ಕನ್ನಡ ಸುದ್ದಿ  /  ಕರ್ನಾಟಕ  /  ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇಬೇಕು- ಉದ್ಯೋಗಾಕಾಂಕ್ಷಿಯ ಉತ್ತರ ಶೇರ್ ಮಾಡಿದ ಅರ್ವಾ ಹೆಲ್ತ್ ಸಿಇಒ ದೀಪಾಲಿ

ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇಬೇಕು- ಉದ್ಯೋಗಾಕಾಂಕ್ಷಿಯ ಉತ್ತರ ಶೇರ್ ಮಾಡಿದ ಅರ್ವಾ ಹೆಲ್ತ್ ಸಿಇಒ ದೀಪಾಲಿ

ಅರ್ವಾ ಹೆಲ್ತ್ ನವೋದ್ಯಮದಲ್ಲಿ ಫುಲ್‌ಸ್ಟಾಕ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ, ಬಂದ ಅರ್ಜಿಗಳ ಪೈಕಿ, ಉದ್ಯೋಗಾಕಾಂಕ್ಷಿಯೊಬ್ಬರು, ‘ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇಬೇಕು’ ಎಂದು ಉತ್ತರಿಸಿದ್ದನ್ನು ಅರ್ವಾ ಹೆಲ್ತ್ ಸಿಇಒ ದೀಪಾಲಿ ಶೇರ್ ಮಾಡಿದ್ದು, ನೇಮಕಾತಿ ಬಹಳ ಮನರಂಜನೆ ನೀಡುತ್ತದೆ ಎಂದಿದ್ದಾರೆ.

ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇಬೇಕು- ಉದ್ಯೋಗಾಕಾಂಕ್ಷಿಯ ಉತ್ತರ ಶೇರ್ ಮಾಡಿದ ಅರ್ವಾ ಹೆಲ್ತ್ ಸಿಇಒ ದೀಪಾಲಿ.
ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇಬೇಕು- ಉದ್ಯೋಗಾಕಾಂಕ್ಷಿಯ ಉತ್ತರ ಶೇರ್ ಮಾಡಿದ ಅರ್ವಾ ಹೆಲ್ತ್ ಸಿಇಒ ದೀಪಾಲಿ. (X/@dipalie_)

ಬೆಂಗಳೂರು: ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ಯಾವುದೇ ಹೊಣೆಗಾರಿಕೆಗೆ ಅಥವಾ ಹುದ್ದೆಗೆ ಉದ್ಯೋಗಾರ್ಥಿ ಯಾಕೆ ಅರ್ಹರೆನಿಸುತ್ತಾರೆ ಎಂಬ ಪ್ರಶ್ನೆ ಸಹಜ. ಇದಕ್ಕೆ ಕಂಪನಿಯು ತನ್ನ ಬೆಳವಣಿಗೆಗೆ ಅಂದರೆ ವ್ಯಾಪಾರ,ವಹಿವಾಟು ವಿಸ್ತರಣೆಗೆ ಅನುಕೂಲವೆನಿಸುವ ಉತ್ತರವನ್ನು ಉದ್ಯೋಗಾರ್ಥಿಗಳಿಂದ ಬಯಸುತ್ತದೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಇದಕ್ಕೆ ಸಮರ್ಪಕ ಉತ್ತರ ಸಿಗುವುದಿಲ್ಲ. ಉದ್ಯೋಗಾರ್ಥಿಗಳಿಗೆ ಅದು ಅರ್ಥವೂ ಆಗಿರುವುದಿಲ್ಲ. ಕೆಲವೊಮ್ಮೆ ಸಿಗುವ ಉತ್ತರಗಳು ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸುವ ಅಧಿಕಾರಿಗಳ ಮುಖದಲ್ಲಿ ನಗುವನ್ನು ಮೂಡಿಸುವುದೂ ಇದೆ.

ಅಂತಹ ಒಂದು ಉತ್ತರವನ್ನು ಅರ್ವಾ ಹೆಲ್ತ್‌ ಎಂಬ ನವೋದ್ಯಮದ ಸಂಸ್ಥಾಪಕಿ, ಸಿಇಒ ದೀಪಾಲಿ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ. ನೇಮಕಾತಿ ಕೂಡ ಒಂದು ಫನ್ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಅರ್ವಾ ಹೆಲ್ತ್‌ಗಾಗಿ ಫುಲ್ ಸ್ಟಾಕ್ ಎಂಜಿನಿಯರ್‌ ಅನ್ನು ನೇಮಕ ಮಾಡುತ್ತಿದ್ದು, 1 ರಿಂದ 2 ವರ್ಷ ಕೆಲಸ ಮಾಡಿದ ಅನುಭವ ಇರುವವರಿಗಾಗಿ ಶೋಧ ಮುಂದುವರಿಸಿದ್ದಾರೆ.

ಅವರು ಶೇರ್ ಮಾಡಿದ ಸ್ಕ್ರೀನ್ ಶಾಟ್‌ನಲ್ಲಿ "ನೀವು ಈ ಪಾತ್ರಕ್ಕೆ ಏಕೆ ಅರ್ಹರು?" ಎಂಬ ಪ್ರಶ್ನೆಗೆ, ಈ ಕೆಲಸವೇ ನನ್ನ ಮದುವೆಗೆ ಹಸಿರು ನಿಶಾನೆ ಎಂಬರ್ಥದಲ್ಲಿ ಉದ್ಯೋಗಾರ್ಥಿಯೊಬ್ಬರು ಬರೆದುಕೊಂಡಿರುವುದು ಕಂಡುಬಂದಿದೆ.

ಟ್ರೆಂಡಿಂಗ್​ ಸುದ್ದಿ

ಅರ್ವಾ ಹೆಲ್ತ್‌ನಲ್ಲಿ ಫುಲ್‌ ಸ್ಟಾಕ್ ಎಂಜಿನಿಯರ್‌ - "ನೀವು ಈ ಪಾತ್ರಕ್ಕೆ ಏಕೆ ಅರ್ಹರು?"

ಅರ್ವಾ ಹೆಲ್ತ್‌ನಲ್ಲಿ ಫುಲ್‌ ಸ್ಟಾಕ್ ಎಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಉದ್ಯೋಗಾರ್ಥಿಯೊಬ್ಬರು, "ನೀವು ಈ ಪಾತ್ರಕ್ಕೆ ಏಕೆ ಅರ್ಹರು?" ಎಂಬ ಪ್ರಶ್ನೆಗೆ ಉತ್ತರಿಸುತ್ತ, “ಈ ಹೊಣೆಗಾರಿಕೆ ನಿಭಾಯಿಸುವುದಕ್ಕೆ ಅವಶ್ಯಕವಾಗಿರುವ ಎಲ್ಲ ಕೌಶಲ, ಅನುಭವವನ್ನು ಹೊಂದಿದ್ದು, ಫುಲ್‌ಸ್ಟಾಕ್ ಎಂಜಿನಿಯರ್‌ನ ಹೊಣೆಗಾರಿಕೆ ನಿಭಾಯಿಸಬಲ್ಲೆ ಎಂಬ ನಂಬಿಕೆ ನನಗಿದೆ. ಅಷ್ಟೇ ಅಲ್ಲ, ನನಗೆ ಈ ಕೆಲಸ ಸಿಗದಿದ್ದರೆ ನಾನು ನನ್ನ ಬಾಲ್ಯದ ಪ್ರೀತಿಯನ್ನು ಉಳಿಸಲಾಗದು. ನಿನಗೆ ಕೆಲಸ ಇದ್ದರೆ ಮಾತ್ರ ಆಕೆಯನ್ನು ವಿವಾಹ ಮಾಡಿಕೊಡುವುದಾಗಿ ಆಕೆಯ ತಂದೆ ತಿಳಿಸಿದ್ದಾರೆ” ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಇದನ್ನೇ ದೀಪಾಲಿ ಅವರು ಎಕ್ಸ್‌ನಲ್ಲಿ ಶೇರ್ ಮಾಡಿರುವುದು.

