Vijayapura News: ವಿಜಯಪುರದಲ್ಲಿ ಮತ್ತೆ ಭೂಕಂಪನ; 2024ರ ಹೊಸ ವರ್ಷದಲ್ಲಿ ಮೊದಲ ಕಂಪನದ ಅನುಭವ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ವಿಜಯಪುರದಲ್ಲಿ ಮತ್ತೆ ಭೂಕಂಪನ; 2024ರ ಹೊಸ ವರ್ಷದಲ್ಲಿ ಮೊದಲ ಕಂಪನದ ಅನುಭವ

Vijayapura News: ವಿಜಯಪುರದಲ್ಲಿ ಮತ್ತೆ ಭೂಕಂಪನ; 2024ರ ಹೊಸ ವರ್ಷದಲ್ಲಿ ಮೊದಲ ಕಂಪನದ ಅನುಭವ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿದ್ದು, ಜನ ಭಯಭೀತರಾಗಿದ್ದಾರೆ.

ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ
ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ

ವಿಜಯಪುರ: 2024 ರ ಹೊಸ ವರ್ಷದಲ್ಲಿ ಮೊದಲ ಬಾರಿಗೆ ಗುರುವಾರ ರಾತ್ರಿ ಜಿಲ್ಲೆಯಲ್ಲಿ ಲಘು ಭೂಕಂಪನ‌ ಸಂಭವಿಸಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಯರನಾಳ ಗ್ರಾಮ ಪಂಚಾಯಿತಿ ಸಮೀಪದ ಹತ್ತರಕಿಹಾಳ, ನಂದಿಹಾಳ, ವಿಜಯಪುರ ಭಾಗದ ವ್ಯಾಪ್ತಿಯಲ್ಲಿ 2.6 ತೀವ್ರತೆಯ ಭೂಕಂಪನ (Vijayapura Earthquake) ಸಂಭವಿಸಿದೆ.

ಭೂಮಿಯ 2 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಮಿ ನಡುಗುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಚದುರಿ ಸದ್ದು ಮಾಡಿವೆ. ಇದರಿಂದಾಗಿ ಮನೆಗಳಲ್ಲಿ ಟಿ.ವಿ. ನೋಡುತ್ತಿದ್ದ ಊಟ ಮಾಡುತ್ತಿದ್ದ, ವಿಶ್ರಾಂತಿಯಲ್ಲಿದ್ದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಆಗಾಗ ಭೂಕಂಪಗಳು ಸಂಭವಿಸುತ್ತಿರುವುದು ಜಿಲ್ಲೆಯ ಜನತೆಗೆ ಭಯಹುಟ್ಟಿಸುತ್ತಿದೆ. ಜಿಲ್ಲೆಯಲ್ಲಿ ಗುರುವಾರ (ಜನವರಿ 25) ಲಘು ಭೂಕಂಪನ ಆಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢೀಕರಿಸಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಜಿಲ್ಲೆಯ ಉಕುಮನಾಳ ಗ್ರಾಮದಲ್ಲಿ 2023ರ ಡಿಸೆಂಬರ್ 8ರ ಶುಕ್ರವಾರ ಬೆಳಗ್ಗೆ 6.52ಕ್ಕೆ ಭೂಂಕನಪದ ಅನುಭವವಾಗಿತ್ತು. ಅಂದುಕೂಡ ಜನರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದು ಕೆಲವು ಸಮಸಯದ ವರೆಗೆ ಇಲ್ಲೇ ಕಾಲಕಳೆಯುವಂತಾಗಿತ್ತು.

ಡಿಸೆಂಬರ್ 8ರ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ದೃಢಪಡಿಸಿದ್ದರು. ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸುತ್ತಲೇ ಇದ್ದು, ಜನರು ಆತಂಕದಲ್ಲಿ ಜೀವನ ಕಳೆಯುಂತಾಗಿದೆ. ರಾತ್ರಿ, ಮಧ್ಯರಾತ್ರಿ ಸಮಯದಲ್ಲಿ ಏಕಾಏಕಿ ಶಬ್ದದೊಂದಿಗೆ ಭೂಮಿ ನಡುಗುತ್ತಿರುವುದು ಜನತೆ ನಿದ್ದೆಗೆಡುವಂತೆ ಮಾಡಿದೆ.

ದಶಕದಿಂದ ಇದೇ ರೀತಿಯಾಗಿ ಭೂಕಂಪನ ಅನುವಭವವಾಗಿದೆ. ವಿಜಯಪುರ ಭಾಗದಲ್ಲಿ 2010 ರಲ್ಲಿ 24 ಬಾರಿ ಭೂಮಿ ಕಂಪಿಸಿತ್ತು. ನಂತರ 2011 ರಲ್ಲಿ ಒಂದು ಭಾರಿ ಕಂಪಿಸಿತ್ತು, ಇಂದಾಗ ನಂತರ 2021ರವರೆಗೆ ಭೂಕಂಪನದ ಸದ್ದು ಇರಲಿಲ್ಲ. 2021 ರಿಂದ ಮತ್ತೆ ಭೂಮಿ ಕಂಪಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

2010ರಲ್ಲಿ ತಲೆವಾಡ, ಕಲಗುರ್ಕಿ, ಮಲಘಾಣ, ಹುಣಶ್ಯಾಳ ಭಾಗದಲ್ಲಿ ಪದೇ ಪದೆ ಭೂಕಂಪನಗಳು ಸಂಭವಿಸಿದ ಕಾರಣ ಅಲ್ಲಿ ಭೂಕಂಪನ ನಿರೀಕ್ಷಣಾ ಯಂತ್ರಗಳನ್ನು ಅವಳಡಿಸಲಾಗಿತ್ತು. ಇಲ್ಲಿ ದಾಖಲಾಗದ ಕಂಪನಗಳನ್ನು ಅಲೋಕಿಸಿದಾಗ ಸಾಮಾನ್ಯವಾಗಿ 1.2 ಕಡಿಮೆ ತೀವ್ರತೆಯ ಭೂಕಂಪನ ದಾಖಲಾಗಿತ್ತು. 2010ರ ಜನವರಿ 29 ರಂದು 3.1 ತೀವ್ರತೆ ದಾಖಲಾಗಿತ್ತು. (This copy first appeared in Hindustan Times Kannada website. To read more like this please logon to kannada.hindustantime.com )

Whats_app_banner