ಕನ್ನಡ ಸುದ್ದಿ  /  ಕರ್ನಾಟಕ  /  Vijayapura Election Result: ವಿಜಯಪುರದಲ್ಲಿ ಬಿಜೆಪಿಯ ರಮೇಶ್‌ ಜಿಗಜಿಣಗಿಗೆ ಭರ್ಜರಿ ಗೆಲುವು, ರಾಜು ಅಲಗೂರುಗೆ ಸೋಲು

Vijayapura Election Result: ವಿಜಯಪುರದಲ್ಲಿ ಬಿಜೆಪಿಯ ರಮೇಶ್‌ ಜಿಗಜಿಣಗಿಗೆ ಭರ್ಜರಿ ಗೆಲುವು, ರಾಜು ಅಲಗೂರುಗೆ ಸೋಲು

ವಿಜಯಪುರ ಲೋಕಸಭಾ ಚುನಾವಣಾ ಫಲಿತಾಂಶ 2024: ವಿಜಯಪುರ (ಬಿಜಾಪುರ) ಲೋಕಸಭಾ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಮೇಶ್‌ ಜಿಗಜಿಣಗಿ ಮತ್ತು ಕಾಂಗ್ರೆಸ್‌ ಎಚ್‌ಆರ್‌ ಆಲಗೂರು ಸ್ಪರ್ಧೆಯಲ್ಲಿದ್ದರು. ಇದೀಗ ಬಂದ ಮಾಹಿತಿ ಪ್ರಕಾರ ಬೃಹತ್‌ ಮತಗಳ ಅಂತರದಿಂದ ರಮೇಶ್‌ ಜಿಗಜಿಣಗಿ ಗೆಲುವು ಪಡೆದಿದ್ದಾರೆ. Vijayapura Lok Sabha MP Election 2024 Result

ವಿಜಯಪುರ ಲೋಕಸಭಾ ಚುನಾವಣಾ ಫಲಿತಾಂಶ 2024
ವಿಜಯಪುರ ಲೋಕಸಭಾ ಚುನಾವಣಾ ಫಲಿತಾಂಶ 2024

ಬೆಂಗಳೂರು: ಲೋಕಸಭಾ ಚುನಾವಣೆ 2024ರಲ್ಲಿ ಕರ್ನಾಟಕದ ವಿಜಯಪುರ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿತ್ತು. ರಾಜಕೀಯದ ಪ್ರಮುಖ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿರುವ ವಿಜಯಪುರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಪ್ರೊ.ರಾಜು ಆಲಗೂರ (H.R. Algur ) ಮತ್ತು ಬಿಜೆಪಿಯಿಂದ ರಮೇಶ್ ಜಿಗಜಿಣಗಿ (Ramesh Jigajinagi) ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರು. ಇದೀಗ ವಿಜಯಪುರ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Vijayapura Lok Sabha MP Election 2024 Result)ಹೊರಬಿದ್ದಿದೆ. ವಿಜಯಪುರ ಮೀಸಲು ಕ್ಷೇತ್ರದಲ್ಲಿ ಮೇ 7ರಂದು ಚುನಾವಣೆ ನಡೆದಿತ್ತು. ಅಲ್ಲಿ ಶೇಕಡ 66.66ರಷ್ಟು ಮತ ಚಲಾವಣೆಯಾಗಿತ್ತು. ಈ ಕ್ಷೇತ್ರದಲ್ಲಿ ಎಂಟು ಸ್ಪರ್ಧಿಗಳಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪ್ರಮುಖ ಸ್ಪರ್ಧೆ ಇದೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಈಗಾಗಲೇ ಮೂರು ಬಾರಿ ಗೆದ್ದಿದ್ದಾರೆ. ಈ ಬಾರಿ ಗೆಲುವು ಅಥವಾ ರಾಜಕೀಯ ನಿವೃತ್ತಿ ಎಂಬ ಸ್ಥಿತಿ ಇತ್ತು. ಇದೀಗ ವಿಜಯಪುರದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಮೇಶ್‌ ಜಿಗಜಿಣಗಿ ಮತ್ತು ಪ್ರೊ. ರಾಜು ಆಲಗೂರ ನಡುವೆ ಯಾರು ಗೆಲುವು ಪಡೆದಿದ್ದಾರೆ ಮತ್ತು ಎಷ್ಟು ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ವಿಜಯಪುರ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ವಿಜಯಪುರ ಲೋಕಸಭಾ ಕ್ಷೇತ್ರ

