಟುವಟಿಕೆಗಳು ವಿಸ್ತರಣೆಗೊಳ್ಳುತ್ತಿವೆ ಎಂದು ವರದಿಗಳು ಹೇಳುತ್ತವೆ.

ಈ ಪ್ರವೃತ್ತಿಯು ವಿಶೇಷವಾಗಿ ವ್ಯಾಲೆಂಟೈನ್ಸ್ ಸಪ್ತಾಹ ಅಥವಾ ದಿನದ ಸಮಯದಲ್ಲಿ ಹೆಚ್ಚು ಗಮನ ಸೆಳಯುತ್ತಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಇದೇ ರೀತಿಯ ಸೇವಾ ಪೋಸ್ಟರ್ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.

ಬೆಂಗಳೂರಿನ ಜಯನಗರ ಪ್ರದೇಶದಲ್ಲಿ ವ್ಯಾಪಕವಾಗಿ ಗಮನ ಸೆಳೆದ ಪೋಸ್ಟರ್ ಅದು. 389 ರೂಪಾಯಿ ವೆಚ್ಚದಲ್ಲಿ ಒಂದು ದಿನದ ಬಾಡಿಗೆಗೆ “ಬಾಯ್ ಫ್ರೆಂಡ್” ಅನ್ನು ನೀವು ಪಡೆಯಬಹುದು ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ಸಾರ್ವಜನಿಕ ಕೂಟಗಳು, ಪಾರ್ಟಿಗಳಿಗೆ ಹಾಜರಾಗುವುದು ಅಥವಾ ಒಂಟಿತನವನ್ನು ಎದುರಿಸಲು ಜನರು ವಿವಿಧ ಕಾರಣಗಳಿಗಾಗಿ ಪಾಲುದಾರರನ್ನು ಬಾಡಿಗೆಗೆ ಪಡೆಯುತ್ತಾರೆ. ಹೊರ ದೇಶದಲ್ಲಿರುವಂತೆ ಬೆಂಗಳೂರಿನಲ್ಲಿ ‘ರೆಂಟ್ ಎ ಬಾಯ್‌ಫ್ರೆಂಡ್’ ಸೇವೆಗಳ ಜಾಹೀರಾತು ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಈ ಪೋಸ್ಟರ್‌ಗಳು ಸ್ಕ್ಯಾನ್ ಮಾಡಬಹುದಾದ ಕೋಡ್ ಮತ್ತು "ದಿಸ್ ವ್ಯಾಲೆಂಟೈನ್ಸ್ ಡೇ, ರೆಂಟ್ ಎ ಬಾಯ್‌ಫ್ರೆಂಡ್, ಸ್ಕ್ಯಾನ್ ಮಿ" ಎಂಬ ಅಡಿಬರಹವನ್ನು ಒಳಗೊಂಡಿವೆ. ಈ ಸೇವೆಯ ಜಾಹೀರಾತು ಬೆಲೆ 389 ರೂ.

ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೆಕ್ಸ್‌ ಸೇರಿದಂತೆ ಹಲವು ಕಡೆ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದನ್ನು ಗಮನಿಸಿದ ಆಯಾ ಪ್ರದೇಶಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಪೋಸ್ಟ್‌ ಹಾಕಿದ್ದಾರೆ. ಬೆಂಗಳೂರು ನಗರದ ಸಂಸ್ಕೃತಿಗೆ ಧಕ್ಕೆ. ಇಂತಹವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆದಾಗ್ಯೂ, ಭಾರತದಲ್ಲಿ ಇಂತಹ ಸೇವೆಯ ಚಟುವಟಿಕೆ ಶುರುವಾಗಿರುವುದು ಮೊದಲಲ್ಲ. 2018 ರಲ್ಲಿ, ಮಹಾರಾಷ್ಟ್ರದ ಮುಂಬೈನಲ್ಲಿ 'ರೆಂಟ್ ಎ ಬಾಯ್‌ಫ್ರೆಂಡ್' ಎಂಬ ಅಪ್ಲಿಕೇಶನ್ ರೂಪಿಸಿ ಜನಪ್ರಿಯಗೊಳಿಸಲಾಗಿತ್ತು. ಪ್ಲಾಟ್‌ಫಾರ್ಮ್‌ಗಳಲ್ಲಿ ಉದ್ಯೋಗ ಜಾಹೀರಾತುಗಳನ್ನು ಪೋಸ್ಟ್ ಮಾಡುವುದು, ಪುರುಷರಿಂದ ಅರ್ಜಿಗಳನ್ನು ಆಹ್ವಾನಿಸುವುದು ನಡೆದಿತ್ತು. 2022 ರ ವೇಳೆಗೆ ಬೆಂಗಳೂರಿನಲ್ಲಿ ಇದೇ ರೀತಿಯಲ್ಲಿ ಅಲ್ಲಲ್ಲಿ ಕಂಡು ಬಂದರೂ ವ್ಯಾಪಕವಾಗಿರಲಿಲ್ಲ. ಈ ಬಾರಿ ಇದು ಹೆಚ್ಚಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner