ಕನ್ನಡ ಸುದ್ದಿ  /  Lifestyle  /  Varalakshmi Vratam Fasting Rules: What Are The Rules For Fasting On Varamahalakshmi Vrata

Varalakshmi Vratam Fasting Rules: ವರಮಹಾಲಕ್ಷ್ಮಿ ವ್ರತಾಚರಣೆಯ ಉಪವಾಸದ ನಿಯಮಗಳೇನು?

ಶ್ರಾವಣ ಮಾಸ ಶುಕ್ಲ ಪಕ್ಷದ ಮೊದಲ ಶುಕ್ರವಾರ ವರಮಹಾಲಕ್ಷ್ಮಿ. ಈ ಸಲದ ಇದು ಆಗಸ್ಟ್‌ 5ರಂದು ಅಂದರೆ ನಾಳೆಯೇ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಉಪವಾಸ ವ್ರತಕ್ಕೆ ಹೆಚ್ಚಿನ ಮಹತ್ವ ಇದೆ. ಈ ವ್ರತಾಚರಣೆಗೆ ಕೆಲವು ನಿಯಮ(Varalakshmi Vratam Fasting Rules)ಗಳಿವೆ. ಅವುಗಳ ವಿವರ ಇಲ್ಲಿದೆ.

ವರಮಹಾಲಕ್ಷ್ಮಿ ಪೂಜೆ, ವ್ರತಾಚರಣೆ
ವರಮಹಾಲಕ್ಷ್ಮಿ ಪೂಜೆ, ವ್ರತಾಚರಣೆ

ಸಂಪತ್ತು ಮತ್ತು ಸಮೃದ್ಧಿಯ ದೇವತೆ ವರ ಲಕ್ಷ್ಮಿಯನ್ನು ಪೂಜಿಸಲು ಶ್ರಾವಣ ಮಾಸ ಶುಕ್ಲಪಕ್ಷದ ಮೊದಲ ಶುಕ್ರವಾರಕ್ಕಿಂತ ಒಳ್ಳೆಯ ದಿನ ಇನ್ನೊಂದಿಲ್ಲ. ಈ ವರ್ಷ ವರಮಹಾಲಕ್ಷ್ಮಿ ವ್ರತಾಚರಣೆ ಆಗಸ್ಟ್‌ 5ರಂದು ಅಂದರೆ ನಾಳೆಯೇ ಬಂದಿದೆ. ಈಗಾಗಲೇ ಹಬ್ಬದ ತಯಾರಿ ಶುರುವಾಗಿದೆ. ಈ ವ್ರತಾಚರಣೆಯಲ್ಲಿ ಉಪವಾಸ ವ್ರತಕ್ಕೆ ಹೆಚ್ಚಿನ ಮಹತ್ವ ಇದೆ. ಈ ವ್ರತಾಚರಣೆ ಮಾಡುವವರು ಕೆಲವೊಂದು ನಿಯಮ (Varalakshmi Vratam Fasting Rules)ಗಳನ್ನು ಪಾಲಿಸಬೇಕಾದ್ದು ಕಡ್ಡಾಯ.

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ, ವರಮಹಾಲಕ್ಷ್ಮಿ ಉಪವಾಸವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ಮಾಡುತ್ತಾರೆ. ಐಹಿಕ ಭೋಗದ ಬಯಕೆಯಿಂದ ಅದನ್ನು ಈಡೇರಿಸಿಕೊಂಡು ಎಂದು ವರಲಕ್ಷ್ಮಿಯ ಬೇಡುತ್ತ ಈ ಉಪವಾಸವನ್ನು ಆಚರಿಸಲಾಗುತ್ತದೆ. ಇಲ್ಲಿ ಐಹಿಕ ಭೋಗ ಎಂದರೆ ಮಕ್ಕಳು, ಸಂಗಾತಿ, ಐಷಾರಾಮಿ ಮತ್ತು ಎಲ್ಲ ರೀತಿಯ ಐಹಿಕ ಸುಖಗಳನ್ನು ಒಳಗೊಂಡಿರುತ್ತದೆ.

ವರಮಹಾಲಕ್ಷ್ಮಿ ವ್ರತವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಮತ್ತು ಪ್ರಾಯಶ್ಚಿತ್ತ ಮಾಡಲು ಅತ್ಯಂತ ಸೂಕ್ತ ದಿನಗಳಲ್ಲಿ ಒಂದು. ವರಮಹಾಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ವಿವಾಹಿತ ಮಹಿಳೆಯರು ಪತಿ ಮತ್ತು ಇತರ ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ವರಮಹಾಲಕ್ಷ್ಮಿ ವ್ರತ/ಪೂಜೆ ಮಾಡುತ್ತಾರೆ. ಈ ದಿನ ವರ-ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದು ಎಂದರೆ ಅಷ್ಟಲಕ್ಷ್ಮಿಯನ್ನು ಪೂಜಿಸುವುದು ಎಂದರ್ಥ. ಅಷ್ಟಲಕ್ಷ್ಮಿ ಎಂದರೆ ಸಂಪತ್ತು (ಸಿರಿ/ಶ್ರೀ), ಭೂಮಿ, ಕಲಿಕೆ, ಪ್ರೇಮ, ಕೀರ್ತಿ, ಶಾಂತಿ, ಆನಂದ ಮತ್ತು ಶಕ್ತಿ ಎಂಬ ಎಂಟು ದೇವತೆಗಳನ್ನು ಪೂಜಿಸುವುದಕ್ಕೆ ಸಮಾನವಾಗಿದೆ.

ವರಮಹಾಲಕ್ಷ್ಮಿ ಆಚರಣೆ ಯಾಕೆ?

ವರಮಹಾಲಕ್ಷ್ಮಿ ಪೂಜೆ/ ವ್ರತವು ಧನಲಕ್ಷ್ಮಿಗೆ ಅರ್ಪಿತವಾದದ್ದು. ಅರ್ಥಾತ್‌ ವ್ರತ, ಪೂಜೆ, ಹಬ್ಬ , ಉತ್ಸವದ ಮೂಲಕ ದೇವಿಯನ್ನು ಆರಾಧಿಸಬೇಕು. ಆ ಮೂಲಕ ಆಕೆಯ ಕೃಪೆಗೆ ಒಳಗಾಗುತ್ತೇವೆ. ಮನೆಯಲ್ಲಿ ಹೇರಳ ಸಂಪತ್ತು ಸಂಗ್ರಹವಾಗುತ್ತದೆ. ತಾಯಿಯ ಆಶೀರ್ವಾದ ಸಿಕ್ಕರೆ ಮನೆಯ ಕಷ್ಟ ದೂರವಾಗಿ, ಸುಖ- ಸಂತೋಷ ನೆಲೆಸುವುದೆಂಬ ನಂಬಿಕೆ ಇದೆ.

ವರಮಹಾಲಕ್ಷ್ಮಿ ವ್ರತ ಉಪವಾಸದ ನಿಯಮಗಳು

ವರಮಹಾಲಕ್ಷ್ಮಿ ವ್ರತಾಚರಣೆಯಲ್ಲಿ ಉಪವಾಸಕ್ಕೆ ವಿಶೇಷ ಮಹತ್ವ ಇದೆ. ಆದಾಗ್ಯೂ, ಈ ವ್ರತಾಚರಣೆಗೆಯಾವುದೇ ಕಠಿಣ ಉಪವಾಸ ಕ್ರಮಗಳಿಲ್ಲ. ಉಪವಾಸದ ವೇಳೆ ಅನುಸರಿಸಬೇಕಾದ ನಿಯಮ ಹೀಗಿವೆ ;

