Vijayapura:ಶಕ್ತಿ ಯೋಜನೆ ಎಫೆಕ್ಟ್‌,ಮಹಿಳೆಯರ ವಿಜಯಪುರ ಟ್ರಿಪ್‌;ಒಂದೇ ದಿನ ಗೋಲ್‌ ಗುಂಬಜ್‌ ಎಂಟ್ರಿ ಟಿಕೆಟ್‌ನಿಂದ 1.25 ಲಕ್ಷ ರೂ. ಕಲೆಕ್ಷನ್
ಕನ್ನಡ ಸುದ್ದಿ  /  ಕರ್ನಾಟಕ  /  Vijayapura:ಶಕ್ತಿ ಯೋಜನೆ ಎಫೆಕ್ಟ್‌,ಮಹಿಳೆಯರ ವಿಜಯಪುರ ಟ್ರಿಪ್‌;ಒಂದೇ ದಿನ ಗೋಲ್‌ ಗುಂಬಜ್‌ ಎಂಟ್ರಿ ಟಿಕೆಟ್‌ನಿಂದ 1.25 ಲಕ್ಷ ರೂ. ಕಲೆಕ್ಷನ್

Vijayapura:ಶಕ್ತಿ ಯೋಜನೆ ಎಫೆಕ್ಟ್‌,ಮಹಿಳೆಯರ ವಿಜಯಪುರ ಟ್ರಿಪ್‌;ಒಂದೇ ದಿನ ಗೋಲ್‌ ಗುಂಬಜ್‌ ಎಂಟ್ರಿ ಟಿಕೆಟ್‌ನಿಂದ 1.25 ಲಕ್ಷ ರೂ. ಕಲೆಕ್ಷನ್

ಪ್ರವಾಸಕ್ಕೆ ಆಗಮಿಸಿದ್ದ ಮಹಿಳೆಯರು ತಮ್ಮ ಮಕ್ಕಳನ್ನೂ ಜೊತೆಗೆ ಕರೆ ತಂದಿದ್ದಾರೆ. ಪತಿಯರನ್ನು ಮನೆಯಲ್ಲೇ ಬಿಟ್ಟು ಮಹಿಳೆಯರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದರಿಂದ ಗೋಳಗುಮ್ಮಟ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿತ್ತು.

ವಿಜಯಪುರಕ್ಕೆ ಪ್ರವಾಸಿಗರ ದಂಡು
ವಿಜಯಪುರಕ್ಕೆ ಪ್ರವಾಸಿಗರ ದಂಡು (PC: Twitter, Sami ustad)

ವಿಜಯಪುರ: ರಾಜ್ಯ ಸರ್ಕಾರ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ತಿಳಿದ ವಿಚಾರ. ಇದು ಕೆಲವರಿಗೆ ಅನುಕೂಲವಾದರೆ, ಇನ್ನೂ ಕೆಲವರಿಗೆ ಸಮಸ್ಯೆ ಆಗಿದೆ. ಕೆಲವು ದಿನಗಳಿಂದ ಮಹಿಳಾ ಮಣಿಗಳು ಕುಟುಂಬ ಸಹಿತ ಪ್ರವಾಸಿ ತಾಣಗಳತ್ತ ದೌಡಾಯಿಸಿದ್ದಾರೆ. ಹೀಗಾಗಿ ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ. ಈ‌ ಹಿನ್ನೆಲೆಯಲ್ಲಿ ವಿಜಯಪುರದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಮಹಿಳೆಯರ ದಂಡೇ ಹರಿದು ಬರುತ್ತಿದೆ.

ಬೆಳಗ್ಗೆಯಿಂದಲೇ ವಿಜಯಪುರದ ಪ್ರವಾಸಿ ತಾಣಗಳಿಗೆ ಮಕ್ಕಳು, ಸ್ನೇಹಿತರೊಂದಿಗೆ ಬರುತ್ತಿರುವ ಮಹಿಳೆಯರು ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ ಸೇರಿದಂತೆ ಇನ್ನಿತರ ಜಾಗಗಳನ್ನು ವೀಕ್ಷಿಸುತ್ತಿದ್ದಾರೆ.

ಗೋಲ್‌ ಗುಂಬಜ್‌ನತ್ತ ಮಹಿಳೆಯರ ದಂಡು
ಗೋಲ್‌ ಗುಂಬಜ್‌ನತ್ತ ಮಹಿಳೆಯರ ದಂಡು

ಒಂದೇ ದಿನದಲ್ಲಿ 1.25ಲಕ್ಷ ರೂಪಾಯಿ ಕಲೆಕ್ಷನ್

ಭಾನುವಾರ ಬೆಳಗ್ಗೆ 10 ಗಂಟೆಯಷ್ಟರಲ್ಲೇ 1ಸಾವಿರ ಜನರು ಟಿಕೆಟ್ ಪಡೆದು ಗೋಲ್‌ ಗುಂಬಜ್‌ ನೋಡಿದ್ದಾರೆ. ಸಂಜೆ 4 ಗಂಟೆ ಒಳಗೆ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನಕ್ಕೆ ಟಿಕೆಟ್‌ನಿಂದ 1.25 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಪುರಾತತ್ವ ಇಲಾಖೆಯ ಮಾಹಿತಿ ಪ್ರಕಾರ ಕಳೆದ 5 ವರ್ಷದಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದು ಇದೇ ಮೊದಲು ಎನ್ನಲಾಗಿದೆ. ದೂರದ ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಮಹಿಳೆಯರು ವಿಜಯಪುರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ವಾರದಿಂದ ಮಹಿಳೆಯರು ರಾಜ್ಯ ಪ್ರವಾಸ ಕೈಗೊಂಡಿದ್ದು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಹಂಪಿ ಸೇರಿದಂತೆ ನಾನಾ ದೇವಸ್ಥಾನ, ಪ್ರವಾಸಿತಾಣಗಳನ್ನು ವೀಕ್ಷಿಸುತ್ತಿದ್ದಾರೆ.

ಮಹಿಳೆಯರಿಗಿಂತ ಮಕ್ಕಳ ಸಂಖ್ಯೆ ಹೆಚ್ಚು

ಪ್ರವಾಸಕ್ಕೆ ಆಗಮಿಸಿದ್ದ ಮಹಿಳೆಯರು ತಮ್ಮ ಮಕ್ಕಳನ್ನೂ ಜೊತೆಗೆ ಕರೆ ತಂದಿದ್ದಾರೆ. ಪತಿಯರನ್ನು ಮನೆಯಲ್ಲೇ ಬಿಟ್ಟು ಮಹಿಳೆಯರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದರಿಂದ ಗೋಳಗುಮ್ಮಟ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿತ್ತು. ಸರ್ಕಾರ ಮಹಿಳೆಯರಿಗೆ ಉಚಿತ್ ಬಸ್ ಸೇವೆ ಒದಗಿಸಿರುವುದರಿಂದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿರುವುದರಿಂದ ಈ ರೀತಿ ಮಕ್ಕಳೊಂದಿಗೆ ನೋಡದ ಸ್ಥಳಗಳಿಗೆ ಹೋಗಲು ಸಹಾಯವಾಗುತ್ತಿದೆ ಎಂದು ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳು ಇಲ್ಲಿವೆ

ನಾವು ಅಕ್ಕಿಯನ್ನು ಉಚಿತವಾಗಿ ಕೇಳಿರಲಿಲ್ಲ, ಕೇಂದ್ರ ಸರಕಾರದ್ದು ಬಡಜನ ವಿರೋಧಿ ಧೋರಣೆ; ಎಂ ಬಿ ಪಾಟೀಲ

ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರಿಗೆ ವಿತರಿಸಲು ಅಗತ್ಯವಾಗಿರುವ ಅಕ್ಕಿಯನ್ನು ನಾವು ಕೇಂದ್ರ ಸರಕಾರದಿಂದ ಖರೀದಿಸಲು ಕೇಳಿದ್ದೆವೇ ವಿನಾ ಪುಕ್ಕಟೆಯಾಗಿಯೇನೂ ಕೇಳಿರಲಿಲ್ಲ. ಆದರೆ ಅವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ತನ್ನ ಬಡಜನ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ಹೇಳಿದ್ದಾರೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

ಲೇಖನ ಸಾಮಗ್ರಿಗಳಿಗಾಗಿ ದಾನಿಗಳ ಎದುರು ನೋಡುತ್ತಿವೆ ಆದಿವಾಸಿ ಮಕ್ಕಳು

ಕೊಡಗು ಜಿಲ್ಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಹಾಡಿಗಳಿವೆ. ಈ ಹಾಡಿಗಳಲ್ಲಿ ವಿವಿಧ ಆದಿವಾಸಿ ಸಮುದಾಯಗಳು ವಾಸಿಸುತ್ತಿವೆ. ಗುಡಿಸಲು, ಜೋಪಡಿಗಳಲ್ಲಿ ರಾತ್ರಿ ಆಶ್ರಯ ಪಡೆಯುವ ಈ ಜನ ಹಗಲು ವೇಳೆಯಲ್ಲಿ ಕಾಫಿ ತೋಟಗಳ ಕೂಲಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಕೆಲ ದೊಡ್ಡ ಕಾಫಿ ತೋಟಗಳ ಮಾಲೀಕರು ಕೆಲಸಗಾರರಿಗೆ ತೋಟಗಳ ಒಳಗೇ ವಸತಿ ವ್ಯವಸ್ಥೆ ಮಾಡಿಕೊಡುವುದರಿಂದ ಇಂತಹ ತೋಟಗಳಲ್ಲಿ ಕೆಲಸ ಮಾಡುವ ಆದಿವಾಸಿಗಳು ಹೊರಜಗತ್ತಿಗೆ ಬರುವುದೇ ಕಡಿಮೆ. ಇನ್ನಷ್ಟು ಮಾಹಿತಿಗೆ ಈ ಲಿಂಕ್‌ ಒತ್ತಿ.