ಪ್ರೊ.ರಾಜು ಆಲಗೂರ(ಕಾಂಗ್ರೆಸ್‌): ಸೋಲು

ರಮೇಶ್ ಜಿಗಜಿಣಗಿ (ಬಿಜೆಪಿ): ಗೆಲುವು

ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ರಮೇಶ್‌ ಜಿಗಜಿಣಗಿ ಪರಿಚಯ

ಹಾಲಿ ಸಂಸದರಾಗಿರುವ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ. 1957 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೂ ರಮೇಶ ಜಿಗಜಿಣಗಿ ಹೊರತುಪಡಿಸಿ ಯಾರೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸಿಲ್ಲ. ಪೊಲೀಸ್ ಇನ್ಸಪೆಕ್ಟರ್ ಆಗುವ ಗುರಿ ಹೊಂದಿದ್ದ ರಮೇಶ ಜಿಗಜಿಣಗಿ ಇನ್ಸಪೆಕ್ಟರ್ ಆಗಲಿಲ್ಲ, ಆದರೆ ಆ ಇಲಾಖೆಯ ಸಂಪೂರ್ಣ ಸಾರಥ್ಯದ ಹೋಂ ಮಿನಿಸ್ಟರ್ ಆಗಿ ಹೊರಹೊಮ್ಮಿದರು. ದಿವಂಗತ ಜೆ.ಎಚ್. ಪಟೇಲ್, ದಿ. ರಾಮಕೃಷ್ಣ ಹೆಗಡೆ ಅವರನ್ನು ತಮ್ಮ ಎರಡು ಕಣ್ಣುಗಳು ಎಂದು ಪರಿಭಾವಿಸುವ ರಮೇಶ ಜಿಗಜಿಣಗಿ ರಾಜಕಾರಣದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಂಡವರು. ರಮೇಶ್‌ ಜಿಗಜಿಣಗಿ ಪ್ರೊಫೈಲ್‌ ಇಲ್ಲಿದೆ ಓದಿ.

ಲೋಕಸಭಾ ಕ್ಷೇತ್ರದಲ್ಲಿ ಸೋತ ಪ್ರೊ.ರಾಜು ಆಲಗೂರ ಪರಿಚಯ

ದಲಿತ ಸಂಘರ್ಷ ಸಮಿತಿ ಯುವ ಹುಲಿ ಎಂದೇ ಹೆಸರಾಗಿದ್ದ ರಾಜು ದಲಿತ ಹೋರಾಟದ ಮುಂಚೂಣಿ ನಾಯಕರಾಗಿದ್ದರು. 1985ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಪದವಿ ಪಡೆದ ರಾಜು ಆಲಗೂರ ಬಿಎಲ್​ಡಿಇ ಸಂಸ್ಥೆಯ ಅಥರ್ಗಾ ಪಿಯು ಕಾಲೇಜ್ ಉಪನ್ಯಾಸಕನಾಗಿ ವೃತ್ತಿಜೀವನ ಆರಂಭಿಸಿದರು. 1989 ರಲ್ಲಿ ಅವಿಭಜಿತ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಸಾರಥ್ಯ ಸಹ ವಹಿಸಿಕೊಂಡಿದ್ದರು ರಾಜು. ದಿ.ಬಿಎಂ ಪಾಟೀಲ ಹಾಗೂ ಎಂಬಿ ಪಾಟೀಲ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಭಾವಿಸುವ ಆಲಗೂರ 1999ರಲ್ಲಿ ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ರಾಜು ಆಲಗೂರ ಪೂರ್ಣ ಪರಿಚಯ ಇಲ್ಲಿದೆ ಓದಿ.

ಚುನಾವಣಾ ಕಣ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಪರಿಚಯ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಚುನಾವಣೆ ನಡೆದಿತ್ತು. ಶೇಕಡ 66.66ರಷ್ಟು ಮತದಾನವಾಗಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇತ್ತು. ಆದರೆ ಫಲಿತಾಂಶದಲ್ಲಿ ರಮೇಶ್‌ ಗೆಲುವಿನ ನಗೆ ಬೀರಿದು. ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ 2,58,038 ಮತಗಳ ಗೆಲುವಿನ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಇಂತಹದ್ದೇ ಕಮಾಲ್‌ ನಡೆಯುವ ನಿರೀಕ್ಷೆಯಲ್ಲಿದ್ದರು. ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದಾಗಿದೆ. 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲು ಕ್ಷೇತ್ರವಾಗಿದೆ. 2019ರಲ್ಲಿ ಜೆಡಿಎಸ್‌ - ಕಾಂಗ್ರೆಸ್‍ನ ಮೈತಿ ಅಭ್ಯರ್ಥಿಯಾಗಿ ಸುನಿತಾ ದೇವಾನಂದ ಚವ್ಹಾಣರವರು ಪ್ರಥಮ ಬಾರಿ ಸ್ಪರ್ಧಿಸಿ ಸೋಲು ಅನುಭವಿಸಿದರು. ವಿಜಯಪುರವು 999ರಿಂದ 2019ರ ವರೆಗೆ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿ ಹೊರಹೊಮ್ಮಿದೆ.́

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024