ಕನ್ನಡ ಸುದ್ದಿ  /  Karnataka  /  Vijayapura News Vijayapura Mp Ramesh Jigajingi Admitted To Belavagi Hospital For Some Health Issues Smu

Breaking News: ವಿಜಯಪುರ ಸಂಸದ ಜಿಗಜಿಣಗಿ ಮತ್ತೆ ಆಸ್ಪತ್ರೆಗೆ ದಾಖಲು

ಒಂದೂವರೆ ತಿಂಗಳ ಅವಧಿಯಲ್ಲಿಯೇ ಎರಡನೇ ಬಾರಿಗೆ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ಆಸ್ಪತ್ರೆಗೆ ದಾಖಲಾದ ಸಂಸದ ರಮೇಶ ಜಿಗಜಿಣಗಿ.
ಆಸ್ಪತ್ರೆಗೆ ದಾಖಲಾದ ಸಂಸದ ರಮೇಶ ಜಿಗಜಿಣಗಿ.

ವಿಜಯಪುರ: ಇನ್ನೇನು ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿರುವಾಗಲೇ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಹಿರಿಯ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಆಸ್ಪತ್ರೆಯೊಂದರ ತೀವ್ರ ನಿಗಾಘಟಕದಲ್ಲಿ ದಾಖಲಿಸಲಾಗಿದೆ.ಶನಿವಾರ ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ಬ್ರೈನ್ ಹಾಮರೇಜ್ ನಿಂದ ಜಿಗಜಿಣಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಸುದ್ದಿಯು ಹರಿದಾಡುತ್ತಿದೆ.

ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಬ್ರೇನ್ ಹ್ಯಾಮರೇಜ್ ಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಜ.28 ರಂದು ಬೆಳಗಾವಿಗೆ ಹೋಗುವಾಗ ಬೀಳಗಿ ಹತ್ತಿರ ಎದೆನೋವು ಕಾಣಿಸಿಕೊಂಡ ಕಾರಣ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚೇತರಿಸಿಕೊಂಡುದ್ದರು.

ಚುನಾವಣಾ ಹೊತ್ತಿನಲ್ಲೆ ಪದೆ ಪದೆ ಜಿಗಜಿಣಿ ಅವರಿಗೆ ಆರೋಗ್ಯ ಕೈಕೊಡುತ್ತಿದೆ.

ಈ ಬಾರಿಯೂ ವಿಜಯಪುರ ​ ಮೀಸಲು ಕ್ಷೇತ್ರದಿಂದ ಸ್ಪರ್ಥಿಸುವ ಇಂಗಿತ ವ್ಯಕ್ತಪಡಿಸಿರುವ ಅವರು, ಜೊತೆಗೆ ಬಿಜೆಪಿ ಟಿಕೇಟ್ ನನಗೆ ಸಿಗುವುದಾಗಿ ಬಹಿರಂಗ ಹೇಳಿಕೆಯನ್ನು ನೀಡಿದ್ದರು.

ಆದರೇ ಇದೀಗ ಪದೇ ಪದೇ ಆರೋಗ್ಯ ಕೈಕೊಡುತ್ತಿದ್ದು, ಜೊತೆಗೆ ವಯಸ್ಸಿನ ದೃಷ್ಟಿಯಿಂದ ಈ ಬಾರಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವುದು ಅನುಮಾನ ಎನ್ನುವ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ

(ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ)