Violence in Karnataka: ರಾಜ್ಯದ ಹಿಂಸಾಚಾರದಲ್ಲಿ ಭಾಗಿಯಾದವರ ಸಂಖ್ಯೆ 5 ವರ್ಷದಲ್ಲಿ 6 ಪಟ್ಟು ಹೆಚ್ಚಳ!
Violence in Karnataka: ರಾಜ್ಯದಲ್ಲಿ 2018ರಿಂದೀಚೆಗೆ ನಡೆದಿರುವ ಹಿಂಸಾಚಾರ ಪ್ರಕರಣ ಕಡಿಮೆ. ಗೃಹ ಇಲಾಖೆಯ ದತ್ತಾಂಶ ವರದಿ ಪ್ರಕಾರ, 2018ರಲ್ಲಿ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರ ಸಂಖ್ಯೆ 1,666 ಇತ್ತು. 2022ರಲ್ಲಿ ಇದು 10,346 ಆಗಿದೆ. 2019ರಲ್ಲಿ ಇದು 1,716, 2020ರಲ್ಲಿ 7,874, 2021ರಲ್ಲಿ 2,843 ಮತ್ತು 2022ರಲ್ಲಿ 10,346 ಆಗಿದೆ.
ನಮ್ಮ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಹಿಂಸಾಚಾರಗಳನ್ನು ಗಮನಿಸಿದರೆ ಭಾಗವಹಿಸಿದವರ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ. ಪ್ರಕರಣದ ಸಂಖ್ಯೆ 290ಕ್ಕಿಂತ ಕಡಿಮೆಯೇ ಇದೆ ಎನ್ನುತ್ತಿದೆ ಇಲಾಖಾ ವರದಿ.
ಟ್ರೆಂಡಿಂಗ್ ಸುದ್ದಿ
ರಾಜ್ಯದಲ್ಲಿ 2018ರಿಂದೀಚೆಗೆ ನಡೆದಿರುವ ಹಿಂಸಾಚಾರ ಪ್ರಕರಣ ಕಡಿಮೆ. ಆದರೆ ಭಾಗವಹಿಸಿದವರ ಸಂಖ್ಯೆ ಆರುಪಟ್ಟು ಹೆಚ್ಚಾಗಿದೆ. ಗೃಹ ಇಲಾಖೆಯ ದತ್ತಾಂಶ ವರದಿ ಪ್ರಕಾರ, 2018ರಲ್ಲಿ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರ ಸಂಖ್ಯೆ 1,666 ಇತ್ತು. 2022ರಲ್ಲಿ ಇದು 10,346 ಆಗಿದೆ. 2019ರಲ್ಲಿ ಇದು 1,716, 2020ರಲ್ಲಿ 7,874, 2021ರಲ್ಲಿ 2,843 ಮತ್ತು 2022ರಲ್ಲಿ 10,346 ಆಗಿದೆ.
ಕರ್ನಾಟಕದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಹಿಂಸಾಚಾರದಲ್ಲಿ ಭಾಗಿಯಾದವರ ಸಂಖ್ಯೆ | ||
ವರ್ಷ | ಹಿಂಸಾಚಾರ ಪ್ರಕರಣ ಸಂಖ್ಯೆ | ಭಾಗವಹಿಸಿದವರ ಸಂಖ್ಯೆ |
2018 | 250 (ಸರಾಸರಿ) | 1666 |
2019 | 161 | 1716 |
2020 | 291 | 7874 |
2021 | 250 (ಸರಾಸರಿ) | 2843 |
2022 | 236 | 10346 |
ರಾಜ್ಯದಲ್ಲಿ ಹಿಂಸಾಚಾರ ಪ್ರಕರಣ ಕಳೆದ ಐದು ವರ್ಷದಲ್ಲಿ ಸರಾಸರಿ 250 ದಾಖಲಾಗಿದೆ. ಆದಾಗ್ಯೂ, ನಿಖರವಾಗಿ ಹೇಳುವುದಾದರೆ 2019ರಲ್ಲಿ 161 ಕೇಸ್, 2020ರಲ್ಲಿ ಗರಿಷ್ಠ 291 ಕೇಸ್ ದಾಖಲಾಗಿದ್ದವು. ಹಿಂಸಚಾರ ಪ್ರಕರಣಗಳ ಪೈಕಿ ಹಿಜಾಬ್ ಪ್ರತಿಭಟನೆ, ಸಕ್ಕರೆ ಕಾರ್ಖಾನೆ ಪ್ರತಿಭಟನೆ, ಮತ ಎಣಿಕೆ ಸಂದರ್ಭದ ಚುನಾವಣಾ ಸಂಬಂಧಿತ ಹಿಂಸಾಚಾರ, ಮತಾಂತರ ಪರ ಮತ್ತು ವಿರೋಧದ ಪ್ರತಿಭಟನೆ ಹಿಂಸಾಚಾರ, ಆರೆಸ್ಸೆಸ್ ಕಾರ್ಯಕರ್ತರು ಮತ್ತು ಮುಸ್ಲಿಮರ ನಡುವಿನ ಹಿಂಸಾಚಾರ, ಬಜರಂಗದಳ ಕಾರ್ಯಕರ್ತ ನಾಗೇಶ್ ಹತ್ಯೆ, ಸಾವರ್ಕರ್ ಫ್ಲೆಕ್ಸ್ ಪ್ರಕರಣ, ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣಗಳ ಹಿಂಸಾಚಾರ ಇದರಲ್ಲಿ ಸೇರಿವೆ.