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದ್ದು, 3ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. 130ಕ್ಕೂ ಹೆಚ್ಚು ರೀಟ್ವೀಟ್ ಆಗಿದ್ದು, 60ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.

ಅಂದ ಹಾಗೆ, ಅರ್ವಾ ಹೆಲ್ತ್ ಎಂಬುದು ನಿಧಿ ಪಂಚಮಲ್ ಮತ್ತು ದೀಪಲಿ ಬಜಾಜ್ ಅವರ ಆರೋಗ್ಯ ಸ್ಟಾರ್ಟ್ಅಪ್ ಆಗಿದ್ದು, ಇದು ಮಹಿಳೆಯರಿಗಾಗಿ ಮನೆಯಲ್ಲಿಯೇ ಫಲವತ್ತತೆ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಪ್ರಾರಂಭಿಸಿದೆ.

ಅರ್ವಾ ಹೆಲ್ತ್‌ನಲ್ಲಿ ಫುಲ್‌ ಸ್ಟಾಕ್ ಎಂಜಿನಿಯರ್‌ ಪೋಸ್ಟ್‌ಗೆ ಕಾಮೆಂಟ್‌ ಹೀಗಿದೆ

ದೀಪಾಲಿ ಅವರು ಶೇರ್ ಮಾಡಿದ ಈ ಪೋಸ್ಟ್‌, ಲಘು ದಾಟಿಯಲ್ಲಿರುವ ಕಾರಣ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಅನೇಕರು ಈ ಉದ್ಯೋಗಾರ್ಥಿಯ ಪರವಾಗಿ ಮಾತನಾಡಿದ್ದು, ಪ್ರಾಮಾಣಿಕತೆ ಮತ್ತು ಅವಶ್ಯಕತೆಯನ್ನು ಪರಿಗಣಿಸಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

"ಪ್ರಾಮಾಣಿಕತೆಗಾಗಿ ಅವನನ್ನು ಕೆಲಸಕ್ಕೆ ನೇಮಿಸಿಕೊಳ್ಳಿ" ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. " ಆ ಉದ್ಯೋಗಾರ್ಥಿಗೆ ಕೆಲಸ ಕೊಟ್ಟು ಬಿಡಿ ಮೇಡಂ' ಎಂದು ಮತ್ತೊಬ್ಬರು ಶಿಫಾರಸು ಮಾಡಿದ್ದಾರೆ.

"ನನ್ನ ಪ್ರಶ್ನೆಯೆಂದರೆ, ಇದು ನಿಮ್ಮ ಮೇಲೆ ಪರಿಣಾಮ ಬೀರಿದೆಯೇ, ಈ ವ್ಯಕ್ತಿಯನ್ನು ಸಂದರ್ಶನದ ಸುತ್ತಿಗೆ ಆಯ್ಕೆ ಮಾಡಲು ಈ ಉತ್ತರವನ್ನು ನೀವು ಪರಿಗಣಿಸುತ್ತಿದ್ದೀರಾ? ಎಂದು ಮೂರನೇ ವ್ಯಕ್ತಿ ಕೇಳಿದ್ದಾರೆ.

ಆದರೆ, ಅಭ್ಯರ್ಥಿಯು ಮುಂದಿನ ಸುತ್ತಿನ ನೇಮಕಾತಿಗೆ ಪ್ರವೇಶ ಪಡೆದಿದ್ದಾರೆಯೇ ಎಂದು ಉತ್ತರಿಸಲು ಬಜಾಜ್ ನಿರಾಕರಿಸಿದರು. ಆದಾಗ್ಯೂ, ಅರ್ವಾ ಹೆಲ್ತ್ನೊಂದಿಗೆ ಪೂರ್ಣ ಸಮಯದ ಪೂರ್ಣ ಸ್ಟ್ಯಾಕ್ ಎಂಜಿನಿಯರ್ ಪಾತ್ರಕ್ಕಾಗಿ ಅರ್ಜಿಗಳು ಇನ್ನೂ ತೆರೆದಿವೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.