ಕನ್ನಡ ಸುದ್ದಿ  /  Karnataka  /  Verification List Recruitment Of Graduate Primary Teachers For 6-8 Classes -2022 Karnataka

Teachers Recruitment: 15000 ಶಾಲಾ ಶಿಕ್ಷಕರ ನೇಮಕ, 1 : 2 ದಾಖಲಾತಿ ಪರಿಶೀಲನಾ ಪಟ್ಟಿ ನೋಡುವುದು ಹೇಗೆ?

Teachers Recruitment: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ದಾಖಲಾತಿ ಪರಿಶೀಲನಾ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ಎಂಬ ಆಲೋಚನೆಯಲ್ಲಿರಬಹುದು. ಈ ಕುರಿತು ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

Teachers Recruitment: 1 : 2 ದಾಖಲಾತಿ ಪರಿಶೀಲನಾ ಪಟ್ಟಿ ನೋಡುವುದು ಹೇಗೆ?
Teachers Recruitment: 1 : 2 ದಾಖಲಾತಿ ಪರಿಶೀಲನಾ ಪಟ್ಟಿ ನೋಡುವುದು ಹೇಗೆ?

ಬೆಂಗಳೂರು: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (Teachers Recruitment) ಪರೀಕ್ಷೆಯ 1:2 ಅಭ್ಯರ್ಥಿಗಳ ಬೆಂಗಳೂರು ವಿಭಾಗದ ದಾಖಲಾತಿ ಪರಿಶೀಲನೆ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ ಸಂಜೆ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಬಿಸಿ ನಾಗೇಶ್‌ ಈಗಾಗಲೇ ಪ್ರಕಟಿಸಿದ್ದಾರೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ದಾಖಲಾತಿ ಪರಿಶೀಲನಾ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ಎಂಬ ಆಲೋಚನೆಯಲ್ಲಿರಬಹುದು. ಈ ಕುರಿತು ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

- ಮೊದಲಿಗೆ https://www.schooleducation.kar.nic.in/ ವೆಬ್‌ಸೈಟ್‌ಗೆ ಪ್ರವೇಶಿಸಿ.

- ವೆಬ್‌ಸೈಟ್‌ನ ಮುಖಪುಟದಲ್ಲಿರುವ ಲೇಟೆಸ್ಟ್‌ ನ್ಯೂಸ್‌ ವಿಭಾಗಕ್ಕೆ ಹೋಗಿ.

- ಅಲ್ಲಿ GPTR-2022-1:2 Verification List ಎಂಬ ಲಿಂಕ್‌ ಕಾಣಿಸುತ್ತದೆ. ಬೆಂಗಳೂರು ನಾರ್ತ್‌, ಬೆಂಗಳೂರು ರೂರಲ್‌, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಧುಗಿರಿ, ರಾಮನಗರ, ಶಿವಮೊಗ್ಗ, ತುಮಕೂರು ಎಂಬ ಆಯ್ಕೆಗಳು ಕಾಣಿಸುತ್ತವೆ. ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಮಾಹಿತಿ ನಾಳೆ ಸಂಜೆ ಇದೇ ಲಿಂಕ್‌ನಲ್ಲಿ ಕಾಣಿಸಿಕೊಳ್ಳಲಿದೆ.

-ಸಂಬಂಧಪಟ್ಟ ಪ್ರದೇಶವನ್ನು ಕ್ಲಿಕ್‌ ಮಾಡಿ. ನೀವು ಬೆಂಗಳೂರು ಉತ್ತರದ ಅಭ್ಯರ್ಥಿಯಾಗಿದ್ದರೆ ಬೆಂಗಳೂರು ನಾರ್ತ್‌, ಶಿವಮೊಗ್ಗದ ಅಭ್ಯರ್ಥಿಯಾಗಿದ್ದರೆ ಶಿವಮೊಗ್ಗ ಕ್ಲಿಕ್‌ ಮಾಡಿ.

- ಪಿಡಿಎಫ್‌ ತೆರೆದುಕೊಳ್ಳುತ್ತದೆ. ಡೌನ್‌ಲೋಡ್‌ ಮಾಡಿಕೊಳ್ಳಿ.

- ಪಿಡಿಎಫ್‌ನಲ್ಲಿ ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಲಿಂಗ, ಕೆಟಗರಿ, ಪೇಪರ್‌ ಅಂಕಗಳು, ಮೆರಿಟ್‌ ಸ್ಕೋರ್‌ ಇತ್ಯಾದಿಗಳನ್ನು ಒಳಗೊಂಡ 1:2 ವೇರಿಫಿಕೇಷನ್‌ ಲಿಸ್ಟ್‌ ಕಾಣಿಸಿಕೊಳ್ಳುತ್ತದೆ.

- ಪಿಡಿಎಫ್‌ನಲ್ಲಿ ನಿಮ್ಮ ಹೆಸರು ಹುಡುಕಿ. ಹಲವು ಪುಟಗಳಲ್ಲಿ ಹುಡುಕಲು ಕಷ್ಟವಾದರೆ ಕಂಟ್ರೋಲ್‌ ಎಫ್‌ ಎಂದು ಶಾರ್ಟ್‌ ಕೀ ಬಳಸಿ ಅಲ್ಲಿ ಸರ್ಚ್‌ ಬಾಕ್ಸ್‌ನಲ್ಲಿ ನಿಮ್ಮ ಹೆಸರು ಅಂಥವಾ ನೋಂದಣಿ ಸಂಖ್ಯೆ ಹಾಕಿ ಹುಡುಕಬಹುದು.

ಸಾರ್ವಜನಿಕ ಶಿಕ್ಷಣ ಇಲಾಖೆಯು 2022 ರ ಮಾರ್ಚ್ / ಏಪ್ರಿಲ್ ತಿಂಗಳಲ್ಲಿ ಅರ್ಜಿ ಸ್ವೀಕರಿಸಿತ್ತು . ಹಾಗೂ ಮೇ 21 , 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸುಮಾರು 1,00683 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈಗಾಗಲೇ 15,000 ಶಿಕ್ಷಕರ ಹುದ್ದೆಯ ಭರ್ತಿಯ ಬಳಿಕ , ಮತ್ತೆ 2,500 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ . ಸಹ ಶಿಕ್ಷಕರು - 2,200 ಹುದ್ದೆಗಳು . ದೈಹಿಕ ಶಿಕ್ಷಣ ಶಿಕ್ಷಕರು - 200 ಹುದ್ದೆಗಳು . ವಿಶೇಷ ಶಿಕ್ಷಕರು - 100 ಹುದ್ದೆಗಳಿಗೂ ಶೀಘ್ರವೇ ಅಧಿಸೂಚನೆ ಹೊರ ಬೀಳಲಿದೆ.

IPL_Entry_Point