Vijayapura News: ಆರು ಕೋಟಿ ಖರ್ಚಾದರೂ ಮುಗಿಯದ ಮಹಿಳಾ ವಿವಿ ಮ್ಯೂಸಿಯಂ: ಅನುದಾನದ ಕೊರತೆಯಿಂದಾಗಿ ಮೂರು ವರ್ಷವಾದರೂ ಉದ್ಘಾಟನೆಯಿಲ್ಲ
Akkamahadevi Mahila University ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮ್ಯೂಸಿಯಂ ಕೆಲಸ ಆರಂಭಿಸಿ ಮೂರು ವರ್ಷ ಕಳೆದು ಆರು ಕೋಟಿ ರೂ. ವಿನಿಯೋಗಿಸಿದರೂ ಯೋಜನೆ ಮುಗಿದಿಲ್ಲ. ಇದಕ್ಕೆ ಇನ್ನೂ ಅನುದಾನ ಬೇಕಿದೆ. ಏನಿದು ಮ್ಯೂಸಿಯಂ.. ಇಲ್ಲಿದೆ ವಿವರ.

ವಿಜಯಪುರ: ಭಾರತ ಬಹುಸಂಸ್ಕೃತಿಗಳ ಆಗರ, ವಿಭಿನ್ನ ಕಲೆ, ಸಾಹಿತ್ಯ, ಸಾಂಸ್ಕೃತಿಕತೆಯ ನೆಲೆವೀಡು. ಒಂದು ರಾಜ್ಯ ಅಲ್ಲ ಒಂದು ಪ್ರದೇಶಕ್ಕೆ ಹೋದರೆ ಅಲ್ಲಿ ವಿಶಿಷ್ಟ ಸಂಸ್ಕೃತಿಯನ್ನು ಕಾಣಬಹುದು, ಹೀಗಾಗಿ ಈ ಎಲ್ಲ ಸಂಸ್ಕೃತಿಗಳ ಪ್ರತಿಬಿಂಬವನ್ನು ಒಂದೇ ಸೂರಿನಡಿಯಡಿಯಲ್ಲಿ ನೋಡುವ ಅಪೂರ್ವ ಮ್ಯೂಸಿಯಂ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಿರ್ಮಾಣಗೊಂಡಿದೆ. ಆದರೆ ಸರ್ಕಾರದಿಂದ ಅನುದಾನ ದೊರಕದೆ ಮ್ಯೂಸಿಯಂ ಲೋಕಾರ್ಪಣೆ ಮರಿಚಿಕೆಯಾಗುತ್ತಲೇ ಇದೆ.
ಟ್ರೆಂಡಿಂಗ್ ಸುದ್ದಿ
ಶೈಕ್ಷಣಿಕ ಚಟುವಟಿಕೆ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕೋಟಿ ಹಣವನ್ನು ವ್ಯಯಿಸುವ ಬದಲು ಮ್ಯೂಸಿಯಂಗೆ ವಹಿಸುವುದರಲ್ಲಿ ಅರ್ಥವಿಲ್ಲ ಎಂಬ ಕೂಗು ಸಹ ಕೇಳಿ ಬರುತ್ತಿದ್ದು ಮ್ಯೂಸಿಯಂಗೆ ಉದ್ಘಾಟನಾ ಭಾಗ್ಯ ದೊರಕುತ್ತದೆಯೋ ಎಂಬ ಸಂಶಯ ಎಡೆಮಾಡಿಕೊಟ್ಟಿದೆ.
ಆರು ಕೋಟಿ ರೂ. ವೆಚ್ಚ
ವಿಜಯಪುರದಲ್ಲಿರೋ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಏಳು ವರ್ಷಗಳ ಹಿಂದೆ 6ಕೋಟಿ ವೆಚ್ಚದಲ್ಲಿ ಮಹಿಳಾ ಮ್ಯೂಸಿಯಂ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇನ್ನಷ್ಟು ಅನುದಾನದ ಕೊರತೆಯಿಂದಾಗಿ ಮ್ಯೂಸಿಯಂ ಭಾಗ್ಯದ ಬಾಗಿಲು ಇನ್ನು ಕೂಡ ತೆರೆದಿಲ್ಲ.ಈಗಾಗಲೇ ಹಲವು ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.
