ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಕಾಶ್ಮೀರದಲ್ಲಿ ಕರ್ನಾಟಕದ ಸೈನಿಕ ಸಾವು, ವೀರಮರಣ ಅಪ್ಪಿದ ವಿಜಯಪುರ ಯೋಧ

Vijayapura News: ಕಾಶ್ಮೀರದಲ್ಲಿ ಕರ್ನಾಟಕದ ಸೈನಿಕ ಸಾವು, ವೀರಮರಣ ಅಪ್ಪಿದ ವಿಜಯಪುರ ಯೋಧ

ವಿಜಯಪುರ ಜಿಲ್ಲೆಯ ಯೋಧರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ಕಾಶ್ಮೀರದಲ್ಲಿ ಮೃತಪಟ್ಟ ಯೋಧ ರಾಜು ಕರ್ಜಗಿ
ಕಾಶ್ಮೀರದಲ್ಲಿ ಮೃತಪಟ್ಟ ಯೋಧ ರಾಜು ಕರ್ಜಗಿ

ವಿಜಯಪುರ: ಕೆಲ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ಯೋಧರೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಉಗ್ರರು ನಡೆಸಿದ ದಾಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದ ನಿವಾಸಿ ರಾಜು ಗಿರಿಮಲ್ಲ ಕರ್ಜಗಿ(30) ಎಂಬುವವರು ಮೃತಪಟ್ಟಿರುವ ಮಾಹಿತಿ ಬಂದಿದೆ. ಕುಟುಂಬದವರಿಗೆ ಈ ಕುರಿತು ಮಾಹಿತಿಯನ್ನು ಸೇನಾಧಿಕಾರಿಗಳು ನೀಡಿದ್ದಾರೆ. ಆದರೆ ಯಾವ ರೀತಿ ಸಾವು ಆಗಿದೆ. ಏನಾಯಿತು ಎನ್ನುವ ನಿಖರ ಮಾಹಿತಿಗಾಗಿ ಕುಟುಂಬದವರು ಕಾಯುತ್ತಿದ್ದಾರೆ. ಮಂಗಳವಾರ ರಾತ್ರಿ ಹೈದ್ರಾಬಾದ್‌ ಮಾರ್ಗವಾಗಿ ಮೃತದೇಹವನ್ನು ವಿಜಯಪುರ ಜಿಲ್ಲೆ ತಿಕೋಟಕ್ಕೆ ತರಲಾಗುತ್ತದೆ. ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂಬತ್ತು ವರ್ಷದ ಹಿಂದೆಯೇ ಸೇನೆಗೆ ಸೇರಿದ್ದ ರಾಜು ಕೆಲ ವರ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಾಶ್ಮೀರದ ಗಡಿಭಾಗದಲ್ಲಿ ನಿಯೋಜಿಸಲಾಗಿತ್ತು. ಉಗ್ರರ ದಾಳಿ ವೇಳೆ ಮೃತಪಟ್ಟಿರಬಹುದು ಎನ್ನುವ ಮಾಹಿತಿ ದೊರೆತಿದೆ.

ನಮ್ಮೂರ ಹುಡುಗ ಸೇನೆ ಸೇರಿ ಕೆಲಸ ಮಾಡುತ್ತಿದ್ದ. ಈ ದಿನ ದುರಂತಕ್ಕೆ ಬಲಿಯಾಗಿರುವ ಮಾಹಿತಿ ದೊರೆತಿದೆ. ಕುಟುಂಬದವರೂ ಖಚಿತ ಮಾಹಿತಿಗಾಗಿ ಕಾಯುತ್ತಿದ್ದಾರೆ. ತಿಕೋಟಾದ ವ್ಯಕ್ತಿ ದೇಶಕ್ಕಾಗಿ ವೀರಮರಣ ಅಪ್ಪಿರುವುದು ಹೆಮ್ಮೆಯ ಸಂಗತಿ ಎಂದು ತಿಕೋಟಾದ ಸಾಮಾಜಿಕ ಹೋರಾಟಗಾರ ಸಾತಲಿಂಗಯ್ಯಾ ಶಂಕ್ರಯ್ಯ ಸಾಲಿಮಠ ಹೇಳಿದರು.

ಟ್ರೆಂಡಿಂಗ್​ ಸುದ್ದಿ