  1. ಸೂರ್ಯೋದಯಕ್ಕೆ ಮೊದಲೇ ಎದ್ದು ಸ್ನಾನ ಇತ್ಯಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು, ಶುಚೀರ್ಭೂತರಾಗಿ ಮಡಿ ಬಟ್ಟೆ ಉಟ್ಟುಕೊಂಡು ಉದಯಕಾಲ ಮುಹೂರ್ತದಲ್ಲೇ ವರಮಹಾಲಕ್ಷ್ಮಿ ಪೂಜೆ ಶುರುಮಾಡಬೇಕು.
  2. ಈ ವ್ರತಾಚರಣೆಯಲ್ಲಿ ಸಾಮಾನ್ಯವಾಗಿ ಉಪವಾಸ ಎಂದರೆ ಬೆಳಗ್ಗೆ ಸೂರ್ಯೋದಯದಿಂದ ದೇವಿಪೂಜೆ ಆಗುವವರೆಗೆ ಮಾಡುವಂಥದ್ದು. ಆದರೆ ಇದನ್ನು ನಿಮ್ಮ ಕೆಲಸ ಹಾಗೂ ಅನುಕೂಲಕ್ಕೆ ತಕ್ಕಂತೆ ಅನುಸರಣೆ ಮಾಡಬಹುದು.
  3. ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸುವ ಪ್ರಮುಖ ನೈವೇದ್ಯ ಹಾಗೂ ಪ್ರಸಾದ ಕಡಲೆ ಉಸುಲಿ.
  4. ವರಮಹಾಲಕ್ಷ್ಮಿ ಪೂಜೆ ಮಾಡುವ ಮಹಿಳೆ ಗರ್ಭಿಣಿಯಾಗಿದ್ದರೆ ಅಥವಾ ಅನಾರೋಗ್ಯದಿಂದ ಇದ್ದರೆ ಯಾವುದೇ ಬಗೆಯ ಉಪವಾಸ ಮಾಡಬೇಕಾಗಿಲ್ಲ
  5. ಅನೇಕರು ಬಾಳೆಕಾಯಿಯನ್ನು ಬೇಯಿಸಿ ನೈವೇದ್ಯ ಮಾಡುತ್ತಾರೆ. ನಿಜವಾಗಿ ಅಂತಹ ನಿಯಮವೇನೂ ಇಲ್ಲ.
  6. ಸಾಮಾನ್ಯವಾಗಿ ವಿವಾಹಿತ ಮಹಿಳೆ ಈ ಪೂಜೆ ಮಾಡುತ್ತಾರೆ. ಅವಿವಾಹಿತ ಸ್ತ್ರೀಯರು ತಾಯಿಗೆ ಪೂಜೆಯಲ್ಲಿ ನೆರವಾಗಬಹುದು.
  7. ಮಗುವಿಗೆ ಪ್ರಸವ ನೀಡಲು 22 ದಿನ ಮಾತ್ರ ಇದ್ದರೆ ವ್ರತಾಚರಣೆ ಮಾಡದೇ ಮುಂದಿನ ಅನುಕೂಲಕರ ದಿನಗಳಲ್ಲಿ ಅದನ್ನು ಮಾಡಬಹುದು.
  8. ಒತ್ತಾಯಪೂರ್ವಕ, ಬಲವಂತದಿಂದ ಈ ಪೂಜೆ ಮಾಡಬಾರದು, ಮಾಡಿಸಬಾರದು. ಭಕ್ತಿ ಮತ್ತು ಆಸಕ್ತಿ, ನಂಬಿಕೆ ಇಲ್ಲದೆ ಮಾಡುವ ಕೆಲಸದಿಂದ ಫಲ ಸಿಗುವುದಿಲ್ಲ.
  9. ಹೊಸದಾಗಿ ವರಲಕ್ಷ್ಮಿ ಪೂಜೆ ವ್ರತಾಚರಣೆ ಮಾಡುತ್ತಿದ್ದರೆ ಅಂಥವರು ಹಿರಿಯರ ಅಂದರೆ ವರ್ಷಗಳಿಂದ ಈ ಪೂಜೆ ನೆರವೇರಿಸುತ್ತ ಬಂದವರ ಬಳಿಕ ಸಲಹೆ, ಮಾರ್ಗದರ್ಶನ ಪಡೆದು ಅದರಂತೆ ನಡೆದುಕೊಳ್ಳಬೇಕು.
  10. ಪೂಜೆಯ ಮರುದಿನ ಅಂದರೆ ನಾಡಿದ್ದು ಶನಿವಾರ ಬೆಳಗ್ಗೆ ಸ್ನಾನ ಮಾಡಿ ನಂತರ ಪೂಜೆಗೆ ಬಳಸಿದ ಕಲಶವನ್ನು ವಿಸರ್ಜನೆ ಮಾಡಬೇಕು. ಕಲಶದ ಒಳಗಿನ ನೀರನ್ನು ಮನೆಯಲ್ಲೆಲ್ಲ ಚಿಮುಕಿಸಬೇಕು. ಅಕ್ಕಿಯನ್ನು ಮನೆಯಲ್ಲಿ ಅಡುಗೆಗೆ ಬಳಸುವ ಅಕ್ಕಿಯೊಂದಿಗೆ ಬೆರೆಸುವುದು ವಾಡಿಕೆ.

ವರಮಹಾಲಕ್ಷಿ ಆಚರಿಸಲಾಗದೇ ಇದ್ದರೆ….

ಹಲವಾರು ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬ /ವ್ರತವನ್ನು ಆಚರಿಸಿಕೊಂಡು ಬಂದು, ಈಗ ಯಾವುದೋ ಅಡಚಣೆಯಿಂದ ಆಚರಿಸಲು ಸಾಧ್ಯ ವಾಗದಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಮುಂದಿನ ಶುಕ್ರವಾರ ಅಥವಾ ನವರಾತ್ರಿ ಹಬ್ಬದ ಸಮಯದಲ್ಲಿ ಬರುವ ಶುಕ್ರವಾರದಂದು ವರಮಹಾಲಕ್ಷ್ಮಿ ಆಚರಿಸಬಹುದು

ವಿಭಾಗ