ವಿಜಯಪುರ ನಗರದ ಹೊರವಲಯ ತೊರವಿಯಲ್ಲಿರೋ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಎದುರಿಗೆ ಮಹಿಳಾ ಮ್ಯೂಸಿಯಂ ಕಟ್ಟಡ ಕಟ್ಟಲಾಗಿದೆ. ಇಲ್ಲಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕೃತಿ, ಕಲೆ , ಕುರುಹುಗಳನ್ನ ಸಂಗ್ರಹಿಸಿ ತಂದಿಡಲಾಗಿದೆ. ಆದರೆ ಈ ಮ್ಯೂಸಿಯಂ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಅಂದಾಜು ಮೂರ್ನಾಲ್ಕು ಕೋಟಿಯಷ್ಟು ಅನುದಾನ ಬೇಕಿದೆ. ಈ ಬಗ್ಗೆ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಇದುವರೆಗೂ ಅನುದಾನ ಮಾತ್ರ ಸಿಕ್ಕಿಲ್ಲ. ಇನ್ನು ಏಳು ವರ್ಷಗಳ ಹಿಂದೆ ಮಹಿಳಾ ಮ್ಯೂಸಿಯಂ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಅನುದಾನ ಸಿಕ್ಕಿಲ್ಲ ಎನ್ನಲಾಗಿದೆ.
ಹೆಚ್ಚು ಹಣ ಬಳಕೆಗೆ ಅಸಮಾಧಾನ
ಮಹಿಳಾ ವಿಶ್ವ ವಿದ್ಯಾಲಯಕ್ಕೆ ಚಾಲನೆ ಸಿಕ್ಕ ನಂತರ ವಿದ್ಯಾಲಯಕ್ಕೆ ಶೈಕ್ಷಣಿಕವಾಗಿ ಗುಣಮಟ್ಟದಲ್ಲಿ ಇಲ್ಲಾ ಯಾವಾಗಲೂ ತಾಂತ್ರಿಕ ದೋಷ ಮತ್ತು ಸಿಬ್ಬಂದಿಗಳ ಕೊರತೆ ಯಾವಾಗಲೂ ಇದೆ. ಮ್ಯೂಸಿಯಂ ಮಾಡಲು ಸರ್ಕಾರದಿಂದ ಆರು ಕೋಟಿ ಅನುದಾನ ನೀಡಲಾಗಿತ್ತು ಆದರೆ ಆ ಆರು ಕೋಟಿ ಸಾಲದೆ ಇದ್ದಿದ್ದಕ್ಕೆ ಮ್ಯೂಸಿಯಂ ಪರಿಪೂರ್ಣತೆ ಆಗಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಮ್ಯೂಸಿಯಂ ನಿರ್ಮಾಣದಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಕಲೆ ಸಂಸ್ಕೃತಿ ಒಂದೆ ಸೂರಿನಡಿ ವೀಕ್ಷಿಸಲು ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲಿದೆ. ಆದರೆ ಇಂಟೀರಿಯರ್ ಕಾರ್ಯಕ್ಕೆ ಅನುದಾನ ಇಲ್ಲದಿರುವುದರಿಂದ ಮೂರು ವರ್ಷವಾದರೂ ಮ್ಯೂಸಿಯಂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಈ ಮ್ಯೂಸಿಯಂ ನಿರ್ಮಾಣಕ್ಕೆ ಖರ್ಚು ಮಾಡಿದ ಅನುದಾನವನ್ನು ಮೂಲ ಸೌಲಭ್ಯಗಳ ಕೊರತೆಯಿರುವ ವಿಭಾಗಗಳಿಗೆ ಬಳಿಸಿದ್ದರೆ ವಿದ್ಯಾರ್ಥಿನಿಯರ ಕಲಿಕೆಗೆ ಅನುಕೂಲವಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲೂ ಅಂತರಿಕ ಹಣ ಬಳಸಿ ಮ್ಯೂಸಿಯಂ ನಿರ್ಮಿಸುವ ಅಗತ್ಯ ಏನಿತ್ತು? ಈ ರೀತಿ ಮ್ಯೂಸಿಯಂಗೆ ಕೋಟ್ಯಂತರ ಹಣ ವ್ಯಯ ಮಾಡಿರೋದಕ್ಕೂ ಅಪಸ್ವರ ಕೇಳಿಬರುತ್ತಿದೆ.
ಆದರೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ ತುಳಸಿ ಮಾಲಾ ಅವರು ಸ್ಪಷ್ಟಪಡಿಸಿದ್ದಾರೆ.