ಈ ಐದು ವರ್ಷದ ಅವಧಿಯಲ್ಲಿ ದಾಖಲಾಗಿರುವ ಸರಾಸರಿ 250 ಪ್ರಕರಣಗಳಲ್ಲಿ ಮೈಸೂರಿನಿಂದಲೇ 120ರಿಂದ 180 ಕೇಸ್‌ಗಳು ದಾಖಲಾಗಿವೆ. ಸರಾಸರಿ 700ರಿಂದ 1000 ಜನ ಇದರಲ್ಲಿ ಭಾಗಿಯಾಗಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕಳೆದ ವರ್ಷದ 236 ಪ್ರಕರಣಗಳಲ್ಲಿ 10,346 ಜನ ಭಾಗಿಯಾಗಿದ್ದಾರೆ. ಈ ಕೇಸ್‌ಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 4 ಪ್ರಕರಣಗಳಲ್ಲಿ 6,000 ಜನ ಭಾಗಿಯಾಗಿದ್ದಾರೆ. ಆದರೆ ಯಾರ ಬಂಧನವೂ ಆಗಿಲ್ಲ ಎಂದು ದತ್ತಾಂಶ ಹೇಳಿದೆ.
ಇನ್ನು ನಗರಗಳ ವಿಚಾರಕ್ಕೆ ಬಂದರೆ ಮಂಗಳೂರಿನಲ್ಲಿ 2018ರಲ್ಲಿ 69 ಕೇಸ್, 2019ರಲ್ಲಿ 20 ಕೇಸ್‌ಗಳು ದಾಖಲಾಗಿದ್ದವು. ಆದರೆ ಅದಾದ ಬಳಿಕ ಇದುವರೆಗೆ ಒಂದೇ ಒಂದು ಹಿಂಸಾಚಾರ ಪ್ರಕರಣ ದಾಖಲಾಗಿಲ್ಲ ಎಂಬುದು ಗಮನಾರ್ಹ ವಿಚಾರ. ಹುಬ್ಬಳ್ಳಿ ಧಾರವಾಡದಲ್ಲಿ 2022 ಹೊರತುಪಡಿಸಿದರೆ, 2018,2019, 2020 ಮತ್ತು 2021ರಲ್ಲಿ ಯಾವುದೇ ಹಿಂಸಾಚಾರ ಪ್ರಕರಣ ದಾಖಲಾಗಿಲ್ಲ.
ಇತರೆ ಗಮನಸೆಳೆಯುವ ಸುದ್ದಿ
Gene fingerprinting: ರಾಜಕೀಯ ಭಿನ್ನಮತೀಯರನ್ನು ಟಾರ್ಗೆಟ್ ಮಾಡಲು ಜೀನ್ ಫಿಂಗರ್ ಪ್ರಿಂಟಿಂಗ್ ಬಳಸಬಹುದು!; ಹೇಗೆ ಟಾರ್ಗೆಟ್ ಮಾಡ್ತಾರೆ?
ರಾಜಕೀಯ ಭಿನ್ನಮತೀಯರನ್ನು ಗುರುತಿಸಲು ಮತ್ತು ಟಾರ್ಗೆಟ್ ಮಾಡಲು ಹೊಸ ಜೆನಿಟಿಕ್ ಸೀಕ್ವೆನ್ಸಿಂಗ್ ಐಡೆಂಟಿಫಿಕೇಶನ್ ಟೆಕ್ನಿಕ್ ಬಳಕೆಯಾಗಬಹುದು ಎಂಬುದು ಈಗ ಹೊಸ ಆತಂಕ. ಜೆನಿಟಿಕ್ ಸ್ವೀಕ್ವೆನ್ಸಿಂಗ್ ಮೂಲಕ ಅಪರಾಧ ಸನ್ನಿವೇಶದಲ್ಲಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಬಹುದು ಎಂಬ ವಿಚಾರದ ಕಡೆಗೆ ಪುಲಿಟ್ಜೆರ್ ವಿಜೇತ ಡಾ.ಸಿದ್ಧಾರ್ಥ ಮುಖರ್ಜಿ ಗಮನಸೆಳೆದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
Shri Ram-Janaki Yatra: ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ರೈಲು ಯಾತ್ರೆ; ದಿನಾಂಕ, ಬುಕ್ಕಿಂಗ್ ಶುರು ಯಾವಾಗ?
Shri Ram-Janaki Yatra: ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ಮುಂದಿನ ತಿಂಗಳಿಂದ ಪ್ರವಾಸಿ ರೈಲು ಯಾತ್ರೆ ಶುರುವಾಗಲಿದೆ. ಭಾರತೀಯ ರೈಲ್ವೆ ಈ ಉಪಕ್ರಮ ಜಾರಿಗೊಳಿಸಿದ್ದು, ಮೊದಲ ಯಾತ್ರೆ ಫೆ.17ರಂದು ಹೊರಡಲಿದೆ. ನವದೆಹಲಿಯಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ವಿವರ ಇಲ್ಲಿದೆ ಕ್ಲಿಕ್ ಮಾಡಿ